Amruthadhaare ; ಮಗು ಟೆನ್ಷನ್ ನಡುವೆ ಸುಧಾ-ಸೃಜನ್ ಲವ್ ಸ್ಟೋರಿ ಶುರು, ಹೊಸ ವಿಲನ್ ಎಂಟ್ರಿ..!

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ನ ಹಾಗೂ ಹೀಗೂ ಮತ್ತೊಮ್ಮೆ ನಂಬಿಸಿ ಶಕುಂತಲಾ ಅಪಾಯದಿಂದ ಪಾರಾಗಿದ್ದಾಳೆ. ಕಾಡಿನಲ್ಲಿ ಮಗು ಹುಡುಕುವ ಪ್ರಯತ್ನವನ್ನು ಕೈ ಚೆಲ್ಲಿ ಸದ್ಯ ಗೌತಮ್ ಮನೆಗೆ ಮರಳಿದ್ದಾನೆ. ಮತ್ತೊಂದು ಕಡೆ ಗೌತಮ್ ಜೊತೆ ಕೆಲಸ ಮಾಡುವ ಸೃಜನ್ ತನ್ನ ಕೆಲಸಕ್ಕೆ ಗುಡ್ ಬೈ ಹೇಳಲು ಮುಂದಾಗಿದ್ದು, ವಿಷಯ ಹೇಳಿ ಹೋಗಲು ಗೌತಮ್ ಮನೆಗೆ ಬಂದಿದ್ಧಾನೆ.

ಇದೇ ಸಮಯದಲ್ಲಿ ಎಡವಿ ಬೀಳುತ್ತಿದ್ದ ಸುಧಾಳನ್ನು ಸೃಜನ್ ಕಾಪಾಡಿದ್ದು ಸೃಜನ್ ಮತ್ತು ಸುಧಾ ಲವ್ ಸ್ಟೋರಿ ಶುರುವಾಗುವ ಸೂಚನೆ ಪ್ರೇಕ್ಷಕರಿಗೆ ಸಿಕ್ಕಿದೆ. ಸುಧಾ ಗಂಡ ಯಾರು..? ಗೌತಮ್ ಮನೆಗೆ ಬರುವ ಮೊದಲು ಸುಧಾ ಬದುಕಿನಲ್ಲಿ ಏನೆಲ್ಲ ಆಗಿದೆ ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗುವ ಕಾಲ ಸನ್ನಿಹಿತವಾಗಿದೆ.

amruthadhaare-serial-july-14-episode-written-update

ಮಗಳ ಬಳಿ ಸೃಜನ್ ಬಗ್ಗೆ ಕೇಳುವ ಸುಧಾ

ಇದೆಲ್ಲದಕ್ಕೂ ಪುರಾವೆ ಎಂಬಂತೆ ಸದ್ಯ ಸುಧಾ ತನ್ನ ಮಗಳ ಬಳಿ ಸೃಜನ್ ಬಗ್ಗೆ ವಿಚಾರಿಸಿದ್ದಾಳೆ. ಸೃಜನ್ ಅಂಕಲ್ ಕಂಡರೆ ನಿನಗೆ ಏನ್ ಅನಸುತ್ತೆ ಎಂದು ಕೇಳಿದ್ಧಾಳೆ. ಇದಕ್ಕೆ ಒಳ್ಳೆಯವರು ಅನ್ಸುತ್ತೆ ಅವರು ನನ್ನ ಬೆಸ್ಟ್ ಫ್ರೆಂಡ್ ಅಲ್ವಾ ಎಂದು ಮಗಳು ಹೇಳಿದ್ಧಾಳೆ. ಮುಂದುವರೆದು ಅವರು ನಿನಗೆ ಅಪ್ಪ ಆದರೆ ನಿನಗೆ ಓಕೆನಾ ? ಎಂದು ಸುಧಾ ಕೇಳಿದ್ದಾಳೆ. ಅದಕ್ಕೆ.. ಸುಧಾ ಮಗಳು ಓ ನನಗೆ ಓಕೆ.. ನನಗೆ ತುಂಬಾ ಖುಷಿಯಾಗುತ್ತೆ ಎಂದು ಲಚ್ಚಿ ಹೇಳಿದ್ದಾಳೆ.

