Amruthadhaare ; ಸುಧಾ ಸಂಸಾರದ ಬಗ್ಗೆ ತಲೆ ಕೆಡಿಸಿಕೊಂಡ ಗೌತಮ್, ಕಾಡಲ್ಲಿರುವ ಮಗು ಕಥೆ ಏನಾಯ್ತು ?
ಅಮೃತಧಾರೆ ಧಾರಾವಾಹಿಯಲ್ಲಿ ಸುಧಾ ಗಂಡ ನಟರಾಜ್ ಮರಳಿ ಬಂದಿದ್ದಾನೆ. ಗೌತಮ್ ಮನೆಗೆ ಬಂದು ಇನ್ನೊಮ್ಮೆ ಯೋಚನೆ ಮಾಡಿ ಮತ್ತೆ ಬರ್ತಿನಿ ಎಂದು ಹೇಳಿ ಹೋಗಿದ್ದಾನೆ. ಅವನು ಹೋದ ನಂತರ ಸುಧಾ ಕಣ್ಣೀರು ಹಾಕುತ್ತಿದ್ಧಾಳೆ. ಮುಖವಾಡ ಹಾಕಿಕೊಂಡು ಬಂದಿದ್ದ ಅವನ ನಿಜವಾದ ಮುಖ ಬೇರೆನೇ ಇದೆ ಎಂದು ಹೇಳುತ್ತಾಳೆ. ಒಂದು ದಿನಾ ಕೂಡ ನನ್ನ ಕಷ್ಟ ಸುಖಕ್ಕೆ ಆಗಲಿಲ್ಲ
ದಿನ ನರಕ ತೋರಿಸಿದ್ದಾನೆ ಎಂದು ಹೇಳುತ್ತಾಳೆ. ನಾನು ಅವನನ್ನು ನಂಬಿ ಮೋಸ ಹೋದೆ ಎಂದು ಕಣ್ಣೀರು ಹಾಕುತ್ತಾಳೆ. ನನಗಾಗಿದ್ದು ಬೇರೆ ಯಾವ ಹೆಣ್ಣಿಗೂ ಆಗಬಾರದು ಎಂದು ಹೇಳುತ್ತಾಳೆ. ತನ್ನ ಹಳೆಯ ದಿನಗಳನ್ನು ನೆನೆದು ಕುಟುಂಬದ ಎದುರು ಬಿಕ್ಕಿ ಬಿಕ್ಕಿ ಅಳುತ್ತಾಳೆ.

ಕುಂತರು ನಿಂತರು ಮಗು ಬಗ್ಗೆ ಯೋಚನೆ
ಜೈದೇವ್ ಮನೆಯಲ್ಲಿ ಮಗು ಬಗ್ಗೆ ಯೋಚನೆ ಮಾಡುತ್ತಾ ಕುಂತಿದ್ದಾನೆ. ದಿಯಾ ಬಂದು ಇದಕ್ಕೆ ತಕರಾರು ತೆಗೆದಿದ್ದು ಕುಂತರು ನಿಂತರು ನಿಮಗೆ ಮಗು ಬಗ್ಗೆನೇ ಚಿಂತೆಯಾಗಿದೆ ಎಂದು ಹೇಳುತ್ತಾಳೆ. ಮದುವೆ ಮುಂಚೆಯೇ ಚೆನ್ನಾಗಿತ್ತು ಆಗ ನಮ್ಮ ನಡುವೆ ಕೇವಲ ಪ್ರೀತಿ ಮಾತ್ರ ಇತ್ತು ಆದರೆ ಈಗ ನಿಮ್ಮ ದೇಹ ಮಾತ್ರ ಇಲ್ಲಿರುತ್ತೆ, ಮನಸು ಎಲ್ಲೆಲ್ಲೋ ಇರುತ್ತೆ ಎಂದು ತನ್ನ ಮನದ ನೋವನ್ನು ಹೇಳುತ್ತಾಳೆ.
ಆಗ ಜೈದೇವ್ ನಾನು ಮೊದಲು ಕೂಡ ಹೀಗೆ ಇದ್ದೆ ಆದರೆ ನೀನು ಅದನ್ನು ಗಮನ ಕೊಟ್ಟು ನೋಡಿಲ್ಲ ಹೀಗಾಗಿ ನಿನಗೆ ಗೊತ್ತಾಗಿಲ್ಲ ಎಂದು ಹೇಳುತ್ತಾನೆ. ನಿನ್ನ ಜೊತೆ ಇದ್ದೇನೆ ಎಂದ ಮಾತ್ರಕ್ಕೆ ದಿನದ 24 ಗಂಟೆ ನಿನ್ನ ಜೊತೆ ರೊಮ್ಯಾನ್ಸ್ ಮಾಡಿಕೊಂಡು, ನಿನ್ನ ಮುದ್ದು ಮಾಡಿಕೊಂಡು.. ಕೂರಲು ಸಾಧ್ಯವಾಗುವುದಿಲ್ಲ ಎಂದು ಹೇಳುತ್ತಾನೆ.
