Amruthadhaare ; ರೆಸ್ಟೋರೆಂಟ್ ಓನರ್ ಆದ ಮಲ್ಲಿ, ಹೊಸ ಪ್ಲಾನ್ ಮಾಡುತ್ತಿರುವ ಶಕುಂತಲಾ !

ಅಮೃತಧಾರೆ ಧಾರಾವಾಹಿಯ ಕಥೆ ಸದ್ಯ ಸುಧಾ ಸುತ್ತ ಮುತ್ತ ಸುತ್ತುತ್ತಿದೆ. ಸುಧಾ ಬದುಕಿನಲ್ಲಿ ಗಂಡನ ಮರು ಪ್ರವೇಶವಾಗಿದ್ದು, ಗೌತಮ್ ಮತ್ತು ಭೂಮಿಕಾ ಮುಂದಿನ ಜೀವನದ ಬಗ್ಗೆ ಯೋಚನೆ ಮಾಡಿ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಸುಧಾಗೆ ಹೇಳಿದ್ದಾರೆ. ಎಲ್ಲವೂ ನಿನ್ನ ನಿರ್ಧಾರಕ್ಕೆ ಬಿಡ್ತಿದೀನಿ ಯೋಚನೆ ಮಾಡಿ ಹೇಳು ಎಂದಿದ್ದಾರೆ. ನಿನ್ನ ನಿರ್ಧಾರ ಏನೇ ಇರಲಿ ನಾವು ಪ್ರಶ್ನೆ ಮಾಡಲ್ಲ ಎಲ್ಲವೂ ನಿನಗೆ ಬಿಟ್ಟಿದ್ದು ಎಂದು ಹೇಳುತ್ತಾರೆ.

ಗೌತಮ್ ಮತ್ತು ಭೂಮಿಕಾ ಮಾತು ಕೇಳಿ ಸದ್ಯ ಸುಧಾ ಗೊಂದಲಕ್ಕೀಡಾಗಿದ್ದು ಸೃಜನ್ ತನಗೆ ಹೇಳಿದ್ದ ಮಾತುಗಳನ್ನು ಸುಧಾ ನೆನಪು ಮಾಡಿಕೊಂಡಿದ್ದಾಳೆ. ಇನ್ನೊಂದು ಕಡೆ ಮಗು ಕೈ ತಪ್ಪಿದ್ದಕ್ಕೆ ಜೈದೇವ್ ಕೈ ಕೈ ಹಿಸುಕಿಕೊಳ್ಳುತ್ತಿದ್ದು ಶಕುಂತಲಾ ಜೈದೇವ್ ಮನೆಗೆ ಬಂದಿದ್ಧಾಳೆ.

amruthadhaare-serial-july-17-episode-written-update

ಹೊಸ ಪ್ಲಾನ್ ಮಾಡುತ್ತಿರುವ ಶಕುಂತಲಾ

ಇದೇ ಸಮಯದಲ್ಲಿ ಶಕುಂತಲಾಗೆ ಜೈದೇವ್ ರೇಗಿಸುವ ಪ್ರಯತ್ನ ಮಾಡಿದ್ದು ಯಾರು ಯಾರಿಗೋ ಮಕ್ಕಳಾಗುತ್ತಿವೆ. ನನ್ನ ಸ್ವಂತ ಮಕ್ಕಳಿಗೆ ಮಕ್ಕಳಾಗುತ್ತಿಲ್ಲವಲ್ಲಾ ಅನ್ನುವ ಚಿಂತೆ ನನ್ನನ್ನು ಕಾಡುತ್ತಿದೆ ಎಂದು ಶಕುಂತಲಾ ಜೈದೇವ್‌ಗೆ ಹೇಳುತ್ತಾಳೆ. ಶಕುಂತಲಾಳನ್ನು ಸಮಾಧಾನ ಮಾಡುವ ಜೈದೇವ್ ಈಗ ನಮ್ಮ ಕಣ್ಣೆದುರು ಇರುವ ಮಗುನ ಏನ್ ಮಾಡೋದು ಅದರ ಬಗ್ಗೆ ಯೋಚನೆ ಮಾಡು ಎನ್ನುತ್ತಾನೆ.

