Amruthadhaare ; ಗೌತಮ್ ಮನೆಗೆ ಬಂದ ಸುಧಾ ಗಂಡ, ತಲೆ ತಿರುಗಿ ಬಿದ್ದ ಭೂಮಿಕಾ !
ಅಮೃತಧಾರೆ ಧಾರಾವಾಹಿಯಲ್ಲಿ ಒಂದು ಕಡೆ ಕಾಡಿನಲ್ಲಿ ಕಾಣೆಯಾದ ಹೆಣ್ಣು ಮಗು ಇನ್ನೂ ಗೌತಮ್ ಕೈಗೆ ಸಿಕ್ಕಿಲ್ಲ. ಶಕುಂತಲಾ ಮತ್ತು ಜೈದೇವ್‌ಗೆ ಕೂಡ ಮಗು ಸುಳಿವು ಸಿಕ್ತಿಲ್ಲ. ಇದರ ನಡುವೆ ದಿವಾನ್ ಮನೆಯಲ್ಲಿ ಈಗ ತೊಟ್ಟಿಲು ಶಾಸ್ತ್ರದ ಸಂಭ್ರಮ ಮನೆ ಮಾಡಿದೆ. ಆದರೆ.. ಮತ್ತೊಂದು ಕಡೆ ಇದೇ ಸಮಯದಲ್ಲಿ ಹೊಸ ಬದುಕಿನ ಕನಸು ಕಾಣ್ತಿರುವ ಸುಧಾ ಬದುಕಿನಲ್ಲಿ ನಟರಾಜ್‌ನ ಮರು ಪ್ರವೇಶವಾಗಿದೆ.
ಸುಧಾ ಮತ್ತು ಲಚ್ಚಿ ಬರುವ ಮಾರ್ಗ ಮಧ್ಯೆದಲ್ಲಿ ಎದುರಾಗಿರುವ ನಟರಾಜ್ ಕೋಳಿಗೂಡಿನಲ್ಲಿದ್ದೆ, ಈಗ ಅರಮನೆಯಲ್ಲಿ ಬದುಕುತ್ತಿದ್ದೀಯಾ. ನಿನಗೆ ಮಗಳ ಅಗತ್ಯ ಇಲ್ಲ. ನನ್ನ ಮಗಳನ್ನು ನನಗೆ ಕೊಡು ಎಂದು ಆವಾಜ್ ಹಾಕುತ್ತಾನೆ. ನಟರಾಜ್‌ನನ್ನು ಕಂಡು ಸುಧಾ ಮತ್ತು ಆಕೆಯ ಮಗಳು ಬೆಚ್ಚಿ ಬಿದ್ದಿದ್ದು ಸುಧಾಗೆ ಈಗ ಆತಂಕ ಶುರುವಾಗಿದ್ದು ಆ ಆತಂಕದಲ್ಲಿಯೇ ಮನೆಗೆ ಬಂದಿದ್ದಾಳೆ.

ಹೆಸರಿನ ಕುರಿತು ಚರ್ಚೆ
ಭೂಮಿಕಾಗೆ ಮಲ್ಲಿ ಹೆಸರೇನು ಇಡಬೇಕೆಂದು ಆಲೋಚನೆ ಮಾಡಿದ್ದೀರಾ ಎಂದು ಪ್ರಶ್ನೆ ಕೇಳುತ್ತಾಳೆ. ಇದಕ್ಕೆ ಭೂಮಿಕಾ ನಾವು ರಾಜಕುಮಾರ-ರಾಜಕುಮಾರಿ ಅಂತಷ್ಟೇ ಮಾತನಾಡಿಕೊಂಡಿದ್ವಿ ಆದರೆ ಇಂತಹದ್ದೇ ಹೆಸರು ಇಡಬೇಕು ಎನ್ನುವ ಯೋಚನೆ ಮಾಡಿರಲಿಲ್ಲ ಎಂದು ಹೇಳುತ್ತಾಳೆ.
