Amruthadhaare ; ಆಸ್ತಿಗಾಗಿ ಸುಧಾ ಬೆನ್ನ ಹಿಂದೆ ಬಿದ್ದ ಶಕುಂತಲಾ, ಮಲ್ಲಿ ಇಂಗ್ಲೀಷ್ ಕೇಳಿ ಶಾಕ್ ಆದ ಜೈದೇವ್..!
ಅಮೃತಧಾರೆ ಧಾರಾವಾಹಿಯಲ್ಲಿ ಸುಧಾ ಗಂಡ ನಟರಾಜ್‌ಗೆ ಗೌತಮ್ ಮತ್ತೊಂದು ಅವಕಾಶ ನೀಡಿದ್ದಾನೆ. ಬದಲಾಗುತ್ತಾನೆ ಎನ್ನುವ ವಿಶ್ವಾಸದಲ್ಲಿದ್ದಾನೆ. ಮತ್ತೊಂದು ಕಡೆ ರಾಜೇಂದ್ರ ಭೂಪತಿಯ ರೆಸ್ಟೋರೆಂಟ್‌ಗೆ ಮಲ್ಲಿ ಈಗ ಒಡತಿಯಾಗಿದ್ದು ಅದೇ ರೆಸ್ಟೋರೆಂಟ್‌ಗೆ ದಿಯಾ ಜೊತೆ ಜೈದೇವ್ ಬಂದು ಚಡಪಡಿಸುತ್ತಿದ್ದಾನೆ. ಮಲ್ಲಿಯನ್ನು ಹಂಗಿಸುವ-ಹೊಟ್ಟೆ ಉರಿಸುವ ಪ್ರಯತ್ನ ಮಾಡಿದ್ದಾನೆ. ಆದರೆ. ಜೈದೇವ್‌ಗೆ ಮಲ್ಲಿಯೇ ತಿರುಗೇಟು ನೀಡಿದ್ದು ಅರಳು ಉರಿದಂತೆ ಇಂಗ್ಲೀಷ್ ಕೂಡ ಮಾತನಾಡಿದ್ದಾಳೆ.
ಮಲ್ಲಿ ಬಾಯಲ್ಲಿ ಇಂಗ್ಲೀಷ್ ಕೇಳಿ ಜೈದೇವ್ ಮತ್ತು ದಿಯಾ ಕಕ್ಕಾಬಿಕ್ಕಿಯಾಗಿದ್ದು ಕನ್ನಡದಲ್ಲಿ ಮಾತನಾಡದಿದ್ದರೆ ನಿಮ್ಮ ಕೆಲಸ ಕಳ್ಕೋಬೇಕಾಗುತ್ತೆ ಎಂದು ಮ್ಯಾನೇಜರ್‌ಗೆ ಮಲ್ಲಿ ಎಚ್ಚರಿಕೆ ನೀಡಿದ್ದಾಳೆ. ಆ ನಂತರ ಜೈದೇವ್ ಅಲ್ಲಿಂದ ತೆರಳಿದ್ದು ಮಲ್ಲಿಯನ್ನು ಕೆಣಕಲು ಮುಂದಾಗಿ ದಿಯಾ ಖುದ್ದು ಅವಮಾನ ಮಾಡಿಸಿಕೊಳ್ಳುತ್ತಾಳೆ.

ಗೌತಮ್‌ಗೆ ವಿಚಾರ ಹೇಳುವ ಭೂಮಿಕಾ
ಇನ್ನೊಂದು ಕಡೆ ಸುಧಾ ಮತ್ತು ಸೃಜನ್ ಮಾತುಗಳನ್ನು ಕೇಳಿಸಿಕೊಂಡಿರುವ ಭೂಮಿಕಾ ಸದ್ಯ ಗೊಂದಲಕ್ಕೀಡಾಗಿದ್ದಾಳೆ. ಯಾರ ಪರ ಮಾತನಾಡಬೇಕು ಎಂದು ಅರಿಯದೇ ಒದ್ದಾಡುತ್ತಿದ್ದು ಗೌತಮ್ ಹತ್ರ ಈ ವಿಚಾರವನ್ನು ಹೇಳಿದ್ದಾಳೆ.
ಸೃಜನ್ ಮಾತುಗಳಲ್ಲಿ ಪ್ರಾಮಾಣಿಕತೆ ಇತ್ತು ಆದರೆ ಸೃಜನ್ ಮಾತನಾಡುವಾಗ ಸುಧಾ ಏನೂ ಮಾತನಾಡಲಿಲ್ಲ ಬದಲಿಗೆ ಸುಮ್ಮನೆ ಇದ್ದಳು ಎಂದು ಹೇಳಿದ್ದಾಳೆ. ಹೀಗಾಗಿ ಅವಳ ಮನಸಿನಲ್ಲೇನು ಇದೆ ಎನ್ನುವುದು ಗೊತ್ತಾಗಲಿಲ್ಲ ಎನ್ನುತ್ತಾಳೆ.
ಲಚ್ಚಿ ಬಾಯ್ಬಿಟ್ಟ ಸತ್ಯ
ಆಗ ಗೌತಮ್ ಲಚ್ಚಿಯನ್ನು ಕರೆದುಕೊಂಡು ಬಂದು ಸೃಜನ್ ಕುರಿತು ವಿಚಾರಿಸುತ್ತಾನೆ. ಆಗ ಲಚ್ಚಿ ಸೃಜನ್ ಅಂಕಲ್ ಅಂದರೆ ನನಗೆ ಮಾತ್ರ ಅಲ್ಲ ಅಮ್ಮನಿಗೂ ಕೂಡ ಇಷ್ಟ ಎಂದು ಹೇಳುತ್ತಾಳೆ. ಸೃಜನ್ ಅಂಕಲ್ ನಿನ್ನ ಅಪ್ಪ ಆದರೆ ಒಪ್ಕೋತೀಯಾ ಇಲ್ವಾ ಎಂದು ಅಮ್ಮ ನನ್ನ ಬಳಿ ಕೇಳಿದ್ದರು ಎಂದು ಕೂಡ ಹೇಳುತ್ತಾಳೆ.
