Amruthadhaare ;ಕಾಡಿನಲ್ಲಿ ಹುಲಿ ಪ್ರತ್ಯಕ್ಷ, ದಿಕ್ಕಾಪಾಲಾಗಿ ಓಡಿದ ಜೈದೇವ್ ; ತಗ್ಲಾಕಿಕೊಂಡ ಶಕುಂತಲಾ !
ಅಮೃತಧಾರೆ ಧಾರಾವಾಹಿಯಲ್ಲಿ ಹೆಣ್ಣು ಮಗುವನ್ನು ಜೈದೇವ್ ಮತ್ತು ಶಕುಂತಲಾ ಸೇರಿ ಕಿಡ್ನ್ಯಾಪ್ ಮಾಡಿದ್ದಾರೆ. ಆದರೆ.. ಈ ವಿಚಾರವನ್ನರಿಯದ ಗೌತಮ್ ಮಗು ಕಾಣೆಯಾದ ವಿಷಯವನ್ನು ಭೂಮಿಕಾಳಿಂದ ಮುಚ್ಚಿಟ್ಟಿದ್ದಾನೆ. ಇನ್ನೊಂದು ಕಡೆ ತಾನು ಮಾಡಿದ ಪ್ಲ್ಯಾನ್‌ಗಳೆಲ್ಲ ಫ್ಲಾಪ್ ಆಗಿರುವುದಕ್ಕೆ ನೊಂದುಕೊಳ್ಳುತ್ತಾ.. ಕುದಿಯುತ್ತಾ.. ಜೈದೇವ್ ಕಾರಿನಲ್ಲಿ ಒದ್ದಾಡುತ್ತಿದ್ದಾನೆ. ಇದೇ ಸಮಯದಲ್ಲಿ ಶಕುಂತಲಾ ಫೋನ್ ಮಾಡಿದ್ದು ಮಗು ಎಲ್ಲಿ ಎಂದು ಕೇಳುತ್ತಾಳೆ.
ಆಗ ಜೈದೇವ್ ಮಗು ತಗೊಂಡು ನಮಗೇನು ಪ್ರಯೋಜನ ಅಲ್ಲಿಯೇ ಬಿಸಾಕಿ ಬಂದೇ ಎಂದು ಹೇಳುತ್ತಾನೆ. ಇದರಿಂದ ಕೋಪಗೊಳ್ಳುವ ಶಕುಂತಲಾ ಆ ಮಗು ನಮ್ಮ ಬಳಿ ಇದ್ದಿದ್ದರೆ ಬ್ಲಾಕ್ ಮೇಲ್ ಮಾಡಿ ನಮಗೇನು ಬೇಕು ಅದನ್ನು ಪಡೆದುಕೊಳ್ಳಬಹುದಿತ್ತು ಎಂದು ಹೇಳುತ್ತಾಳೆ. ಇದಕ್ಕೆ ಜೈದೇವ್ ಹೌದಲ್ವಾ ನಾನು ಇದೆಲ್ಲ ಯೋಚನೆ ಮಾಡಲಿಲ್ಲ, ಈಗಲೇ ಹೋಗಿ ಮಗುನಾ ಎತ್ಕೊಂಡು ಬರುತ್ತೇನೆ ಎಂದು ಹೇಳುತ್ತಾನೆ.

ದಿವಾನ್ ಮನೆಗೆ ಬಂದ ಮುದ್ದು ಕೃಷ್ಣ
ಮತ್ತೊಂದು ಕಡೆ ಗೌತಮ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಗೌತಮ್-ಭೂಮಿಕಾ ಮತ್ತು ಮಗುವನ್ನು ಸ್ವಾಗತಿಸಲು ದಿವಾನ ಕುಟುಂಬ ಕಾತುರದಿಂದ ಕಾಯುತ್ತಿದೆ. ಗೌತಮ್ ಮತ್ತು ಭೂಮಿಕಾ ಮನೆಗೆ ಬಂದಿದ್ದು ಆರತಿ ಮಾಡಿ ಮೂವರನ್ನು ಮನೆಗೆ ಸ್ವಾಗತಿಸಲಾಗಿದೆ. ಮಲ್ಲಿ.. ಸುಧಾ ಸೇರಿ ಮನೆಯ ಸದಸ್ಯರೆಲ್ಲ ಮಗುವನ್ನು ಮುದ್ದಾಡಿದ್ದು ಶಕುಂತಲಾಗೆ ಸಹಿಸಲಾಗದಷ್ಟು ಕೋಪ ಬಂದಿದೆ.
