Amruthadhaare ; ಕಳಚಿಬಿತ್ತು ನಟರಾಜ್ ಮುಖವಾಡ, ಉಳಿದ ಮಗುವನ್ನು ಗೌತಮ್‌ನಿಂದ ಕಿತ್ತುಕೊಳ್ಳಲು ಮುಂದಾದ ಶಕುಂತಲಾ..!

ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾ ಪ್ಲ್ಯಾನ್ ಮತ್ತೊಮ್ಮೆ ಫ್ಲಾಪ್ ಆಗಿದೆ. ಸುಧಾ ಮತ್ತು ಲಚ್ಚಿಯನ್ನು ನಟರಾಜ್ ಜೊತೆ ಕಳುಹಿಸದ ಗೌತಮ್.. ನಟರಾಜ್‌ನ ಎದುರೇ ಸುಧಾ ಮತ್ತು ಸೃಜನ್ ಮದುವೆಯನ್ನು ಮಾಡಿಸಿದ್ದಾನೆ. ನನ್ನ ತಂಗಿ ಜವಾಬ್ಧಾರಿ ಇನ್ನು ಮೇಲಿಂದ ನಿನ್ನದು ಎಂದು ಸೃಜನ್‌ಗೆ ಹೇಳಿದ್ದಾನೆ. ಇವತ್ತಿಂದ ನಿಮ್ಮ ಹೊಸ ಜೀವನ ಶುರುವಾಗಲಿ ಎಂದು ಹರಸಿ ಹಾರೈಸಿದ್ದಾನೆ.

ಗೌತಮ್‌ನ ಈ ನಿರ್ಧಾರದಿಂದ ಸುಧಾ.. ಸೃಜನ್.. ಭಾಗ್ಯಮ್ಮ ಸೇರಿ ಮನೆ ಮಂದಿಯೆಲ್ಲ ಖುಷಿಯಾಗಿದ್ದಾರೆ. ಶಕುಂತಲಾ ಮಾತ್ರ ಒಳಗೊಳಗೆ ಕುದಿಯುತ್ತಿದ್ದಾಳೆ. ಇದೇ ಸಮಯದಲ್ಲಿ ಶಕುಂತಲಾ ಮತ್ತು ನಟರಾಜ್‌ಗೆ ಗೌತಮ್‌ ಇನ್ನೊಂದು ಶಾಕ್ ನೀಡಿದ್ದಾನೆ.

amruthadhaare-serial-july-20-episode-written-update

ನೀನು ಇಲ್ಲಿ ಬಂದಿರುವುದು ದುಡ್ಡಿನ ಆಸೆಗೆ ನನಗೆ ಚೆನ್ನಾಗಿ ಗೊತ್ತು ನಿನಗೆ ಗೊತ್ತಿಲ್ಲದೇ ನಿನ್ನ ಜಾತಕ ತೆಗೆದಿದೀನಿ ಎಂದು ಜೇಬಿಂದ ನಟರಾಜ್‌ ಇನ್ನೊಂದು ಮದುವೆಯಾದ ಫೋಟೊವನ್ನು ತೆಗೆದು ತೋರಿಸುತ್ತಾನೆ. ಇವನೆಂಥಾ ಘೋಮುಖ ವ್ಯಾಘ್ರ ಎನ್ನುವುದನ್ನು ಎಲ್ಲ ನೋಡಿ ಎಂದು ಫೋಟೊ ತೋರಿಸುತ್ತಾನೆ. ಮನೆಯಿಂದ ಹೊರ ದಬ್ಬುವಂತೆ ಪಾರ್ಥನಿಗೆ ಹೇಳುತ್ತಾನೆ.

ನೊಂದುಕೊಂಡ ಶಕುಂತಲಾ

ನೀವು ಇಬ್ಬರು ಒಂದಾಗಬೇಕೆಂದು ಆಸೆ ಪಟ್ಟಿದ್ದು ಅಮ್ಮ ಎಂದು ಸೃಜನ್ ಮತ್ತು ಸುಧಾಗೆ ಹೇಳುತ್ತಾನೆ. ಈ ಮಾತು ಕೇಳಿ ಶಕುಂತಲಾ ಆಶ್ಚರ್ಯಗೊಂಡಿದ್ದು ಇವಳಿಂದ ಹೇಗೆ ಸಾಧ್ಯ ಎಂದು ಮನದಲ್ಲಿಯೇ ಅಂದುಕೊಳ್ಳುತ್ತಾಳೆ. ಈ ತಾಯಿ ಹೃದಯ ಈಗಲೇ ಮಿಡಿಬೇಕಿತ್ತಾ ನನ್ನ ಪ್ಲ್ಯಾನ್ ಎಲ್ಲ ಹಾಳು ಮಾಡಿದ್ಳು ಎಂದುಕೊಳ್ಳುತ್ತಾಳೆ. ನನ್ನವರು ಅಂತ ಈ ಮನೆಯಲ್ಲಿ ಯಾರು ಇಲ್ಲ ಎಂದು ನೊಂದುಕೊಳ್ಳುತ್ತಾಳೆ.