ಇದನ್ನು ಕೇಳಿಸಿಕೊಂಡು ಗೌತಮ್ ನನ್ನ ಕಾಲ ಬುಡದಲ್ಲಿಯೇ ಇಷ್ಟೆಲ್ಲ ಆದರೂ ನನಗೆ ಗೊತ್ತಾಗಲಿಲ್ಲವಲ್ಲಾ ಎಂದರೆ ಭೂಮಿಕಾ ನಾವ್ಯಾಕೇ ಸೃಜನ್ ಮತ್ತು ಸುಧಾನ ಒಂದು ಮಾಡುವ ಪ್ರಯತ್ನ ಮಾಡಬಾರದು ಎಂದು ಹೇಳುತ್ತಾಳೆ. ಆಗ ನಟರಾಜ್ ಜೊತೆ ಮಾತನಾಡಿಕೊಂಡು ಬಂದಿರುವ ವಿಚಾರವನ್ನು ಗೌತಮ್ ಹೇಳುತ್ತಾನೆ.

ನಟರಾಜ್‌ನನ್ನ ಮನೆಗೆ ಕರೆಸಿದ್ದೇ ಶಕುಂತಲಾ
ಶಕುಂತಲಾಗೆ ಜೈದೇವ್ ಫೋನ್ ಮಾಡಿದ್ದು ಸುಧಾ ಗಂಡ ಮನೆಗೆ ಬಂದು ಹೋದ ವಿಚಾರ ನನಗೆ ಹೇಳಲೇ ಇಲ್ವಲ್ಲಾ ಎಂದು ಕೇಳುತ್ತಾನೆ. ಆಗ ಶಕುಂತಲಾ ನಿನಗೆ ಹೇಳಬೇಕೆನ್ನುವಷ್ಟರಲ್ಲಿ ನೀನೆ ಫೋನ್ ಮಾಡಿದೆ ಎಂದು ಹೇಳುತ್ತಾಳೆ. ಅವನು ಇಲ್ಲಿ ಬರಲಿಲ್ಲ. ಅವನನ್ನು ಬರುವಂತೆ ಮಾಡಿದ್ದು ನಾನು ಎಂದು ಹೇಳುತ್ತಾಳೆ. ಪ್ರತಿ ಸಲ ಶಕುಂತಲಾ ಹೇಳಿ ಮಾಡೋಳು ಆದರೆ ಈ ಸಲ ಮಾಡಿ ಹೇಳೋಣ ಅಂತ ಸುಮ್ಮನೆ ಇದ್ದೆ ಎನ್ನುತ್ತಾಳೆ.
ಸುಧಾ ಪಾಲಿನ ಆಸ್ತಿಯ ಮೇಲೆ ಶಕುಂತಲಾ ಕಣ್ಣು
ಮಗು ಆದ ಖುಷಿ ಗೌತಮ್ ಮತ್ತು ಭೂಮಿಕಾ ಅವರಲ್ಲಿ ಇಲ್ಲ, ಎಲ್ಲರು ಇವನು ಎಲ್ಲಿಂದ ಬಂದ ಎಂದು ತಲೆ ಕೆಡಿಸಿಕೊಂಡಿದ್ದಾರೆ ಎಂದು ಹೇಳುವ ಶಕುಂತಲಾ, ಸುಧಾ ಗಂಡ ಒಳ್ಳೆಯವನಂತೆ ನಾಟಕ ಮಾಡಿ ಸುಧಾನ ಕರ್ಕೊಂಡು ಹೋಗ್ತಾನೆ ಆಗ ಸುಧಾ ಜೊತೆ ಅವಳ ಭಾಗದ ಆಸ್ತಿ ಕೂಡ ಹೋಗುತ್ತೆ, ಹೀಗೆ ಹೋದ ಆಸ್ತಿ ಸುಧಾ ಗಂಡನ ಮೂಲಕ ಮತ್ತೆ ನಮ್ಮ ಕೈ ಸೇರುತ್ತೆ ಎಂದು ಹೇಳುತ್ತಾಳೆ. ಆ ಕಡೆ ಆಸ್ತಿಯೂ ಸಿಕ್ಕಂತಾಗುತ್ತೆ ಈ ಕಡೆ ಸುಧಾ ಬಾಳು ಹಾಳು ಮಾಡಿದಂತಾಗುತ್ತೆ ಎಂದು ಖುಷಿ ಪಡುತ್ತಾಳೆ.
ಸದ್ಯ ಗೌತಮ್ ಮನೆಗೆ ನಟರಾಜ್ ಬಂದಿದ್ದು, ಸೃಜನ್ ಕೂಡ ಮನೆಯಲ್ಲಿಯೇ ಇದ್ದಾನೆ. ಸುಧಾ ಈಗ ನಟರಾಜ್ ಜೊತೆ ಹೋಗಲು ಒಪ್ಪಿಕೊಳ್ಳುತ್ತಾಳಾ ? ಸೃಜನ್ ಕಥೆ ಏನಾಗಲಿದೆ ? ಶಕುಂತಲಾ ಮಾಡಿದ ಈ ಪ್ಲಾನ್ ಯಶಸ್ವಿಯಾಗುತ್ತಾ ? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