ಮಾತನಾಡಿದ ಭಾಗ್ಯಮ್ಮ, ಸೋತು ಹೋದೆ ಎಂದು ನೊಂದುಕೊಂಡ ಗೌತಮ್
ಇದೇ ವೇಳೆ ಭಾಗ್ಯಮ್ಮ ಬಾಯಿಂದ ಮಾತು ಹೊರ ಬಂದಿದ್ದು ಮಗುನ ಗುಂಡು ಎಂದು ಕರೆದಿದ್ದಾಳೆ. ಭಾಗ್ಯಮ್ಮ ಮಾತನಾಡಿದ್ದು ಕಂಡು ಗೌತಮ್ ಭಾವುಕನಾಗಿದ್ದಾನೆ. ಇದೇ ಸಮಯದಲ್ಲಿ ಅಕ್ಕ ಹೇಳಿದಂತೆ ಗಂಡು ಮಗುನೇ ಆಗಿದೆ ಅದಕ್ಕೆ ಹೇಳೋದು ಹೆಣ್ ಮಕ್ಳೇ ಸ್ಟ್ರಾಂಗು ಅಂತ ಎಂದು ಮಲ್ಲಿ ಭೂಮಿಕಾ ಕಾಲೆಳೆದಿದ್ದಾಳೆ. ಆಗ ಹೌದು ಸೋತು ಹೋದೆ ನನ್ನ ಮಗುನಾ ನನ್ನಿಂದ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಮನದಲ್ಲಿಯೇ ಗೌತಮ್ ನೊಂದುಕೊಳ್ಳುತ್ತಾನೆ.

ಕಾಡಿನತ್ತ ಗೌತಮ್
ಮನೆಗೆ ಬಂದ ಮಹಾಲಕ್ಷ್ಮೀಯನ್ನು ಕಳೆದುಕೊಂಡ ಗೌತಮ್ ಒಳಗೊಳಗೆ ಸಂಕಟ ಪಡುತ್ತಿದ್ದಾನೆ. ಮರು ದಿನ ಆನಂದ್‌ನ ಮನೆಗೆ ಕರೆಸಿಕೊಂಡಿದ್ದಾನೆ. ಮನೆಗೆ ಬಂದ ಆನಂದ್ ಬಳಿ ಗೌತಮ್ ಮತ್ತೆ ಆ ಕಾಡಿಗೆ ಹೋಗೋಣ ಮಗುನ ಹುಡುಕೋಣ ಬಾ ಎಂದು ಬೇಡಿಕೊಳ್ಳುತ್ತಾನೆ. ಪೊಲೀಸರು ಮಗುನ ಹುಡುಕುತ್ತಿದ್ದಾರೆ ನಿನ್ನ ಆತಂಕ ನನಗೆ ಅರ್ಥ ಆಗುತ್ತೆ ಆದರೆ ಮಗು ಬಂದ ಖುಷಿಯಲ್ಲಿ ಎಲ್ಲ ಖುಷಿಯಾಗಿದ್ದಾರೆ. ನೀನೊಬ್ಬ ಹೀಗೆ ಡಲ್ ಇದ್ದರೆ ಅವರಿಗೆ ಅನುಮಾನ ಬರುತ್ತೆ. ಆದರೂ ಆನಂದ್ ಮಾತನ್ನು ಗೌತಮ್ ಒಪ್ಪುವುದಿಲ್ಲ. ಬದಲಿಗೆ ತನ್ನ ಜೊತೆ ಆನಂದ್ ನ ಕರೆದುಕೊಂಡು ಹೋಗುತ್ತಾನೆ.
