Amruthadhaare:ಅಪೇಕ್ಷಾ ಜೊತೆ ಪಾರ್ಥ ಮದುವೆಗೆ ಎದುರಾಗಿದೆ ಅಡ್ಡಿ; ಅಡೆತಡೆಗಳನ್ನು ಮೆಟ್ಟಿ ನಿಲ್ಲುತ್ತಾನಾ?
ಪಾರ್ಥನಿಗೆ ಹೇಗಾದರೂ ಮಾಡಿ ಅಪೇಕ್ಷನನ್ನು ಪಡೆದುಕೊಳ್ಳಬೇಕು. ಆಕೆಯನ್ನು ಮದುವೆಯಾಗಬೇಕು. ಆ ಮದುವೆಗೆ ಎಲ್ಲರೂ ಒಪ್ಪಿಗೆಯನ್ನು ನೀಡಬೇಕು ಎನ್ನುವುದು ಪಾರ್ಥನ ಆಸೆ. ಆದರೆ, ಇದೀಗ ಸದಾಶಿವ, ಪಾರ್ಥನಿಗೆ ಒಂದು ಟಾಸ್ಕ್ ನೀಡಿದ್ದಾನೆ. ಸದಾಶಿವ ಪಾಠ ಮಾಡುತ್ತಿದ್ದ ವೇಳೆ ಅವರ ಮಾತು ಕೇಳದ ಮಕ್ಕಳಿಗೆ ಪಾಠ ಮಾಡಿ ಒಳ್ಳೆಯ ಮಾರ್ಕ್ಸ್ ಬರುವ ಹಾಗೆ ಮಾಡಬೇಕು. ಅವರ ಮನಸ್ಸನ್ನು ಪರಿವರ್ತನೆ ಮಾಡಬೇಕು ಅಂತ ಹೇಳಿರುತ್ತಾನೆ.
ನೀನು ಈ ಪರೀಕ್ಷೆಯಲ್ಲಿ ಸೋತರೆ ಅಪೇಕ್ಷಾಳನ್ನು ಮರೆತು ಬಿಡಬೇಕು ಎಂದು ಹೇಳಿರುತ್ತಾನೆ. ಇನ್ನೂ ಪಾರ್ಥ ಮನೆಯಿಂದ ಹೊರಡಬೇಕಾದರೆ ಬಹಳ ನೋವಿನಿಂದ ಹೋಗುತ್ತಾನೆ. ಇದನ್ನು ನೋಡಿ ಶಕುಂತಲಾ ದೇವಿ ಮನಸ್ಸಿಗೆ ಏನೋ ಒಂದು ರೀತಿಯ ಅನುಮಾನ ಮೂಡುತ್ತೆ. ಆಗ ಆಕೆ "ಯಾಕೋ ಪಾರ್ಥ ಸೋಲೋ ಟ್ರಿಪ್‌ಗೆ ಹೋಗುತ್ತಿದ್ದೇನೆ ಎಂದು ಸುಳ್ಳು ಹೇಳುತ್ತಿದ್ದಾನೆ. ಆತ ಎಲ್ಲಿಗೆ ಹೋಗುತ್ತಿದ್ದಾನೆ ಎನ್ನುವುದನ್ನು ತಿಳಿದುಕೋ ಅಣ್ಣ" ಎಂದು ಆಕೆಯ ಅಣ್ಣನಿಗೆ ಹೇಳುತ್ತಾರೆ.

