Amruthadhaare; ಜೈದೇವ್‌ಗೆ ಕ್ಷಮೆ ಇಲ್ಲ ಎಂದ ಮಲ್ಲಿ,ಗೌತಮ್ ಮಾತು ಮೀರಿ ಭೂಮಿಕಾಗೆ ಸತ್ಯ ಹೇಳ್ತಾಳಾ ಶಕುಂತಲಾ ?

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಮತ್ತು ಆನಂದ್‌ಗೆ ಡಾಕ್ಟರ್ ಎಚ್ಚರಿಕೆಯನ್ನು ನೀಡಿದ್ದಾರೆ. ತಾಯಿಗೆ ಮಗು ಬಗ್ಗೆ ಪೊಸೆಸ್ಸಿವ್‌ನೆಸ್‌ ಇರುತ್ತದೆ. ಆದರೆ ವಯಸ್ಸಾದ ಬಳಿಕ ಮಗು ಆಗಿರೋದಿಕ್ಕೋ ಏನೋ ಭೂಮಿಕಾ ತುಂಬಾನೇ ಪೊಸೆಸ್ಸಿವ್‌ ಆಗಿದ್ದಾರೆ, ವ್ಯಾಕ್ಸಿನೇಶನ್‌ ಸಮಯದಲ್ಲಿಯೂ ತುಂಬಾ ಹೆದರಿದರು, ಮೆಂಟಲಿ ವೀಕ್‌ ಆಗಿದ್ದಾರೆ, ಶಾಕಿಂಗ್‌ ನ್ಯೂಸ್‌ ಹೇಳಿದರೆ ಪ್ರಾಣಕ್ಕೆ ಅಪಾಯ ಆಗಬಹುದು ಎಂದು ಹೇಳಿದ್ದಾರೆ.

ಗಾಬರಿಯಾಗುವ ವಿಚಾರ ಹೇಳಬೇಡಿ ಎಂದು ಹೇಳಿರುವ ಡಾಕ್ಟರ್ ಒಂದು ವೇಳೆ ಮಗು ವಿಚಾರ ಅವರಿಗೆ ಗೊತ್ತಾದರೆ ಬೇರೆ ತರಹನೇ ಆಗಿ ಬಿಡುತ್ತೆ, ನಿಮ್ಮ ಕಂಟ್ರೋಲ್ ಮೀರಿ ಹೋಗುತ್ತೆ, ಅವರ ಪ್ರಾಣಕ್ಕೂ ಕೂಡ ಅಪಾಯವಾಗಬಹುದು ಎಂದು ಹೇಳಿದ್ದಾರೆ. ಡಾಕ್ಟರ್ ಮಾತು ಕೇಳಿ ಗೌತಮ್ ಆತಂಕಕ್ಕೀಡಾಗಿದ್ದು, ಆ ಮಗು ಕುರಿತು ನೀವು ಕೂಡ ಜಾಸ್ತಿ ಯೋಚನೆ ಮಾಡಬೇಡಿ ಎಂದು ಸಲಹೆಯನ್ನು ಕೂಡ ಡಾಕ್ಟರ್ ನೀಡುತ್ತಾರೆ.

amruthadhaare-serial-july-22-episode-written-update

ಭೂಮಿಕಾಗೆ ಗದರುವ ಗೌತಮ್

ಡಾಕ್ಟರ್‌ನ ಭೇಟಿಯಾಗಿ ಗೌತಮ್ ಮತ್ತು ಆನಂದ್ ಹೊರ ಬಂದಿದ್ದು ಭೂಮಿಕಾ ಮತ್ತೆ ಕೈಯಲ್ಲಿರುವ ಪೇಪರ್‌ಗೆ ವಿಚಾರಿಸಲು ಶುರು ಮಾಡುತ್ತಾಳೆ. ಅದು ಕೇವಲ ಡಿಸ್ಚಾರ್ಜ್ ಪೇಪರಾ ? ನಿಜಾನಾ ? ಎಂದೆಲ್ಲ ಕೇಳುತ್ತಾಳೆ. ಆಗ ಗೌತಮ್ ಚಿಕ್ಕ ಪುಟ್ಟ ವಿಚಾರಕ್ಕೆ ಯಾಕೆ ಈ ತರ ಹೈಪರ್ ಆಗ್ತಿದ್ದೀರಾ ಮಗುಗೆ ಏನಾಗಿಲ್ಲ ಎಂದು ಗದರುತ್ತಾನೆ.