ಕಾಡಿನಲ್ಲಿ ಮಗು ಹುಡುಕುತ್ತಿರುವ ಜೈದೇವ್
ಶಕುಂತಲಾ ಆಕ್ರೋಶಕ್ಕೆ ಗುರಿಯಾದ ಜೈದೇವ್ ಸದ್ಯ ಕಾಡಿಗೆ ಬಂದು ಮಗು ಹುಡುಕುತ್ತಿದ್ದಾನೆ. ಇದೇ ಸಮಯದಲ್ಲಿ ಗೌತಮ್ ಕೂಡ ಕಾಡಿಗೆ ಬಂದಿದ್ದು. ಪೊಲೀಸರು ನಾವು ನಿನ್ನೆ ರಾತ್ರಿಯಿಂದ ಹುಡುಕುತ್ತಿದ್ದೇವೆ ಆದರೆ ಏನೂ ಪ್ರಯೋಜನವಾಗಿಲ್ಲ ಕತ್ತಲೆ ಮಳೆ ಹೀಗಾಗಿ ಸಿಕ್ಕಿಲ್ಲ ಎಂದು ಹೇಳುತ್ತಾರೆ. ರಿಸರ್ವ್ ಫಾರೆಸ್ಟ್ ಬಿಟ್ಟು ಎಲ್ಲ ಕಡೆ ಹುಡುಕಿದ್ದೇವೆ ಆದರೆ ಮಗುವಿನ ಸುಳಿವು ಸಿಕ್ತಿಲ್ಲ ಎಂದು ಹೇಳುತ್ತಾರೆ.
ಹುಲಿ ಪ್ರತ್ಯಕ್ಷ, ದಿಕ್ಕಾಪಾಲಾಗಿ ಓಡಿದ ಜೈದೇವ್
ತನ್ನ ಹುಡುಗರ ಜೊತೆ ಜೈದೇವ್ ಕಾಡಿನಲ್ಲಿ ಮಗು ಹುಡುಕುತ್ತಿದ್ದು ಇದೇ ಸಮಯದಲ್ಲಿ ಹುಲಿ ಪ್ರತ್ಯಕ್ಷವಾಗಿದೆ. ಹುಲಿಯನ್ನು ಕಂಡು ಬೆಚ್ಚಿ ಬಿದ್ದ ಜೈದೇವ್ ತನ್ನ ಹುಡುಗರಿಗೆ ಓಡಿ ಹೋಗುವಂತೆ ಹೇಳಿದ್ದು ತಾನು ಕೂಡ ಓಡಿ ಹೋಗಿದ್ದಾನೆ. ಇನ್ನೊಂದು ಕಡೆ ಮಗು ಸಿಗದಿದ್ದಕ್ಕೆ ಕಣ್ಣೀರು ಹಾಕುತ್ತಿರುವ ಗೌತಮ್, ಫಾರೆಸ್ಟ್ ರಿಸರ್ವ್ ಏರಿಯಾದಲ್ಲಿ ಹುಡಕೋಣ ಎಂದು ಪೊಲೀಸರ ಬಳಿ ಮನವಿಯನ್ನು ಮಾಡಿಕೊಳ್ಳುತ್ತಾನೆ. ಆದರೆ ಪೊಲೀಸರು ಇದಕ್ಕೆ ಒಪ್ಪುವುದಿಲ್ಲ.
ತಗ್ಲಾಕಿಕೊಂಡ ಶಕುಂತಲಾ
ಹುಲಿಯಿಂದ ತಪ್ಪಿಸಿಕೊಂಡು ಬಂದ ಜೈದೇವ್ ಕಣ್ಣಿಗೆ ಗೌತಮ್ ಕಂಡಿದ್ದಾನೆ. ಹೀಗಾಗಿ ಅವಿತುಕೊಂಡಿರುವ ಜೈದೇವ್ ತನ್ನ ಫೋನ್ ಸೈಲೆಂಟ್ ಹಾಕಿದ್ದಾನೆ. ಇತ್ತ ಜೈದೇವ್‌ಗೆ ಮೇಲಿಂದ ಮೇಲೆ ಫೋನ್ ಮಾಡುವ ಶಕುಂತಲಾ ತಾನೇ ಕಾರಿನಲ್ಲಿ ಕಾಡಿಗೆ ಬಂದಿದ್ದಾಳೆ. ಗೌತಮ್ ಎದುರು ಮುಖಾ ಮುಖಿಯಾಗಿದ್ದಾಳೆ. ಶಕುಂತಲಾ ಕಂಡು ಗೌತಮ್ ಗೆ ಅನುಮಾನ ಬಂದಿದ್ದು ಶಕುಂತಲಾ ಸದ್ಯ ಗಾಬರಿಯಾಗಿದ್ದಾಳೆ. ಗೌತಮ್‌ಗೆ ಈ ಬಾರಿ ಶಕುಂತಲಾ ಯಾವ ನೆಪ ಹೇಳಿ ಪಾರಾಗುತ್ತಾಳೆ ಅನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