ಈ ಹಿನ್ನೆಲೆ ಸ್ವಲ್ಪ ಹೊತ್ತು ಚರ್ಚೆಯನ್ನು ಮಾಡಿದ ನಂತರ ಹೆಸರನ್ನು ಇಡುವುದು ನಾಮಕರಣದ ದಿವಸ ಇವತ್ತು ಮಗುನ ತೊಟ್ಟಿಲಿಗೆ ಹಾಕುವ ಶಾಸ್ತ್ರ ಮಾತ್ರ ಎಂದು ಮಲ್ಲಿಗೆ ಗೌತಮ್ ಹೇಳುತ್ತಾನೆ. ಆ ನಂತರ ತೊಟ್ಟಿಲು ಶಾಸ್ತ್ರ ಶುರು ಮಾಡಲಾಗುತ್ತೆ. ಆದರೆ.. ಈ ಶಾಸ್ತ್ರದಲ್ಲಿ ಸುಧಾ ಎಲ್ಲಿಯೂ ಕಾಣಿಸುವುದಿಲ್ಲ. ಹೀಗಾಗಿ ಸುಧಾ ಎಲ್ಲಿ ಎಂದು ಭೂಮಿಕಾ ಕೇಳುತ್ತಾಳೆ. ಆಗ ಸೃಜನ್ ಮೇಡಂ ನಾನು ಕರೆದುಕೊಂಡು ಬರುತ್ತೇನೆ ಎಂದು ಹೇಳಿ ಹೋಗುತ್ತಾನೆ.
ಕಣ್ಣೀರು ಹಾಕುತ್ತಿರುವ ಸುಧಾ
ಸುಧಾಳನ್ನು ಸೃಜನ್ ಹುಡುಕಿಕೊಂಡು ಬಂದಿದ್ದು ರೂಮ್‌ನಲ್ಲಿ ಕುಳಿತುಕೊಂಡು ಸುಧಾ ಕಣ್ಣೀರು ಹಾಕುತ್ತಿದ್ದಾಳೆ. ಇದನ್ನು ಗಮನಿಸುವ ಸೃಜನ್ ಲಚ್ಚಿ ಬಳಿ ಅಮ್ಮ ಯಾಕೆ ಇವತ್ತು ತರಾ ಇದ್ದಾರೆ ಏನಾಯ್ತು ಎಂದು ಕೇಳುತ್ತಾನೆ. ಆಗ ಪುಟ್ಟಿ ನಡೆದ ವಿಚಾರ ಹೇಳುತ್ತಾಳೆ. ಇವತ್ತು ನಮ್ಮ ಅಪ್ಪ ಸ್ಕೂಲ್ ಹತ್ರ ಬಂದಿದ್ರು ಅದಕ್ಕೆ ಅಳ್ತಿದ್ದಾರೆ ಎಂದು ಹೇಳುತ್ತಾಳೆ.
ಇದರಿಂದ ಶಾಕ್ ಆಗುವ ಸೃಜನ್ ಅಪ್ಪ ಬಂದಿದ್ದರೆ ಅದಕ್ಕೆ ಅಮ್ಮ ಯಾಕೆ ಅಳಬೇಕು ಎಂದು ಕೇಳುತ್ತಾನೆ. ಇದಕ್ಕೆ ಉತ್ತರ ನೀಡುವ ಸುಧಾ ಮಗಳು ಅವರು ತುಂಬಾ ಕೆಟ್ಟವರು ನೋಡಿದರೆನೇ ಭಯ ಆಗುತ್ತೆ ಎಂದು ಹೇಳುತ್ತಾಳೆ. ಅವರು ಅಮ್ಮನಿಗೆ ಬೈಯುತ್ತಾರೆ ಹೊಡೆಯುತ್ತಾರೆ ಎಂದು ಹೇಳುತ್ತಾಳೆ. ನಿನ್ನ ಅಮ್ಮನ ತುಂಬಾ ಒಳ್ಳೆಯವರು ಅವರು ಯಾವಾಗಲು ಖುಷಿಯಾಗಿರಬೇಕು ಅಷ್ಟೇ ನಾನು ಬಯಸುವುದು ಎಂದು ಸೃಜನ್ ಹೇಳುತ್ತಾನೆ. ಅಮ್ಮನ ಕೆಳಗಡೆ ಪಂಕ್ಷನ್‌ಗೆ ಕರೆದುಕೊಂಡು ಹೋಗೋಣ ನಡಿ ಎಂದು ಹೇಳುತ್ತಾನೆ.

