Amruthadhaare ; ಶಕುಂತಲಾಗೆ ಶಾಕ್ ನೀಡಿದ ಗೌತಮ್, ಭೂಮಿಕಾ ; ಸುಧಾ ಜೊತೆ ಸೃಜನ್ ಮದುವೆ...!

ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾ ಹೊಸ ಸಂಚು ರೂಪಿಸಿದ್ದಾಳೆ. ಸುಧಾ ಆಸ್ತಿಯ ಮೇಲೆ ಕಣ್ಣಾಕಿರುವ ಶಕುಂತಲಾ ತಾನೇ ನಟರಾಜ್‌ನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ತನ್ನ ಈ ಪ್ಲಾನ್‌ನ್ನು ಜೈದೇವ್‌ ಮುಂದೆ ಕೂಡ ಹಂಚಿಕೊಂಡಿದ್ದಾಳೆ. ಪ್ರತಿ ಸಲ ಶಕುಂತಲಾ ಹೇಳಿ ಮಾಡೋಳು ಆದರೆ ಈ ಸಲ ಮಾಡಿ ಹೇಳೋಣ ಅಂತ ಸುಮ್ಮನೆ ಇದ್ದೆ ಎಂದಿದ್ದಾಳೆ. ಶಕುಂತಲಾ ಮಾತುಗಳನ್ನು ಕೇಳಿ ಜೈದೇವ್ ಕೂಡ ಫುಲ್ ಖುಷಿಯಾಗಿದ್ದಾನೆ.

ಮತ್ತೊಂದು ಕಡೆ ಸುಧಾ ಮತ್ತು ಸೃಜನ್ ವಿಚಾರ ಭೂಮಿಕಾ ಮತ್ತು ಗೌತಮ್‌ಗೆ ಗೊತ್ತಾಗಿದ್ದು ಮುಂದೇನು ಮಾಡಬೇಕೆಂದು ತಿಳಿಯದೇ ಇಬ್ಬರು ಗೊಂದಲಕ್ಕೀಡಾಗಿದ್ದಾರೆ. ಈ ಗೊಂದಲದಲ್ಲಿಯೇ ಸುಧಾ ಜೊತೆ ಮಾತನಾಡಲು ಮನೆ ಮಂದಿಯ ಜೊತೆ ಇಬ್ಬರು ಕುಂತಿದ್ದಾರೆ. ಇದೇ ಸಮಯದಲ್ಲಿ ಶಕುಂತಲಾ ನಿನ್ನ ಮಗುಗೋಸ್ಕರವಾದರು ನೀನು ನಿನ್ನ ಗಂಡನ ಜೊತೆ ಹೋಗು ಎಂದು ಹೇಳುತ್ತಾಳೆ. ಗಂಡನ ಜೊತೆ ಇದ್ದರೆನೇ ಒಂದು ಬೆಲೆ ಇಲ್ಲ ಅಂದರೆ ಸಮಾಜ ನಿನ್ನ ಬೇರೆ ತರ ನೋಡುತ್ತೆ ಎಂದು ಹೇಳುತ್ತಾಳೆ.

amruthadhaare-serial-july-19-episode-written-update

ಗಂಡನ ಜೊತೆ ಹೋಗಲು ರೆಡಿಯಾದ ಸುಧಾ

ಶಕುಂತಲಾ ಮಾತುಗಳಿಗೆ ಅಜ್ಜಿ ಆಕ್ಷೇಪ ವ್ಯಕ್ತಪಡಿಸಿದ್ದು ಶಕುಂತಲಾ ತನ್ನ ಮಾತುಗಳಿಂದ ಅಜ್ಜಿಯ ಬಾಯಿ ಮುಚ್ಚಿಸಿದ್ದಾಳೆ. ಸುಧಾ ಕೂಡ ತನ್ನ ಗಂಡನ ಜೊತೆ ಹೋಗುವ ನಿರ್ಧಾರ ಮಾಡಿರುವುದಾಗಿ ಹೇಳುತ್ತಾಳೆ. ನನ್ನಿಂದಾಗಿ ನಿಮ್ಮ ಬಗ್ಗೆ ನಾಲ್ಕು ಜನ ಮಾತನಾಡುವಂತೆ ಆಗಬಾರದು ಎಂದು ಹೇಳುತ್ತಾಳೆ.