ಮತ್ತೊಂದು ಪ್ಲ್ಯಾನ್ ಮಾಡುವ ಶಕುಂತಲಾ

ಈ ನೋವು-ಆಘಾತದಲ್ಲಿಯೇ ಜೈದೇವ್‌ಗೆ ಫೋನ್ ಮಾಡುವ ಶಕುಂತಲಾ ಮನೆಯಲ್ಲಿ ನಡೆದ ಎಲ್ಲಾ ವಿಚಾರವನ್ನು ಹೇಳುತ್ತಾಳೆ. ಈ ಸಲ ಕೂಡ ಸೋಲಾಯ್ತು, ಮೈ ಎಲ್ಲಾ ಪರಚಿಕೊಳ್ಳೋಣ ಅನ್ಸುತ್ತಿದೆ ಎಂದು ತನ್ನ ನೋವನ್ನು ಹಂಚಿಕೊಳ್ಳುತ್ತಾಳೆ.

ಅದೃಷ್ಟ ಅನ್ನೋದು ನನ್ನಣ್ಣನ ಸುತ್ತನೇ ಇದೆ ಹೀಗಾಗಿ ಕಾದು ಹೊಡೆಯಬೇಕು ಕಾಯೋಣ ಎಂದು ಜೈದೇವ್ ಹೇಳುತ್ತಾನೆ. ಇದಕ್ಕೆ ಮೊದಲು ಕಾಯುವ ಮಾತುಗಳನ್ನಾಡುವ ಶಕುಂತಲಾ ಆ ನಂತರ ಗೌತಮ್ ಮತ್ತು ಭೂಮಿಕಾಳಿಂದ ಇನ್ನೊಂದು ಮಗುವನ್ನು ಕೂಡ ಕಿತ್ತುಕೊಳ್ಳುವ ಮಾತುಗಳನ್ನಾಡುತ್ತಾಳೆ. ಈಗ ನನ್ನ ಆಟ ಶುರು ಎಂದು ಹೇಳುತ್ತಾಳೆ. ಜೈದೇವ್ ಏನೇ ಮಾಡಿದರು ಹುಷಾರಿಂದ ಮಾಡುವಂತೆ ಶಕುಂತಲಾಗೆ ಹೇಳುತ್ತಾನೆ.

amruthadhaare-serial-july-20-episode-written-update


ಆರೈಕೆ ಮಾಡಲು ಬಂದ ಪಾರ್ಥ

ಮತ್ತೊಂದು ಕಡೆ ಭೂಮಿಕಾ ರೂಮ್‌ಗೆ ಪಾರ್ಥ ಬಂದಿದ್ದು, ಮಗು ಬಗ್ಗೆ ಮಾತನಾಡುತ್ತಾನೆ. ಮಗು ಆರೈಕೆ ಮಾಡಲು ಮುಂದಾಗುತ್ತಾನೆ. ರಾತ್ರಿ ಮಗು ಗಲಾಟೆ ಮಾಡುತ್ತಾ ಎಂದೆಲ್ಲ ಪ್ರಶ್ನೆ ಮಾಡಿ ಇನ್ಮೇಲೆ ಮಗು ನೋಡಿಕೊಳ್ಳೋದೇ ನಿಮಗೆ ಫುಲ್ ಟೈಮ್ ಕೆಲಸ ಎನ್ನುತ್ತಾನೆ. ವ್ಯಾಕ್ಸಿನ್ ಹಾಕಿಸಬೇಕಿತ್ತಲ್ಲಾ ಹಾಕಿಸಿದೀರಾ ಎಂದು ಪ್ರಶ್ನೆ ಮಾಡುತ್ತಾನೆ. ಇದಕ್ಕೆ ಭೂಮಿಕಾ ಪಾರ್ಥನ ಕಾಲೆಳೆದಿದ್ದು ಮುಂದೆ ಅಪ್ಪ ಆಗುವ ತಯಾರಿನ ಎಂದು ಹೇಳುತ್ತಾಳೆ. ಮಗುಗೆ ವ್ಯಾಕ್ಸಿನ್ ಹಾಕಿಸಲು ನಾನು ಬರಲಾ ಎಂದು ಜೈದೇವ್ ಕೇಳಿದಾಗ ಸುಧಾ ಈ ಸಲ ಬರ್ತಿದ್ದಾಳೆ ಮುಂದಿನ ಸಲ ನೀವು ಎಂದು ಹೇಳುತ್ತಾಳೆ.


ಭೂಮಿಕಾಗೆ ಗೊತ್ತಾಗುತ್ತಾ ಸತ್ಯ ?

ಸದ್ಯ ಭೂಮಿಕಾ -ಸುಧಾ-ಗೌತಮ್ ಮತ್ತು ಆನಂದ್ ಆಸ್ಪತ್ರೆಗೆ ಬಂದಿದ್ದು, ಭೂಮಿಕಾಗೆ ಗೌತಮ್ ಕಾಣೆಯಾಗಿರುವ ಮಗು ವಿಚಾರ ಹೇಳಲು ಮುಂದಾಗುತ್ತಾನೆ. ಇದೇ ಸಮಯದಲ್ಲಿ ಆನಂದ್ ಮತ್ತು ಗೌತಮ್ ನಡುವಿನ ಮಾತುಕತೆಯನ್ನು ಭೂಮಿಕಾ ಕೇಳಿಸಿಕೊಂಡಿರುವಂತೆ ಪ್ರೋಮೋದಲ್ಲಿ ತೋರಿಸಲಾಗಿದೆ. ಇಂದಿನ ಎಪಿಸೋಡ್ ಕುತೂಹಲ ಮೂಡಿಸಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X