Amruthadhaare : ಕಥೆ ಹೇಳಿ ಗೌತಮ್‌ನ ಮತ್ತೆ ನಂಬಿಸಿದ ಶಕುಂತಲಾ, ಕಾಡಲ್ಲಿ ಕಳೆದುಹೋದ ಮಗು ಸಿಗುತ್ತಾ ?
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಮತ್ತು ಆನಂದ್ ಕಳೆದುಹೋದ ಮಗು ಹುಡುಕಲು ಕಾಡಿಗೆ ಬಂದಿದ್ಧಾರೆ. ಇದೇ ಸಮಯದಲ್ಲಿ ಹುಲಿಯನ್ನು ಕಂಡು ದಿಕ್ಕಾಪಾಲಾಗಿ ಓಡಿ ಬಂದಿರುವ ಜೈದೇವ್, ಗೌತಮ್‌ನನ್ನು ನೋಡಿದ್ದಾನೆ. ಅಲ್ಲಿಯೇ ಅಡಗಿದ್ದಾನೆ. ಇನ್ನೊಂದು ಕಡೆ.. ಜೈದೇವ್ ಫೋನ್ ರಿಸೀವ್ ಮಾಡದ ಹಿನ್ನೆಲೆ ಶಕುಂತಲಾನೇ ಕಾರು ಡ್ರೈವ್ ಮಾಡಿಕೊಂಡು ಕಾಡಿಗೆ ಬಂದಿದ್ಧಾಳೆ. ಗೌತಮ್ ಮುಂದೆ ಬಂದು ನಿಂತಿದ್ದಾಳೆ.
ಶಕುಂತಲಾಳನ್ನು ಕಂಡು ಗೌತಮ್ ಮತ್ತು ಆನಂದ್ ಆಶ್ಚರ್ಯಗೊಂಡಿದ್ದಾರೆ. ಗೌತಮ್ ಇಲ್ಲೇ ಇದ್ದಾನಲ್ಲ ಎಂದು ಗಾಬರಿಯಾಗಿದ್ಧಾಳೆ. ಈಗೇನು ಹೇಳುವುದು ಎಂದು ಯೋಚನೆ ಮಾಡ್ತಿದ್ದಾಳೆ. ಜೈದೇವ್ ಆತಂಕಗೊಂಡಿದ್ದು ಡೈರೆಕ್ಟ್ ಆಗಿ ಇವನ ಕಡೆನೇ ಸಿಕ್ಕಿ ಹಾಕಿಕೊಳ್ಳಬೇಕಿತ್ತಾ ಎಂದು ಅಂದುಕೊಳ್ಳುತ್ತಾನೆ.

ಆ ನಂತರ ನಗುತ್ತಾ ಗೌತಮ್ ಬಳಿ ಶಕುಂತಲಾ ಬರುತ್ತಾಳೆ. ಆಗ ಗೌತಮ್ಮ ಅಮ್ಮ ನೀವೇನು ಇಲ್ಲಿ ಕೇಳಿದಾಗ ನಾಟಕವಾಡುವ ಶಕುಂತಲಾ ಮನೆಯಲ್ಲಿ ನಿನ್ನ ಹುಡಕಿದೆ ನೀನು ಸಿಗಲಿಲ್ಲ ಮಗುನ ಹುಡುಕಿಕೊಂಡು ನೀನು ಇಲ್ಲೇ ಬಂದಿರಬಹುದು ಎಂದು ನಾನು ಕೂಡ ಬಂದೇ ಎಂದು ಹೇಳುತ್ತಾಳೆ.