ಮನೆಗೆ ಬಂದ ಸುಧಾ ಗಂಡ
ಸುಧಾಳನ್ನು ಕರೆದುಕೊಂಡು ಸೃಜನ್ ಕೆಳಗೆ ಬಂದಿದ್ದು, ಇಲ್ಲಿ ಶಾಸ್ತ್ರಿ ನಡೆಯುತ್ತಿದೆ ನೀನು ಎಲ್ಲಿ ಹೋಗಿದ್ದೇ ಎಂದು ಗೌತಮ್ ಕೇಳುತ್ತಾನೆ. ಇದಕ್ಕೆ ಸುಧಾ ಲಚ್ಚಿಯನ್ನು ರೆಡಿ ಮಾಡುತ್ತಿದ್ದೆ ಎಂದು ಹೇಳುತ್ತಾಳೆ. ಆಗ ಭೂಮಿಕಾ ತಾಯಿ ಎಲ್ಲರು ಶಾಸ್ತ್ರ ಮಾಡಿ ಆಯ್ತು ನೀನು ಸಕ್ಕರೆ ತಿನಿಸಿ ತೊಟ್ಟಿಲು ತೂಗು ಎಂದು ಹೇಳುತ್ತಾಳೆ. ಅದರಂತೆ ಸುಧಾ ತೊಟ್ಟಿಲು ತೂಗುತ್ತಾಳೆ.
ಇದೇ ಸಮಯದಲ್ಲಿ ಗೌತಮ್ ಮನೆಗೆ ನಟರಾಜ್ ಬಂದಿದ್ದಾನೆ. ಬಂದು ನೇರವಾಗಿ ಲಚ್ಚಿ ಹತ್ರ ಬಂದು ಬಾ ಪುಟ್ಟ ಯಾಕೆ ಬಚ್ಚಿಟ್ಟುಕೊಳ್ತಿದ್ದೀಯಾ ಎಂದು ಕರೆದೊಯ್ಯಲು ನೋಡುತ್ತಾನೆ. ಆಗ ಗೌತಮ್ ಹಲೋ ಯಾರು ನೀವು ಎಂದು ಕೇಳುತ್ತಾನೆ. ಆಗ ಸುಧಾ ನಿಮಗೆ ಯಾರಿಗೂ ನನ್ನ ಬಗ್ಗೆ ಹೇಳಿಲ್ಲ ಅನಸುತ್ತೆ ನಾನೇ ನನ್ನ ಪರಿಚಯ ಮಾಡಿಕೊಳ್ಳುತ್ತೇನೆ ನನ್ನ ಹೆಸರು ನಟರಾಜ್ ಅಂತ ನಾನು ಸುಧಾನ ಗಂಡ ಎಂದು ಹೇಳುತ್ತಾನೆ.
ತಲೆ ತಿರುಗಿ ಬಿದ್ದ ಭೂಮಿಕಾ
ನಟರಾಜ್ ಮಾತು ಕೇಳಿ ಮನೆಯವರೆಲ್ಲ ಶಾಕ್ ಆಗಿದ್ದು ನನ್ನ ಮಗಳನ್ನು ನನ್ನ ಜೊತೆ ಕಳುಹಿಸಿಕೊಡಿ ಎಂದು ನಟರಾಜ್ ಮನವಿ ಮಾಡಿಕೊಳ್ಳುತ್ತಾನೆ. ಆಗ ನಟರಾಜ್‌ನನ್ನು ಗೌತಮ್ ತರಾಟೆಗೆ ತೆಗೆದುಕೊಂಡಿದ್ದು ಎಲ್ಲಿದ್ರೀ ಇಷ್ಟು ದಿವಸ ಎಂದು ಕೇಳುತ್ತಾನೆ. ಜೀವನ ನಡೆಸೋಕೆ ಕಷ್ಟ ಪಡ್ತಿದ್ದಾಗಾ, ಕೂಲಿ ನಾಲಿ ಮಾಡೋವಾಗ ನೀವು ಎಲ್ಲಿದ್ರೀ ಎಂದು ಕಿಡಿ ಕಾರುತ್ತಾನೆ.
ಆ ನಂತರ ತೊಟ್ಟಿಲುಗೆ ಕೈ ಹಾಕಲು ನಟರಾಜ್ ಮುಂದಾಗುತ್ತಾನೆ. ಆಗ ಭೂಮಿಕಾ ಗಾಬರಿ ಬಿದ್ದಿದ್ದು ಚೆನ್ನಾಗಿ ಯೋಚನೆ ಮಾಡಿ ನಾನು ಮತ್ತೆ ಬರ್ತಿನಿ ಎಂದು ಹೇಳಿ ಹೊರಟು ಹೋಗಿದ್ದಾನೆ. ನಟರಾಜ್ ಹೋದ ನಂತರ ಭೂಮಿಕಾ ತಲೆ ತಿರುಗಿ ಬಿದ್ದಿದ್ದು ಮನೆಯವರೆಲ್ಲ ನೀರು ಕುಡಿಸಿ ಭೂಮಿಕಾಗೆ ಸಮಾಧಾನ ಮಾಡಿದ್ದಾರೆ.


Click it and Unblock the Notifications