ತನಗೆ ತಾನೇ ಹಿಡಿಶಾಪ ಹಾಕಿಕೊಳ್ಳುವ ಜೈದೇವ್

ಮತ್ತೊಂದು ಕಡೆ ತಾನು ಮಾಡಿರುವ ತಪ್ಪಿಗೆ ಜೈದೇವ್ ತನಗೆ ತಾನೇ ಹಿಡಿಶಾಪ ಹಾಕಿಕೊಳ್ಳುತ್ತಿದ್ದಾನೆ. ದಿಯಾ ಬಂದು ಯಾಕೆ ಏನಾಯ್ತು ಎಂದು ಕೇಳಿದಾಗ ಜೈದೇವ್ ನಾನು ಮಾಡಿರುವ ಕೆಲಸಕ್ಕೆ ಏನು ತಗೊಂಡು ಹೊಡ್ಕೊಂಡರು ಸಾಲಲ್ಲ ಅದು ಕಡಿಮೆನೇ ಎಂದು ಹೇಳುತ್ತಾನೆ.

ಕಿಡ್ನಾಪ್ ಮಾಡಿದ ಮೇಲೆ ಆ ಮಗುನ ನಾನೇ ಇಟ್ಕೊಂಡಿದ್ದರೆ ಫ್ಯೂಚರ್‌ನಲ್ಲಿ ಆ ಮಗುನಾ ರಿಮೋಟ್‌ ಕಂಟ್ರೋಲ್ ತರ ಉಪಯೋಗಿಸಿಕೊಳ್ಳಬಹುದಿತ್ತು. ಆದರೆ ಎಲ್ಲಾ ನನ್ನ ಕೈಯಾರೆ ನಾನು ಹಾಳು ಮಾಡಿಕೊಂಡೆ ಎಂದು ಹೇಳುತ್ತಾನೆ. ಜೈದೇವ್‌ನ ಸಮಾಧಾನ ಮಾಡುವ ಪ್ರಯತ್ನ ಮಾಡುವ ದಿಯಾ ಕಾಡಲ್ಲಿ ಮಗು ಕಾಣೆಯಾಗಿದೆ ಎನ್ನುವ ವಿಚಾರ ತಿಳಿದು ಶಾಕ್ ಆಗುತ್ತಾಳೆ.

ಮಗು ಕೊರಗಿನಲ್ಲಿ ಗೌತಮ್

ಹೆಣ್ಣು ಮಗುವನ್ನು ಕಳೆದುಕೊಂಡ ಗೌತಮ್ ವಿಲವಿಲ ಒದ್ದಾಡುತ್ತಿದ್ದಾನೆ. ಇದೇ ಸಮಯದಲ್ಲಿ ಪೊಲೀಸರು ಫೋನ್ ಮಾಡಿದ್ದರು, ಪ್ರಾಣಿಗಳ ಚಲನವಲನ ಗಮನಿಸಲು ಹಾಕಿರುವ ಸಿಸಿಟಿವಿ.. ಆಸ್ಪತ್ರೆಯ ಸುತ್ತ ಮುತ್ತ ಇರುವ ಸಿಸಿಟಿವಿಗಳನ್ನೆಲ್ಲಾ ಪೊಲೀಸರು ಚೆಕ್ ಮಾಡಿದ್ಧಾರೆ ಆದರೆ ಕಿಡ್ನ್ಯಾಪರ್ ಸುಳಿವು ಆಗಲಿ ಮಗು ಸುಳಿವಾಗಲಿ ಸಿಕ್ಕಿಲ್ಲ ಎಂದು ಆನಂದ್ ಹೇಳುತ್ತಾನೆ.