ಕೆಲಸ ಬಿಡಲು ಮುಂದಾದ ಸೃಜನ್

ಸುಧಾ ಮಾತುಗಳನ್ನು ಕೇಳಿ ದುಖ ಮಾಡಿಕೊಳ್ಳುವ ಸೃಜನ್, ಭೂಮಿಕಾ ಬಳಿ ತಾನು ಕೆಲಸ ಬಿಡುತ್ತಿರುವ ವಿಚಾರ ಹೇಳುತ್ತಾನೆ. ಯುಎಇಯಲ್ಲಿ ಕೆಲಸ ಸಿಕ್ಕಿದೆ ಇಂತಹ ಅವಕಾಶ ಮತ್ತೆ ಸಿಗಲ್ಲ ಎನ್ನುತ್ತಾನೆ. ಭೂಮಿಕಾ ಕೆಲಸ ಬಿಡೋಕೆ ಯುಎಇ ಒಂದೇ ಕಾರಣಾನಾ ಅಥವಾ ಬೇರೆ ಕಾರಣ ಇದೆಯಾ ಎಂದು ಕೇಳುತ್ತಾಳೆ. ಸೃಜನ್ ಇಲ್ಲ ಬೇರೆ ಯಾವ ಕಾರಣ ಇಲ್ಲ ಎಂದಾಗ ಸರಿ ನಾನು ಗೌತಮ್ ಬಳಿ ಮಾತನಾಡುತ್ತೇನೆ ಎಂದು ಭೂಮಿಕಾ ಹೇಳುತ್ತಾಳೆ. ನನ್ನ ಹತ್ರನೇ ಸುಳ್ಳು ಹೇಳ್ತಿದ್ಧಾರೆ ಸುಧಾ ಬಗ್ಗೆ ಇವರ ಮನಸಲ್ಲಿ ಎಷ್ಟು ಪ್ರೀತಿ ಇದೆ ಎನ್ನುವುದು ಇದರಿಂದನೇ ಗೊತ್ತಾಗುತ್ತೆ ಎಂದು ಮನಸಿನಲ್ಲಿಯೇ ಅಂದುಕೊಳ್ಳುತ್ತಾಳೆ.

ಗೌತಮ್ ಮನೆಗೆ ಬಂದ ನಟರಾಜ್

ಗೌತಮ್‌ ಮನೆಗೆ ನಟರಾಜ್ ಬಂದಿದ್ದಾನೆ. ಸೃಜನ್‌ನ ನಟರಾಜ್‌ಗೆ ಭೂಮಿಕಾ ಪರಿಚಯ ಮಾಡಿಸಿದ್ದು ಸುಧಾ ಮತ್ತು ಇವರ ಮದುವೆಯಲ್ಲಿ ನಾವ್ಯಾರು ಇರಲಿಲ್ಲವಲ್ಲಾ ಅದಕ್ಕೆ ಸ್ಪೆಷಲ್ ಊಟ ಮಾಡಿಸಿದೀವಿ ನೀವು ಊಟ ಮಾಡಿಕೊಂಡು ಹೋಗಿ ಎಂದು ಸೃಜನ್‌ಗೆ ಹೇಳುತ್ತಾಳೆ. ಇದೇ ವೇಳೆ ಬರುವ ಗೌತಮ್ ನೀನು ಬದಲಾಗಿದ್ದೀಯಾ ಎಂದು ನಾವು ನಂಬಬಹುದಲ್ವಾ ಎಂದು ನಟರಾಜ್‌ಗೆ ಕೇಳುತ್ತಾನೆ.