ನೀವ್ಯಾಕೇ ತೊಂದರೆ ತಗೊಳ್ಳೋಕೆ ಹೋದ್ರೀ ಎಂದು ಗೌತಮ್ ಕೇಳಿದಾಗ ನನ್ನ ಮನಸು ಒಪ್ಪಬೇಕಲ್ಲ ಮಗುನ ಕಳೆದುಕೊಂಡಿರುವ ನಿನ್ನ ಮನಸ್ಥಿತಿ ಹೇಗಿರುತ್ತೆ ಎಂದು ನನಗೆ ಗೊತ್ತು ಅದಕ್ಕೆ ಹುಡುಕಿಕೊಂಡು ಬಂದೇ ಎಂದು ನಾಟಕ ಮಾಡುತ್ತಾಳೆ. ನಾನು ಇದ್ದರೆ ನಿನಗೆ ಧೈರ್ಯ ಅಲ್ವಾ ಎಂದು ಹೇಳುತ್ತಾಳೆ. ಶಕುಂತಲಾ ಮಾತುಗಳನ್ನು ಗೌತಮ್ ನಂಬಿದ್ದು ಗೌತಮ್‌ನ ಕರೆದುಕೊಂಡು ಆನಂದ್ ಅಲ್ಲಿಂದ ಮನೆಯತ್ತ ಹೊರಡುತ್ತಾನೆ.

ಮಗು ಸಿಕ್ತಿಲ್ಲ ಎಂದ ಜೈದೇವ್
ಗೌತಮ್ ಮತ್ತು ಆನಂದ್ ಅಲ್ಲಿಂದ ಹೋದ ನಂತರ ಜೈದೇವ್ ಬಂದಿದ್ದು, ಶಕುಂತಲಾ ಮಗು ಬಗ್ಗೆ ವಿಚಾರಿಸುತ್ತಾಳೆ. ಆಗ ಜೈದೇವ್ ಎಲ್ಲ ಕಡೆ ಹುಡುಕಿದೆ ಎಲ್ಲಿಯೂ ಮಗು ಸಿಕ್ತಿಲ್ಲ ಎಂದು ಹೇಳುತ್ತಾನೆ. ಆ ಮಗು ನಮ್ಮ ಹತ್ರ ಇದ್ದಿದ್ದರೆ ನಮ್ಮ ತಾಳಕ್ಕೆ ತಕ್ಕಂತೆ ಅವನನ್ನು ಕುಣಿಸಬಹುದಿತ್ತು. ನಿನ್ನಿಂದ ಎಲ್ಲ ಹಾಳಾಗಿ ಹೋಯ್ತು ಎಂದು ಶಕುಂತಲಾ ರೇಗುತ್ತಾಳೆ.
ಆಗ ಆ ಮಗುನ ಹುಡುಕೋಕೆ ಹೋಗಿ ಹುಲಿ ಬಾಯಿಂದ ತಪ್ಪಿಸಿಕೊಂಡ್ವಿ ಇಲ್ಲಿರೋದು ಸೇಫ್ ಅಲ್ಲ ಇಲ್ಲಿಂದ ಮೊದಲು ಹೊರಡೋಣ ಎಂದು ಜೈದೇವ್ ಹೇಳುತ್ತಾನೆ. ಆ ನಂತರ ಇಬ್ಬರು ಅಲ್ಲಿಂದ ಹೊರಡುತ್ತಾರೆ.
ಮಗುನ ನೋಡಲು ಗೌತಮ್ ಮನೆಗೆ ಭೂಮಿಕಾ ತಾಯಿ ಬಂದಿದ್ದಾಳೆ. ಈ ಸಮಯದಲ್ಲಿ ಮನೆಗೆ ಬಂದಿರುವ ಗೌತಮ್ ಬೇಸರದಲ್ಲಿ ಕಣ್ಣೀರು ಹಾಕುತ್ತಾ ನಿಂತಿರುತ್ತಾನೆ. ಈ ರೀತಿ ವರ್ತಿಸಬೇಡ ಮನೆಯಲ್ಲಿ ಅನುಮಾನ ಬರುತ್ತೆ ಎಂದು ಗೌತಮ್‌ಗೆ ಆನಂದ್ ಹೇಳುತ್ತಾನೆ. ಗೌತಮ್ ಮುಖಭಾವ ಕಂಡು ಏನಾಯ್ತು ಅಳಿಯಂದರೇ ಎಂದು ಅತ್ತೆ ಕೇಳುತ್ತಾಳೆ. ಆಗ ಮನುಷ್ಯನಿಗೆ ತುಂಬಾ ಸಂತೋಷ ಆದರೆ ಮಾತೇ ಬರಲ್ಲ ಅಂತಾ ಹೇಳ್ತಾರಲ್ಲ ಅದೇ ರೀತಿ ಗೌತಮ್ ಸೈಲೆಂಟ್ ಆಗಿದ್ದಾನೆ ಆನಂದ್ ಕಥೆ ಹೇಳಿ ಪರಿಸ್ಥಿತಿಯನ್ನು ಸಂಭಾಳಿಸುತ್ತಾನೆ.
