Amruthadhaare ; ಭೂಮಿಕಾ ಪ್ರಾಣಕ್ಕೆ ಸಂಚಕಾರ, ದಿಕ್ಕೆಟ್ಟು ಕುಂತ ಗೌತಮ್ ಸತ್ಯ ಹೇಳ್ತಾನಾ ?

ಅಮೃತಧಾರೆ ಧಾರಾವಾಹಿಯಲ್ಲಿ ಸುಧಾ ಮತ್ತು ಸೃಜನ್ ಮದುವೆಯನ್ನು ಗೌತಮ್ ಮಾಡಿಸಿದ್ದಾನೆ. ಇದರಿಂದ ಶಕುಂತಲಾ ಆಘಾತಗೊಂಡಿದ್ದು ಜೈದೇವ್‌ಗೆ ಫೋನ್ ಮಾಡಿ ತನ್ನ ದುಖವನ್ನು ಹಂಚಿಕೊಂಡಿದ್ದಾಳೆ. ಜೈದೇವ್ ಅದೃಷ್ಟ ಅಣ್ಣನ ಪರ ಇದೆ ಸ್ವಲ್ಪ ದಿನ ಕಾದು ಆ ನಂತರ ಯೋಚನೆ ಮಾಡೋಣ ಎಂದು ಹೇಳುತ್ತಾನೆ. ಆದರೆ ಶಕುಂತಲಾ ಗೌತಮ್‌ ಮತ್ತು ಭೂಮಿಕಾ ಬಳಿ ಇರುವ ಮತ್ತೊಂದು ಮಗುವಿನ ಪ್ರಾಣಕ್ಕೆ ಸಂಚಕಾರ ತರುವ ಮಾತುಗಳನ್ನಾಡಿದ್ದಾಳೆ.

ಮತ್ತೊಂದು ಕಡೆ ಭೂಮಿಕಾ ಮತ್ತು ಸುಧಾ ಮಗುಗೆ ವ್ಯಾಕ್ಸಿನೇಶನ್‌ ಕೊಡಿಸಲು ಆಸ್ಪತ್ರೆಗೆ ಬಂದಿದ್ದು ಗೌತಮ್ ಮತ್ತು ಆನಂದ್ ಕೈಗೆ ಡಾಕ್ಟರ್ ಅವಳಿ ಜವಳಿ ಮಕ್ಕಳು ಎಂದು ಸರ್ಟಿಫಿಕೆಟ್ ನೀಡಿದ್ದಾರೆ. ಇದರಿಂದ ಗೌತಮ್ ಆತಂಕಗೊಂಡಿದ್ದು ಭೂಮಿಕಾಗೆ ಸತ್ಯ ಹೇಳುವುದಾಗಿ ಹೇಳುತ್ತಾನೆ. ಆಗ ಆನಂದ್ ಇಂತಹ ಸಮಯದಲ್ಲಿ ಶಾಕಿಂಗ್ ನ್ಯೂಸ್ ಹೇಳಬಾರದು ಎಂದು ಗೌತಮ್‌ನ ತಡೆಯುತ್ತಾನೆ.

amruthadhaare-serial-july-21-episode-written-update

ಆನಂದ್‌ನ ಸಲಹೆಯ ಮೇರೆಗೆ ಕರ್ಣನಿಗೆ ಫೋನ್ ಮಾಡಿದ್ದು ಭೂಮಿಕಾ ಸದ್ಯ ಬಂದಿರುವ ಆಸ್ಪತ್ರೆಗೆ ಬರುವಂತೆ ಕರ್ಣ ಹೇಳಿದ್ದಾನೆ. ಹೀಗಾಗಿ ಇಬ್ಬರು ಆಸ್ಪತ್ರೆಗೆ ತೆರಳಿದ್ದಾರೆ.


ಶಕುಂತಲಾಗೆ ಐಡಿಯಾ ಕೊಟ್ಟ ಜೈದೇವ್

ಇತ್ತ ಜೈದೇವ್ ಮನೆಗೆ ಬಂದಿರುವ ಶಕುಂತಲಾ ಮಗು ಬಗ್ಗೆ ವಿಚಾರಿಸುತ್ತಾಳೆ. ನಾನು ಇನ್ನೂ ಹುಡುಕಾಟ ನಡೆಸಿದ್ದೇನೆ ಆದರೆ ಸುಳಿವು ಸಿಕ್ತಿಲ್ಲ ಎಂದು ಜೈದೇವ್ ಹೇಳುತ್ತಾನೆ. ಫಾರೆಸ್ಟ್ ಆಫೀಸರ್‌ ಜೊತೆ ಸಂಪರ್ಕದಲ್ಲಿದ್ದೀನಿ ಎನ್ನುತ್ತಾನೆ.