ಪ್ರಪಂಚದ ಯಾವ ಗಂಡ ಹೆಂಡತಿ ಕೂಡ ಆ ರೀತಿ ಇರಲು ಸಾಧ್ಯ ಇಲ್ಲ ಎನ್ನುತ್ತಾನೆ. ಆಗ ದಿಯಾ ಎಲ್ಲವೂ ನೀವು ಅಂದುಕೊಂಡಂತೆ ಆಗಿದೆ. ನನ್ನ ಜೊತೆ ಮದುವೆಯಾಗಿದೆ. ಆಸ್ತಿ ಕೂಡ ಸಿಕ್ಕಿದೆ. ಆದರೂ ನೀವು ಖುಷಿಯಾಗಿಲ್ಲ. ನನಗೆ ಮಹತ್ವ ಕೊಡಲ್ಲ ಯಾವಾಗಲೂ ಫ್ಯಾಮಿಲಿ ರಾಜಕೀಯದಲ್ಲಿಯೇ ಮುಳುಗಿ ಹೋಗಿರ್ತಿರಾ ಎಂದು ಹೇಳುತ್ತಾಳೆ. ಮನೆ ಬಿಟ್ಟು ಬಂದರೂ ಅವರ ಬಗ್ಗೆನೇ ಯೋಚನೆ ಮಾಡ್ತೀರಾ ಈ ಭಾಗ್ಯಕ್ಕೆ ನಾವು ಮದುವೆ ಯಾಕೆ ಆಗಬೇಕಿತ್ತು ಎಂದು ಹೇಳುತ್ತಾಳೆ.
ಗೌತಮ್ ಮನೆಗೆ ಬಂದ ಲಾಯರ್
ಸುಧಾ ಸಾಂಸಾರಿಕ ಜೀವನದ ಕುರಿತು ಚರ್ಚೆ ಮಾಡಲು ಗೌತಮ್ ಮನೆಗೆ ಈಗ ಲಾಯರ್ ಬಂದಿದ್ಧಾರೆ. ಆನಂದ್.. ಗೌತಮ್ ಮತ್ತು ಭೂಮಿಕಾ ಲಾಯರ್ ಜೊತೆ ಕುಳಿತು ಚರ್ಚೆ ಮಾಡುತ್ತಾರೆ. ಮಗುನ ಪಡೆದುಕೊಳ್ಳುವ ವಿಚಾರದಲ್ಲಿ ಕಾನೂನು ಏನು ಹೇಳುತ್ತೆ ಎಂದು ಗೌತಮ್ ವಕೀಲರಿಗೆ ಕೇಳುತ್ತಾನೆ.

ಆಗ ವಕೀಲರು ನಮಗಿಂತ ಈಗ ಸುಧಾ ಅವರ ನಿರ್ಧಾರ ಮತ್ತು ಅವರ ಮಾತು ಮುಖ್ಯವಾಗುತ್ತೆ, ಅವರಿಗೆ ಡಿವೋರ್ಸ್ ಬೇಕಾ..ಬೇಡ್ವಾ.. ಎಂದು ಕೇಳಬೇಕು. ಅವರು ಅದಕ್ಕೆ ಕಾರಣ ಕೊಡಬೇಕು. ಮಗು ಯಾರ ಜೊತೆ ಇರಬೇಕು ಎನ್ನುವುದು ಮಗು ಕೊಡುವ ಹೇಳಿಕೆಯ ಮೇಲೆ ನಿರ್ಧಾರವಾಗುತ್ತೆ ಎಂದು ಹೇಳುತ್ತಾರೆ. ಹೀಗಾಗಿ ನಿಮ್ಮ ತಂಗಿ ಅಭಿಪ್ರಾಯ ಮುಖ್ಯ ಎಂದು ಹೇಳುತ್ತಾರೆ. ಭೂಮಿಕಾ ಕೂಡ ಇದೇ ಮಾತನ್ನು ಪುನರುಚ್ಚಿಸುತ್ತಾಳೆ.