ಡಾಕ್ಟರ್ ವ್ಯಾಕ್ಸಿನೇಷನ್ ಚಾರ್ಟ್ ಕೊಟ್ಟಿದ್ದಾರೆ ಇಲ್ಲಿ ಬಂದಿದ್ದು ಒಳ್ಳೆಯದೇ ಆಯ್ತು ಎಂದು ಗೌತಮ್ ಹೇಳಿದ್ದು ಭೂಮಿಕಾ ನಾನು ಕೂಡ ಕರ್ಣ ಅವರಿಗೆ ಥ್ಯಾಂಕ್ಸ್ ಹೇಳಬೇಕು ಎನ್ನುತ್ತಾಳೆ. ಆಗ ಗೌತಮ್ ಇಲ್ಲ ಅವರು ಆಪರೇಷನ್ ಥಿಯೇಟರ್‌ನಲ್ಲಿದ್ದಾರೆ ಆಮೇಲೆ ಫೋನ್‌ನಲ್ಲಿಯೇ ಥ್ಯಾಂಕ್ಸ್ ಹೇಳಿದ್ರೆ ಆಯ್ತು ಬನ್ನಿ ಹೊರಡೋಣ ಎಂದು ಅಲ್ಲಿಂದ ಕರೆದೊಯ್ಯುತ್ತಾನೆ.

ಜೈದೇವ್‌ನ ಮನೆಗೆ ಕರೆತರಲು ಶಕುಂತಲಾ ಪ್ಲ್ಯಾನ್

ಮತ್ತೊಂದು ಕಡೆ ಜೈದೇವನ ಮರಳಿ ಮನೆಗೆ ಕರೆದಿರುವ ಶಕುಂತಲಾ, ಜೈದೇವ್‌ನ ಮನೆ ಒಳಗಡೆ ಬರುವಂತೆ ಹೇಗೆ ಮಾಡೋದು ಎಂದು ಯೋಚನೆ ಮಾಡುತ್ತಿರುತ್ತಾಳೆ. ಮಲ್ಲಿ ಬ್ರೇನ್ ವಾಶ್ ಮಾಡಬೇಕು ಅವಳು ಒಪ್ಪಿದರೆ ಮಿಕ್ಕವರನ್ನು ಹೇಗೂ ಒಪ್ಪಿಸಬಹುದು ಎಂದು ಲೆಕ್ಕಾಚಾರ ಹಾಕುತ್ತಾಳೆ. ಮಲ್ಲಿ ಬಳಿ ಮಾತನಾಡಲು ಮುಂದಾಗುತ್ತಾಳೆ. ನೀನು ಒಂಟಿಯಾಗಿರುವುದನ್ನು ನನ್ನಿಂದ ನೋಡೋಕೆ ಆಗ್ತಿಲ್ಲ ಎಂದು ಹೇಳುತ್ತಾಳೆ.