ಇದಕ್ಕೆ ಶಕುಂತಲಾ ಕೋಪ ಮಾಡ್ಕೊಂಡಿದ್ದು ಗೌತಮ್‌ಗೆಮದುವೆಯಾಗಬಾರದು ಮಕ್ಕಳಾಗಬಾರದು ಎಂದುಕೊಂಡಿದ್ದೇ ಆದರೆ ಆ ದೇವರು ಮದುವೆನೂ ಮಾಡಿಸಿದ ಅವಳಿ ಜವಳಿ ಮಕ್ಕಳನ್ನೂ ನೀಡಿದ ಎಂದು ಹೇಳುತ್ತಾಳೆ. ಆಗ ಸಮಾಧಾನ ಮಾಡುವ ಜೈದೇವ್ ನನ್ನ ಅವಮಾನ ಮಾಡಿ ಮನೆಯಿಂದ ಹೊರ ಹಾಕಿದ ಸೇಡು ನಾನು ತೀರಿಸಿಕೊಂಡಿಯೇ ತೀರಿಸಿಕೊಳ್ಳುತ್ತೇನೆ ಎಂದು ಹೇಳುತ್ತಾನೆ. ಆ ನಂತರ ಮತ್ತೊಂದು ಐಡಿಯಾವನ್ನು ಕೂಡ ಕೊಡುತ್ತಾನೆ.


ಹಿಂದೇಟು ಹಾಕುವ ಶಕುಂತಲಾ

ಒಂದು ವೇಳೆ ಭೂಮಿಕಾಗೆ ಮೊದಲ ಮಗು ಆಗಿದ್ದು ಆ ನಂತರ ಕಾಣೆಯಾದ ವಿಚಾರ ಗೊತ್ತಾದರೆ ಏನಾಗಬಹುದು ? ಗಂಡ ಹೆಂಡತಿಯ ನಡುವೆ ದೊಡ್ಡ ಯುದ್ಧನೇ ನಡೆಯುತ್ತೆ ಅಲ್ವಾ ? ರಂಪ ರಾಮಾಯಣ ಆಗಬಹುದು ಅಲ್ವಾ ? ಎಂದು ಶಕುಂತಲಾಗೆ ಜೈದೇವ್ ಕೇಳುತ್ತಾನೆ. ಇಬ್ಬರ ನಡುವೆ ಜಗಳ ಆದರೆ ಸಂಸಾರ ಒಟ್ಟಿಗೆ ನಡೆಸುವುದು ಅಸಾಧ್ಯ. ನಾವ್ಯಾಕೇ ಈ ವಿಚಾರವನ್ನು ಭೂಮಿಕಾಗೆ ಗೊತ್ತಾಗುವಂತೆ ಮಾಡಬಾರದು ಎಂದು ಕೇಳುತ್ತಾನೆ.

ಜೈದೇವ್ ಮಾತುಗಳಿಗೆ ಶಕುಂತಲಾ ಹಿಂದೇಟು ಹಾಕುತ್ತಾಳೆ. ವಿಚಾರ ನನಗೆ ಮತ್ತು ಆನಂದ್‌ಗೆ ಮಾತ್ರ ಗೊತ್ತು. ಆನಂದ್ ಹೇಳಲ್ಲ. ಹೀಗಾಗಿ ವಿಚಾರ ನಾನೇ ಹೇಳಿದ್ದು ಎಂದು ನನ್ನ ತಲೆಗೆ ಸುತ್ತಿಕೊಳ್ಳುತ್ತೆ ಇದು ಸರಿಯಾದ ಸಮಯ ಅಲ್ಲ ಎಂದು ಹೇಳುತ್ತಾಳೆ. ನಾನು ಹೇಳಿದಷ್ಟು ಮಾಡು ಎಂದು ಹೇಳುವ ಶಕುಂತಲಾ ಆ ಮನೆಯಲ್ಲಿ ನಾನು ಒಂಟಿ ಪಿಶಾಚಿಯಂತೆ ಇದ್ದೀನಿ ಎಂದು ಹೇಳುತ್ತಾಳೆ. ನನಗೋಸ್ಕರ ಆದರೂ ಆ ಮನೆಗೆ ವಾಪಸ್ ಬಾ ಎಂದು ಹೇಳುತ್ತಾಳೆ. ಇದಕ್ಕೆ ಜೈದೇವ್ ಒಪ್ಪುವುದಿಲ್ಲ. ಆದರೂ ಶಕುಂತಲಾ ಒತ್ತಾಯ ಮಾಡುತ್ತಾಳೆ. ಹೀಗಾಗಿ ಸರಿ ನೋಡೋಣ ಎಂದು ಜೈದೇವ್ ಹೇಳಿದ್ದು ಜೈದೇವ್ ಮಾತು ಕೇಳಿ ದಿಯಾ ಗಾಬರಿಯಾಗಿದ್ದಾಳೆ.