ಆದರೆ ಗೌತಮ್ ಇದಕ್ಕೆ ಒಪ್ಪುವುದಿಲ್ಲ. ಸುಧಾ ಮನಸಿನಲ್ಲಿ ಅವನಿಗೆ ಜಾಗ ಇಲ್ಲ ಎಂದು ವಾದ ಮಾಡುತ್ತಾನೆ. ಸುಧಾಳನ್ನು ಕೇಳುವುದೇನಿದೆ ಎಂದು ಹೇಳುತ್ತಾನೆ. ಕೊನೆಗೆ ಭೂಮಿಕಾ ಮಾತುಗಳಿಗೆ ಒಪ್ಪಿ ಸುಧಾ ಜೊತೆ ಮಾತನಾಡುವುದಾಗಿ ಹೇಳುತ್ತಾನೆ. ಇದೇ ಸಮಯದಲ್ಲಿ ಆಕೆಯ ಗಂಡನ ಜೊತೆ ಕೂಡ ಒಮ್ಮೆ ಮಾತನಾಡಿ, ಬದಲಾಗುವ ಅವಕಾಶ ನೀಡಿ ಬದಲಾದರೆ ಒಳ್ಳೆಯದು, ಬದಲಾಗದಿದ್ದರೆ ಈಗೇನು ಮಾಡಬೇಕು ಎಂದುಕೊಂಡಿದ್ದೀರಾ ಅದನ್ನೇ ಮಾಡಿ ಎನ್ನುತ್ತಾಳೆ. ಸಂಬಂಧಗಳನ್ನು ಜೋಡಿಸುವ ಪ್ರಯತ್ನ ಮಾಡಬೇಕು, ಮುರಿಯುವುದು ಕೊನೆಯ ಆಯ್ಕೆ ಆಗಿರಬೇಕು ಎನ್ನುತ್ತಾಳೆ.
ಸುಧಾ ಜೊತೆ ಗೌತಮ್ ಮತ್ತು ಭೂಮಿಕಾ ಚರ್ಚೆ
ತುಂಬಾನೇ ಯೋಚನೆ ಮಾಡಿ ಪರಸ್ಪರ ಚರ್ಚೆ ಮಾಡಿದ ನಂತರ ಸುಧಾ ಬಳಿ ಗೌತಮ್ ಮತ್ತು ಭೂಮಿಕಾ ಮಾತನಾಡಲು ಬಂದಿದ್ದಾರೆ. ನಿನ್ನ ಗಂಡನ ಬಗ್ಗೆ ನಿನ್ನ ಅಭಿಪ್ರಾಯವೇನು ಎಂದು ಕೇಳುತ್ತಾರೆ. ಎಲ್ಲವೂ ನಿನ್ನ ನಿರ್ಧಾರಕ್ಕೆ ಬಿಡ್ತಿದೀನಿ ಯೋಚನೆ ಮಾಡಿ ಹೇಳು ಎನ್ನುತ್ತಾನೆ. ನಿನ್ನ ನಿರ್ಧಾರ ಏನೇ ಇರಲಿ ನಾವು ಪ್ರಶ್ನೆ ಮಾಡಲ್ಲ ಎಲ್ಲವೂ ನಿನಗೆ ಬಿಟ್ಟಿದ್ದು ಎಂದು ಹೇಳುತ್ತಾನೆ.
ಮಗು ಕಥೆ ಏನಾಯ್ತು ?
ಕಾಡಿನಲ್ಲಿ ಮಗು ಕಾಣೆಯಾದ ಹಿನ್ನೆಲೆ ಈ ಹಿಂದೆ ತಲೆ ಕೆಡಿಸಿಕೊಂಡಿದ್ದ ಗೌತಮ್ ಸದ್ಯ ಆ ಮಗುನ ಸಂಪೂರ್ಣ ಮರೆತು ಸುಧಾ ಸಂಸಾರದ ಬಗ್ಗೆ ತೆಲೆ ಕೆಡಿಸಿಕೊಂಡಿದ್ಧಾನೆ. ಹೀಗಾಗಿ ಆ ಮಗು ಕಥೆ ಏನಾಯ್ತು ಎನ್ನುವ ಪ್ರಶ್ನೆ ಈಗ ಹಲವರನ್ನು ಕಾಡುತ್ತಿದೆ. ಕಾಡಿನಲ್ಲಿ ಆ ಮಗು ಹೇಗೆ ಬದುಕುಳಿಯುತ್ತೆ ಎನ್ನುವ ಕುತೂಹಲ ಕೂಡ ಸದ್ಯ ಹಲವರಲ್ಲಿದೆ.


Click it and Unblock the Notifications