ಆಸ್ಪತ್ರೆಯಿಂದ ಬಂದ ಕರೆ
ಇದೇ ಸಮಯದಲ್ಲಿ ಆಸ್ಪತ್ರೆಯಿಂದ ಆನಂದ್ ಗೆ ಕರೆ ಬಂದಿದ್ದು ಡಾಕ್ಯೂಮೆಂಟ್ ಗಳೆಲ್ಲ ರೆಡಿ ಇವೆ, ಬಂದು ತಗೊಂಡು ಹೋಗುವಂತೆ ಹೇಳುತ್ತಾರೆ. ಇದನ್ನು ಕೇಳಿ ಆತಂಕಗೊಳ್ಳುವ ಗೌತಮ್ ಡಾಕ್ಯೂಮೆಂಟ್‌ಗಳಲ್ಲಿ ಎರಡು ಮಗು ಎಂದಿರುತ್ತೆ ಹೇಗಾದರೂ ಮುಚ್ಚಿಡಬೇಕಲ್ಲ ಎನ್ನುತ್ತಾನೆ. ಆನಂದ್ ನೀನೇನು ಯೋಚನೆ ಮಾಡಬೇಡ ಅದರ ಬಗ್ಗೆ ಏನಾದರು ಐಡಿಯಾ ಮಾಡೋಣ ಎಂದು ಹೇಳುತ್ತಾನೆ.
ಸೃಜನ್ -ಸುಧಾ ಲವ್ ಸ್ಟೋರಿ ಶುರು ?
ಮತ್ತೊಂದು ಕಡೆ ಕೆಲಸ ಬಿಡುವ ನಿರ್ಧಾರ ಮಾಡಿರುವ ಸೃಜನ್, ಗೌತಮ್ ಮನೆಗೆ ಬಂದಿದ್ದಾನೆ. ಇದೇ ಸಮಯದಲ್ಲಿ ಮೆಟ್ಟಿಲು ಇಳಿದು ಬರುವ ಸುಧಾ ಎಡವಿ ಬೀಳುತ್ತಿರುತ್ತಾಳೆ. ಆಗ ಸೃಜನ್ ಬಂದು ಅವಳನ್ನು ಹಿಡಿದುಕೊಳ್ಳುತ್ತಾನೆ. ಸುಧಾ ಮತ್ತು ಸೃಜನ್ ನಡುವೆ ಇಲ್ಲಿಂದ ಈಗ ಪ್ರೀತಿ ಹುಟ್ಟುತ್ತೆ ಎನ್ನುವ ಅನುಮಾನ ಸದ್ಯ ಪ್ರೇಕ್ಷಕರನ್ನು ಕಾಡುತ್ತಿದ್ದು, ಭೂಮಿಕಾ ಮತ್ತು ಗೌತಮ್ ಅವರಿಂದ ಸೃಜನ್ ದೂರವಾಗ್ತಾನಾ ಅಥವಾ ಸುಧಾ ಮೇಲಿನ ಸೆಳೆತದಿಂದ ಮತ್ತೆ ಕೆಲಸದಲ್ಲಿ ಮುಂದುವರೆಯುತ್ತಾನಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











