Amruthadhaare:ಅಮ್ಮನಿಗೆ ಸುಳ್ಳು ಹೇಳಿದ ಪಾರ್ಥ; ಶಾಕುಂತಲಾ ದೇವಿ-ಭೂಮಿಕಾ ನಡುವೆ ಏನಾಯ್ತು?
ಗೌತಮ್ ಹಾಗೂ ಭೂಮಿಕಾ ಇದೀಗ ಒಬ್ಬರನ್ನು ಒಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದಾರೆ. ಅವರಿಬ್ಬರ ಪ್ರೀತಿಯನ್ನು ನೋಡಿದ ಅಪರ್ಣ ಕೂಡ ತನ್ನ ಗಂಡನನ್ನು ಇನ್ನು ಹೆಚ್ಚಾಗಿ ಪ್ರೀತಿ ಮಾಡಲು ಶುರು ಮಾಡಿದ್ದಾಳೆ. ಇದು ಆನಂದ್‌ಗೆ ಬಹಳ ಸಂತಸ ಕೊಟ್ಟಿದೆ. ಭೂಮಿಕಾ ಹಾಗೂ ಗೌತಮ್‌ನನ್ನು ನೋಡಿಯಾದರೂ ನನ್ನ ಹೆಂಡತಿ ಬದಲಾದಳು ಎಂದು ಬಹಳ ಖುಷಿಯಲ್ಲಿ ಇದ್ದಾನೆ.
ಇತ್ತ ಗೌತಮ್ ಆಫೀಸ್ ಟೆನ್ಶನ್ ಅಲ್ಲಿ ಕುಳಿತಿದ್ದಾರೆ. ಆಗ ಅಲ್ಲಿಗೆ ಬಂದ ಆನಂದ್, ಗೌತಮ್‌ಗೆ "ನಿಮ್ಮ ಮನೆಗೆ ಹೋಗಿ ಬಂದಾಗಿನಿಂದ ಅಪರ್ಣ ಬಹಳ ಬದಲಾಗಿದ್ದಾಳೆ. ನನ್ನನ್ನ ಇನ್ನು ಹೆಚ್ಚು ಪ್ರೀತಿ ಮಾಡುತ್ತಿದ್ದಾಳೆ. ಅದಕ್ಕಾಗಿ ನಾನು ಇನ್ನೊಮ್ಮೆ ಹನಿಮೂನ್‌ಗೆ ಹೋಗಬೇಕು ಎಂದು ಅಂದುಕೊಂಡಿದ್ದೇನೆ . ಇದಕ್ಕೆ ನೀನು ನನಗೆ ನಾಲ್ಕು ದಿನ ರಜೆಯನ್ನು ಕೊಡಬೇಕು" ಎಂದು ಹೇಳಿದಾಗ ಗೌತಮ್ ಮಾತ್ರ ಬಿಲ್ಕುಲ್ ಆಗುವುದಿಲ್ಲ ಎಂದು ಹೇಳುತ್ತಾನೆ. ಇದನ್ನು ಕೇಳಿದ ಆನಂದ್, ನಾನು ನಿಜವಾಗಲೂ ರಜೆಯನ್ನು ಹಾಕುತ್ತೇನೆ ಎಂದೂ ಹೇಳಿ ಅಲ್ಲಿಂದ ಓಡಿ ಹೋಗುತ್ತಾನೆ . ಓಡಿ ಹೋಗುವ ಸಂದರ್ಭದಲ್ಲಿ ಗೌತಮ್ ಬಳಿಯೇ ಮೊಬೈಲನ್ನು ಬಿಟ್ಟು ಆನಂದ್ ಹೋಗುತ್ತಾನೆ. ಆಮೇಲೆ ಅಪರ್ಣ, ಆನಂದ್‌ಗೆ ಕರೆ ಮಾಡುತ್ತಾಳೆ.