amruthadhaare-serial-july-22-episode-written-update

ಅದಕ್ಕೆ ಮಲ್ಲಿ ಪಾಲಿಗೆ ಬಂದಿದ್ದು ಪಂಚಾಮೃತ ನಿಜಾ ಹೇಳಬೇಕು ಅಂದರೆ ನಾನು ನೆಮ್ಮದಿಯಿಂದ ಇದ್ದೀನಿ ಎಂದು ಹೇಳುತ್ತಾಳೆ. ಆದರೂ ಕೂಡ ಸುಮ್ಮನಾಗದ ಶಕುಂತಲಾ, ಮಲ್ಲಿಯ ಬ್ರೇನ್ ವಾಶ್ ಮಾಡುವ ಪ್ರಯತ್ನ ಮಾಡಿದ್ದು ಜೈದೇವನ ನಾನು ಬದಲಿಸ್ತೀನಿ ಅವಳನ್ನು ಬಿಟ್ಟು ಬರುವಂತೆ ಹೇಳುತ್ತೇನೆ ಎಂದು ಹೇಳುತ್ತಾಳೆ. ಇದಕ್ಕೆ ಮಲ್ಲಿ ಈ ಕೆಲಸ ಮಾತ್ರ ಮಾಡಬೇಡಿ ಎನ್ನುತ್ತಾಳೆ. ನಾನು ಯಾವುದೇ ಕಾರಣಕ್ಕೂ ಜೈದೇವನ ಕ್ಷಮಿಸುವುದಿಲ್ಲ ಎನ್ನುತ್ತಾಳೆ. ಮಲ್ಲಿಯ ಮಾತು ಕೇಳಿ ಶಕುಂತಲಾ ಕೋಪ ಮಾಡಿಕೊಂಡಿದ್ದು ಎಷ್ಟು ಗಾಂಚಾಲಿ ಇವಳಿಗೆ ಎಂದು ಅಂದುಕೊಳ್ಳುತ್ತಾಳೆ.

ಗೌತಮ್‌ ಎದುರು ಶಕುಂತಲಾ ನಾಟಕ

ಗೌತಮ್ ಮಗುನ ಕರೆದುಕೊಂಡು ರೂಮ್‌ ಹೊರಗೆ ಬಂದಿದ್ದು, ಶಕುಂತಲಾ ಈ ಸಮಯದಲ್ಲಿ ಕಳೆದುಹೋದ ಮಗು ಬಗ್ಗೆ ಗೌತಮ್ ಜೊತೆ ಮಾತನಾಡುತ್ತಾಳೆ. ಆ ಮಗು ಇಲ್ಲವಲ್ಲಾ ಎಂದು ಬೇಜಾರಾಗುತ್ತಿದೆ. ಈ ಮಗುನ ನೋಡಿ ಖುಷಿ ಪಡುವುದಾ ಅಥವಾ ಆ ಮಗು ಇಲ್ಲವಲ್ಲಾ ಎಂದು ದುಖ ಪಡುವುದಾ ಒಂದು ಗೊತ್ತಾಗುತ್ತಿಲ್ಲ ಎನ್ನುತ್ತಾಳೆ.

ಇದಕ್ಕೆ ಗೌತಮ್ ಈ ವಿಚಾರ ಮನೆಯಲ್ಲಿ ಮಾತನಾಡುವುದು ಬೇಡ ಈ ವಿಚಾರ ಭೂಮಿಕಾಗೆ ಗೊತ್ತಾಗುವುದು ಬೇಡ, ಗೊತ್ತಾದರೆ ಏನಾಗುತ್ತೆ ಎನ್ನುವ ಆತಂಕ ನನಗೆ ಇದೆ ಎನ್ನುತ್ತಾನೆ. ಅಪ್ಪಿ ತಪ್ಪಿ ಈ ವಿಚಾರ ಭೂಮಿಕಾ ಕಿವಿಗೆ ಬಿದ್ದರೆ ದೊಡ್ಡ ಪ್ರಾಬ್ಲಂ ಆಗುತ್ತೆ ಈ ವಿಚಾರ ಯಾರ ಹತ್ರ ಕೂಡ ಮಾತನಾಡಬೇಡಿ ಎಂದು ಹೇಳುತ್ತಾನೆ. ಭಗವಂತ ಆ ಮಗುನ ವಾಪಸ್ ಕೊಡಿಸಿದರೆ ಸಾಕು ಬೇರೆಯೇನೂ ಬೇಡ ಎನ್ನುತ್ತಾನೆ.

More from Filmibeat

English summary
Amruthadhaare Kannada Serial: Find Out The Highlights Of July 22 Episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X