ಇದಕ್ಕೆ ಒಂದು ಮಗುನ ನಾವು ಈಗಾಗಲೇ ಕಿತ್ಕೊಂಡಿದೀವಿ ಈ ಮಗುನೂ ಕಿತ್ಕೊಂಡ್ರೆ ಮತ್ತೆ ಅವನಿಗೆ ಮಕ್ಕಳಾಗುವುದು ಅಸಾಧ್ಯ, ಸಂಪೂರ್ಣ ಕುಸಿದು ಹೋಗ್ತಾನೆ ಎಂದು ಹೇಳುತ್ತಾಳೆ. ಜೀವನ ಪೂರ್ತಿ ನಮ್ಮ ಸೇವೆ ಮಾಡಿಕೊಂಡು ಇರುತ್ತಾನೆ ಎಂದು ಹೇಳುತ್ತಾಳೆ. ಜೈದೇವ್ ಕೂಡ ಹೌದು ಹೌದು ಎಂದು ತಲೆಯಾಡಿಸುತ್ತಾನೆ. ಅಣ್ಣ ಎನಿಸಿಕೊಂಡವನು ಅದ್ಹೇಗೆ ನೆಮ್ಮದಿಯಾಗಿರ್ತಾನೆ ಎಂದು ನೋಡೋಣ ಎಂದು ಹೇಳುತ್ತಾನೆ.

ರೆಸ್ಟೋರೆಂಟ್‌ ಓನರ್ ಆದ ಮಲ್ಲಿ

ದಿಯಾ ಒತ್ತಾಸೆಗೆ ಮಣಿದು ದಿಯಾಳನ್ನ ಕರೆದುಕೊಂಡು ಜೈದೇವ್ ರೆಸ್ಟೋರೆಂಟ್‌ ಬಂದಿದ್ದಾನೆ. ಆದರೆ.. ಈ ರೆಸ್ಟೋರೆಂಟ್‌ಗೆ ಈಗ ಮಲ್ಲಿ ಓನರ್ ಆಗಿದ್ದು ಮಲ್ಲಿಯನ್ನು ಅಲ್ಲಿ ಕಂಡು ಜೈದೇವ್ ಬೆಚ್ಚಿ ಬಿದ್ದಿದ್ದಾನೆ. ಮಲ್ಲಿ ಮಾತನಾಡದೇ ರೆಸ್ಟೋರೆಂಟ್ ಒಳಗಡೆ ಹೋಗಿದ್ದು, ದಿಯಾ ನಾವು ಕೂಡ ಒಳಗಡೆ ಹೋಗೋಣ ನಮ್ಮ ನಡುವೆ ಇರುವ ಪ್ರೀತಿ -ಅನೋನ್ಯತೆ ಕಂಡು ಅವಳು ಹೊಟ್ಟೆ ಉರಿದುಕೊಳ್ಳಬೇಕು ಎಂದು ಜೈದೇವ್‌ ಗೆ ಹೇಳುತ್ತಾಳೆ. ದಿಯಾ ಮಾತಿನಂತೆ ಜೈದೇವ್ ಒಳಗಡೆ ಹೋಗುತ್ತಾನೆ. ಇಬ್ಬರು ಮಲ್ಲಿಯ ಕಣ್ಣಿಗೆ ಕಾಣುವಂತೆ ಕೂರುತ್ತಾರೆ. ಹೊಟ್ಟೆ ಉರಿಸುವ ಪ್ರಯತ್ನ ಮಾಡ್ತಾರೆ. ಆದರೆ ಮಲ್ಲಿಯೇ ಇಲ್ಲಿ ಜೈದೇವ್‌ಗೆ ಚಮಕ್ ನೀಡಿದ್ಧಾಳೆ.