ಭೂಮಿಕಾ ನೋಡಿ ಬೆಚ್ಚಿ ಬಿದ್ದ ಗೌತಮ್

ಮತ್ತೊಂದು ಕಡೆ ಆಸ್ಪತ್ರೆಗೆ ಬಂದಿರುವ ಗೌತಮ್ ಮತ್ತು ಆನಂದ್ ಆಸ್ಪತ್ರೆಗೆ ಬಂದಿದ್ದು ಸರ್ಟಿಫಿಕೆಟ್ ವಿಚಾರದಲ್ಲಿ ತಲೆ ಕೆಡಿಸಿಕೊಂಡು ಕುಂತಿದ್ದಾರೆ. ಚರ್ಚೆಯನ್ನು ಮಾಡುತ್ತಿರುತ್ತಾರೆ. ಇದೇ ಸಮಯದಲ್ಲಿ ಅಲ್ಲಿ ಭೂಮಿಕಾ ಬಂದಿದ್ದು ಭೂಮಿಕಾನ ನೋಡಿ ಗೌತಮ್ ಬೆಚ್ಚಿ ಬಿದ್ದಿದ್ದಾನೆ. ನೀವೇನು ಇಲ್ಲಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಲು ಪರದಾಡಿದ್ದಾನೆ.

ಇದೇ ಸಮಯದಲ್ಲಿ ಗೌತಮ್ ಕೈಯಲ್ಲಿರುವ ಫೈಲ್ ನೋಡಿ ಮಗುಗೆ ಏನಾದರೂ ಆಗಿದೆಯಾ ಕೈಯಲ್ಲೇನು ಕೊಡಿ ನಾನು ನೋಡ್ತಿನಿ ಎಂದು ಭೂಮಿಕಾ ಹೇಳುತ್ತಾಳೆ. ಏನೋ ಮುಚ್ಚಿಡ್ತಿದ್ದೀರಾ ಎಂದು ಕಣ್ಣೀರು ಹಾಕಲು ಶುರು ಮಾಡುತ್ತಾಳೆ. ಅದೇ ಸಮಯಕ್ಕೆ ಡಾಕ್ಟರ್ ಬಂದು ಭೂಮಿಕಾ ಸುಧಾ ಮತ್ತು ಮಗುನ ಬೇರೆ ಕಡೆ ಕಳುಹಿಸಿದ್ಧಾರೆ.


ಎಚ್ಚರಿಕೆ ನೀಡಿದ ಡಾಕ್ಟರ್

ಗೌತಮ್ ಮತ್ತು ಆನಂದ್‌ಗೆ ತಾಯಿಗೆ ಮಗು ಬಗ್ಗೆ ಪೊಸೆಸ್ಸಿವ್‌ನೆಸ್‌ ಇರುತ್ತದೆ. ಆದರೆ ವಯಸ್ಸಾದ ಬಳಿಕ ಮಗು ಆಗಿರೋದಿಕ್ಕೋ ಏನೋ ಭೂಮಿಕಾ ತುಂಬಾನೇ ಪೊಸೆಸ್ಸಿವ್‌ ಆಗಿದ್ದಾರೆ, ವ್ಯಾಕ್ಸಿನೇಶನ್‌ ಸಮಯದಲ್ಲಿಯೂ ತುಂಬಾ ಹೆದರಿದರು, ಮೆಂಟಲಿ ವೀಕ್‌ ಆಗಿದ್ದಾರೆ, ಶಾಕಿಂಗ್‌ ನ್ಯೂಸ್‌ ಹೇಳಿದರೆ ಪ್ರಾಣಕ್ಕೆ ಅಪಾಯ ಆಗಬಹುದು ಎಂಬ ಎಚ್ಚರಿಕೆ ಕೊಟ್ಟಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X