ಶಕುಂತಲಾ ದೇವಿ ಸೂಚನೆ ಮೇರೆಗೆ ಆಕೆಯ ಅಣ್ಣ ಪಾರ್ಥನ ಹಿಂದೆ ಹೋಗುತ್ತಾರೆ. ಪಾರ್ಥ ಹೋದ ಶಾಲೆಗೆ ಆತ ಕೂಡ ಹೋಗುತ್ತಾನೆ. ಇನ್ನೂ ಮಕ್ಕಳೊಂದಿಗೆ ಊಟ ಮಾಡುತ್ತಿರುವ ವೇಳೆ ಶಕುಂತಲಾ ದೇವಿ ಅಣ್ಣ ಪಾರ್ಥ ಊಟ ಮಾಡಿ ಹೋಗುವುದನ್ನೇ ಕಾಯುತ್ತಿರುತ್ತಾನೆ. ಆತ ಹೋದ ಬಳಿಕ ಅಲ್ಲಿಗೆ ಬಂದ ಪಾರ್ಥ ಮಕ್ಕಳಿಗೆ ಪ್ರಶ್ನೆಗಳನ್ನು ಕೇಳುತ್ತಾನೆ. ಆದರೆ ಆ ಮಕ್ಕಳು ಸಿಕ್ಕಾಪಟ್ಟೆ ತರ್ಲೆ. ಆದರೂ ಅವರ ಜೊತೆ ಮಾತನಾಡಿದ ಪಾರ್ಥನ ಮಾವನಿಗೆ ಈ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾನೆ ಎನ್ನುವುದು ಈ ವಿಚಾರ ತಿಳಿಯುತ್ತೆ. ಅದನ್ನು ಶಕುಂತಲಾ ದೇವಿ ಬಳಿ ಬಂದು ಹೇಳಿದಾಗ ಆಕೆ ಕೆಂಡಾಮಂಡಲ ಆಗುತ್ತಾರೆ.
ಭೂಮಿಕಾ ಮೇಲೆ ಆರೋಪ ಹೊರಿಸಿದ ಶಕುಂತಲಾ
ಇದೆಲ್ಲ ಭೂಮಿಕಾ ಪ್ಲಾನ್ ಎಂದು ಆಕೆಯ ಬಗ್ಗೆ ಆರೋಪದ ಸುರಿಮಳೆ ಸುರಿಸುತ್ತಾರೆ. ಇನ್ನೂ ಗೌತಮ್‌ಗೆ ಭೂಮಿಕಾನ ಬಿಟ್ಟಿರಲು ಸಾಧ್ಯವಾಗದೆ ಆಫೀಸ್‌ಗೆ ಹೋಗಿ ಅಲ್ಲಿ ಏನೇನೋ ಸುಳ್ಳು ಹೇಳಿ ಮನೆಗೆ ಬರುತ್ತಿದ್ದಾರೆ. ಗೌತಮ್‌ಗೆ ರುಚಿ ರುಚಿಯಾದ ಪಾಯಸವನ್ನು ತಂದು ತಿನ್ನಿಸುತ್ತಿರುವಾಗ ಅಲ್ಲಿಗೆ ಆನಂದ್ ಹಾಗೂ ಅಪರ್ಣಾ ಬರುತ್ತಾರೆ. ಅವರನ್ನು ನೋಡಿದ ಕೂಡಲೇ ಭೂಮಿಕಾಗೆ ಬಹಳ ನಾಚಿ. ಇತ್ತ ಗೌತಮ್‌ಗೆ ಏನು ಮಾಡಬೇಕು ಅನ್ನೋದೇ ತಿಳಿಯದಾಗುತ್ತೆ.

ಆನಂದ್ ಮಾತಿಗೆ ನಾಚಿದ ಗೌತಮ್
ಆನಂದ್ ಬಂದ ಕೂಡಲೇ "ಆಫೀಸ್‌ನಲ್ಲಿ ಅಷ್ಟೆಲ್ಲ ಮೀಟಿಂಗ್ ಎಲ್ಲಾ ಇದ್ದರೂ, ಮನೆಗೆ ಬಂದು ಹೆಂಡತಿ ಜೊತೆ ಪಾಯಸ ತಿನ್ನುತ್ತಿದ್ದಿಯಾ? ಇದಕ್ಕೆನಾ ನೀನು ರಜೆ ಹಾಕಿದ್ದು" ಎಂದಾಗ ಏನು ಹೇಳಬೇಕು ತಿಳಿಯದೇ ತೊದಲುತ್ತಾರೆ. ಹಾಗೆಯೇ ಆನಂದ್ ಜೊತೆಗೆ ಅಪರ್ಣಾ ಕೂಡ ಕಿಂಡಲ್ ಮಾಡುತ್ತಾಳೆ. "ಇತ್ತೀಚೆಗೆ ನಮ್ಮ ಡುಮ್ಮ ಸರ್‌ಗೆ ಬಹಳ ಪ್ರೀತಿಯಾಗಿದೆ ಎಂದು ಹೇಳುತ್ತಾರೆ. ಇನ್ನೂ ಕೊನೆಗೂ ಭೂಮಿಕಾಗೆ ಗೌತಮ್ ಬಳಿ 'ಐ ಲವ್ ಯು' ಎಂದು ಹೇಳಿಸಿ ಬಿಡುತ್ತಾರೆ.
ಭೂಮಿಕಾಗೆ ಮನದ ಮಾತು ಹೇಳಿದ ಗೌತಮ್
ಇದನ್ನು ಕೇಳಿದ ಭೂಮಿಕಾ ನಾಚಿ ನೀರಾಗಿದ್ದಳು. ಹಾಗೆಯೇ ಭೂಮಿಕಾಗೆ ಮನದ ಮಾತನ್ನು ಗೌತಮ್ ಹೇಳಿರುತ್ತಾರೆ. ಇನ್ನೂ ಭೂಮಿಕಾಗೆ ಗೌತಮ್ ಎಂದರೆ ಬಹಳ ಪ್ರೀತಿ. ತವರು ಮನೆಗೆ ಹೋಗಿದ್ದರು ಗೌತಮ್‌ನದ್ದೇ ಕನವರಿಕೆ. ಗೌತಮ್‌ಗೆ ಕೂಡ ಹಾಗೆಯೇ. ಇನ್ನೂ ಇವರಿಬ್ಬರ ಜೋಡಿ ಹೀಗೆಯೇ ಇರಲಿ ಎನ್ನುವುದು ಅಭಿಮಾನಿಗಳ ಆಶಯ.


Click it and Unblock the Notifications