ನಟರಾಜ್‌ನನ್ನು ಭೇಟಿಯಾದ ಗೌತಮ್

ಮತ್ತೊಂದು ಕಡೆ ನಟರಾಜ್‌ನನ್ನು ಗೌತಮ್ ಭೇಟಿಯಾಗಿದ್ದಾನೆ. ನಿನ್ನ ಉದ್ದೇಶವೇನು ಎಂದು ಕೇಳಿದ್ದಾನೆ. ತಂಗಿ ಗಂಡ ಅಂದರೆ ಒಂದು ಪ್ರೀತಿ ಗೌರವ ಇರುತ್ತೆ ಆದರೆ ನಿನ್ನ ನೋಡಿದರೆ ಆ ರೀತಿ ಅನಸ್ತಿಲ್ಲ, ನಾನ್ಯಾಕೇ ನಿನ್ನ ಜೊತೆ ಕಳುಹಿಸಿಕೊಡಬೇಕು ಎನ್ನುತ್ತಾನೆ. ಇದಕ್ಕೆ ನಟರಾಜ್ ನಾನು ಮೊದಲಿನಂತೆ ಇಲ್ಲ ಬದಲಾಗಿದ್ದೇನೆ ನನ್ನ ನಂಬಿ ಎಂದು ಹೇಳುತ್ತಾನೆ. ಸುಧಾಗೆ ನೀನು ಬದಲಾಗಿದಿಯಾ ಎಂದು ಮನವರಿಕೆಯಾಗಬೇಕು ಎಂದು ಹೇಳಿ ಮನೆಗೆ ಬರುವಂತೆ ಗೌತಮ್ ಹೇಳುತ್ತಾನೆ.

ಸುಧಾ -ಸೃಜನ್ ಮಾತು ಕೇಳಿಸಿಕೊಳ್ಳುವ ಭೂಮಿಕಾ

ಇತ್ತ ಮನೆಯಲ್ಲಿ ಸುಧಾ ಕಣ್ಣೀರು ಹಾಕುತ್ತಾ ಕುಂತಿದ್ದು, ಸುಧಾ ರೂಮ್‌ಗೆ ಸೃಜನ್ ಬಂದಿದ್ದಾನೆ. ನಾನೇನೋ ಹೇಳಿದೆ ಅಂತ ನೀವು ತಲೆ ಕೆಡಿಸಿಕೊಂಡು ಕೂರಬೇಡಿ, ನಾನು ನಿಮಗೆ ಎಮೋಷನಲ್ ಬ್ಲ್ಯಾಕ್ ಮೇಲ್ ಮಾಡಲ್ಲ ಇದೆಲ್ಲ ಇಲ್ಲಿಯೇ ಬಿಡೋಣ ಎಂದು ಹೇಳುತ್ತಾನೆ. ಅತ್ತ ಭೂಮಿಕಾಳನ್ನು ಭಾಗ್ಯಮ್ಮ ಕರೆದುಕೊಂಡು ಬಂದಿದ್ದು ಸೃಜನ್ ಆಡುವ ಮಾತುಗಳನ್ನು ಭೂಮಿಕಾ ಕೇಳಿಸಿಕೊಳ್ಳುತ್ತಾಳೆ.

ಸದ್ಯ ಸೃಜನ್ ಮತ್ತು ಸುಧಾ ಪ್ರೀತಿಸುತ್ತಿರುವ ವಿಚಾರ ಭೂಮಿಕಾಗೆ ಗೊತ್ತಾಗಿದ್ದು, ಭೂಮಿಕಾ ಈ ವಿಚಾರವನ್ನು ಗೌತಮ್‌ಗೆ ಹೇಳುತ್ತಾಳೆ. ಗೌತಮ್ ಮುಂದೆ ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತಾನೆ..? ನಟರಾಜ್ ಜೊತೆ ಸುಧಾನ ಕಳುಹಿಸುತ್ತಾನಾ ? ಸೃಜನ್ ಕಥೆ ಏನಾಗುತ್ತೆ ? ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X