amruthadhaare-serial-july-14-episode-written-update

ಆನಂದ್‌ನ ಮಾತು ಕೇಳಿ ಗೌತಮ್ ನೋವು-ಸಂಕಟ ಇನ್ನೂ ಹೆಚ್ಚಾಗಿದ್ದು ನನ್ನ ಮಗುನಾ ಕಿಡ್ನ್ಯಾಪ್ ಮಾಡುವುದರಿಂದ ಅವನಿಗೇನು ಸಿಗುತ್ತೆ ಎಂದು ಕೇಳುತ್ತಾನೆ. ಆಗಲೇ ಒಂದು ಆಯ್ತು ಹಾಲು ಕುಡಿಯುವ ಮಗು ಅದು. ಅದೇನಾಗಿದೆಯೋ ಹೇಗಿದೆಯೋ ಎನ್ನುವ ಯೋಚನೆ ನನಗೆ ಕಾಡುತ್ತಿದೆ ಎಂದು ಕಣ್ಣೀರು ಹಾಕುತ್ತಾನೆ.

ಸುಧಾ-ಸೃಜನ್ ಹೊಸ ಕನಸಿಗೆ ಅಡ್ಡಿಯಾದ ಹಳೆಯ ನೆನಪು

ಇನ್ನೊಂದು ಕಡೆ ಮಗಳು ಲಚ್ಚಿ, ಸೃಜನ್ ಬಗ್ಗೆ ಹೇಳಿದ ಮಾತುಗಳನ್ನು ಕೇಳಿ ಖುಷಿಗೊಂಡಿರುವ ಸುಧಾ ಬರುವಾಗ ಮಾರ್ಗ ಮಧ್ಯೆ ಸುಧಾ ಗಂಡ ನಟರಾಜ್‌ ನ ಪ್ರವೇಶವಾಗಿದೆ.ಕೋಳಿಗೂಡಿನಲ್ಲಿದ್ದೆ, ಈಗ ಅರಮನೆಯಲ್ಲಿ ಬದುಕುತ್ತಿದ್ದೀಯಾ. ನಿನಗೆ ಮಗಳ ಅಗತ್ಯ ಇಲ್ಲ. ನನ್ನ ಮಗಳನ್ನು ನನಗೆ ಕೊಡು ಎಂದು ಆವಾಜ್‌ ಹಾಕುತ್ತಾನೆ. ನಟರಾಜ್‌ನನ್ನು ಸುಧಾ ಮತ್ತು ಆಕೆಯ ಮಗಳು ಬೆಚ್ಚಿ ಬಿದ್ದಿದ್ದು ಸುಧಾಗೆ ಈಗ ಆತಂಕ ಶುರುವಾಗಿದೆ.

ಗೌತಮ್ ಮನೆಗೆ ನಟರಾಜ್ ಎಂಟ್ರಿ

ಸದ್ಯ ಗೌತಮ್ ಮನೆಯಲ್ಲಿ ತೊಟ್ಟಿಲು ಶಾಸ್ತ್ರದ ಸಮಾರಂಭ ನಡೆಯುತ್ತಿದೆ. ಇದೇ ಸಮಯದಲ್ಲಿ ನಟರಾಜ್ ಮನೆಗೆ ಬಂದಿದ್ಧಾನೆ. ಮುಂದೇನಾಗುತ್ತೆ ? ಗೌತಮ್ ಮುಂದೆ ನಟರಾಜ್ ಏನೆಲ್ಲ ಹೇಳುತ್ತಾನೆ..? ನಟರಾಜ್ ಮಾತುಗಳನ್ನು ಗೌತಮ್ ನಂಬುತ್ತಾನಾ ? ಎನ್ನುವುದಕ್ಕೆ ಉತ್ತರ ಇಂದು { ಜುಲೈ 15 } ಸಿಗಲಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X