amruthadhaare-serial-july-19-episode-written-update

ಅದಕ್ಕೆ ನಟರಾಜ್ ಹೌದು ಎಂದಿದ್ದು ನನ್ನಿಂದ ತುಂಬಾ ತಪ್ಪಾಗಿದೆ ಆ ತಪ್ಪಿಗೆ ಕ್ಷಮೆ ಇದೆಯೋ ಇಲ್ವೋ ಗೊತ್ತಿಲ್ಲ ಆದರೆ ಒಂದು ಅವಕಾಶ ಸಿಕ್ಕರೆ ನನ್ನ ತಪ್ಪನ್ನು ತಿದ್ದಿಕೊಂಡು ನಾನು ಬದುಕುತ್ತೇನೆ ಎಂದು ಹೇಳುತ್ತಾನೆ. ಸುಧಾ ನನ್ನ ಜೊತೆ ಬರಲು ಒಪ್ಪಿಕೊಂಡಿದ್ದಾಳೆ ಎಂದು ಕೇಳಿ ನನಗೆ ತುಂಬಾ ಖುಷಿಯಾಗುತ್ತಿದೆ ಎಂದು ಹೇಳುತ್ತಾನೆ. ಸುಧಾ ಮತ್ತು ಮಗಳನ್ನ ಚೆನ್ನಾಗಿ ನೋಡಿಕೊಳ್ಳುವುದಾಗಿ ನಾಟಕ ಮಾಡ್ತಾನೆ. ಗಂಡನ ಜೊತೆ ಹೋಗಲು ಸುಧಾ ಬ್ಯಾಗ್ ತಗೊಂಡು ಬಂದಿದ್ದು, ಲಚ್ಚಿಯನ್ನು ಬಲವಂತವಾಗಿ ಕರೆದುಕೊಂಡು ಹೋಗುವ ಪ್ರಯತ್ನ ನಟರಾಜ್ ಮಾಡುತ್ತಾನೆ.

ಶಕುಂತಲಾಗೆ ಶಾಕ್ ನೀಡಿದ ಗೌತಮ್

ಇದೇ ವೇಳೆ ನಟರಾಜ್‌ನನ್ನು ತಡೆಯುವ ಗೌತಮ್ ನನಗ್ಯಾಕೋ ನನ್ನ ತಂಗಿ ಮತ್ತು ನನ್ನ ತಂಗಿ ಮಗಳು ನಿನ್ನ ಜೊತೆ ಇದ್ದರೆ ಚೆನ್ನಾಗಿರಲ್ಲ ಎನ್ನುವ ಭಾವನೆ ಬರ್ತಿದೆ ಎಂದು ಹೇಳುತ್ತಾನೆ. ಗೌತಮ್ ಮಾತು ಕೇಳಿ ಶಕುಂತಲಾ ಮತ್ತು ನಟರಾಜ್ ಶಾಕ್ ಆಗಿದ್ದು ನನಗೆ ನಿನ್ನ ಮೇಲೆ ನಂಬಿಕೆ ಬರ್ತಿಲ್ಲ ಎಂದು ಹೇಳುತ್ತಾನೆ. ಪ್ರೀತಿ ಸಂಬಂಧ ಎಲ್ಲಾ ಸತ್ತು ಹೋಗಿದೆ ಈಗ ಸರಿ ಮಾಡುವುದು ಹೆಣಕ್ಕೆ ಅಲಂಕಾರ ಮಾಡಿದಂತೆ ಎಂದು ಹೇಳುತ್ತಾನೆ. ಶಕುಂತಲಾ ಇದೆಲ್ಲ ಕೇಳಿ ಇದ್ಯಾಕೋ ಬೇರೆ ಟರ್ನ್ ತಗೊಳ್ತಿದೆಯಲ್ಲ ಎಂದು ತಲೆ ಕೆಡಿಸಿಕೊಳ್ಳುತ್ತಾಳೆ. ಇದೇ ಸಮಯದಲ್ಲಿ ಇವತ್ತು ನನ್ನ ತಂಗಿಯ ಮತ್ತೊಂದು ಮದುವೆ ಎಂದು ಗೌತಮ್ ಬಾಂಬ್ ಸಿಡಿಸಿದ್ದು ಸೃಜನ್ ಜೊತೆ ಸುಧಾ ಮದುವೆ ಮಾಡುವ ವಿಚಾರ ಹೇಳುತ್ತಾನೆ.

More from Filmibeat

English summary
Amruthadhaare Kannada Serial: Find Out The Highlights Of July 19 Episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X