Amruthadhaare: ಭೂಮಿಕಾ ನೋಡಿ ಮನೆ ಮಂದಿ ಶಾಕ್; ಉಲ್ಟಾ ಹೊಡೆದ ಶಕುಂತಲಾ ದೇವಿ ಪ್ಲ್ಯಾನ್

By ಪೂರ್ವ

ಜೈ ದೇವ್‌ಗೆ ಭೂಮಿಕಾ ಮೇಲೆ ಆಕೆಯನ್ನು ಸಾಯಿಸಿ ಬಿಡುವಷ್ಟು ಸಿಟ್ಟು ಇದೆ. ಎಲ್ಲರಿಗೂ ಖರ್ಚಿಗೆ ಹಣ ಬೇಕು ಎಂದಾದರೆ, ಭೂಮಿಕಾ ಜೊತೆ ಕಾರಣ ಹೇಳಿ ತೆಗೆದುಕೊಳ್ಳಬೇಕು. ಭೂಮಿಕಾ ಎಂದರೆ ಗೌತಮ್‌ಗೆ ಪ್ರಾಣ. ಆಕೆ ಮಾಡಿದ ನಿರ್ಧಾರಗಳು ಸರಿ ಆಗಿರುತ್ತದೆ ಎನ್ನುವುದು ಗೌತಮ್ ತಲೆಗೆ ಬಂದಿದೆ. ಭೂಮಿಕಾ ತಮ್ಮನಿಗೂ ಕೂಡ ಸಾಲದ ರೂಪದಲ್ಲಿ ಹಣ ಕೊಟ್ಟು ಆತನ ಫ್ಯೂಚರ್‌ ಬಹಳಷ್ಟು ಸಹಾಯ ಮಾಡಿರುತ್ತಾನೆ.

ಇನ್ನೂ ಅಶ್ವಿನಿ ಬಂದು ಭೂಮಿಕಾ ಬಳಿ ಹಣ ಬೇಕು ಎಂದು ಕೇಳಿದಾಗ, 5 ಸಾವಿರ ಅಥವಾ ಹತ್ತು ಸಾವಿರ ಇರಬಹುದು ಎಂದುಕೊಂಡಿದ್ದೆವು. ಆದರೆ, ಆಕೆ ಕೇಳಿದ್ದು, ಕೋಟಿ ಲೆಕ್ಕದಲ್ಲಿ. ಇದನ್ನು ಕೇಳಿದ ಭೂಮಿಕಾಗೆ ಶಾಕ್. ಏನಕ್ಕೆ ಎಂದು ಕೇಳಿದ್ದೆ ತಡ ಅಶ್ವಿನಿ ರಾದ್ಧಾಂತ ಮಾಡಿ ಬಿಟ್ಟಿದ್ದಳು. ಇದೀಗ ಶಕುಂತಲಾ ದೇವಿಗೆ ಮುಳುವಾಗಿ ಕಾಡಿದೆ ಎಂದು ಹೇಳಿದರೆ ತಪ್ಪಾಗದು. ಶಕುಂತಲಾ ದೇವಿಗೆ ಭೂಮಿಕಾ ಕೈಯಿಂದ ಒಂದೊಂದು ಪೈಸೆ ಕೇಳಲು ಆಕೆಗೆ ರೀಸನ್ ಹೇಳಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ.

Amruthadhaare serial July 12th episode update

ಇನ್ನೂ ಆಷಾಡ ಮಾಸ ಎಂದು ಭೂಮಿಕಾ ತವರು ಮನೆಗೆ ಹೋಗಿದ್ದಾಳೆ. ಈಗಲಾದರೂ ಗೌತಮ್ ಜೊತೆ ಮಾತನಾಡಿ ಹೇಗಾದರೂ ಖಜಾನೆ ಬೀಗದ ಕೈ ನನಗೆ ಕೊಡುವಂತೆ ಕೇಳಬೇಕು ಎಂದು ಕೊಂಡು ಇರುವಾಗ ಅಮ್ಮನ ಬಳಿಗೆ ಬಹಳ ಕೋಪದಿಂದ ಜೈದೇವ್ ಬರುತ್ತಾನೆ. ಜೈ ದೇವ್ ಅಮ್ಮನ ಬಳಿ ಬಂದು "ಅಮ್ಮ ಇದೇನಮ್ಮ ದುಡ್ಡಿಗೆ ಬರಗಾಲ. ಅಲ್ಲದ ಈ ಮನೆಯಲ್ಲಿ ಪೈಸೆ ಪೈಸೆಗೆ ನಾವು ಲೆಕ್ಕ ಕೊಡಬೇಕಿದೆ. ಮಲ್ಲಿ ಜೊತೆ ಕೂಡ ನಾನು ಕೇಳಿದಾಗ ಆಕೆ ಕೂಡ ಯಾಕೆ ಎಂದೆಲ್ಲ ರೀಸನ್ ಕೇಳುತ್ತಾಳೆ. ನಾನೇನು ಮಾಡಲಿ. ಆಕೆಗೆ ಭೂಮಿಕಾ ಅಷ್ಟು ಟ್ರೈನಿಂಗ್ ಅನ್ನು ಕೊಟ್ಟಿದ್ದಾಳೆ" ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿ ಶಕುಂತಲಾ ಏನೂ ಮಾತನಾಡದೆ ಸುಮ್ಮನೆ ಇರುತ್ತಾಳೆ.