ಕಾಲ್ ರಿಸೀವ್ ಮಾಡಿ ಗೌತಮ್, ಹೆಣ್ಣಿನ ಸ್ವರದಲ್ಲಿ ಮಾತನಾಡುತ್ತಾರೆ. ಇದನ್ನು ಕೇಳಿ ಅಪರ್ಣಗೆ ಬಹಳ ಸಿಟ್ಟು ಬರುತ್ತದೆ. ಆನಂದ್ ಪರ್ಸನಲ್ ಸೆಕ್ರೆಟರಿಯನ್ನು ಇಟ್ಟುಕೊಂಡಿದ್ದಾನೆ. ಆದರೆ ಈ ವಿಚಾರ ನನ್ನ ಬಳಿ ಹೇಳಿಲ್ಲ ಎಂದು ಕೋಪಿಸಿಕೊಳ್ಳುತ್ತಾಳೆ. ಗೌತಮ್ ಮಾಡಿದ ಎಡವಟ್ಟು ಮಾತ್ರ ಆನಂದ್‌ಗೆ ಪ್ರಾಣ ಸಂಕಟವಾಗಿ ಪರಿಣಮಿಸುವುದು ಮಾತ್ರ ಸತ್ಯ. ಇತ್ತ ಪಾರ್ಥ ಹಾಗೂ ಅಪ್ಪಿ ವಿಚಾರಕ್ಕೆ ಶಕುಂತಲಾ ದೇವಿ ಭೂಮಿಕಾಳನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ.
ಶಾಕುಂತಲಾ ದೇವಿಯದ್ದೇ ಗುನುಗು
ಭೂಮಿಕಾಗೆ ಶಾಕುಂತಲಾ ದೇವಿ "ನಿನಗೆ ಎಲ್ಲಾವೂ ತಿಳಿದಿದ್ದರೂ ನೀನು ಮಾತ್ರ ಅವರಿಬ್ಬರೂ ಒಂದಾಗಲಿ ಎಂದು ಪ್ರೇರೆಪಿಸಿರಬಹುದು. ಆದರೆ ನಾನು ಮಾತ್ರ ಅವರಿಬ್ಬರೂ ಒಂದಾದರೆ ಸುಮ್ಮನೆ ಇರುವವಳು ಅಲ್ಲ" ಎಂದು ಕೊಂಚ ಜೋರಾಗಿಯೇ ಹೇಳುತ್ತಾಳೆ. ಇದನ್ನು ಕೇಳಿದ ಬಳಿಕ ಭೂಮಿಕಾಗೆ ಏನು ಮಾಡಬೇಕು ಎಂದು ತಿಳಿಯದಾಗುತ್ತದೆ. ರಾತ್ರಿ ಇಡೀ ಶಕುಂತಲಾ ದೇವಿ ಹೇಳಿದ ಮಾತುಗಳನ್ನು ನೆನಪಿಸಿಕೊಳ್ಳುತ್ತಲೇ ಇರುತ್ತಾಳೆ.

ಗೌತಮ್ ಏನು ಹೇಳಿಲ್ಲ ಭೂಮಿಕಾ
ಮನಸ್ಸಿನಲ್ಲಿ ಬಹಳಷ್ಟು ನೋವು ಉಕ್ಕಿ ಹರಿಯುತ್ತದೆ. ಆದರೆ ಅದನ್ನು ತೋರಿಸಲು ಆಗದೆ ಬಹಳ ನೋವಿನಲ್ಲಿ ಇರುತ್ತಾಳೆ. ಗೌತಮ್ ಬಂದು ಭೂಮಿಕಾಗೆ "ಯಾಕೆ ಭೂಮಿಕಾ ಏನಾಯಿತು? ಬಹಳ ಬೇಸರದಲ್ಲಿ ಇದ್ದೀರಾ ಏನಾಯಿತು" ಎಂದು ಕೇಳುತ್ತಾರೆ. ಆದರೆ, ಭೂಮಿಕಾ ಮಾತ್ರ ಏನು ಉತ್ತರ ನೀಡದೆ ಸುಮ್ಮನೆ ಇರುತ್ತಾಳೆ. ಆತನ ಜೊತೆ ಪಾರ್ಥ ವಿಚಾರ ಹೇಳದೆ ಮುಚ್ಚಿಡುತ್ತಾಳೆ. ಅಷ್ಟೊತ್ತಿಗಾಗಲೇ ಶಕುಂತಲಾ ದೇವಿ ಪಾರ್ಥಗೆ ಕರೆ ಮಾಡುತ್ತಾಳೆ.
ಮಗನ ಯೋಗ ಕ್ಷೇಮ ವಿಚಾರಣೆ
ಶಾಕುಂತಲಾ ದೇವಿ ಮಗನ ಯೋಗ ಕ್ಷೇಮ ವಿಚಾರಣೆ ಮಾಡುತ್ತಾಳೆ. "ಎಲ್ಲಿದ್ದಿಯಾ ಎಂದು ಕೇಳಿದಾಗ ಸೋಲೋ ಟ್ರಿಪ್ ಮಾಡುತ್ತಿದ್ದೇನೆ" ಅಂತ ಸುಳ್ಳು ಬೇರೆ ಹೇಳುತ್ತಾನೆ. ಇದನ್ನು ಆಕೆಗೆ ಬಹಳ ನೋವು ಆಗುತ್ತದೆ. ಇನ್ನೂ ಪಾರ್ಥಗೆ ತನ್ನ ಪ್ರೀತಿಯನ್ನು ಮರೆತು ಬದುಕುವಷ್ಟು ಧೈರ್ಯವಿಲ್ಲ. ಆದರೆ ನಾನು ಬದುಕಲೇಬೇಕು ಎನ್ನುವ ಆತ್ಮವಿಶ್ವಾಸ ಆತನಲ್ಲಿದೆ. ಹೇಗಾದರೂ ಮಾಡಿ ಅಪೇಕ್ಷ ಜೊತೆ ಮದುವೆ ಆಗಲೇ ಬೇಕು ಎನ್ನುವ ಆಲೋಚನೆಯಲ್ಲಿ ಇರುತ್ತಾನೆ.


Click it and Unblock the Notifications