ಗೌತಮ್ ಜೊತೆ ಭೂಮಿಕಾ ಎಂಟ್ರಿ

ಇದೇ ವೇಳೆ ಆಕೆಯ ತಲೆಗೆ ಹೊಳೆದ ಐಡಿಯವನ್ನು ಆತನ ಜೊತೆ ಹೇಳುತ್ತಾಳೆ. "ಈಗ ಮನೆಯಲ್ಲಿ ಭೂಮಿಕಾ ಇಲ್ಲ. ಹೇಗಾದರೂ ಮಾಡಿ ಗೌತಮ್ ಜೊತೆ ಮಾತನಾಡಿ ಇದಕ್ಕೆಲ್ಲ ಪರಿಹಾರ ಮಾಡೋಣ" ಎಂದಾಗ ಗೌತಮ್ ಮನೆಗೆ ಬರುತ್ತಾನೆ. ಆತನ ಜೊತೆಗೆ ಭೂಮಿಕಾ ಕೂಡ ಮನೆಗೆ ಬಂದಿರುವುದನ್ನು ಕಂಡು ಮನೆ ಮಂದಿಗೆ ಬಹಳಷ್ಟು ಆತಂಕ ಹೆಚ್ಚಾಗುತ್ತದೆ.

Amruthadhaare serial July 12th episode update

ಶಕುಂತಲಾ ದೇವಿಗೆ ಟೆನ್ಶನ್ ಶುರು

ಆಷಾಡ ಮಾಸ ಎಂದು ಮನೆಗೆ ಹೋದಾಕೆ ಇಷ್ಟು ಬೇಗ ಬಂದು ಬಿಟ್ಟಳಲ್ಲ ಎಂದು ಮನಸ್ಸಿನಲ್ಲಿ ಆಕೆಯನ್ನು ಬೈದುಕೊಳ್ಳುತ್ತಾರೆ. ಇನ್ನೂ ಗೌತಮ್‌ಗೆ ಭೂಮಿಕಾಳನ್ನು ಬಿಟ್ಟಿರಲು ಸಾಧ್ಯ ಆಗಲೇ ಇಲ್ಲ. ಆತ ನೇರವಾಗಿ ಭೂಮಿಕಾ ಮನೆಗೆ ಹೋಗಿ "ಆಷಾಡ ಮಾಸದಲ್ಲಿ ಇಲ್ಲಿಯೇ ಇದ್ದರೆ, ನನಗೆ ಬಹಳ ಕಷ್ಟ ಆಗುತ್ತದೆ. ಅದಕ್ಕೆ ಆಕೆಯನ್ನು ದಯವಿಟ್ಟು ನನ್ನ ಜೊತೆ ಮನೆಗೆ ಕಳುಹಿಸಿ ಕೊಡಿ" ಎಂದು ಹೇಳುತ್ತಾನೆ. ಆಗ ಮಂದಾಕಿನಿ ಮೊದಲಿಗೆ ಒಪ್ಪಲಿಲ್ಲ. ಆದರೆ, ಆ ಬಳಿಕ ಅಳಿಯನ ಪರಿಸ್ಥಿತಿ ನೋಡಿ ಆಯಿತು ಎಂದು ಒಪ್ಪಿಗೆ ಕೊಡುತ್ತಾರೆ. ಇನ್ನೂ ಮನೆಗೆ ಬಂದ ಭೂಮಿಕಾಳನ್ನು ನೋಡಿದ ಮಲ್ಲಿಗೆ ಬಹಳ ಖುಷಿ ಆಗುತ್ತದೆ. "ಇದೇನಿದು ಅಕ್ಕವರೆ ಒಂದು ತಿಂಗಳಲ್ಲಿ ಬರುತ್ತೇನೆ ಎಂದು ಹೇಳಿದಿರಿ. ಆದರೆ, ಈಗಲೇ ಬಂದಿದ್ದೀರಾ ಇನ್ನೂ ಆಷಾಡ ಮಾಸ ಮುಗಿದಿಲ್ಲ" ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿ ಭೂಮಿಕಾಗೆ ನಗು ಬರುತ್ತದೆ.

ಭೂಮಿಕಾ ಮುಖ ನೋಡಿ ನಕ್ಕ ಮಲ್ಲಿ

"ನಮ್ಮ ಯಜಮಾನರಿಗೆ ನಾನು ಮನೆಗೆ ಬರಬೇಕು ಎನ್ನುವ ಒತ್ತಾಸೆ. ಅದಕ್ಕೆ ಬಂದೆ ಮಲ್ಲಿ" ಎಂದು ಹೇಳುತ್ತಾರೆ. ಇನ್ನೂ ಶಕುಂತಲಾ ದೇವಿಗೆ ಬಹಳ ಬೇಸರ ಆಗುತ್ತದೆ. ಗೌತಮ್ ಜೊತೆ ಹೇಗಾದರೂ ಮಾತನಾಡಿಕೊಂಡು ಆತನನ್ನು ನಮ್ಮ ಸೈಡ್ ಮಾಡಿಕೊಳ್ಳಬೇಕು ಎನ್ನುವಷ್ಟರಲ್ಲಿ ಬಂದು ಬಿಟ್ಟಳಲ್ಲ ಎಂದು ಆಲೋಚನೆ ಮಾಡುತ್ತಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X