Amruthadhaare:ಆತ್ಮಹತ್ಯೆಗೆ ಮುಂದಾದ ಶಕುಂತಲಾ ದೇವಿ; ಅಪ್ಪಿ-ಪಾರ್ಥ ಮದುವೆಗೆ ಅಡ್ಡಿ ಆಗುತ್ತಾಳಾ?

By ಪೂರ್ವ

ಲಕ್ಷ್ಮೀಕಾಂತ ಶಕುಂತಲಾ ದೇವಿ ಬಳಿ ಇಲ್ಲ ಸಲ್ಲದನ್ನು ಹೇಳಿ ಆಕೆಯ ತಲೆಯನ್ನು ಕೆಡಿಸಿ ಬಿಟ್ಟಿರುತ್ತಾನೆ. ಪಾರ್ಥ ಅಪೇಕ್ಷಳನ್ನು ಪ್ರೀತಿ ಮಾಡುತ್ತಿದ್ದಾನೆ ಎಂದು ತಿಳಿದ ಶಕುಂತಲಾ ದೇವಿ, ಭೂಮಿಕಾ ಹಾಗೂ ಆಕೆಯ ಮನೆಯವರ ಮೇಲೆ ಇಲ್ಲ ಸಲ್ಲದ ಆಪಾಧನೆಯನ್ನು ಹೊರಿಸಿ ಮನೆಯ ಯಜಮಾನಿ ಪಟ್ಟದಿಂದ ಆಕೆಯನ್ನು ದೂರ ಸರಿಯುವ ಹಾಗೆ ಮಾಡುತ್ತಾಳೆ. ಇದೆಲ್ಲ ಆಗಿದ್ದು, ಶಕುಂತಲಾ ದೇವಿ ಮಾತಿನಿಂದ. ಶಕುಂತಲಾ ದೇವಿ ಮಾತಿಗೆ ಭೂಮಿಕಾ ಮೊದಲು ಸೊಪ್ಪು ಹಾಕುವುದಿಲ್ಲ. ಅವರಿಬ್ಬರೂ ಒಂದಾಗಲಿ ಎನ್ನುವುದು ಅವಳ ಆಸೆಯಾಗಿತ್ತು.

ಆದರೆ, ಭೂಮಿಕಾ ನಿರ್ಧಾರ ತಿಳಿದ ಆಕೆಗೆ ಬಹಳ ಸಿಟ್ಟು ಬರುತ್ತದೆ. ಇನ್ನೂ ಮನೆಯ ಹೊರಗಡೆ ನಿಂತಿದ್ದ ಶಕುಂತಲಾ ದೇವಿಗೆ ದಿಕ್ಕು ತೋಚದ ಹಾಗೆ ಆಗುತ್ತದೆ. ಆಕೆಯ ಸ್ಥಿತಿ ನೋಡಿದ ಲಕ್ಷ್ಮೀಕಾಂತ ಬಂದು ನೋಡುತ್ತಾನೆ. ಆಕೆಯ ಸ್ಥಿತಿ ನೋಡಿ "ಸಿಸ್ಟರ್ ನೀನು ಹೀಗೆ ಇಲ್ಲಿ ಕೈ ಚೆಲ್ಲಿ ಕುಳಿತುಕೊಂಡರೆ ಆಗುವುದಿಲ್ಲ. ನೀನು ಇದೀಗ ತಂತ್ರದಿಂದ ಗೆಲ್ಲಬೇಕಾಗಿದೆ. ಇಲ್ಲವಾದರೆ ಖಂಡಿತವಾಗಿಯೂ ಪಾರ್ಥ ಹಾಗೂ ಅಪ್ಪಿ ಮದುವೆ ನಡೆಯುತ್ತದೆ" ಎಂದು ಹೇಳುತ್ತಾನೆ.

Amruthadhaare serial July 22nd episode update

ಆ ಬಳಿಕ ಈ ಮನೆ ಅಕ್ಕ ತಂಗಿಯ ಸುಪರ್ದಿಗೆ ಬರುವುದು ಖಚಿತ. ಅದಕ್ಕೆ ಹೇಳುತ್ತಿದ್ದೇನೆ ನೀನು ಮಾತ್ರ ಇದೀಗ ಹೇಗಾದರೂ ಮಾಡಿ ಭೂಮಿಕಾ ಮನಸ್ಸನ್ನು ಬದಲಾವಣೆ ಮಾಡಬೇಕು. ಇಲ್ಲವಾದರೆ, ಖಂಡಿತವಾಗಿಯೂ ನಿನಗೆ ಉಳಿಗಾಲ ಇಲ್ಲ ಎಂದು ಹೇಳುತ್ತಾನೆ. ಈ ಮಾತು ಕೇಳಿದ ಶಕುಂತಲಾ ದೇವಿ ಅಣ್ಣನ ಬಳಿ, ನಾನು ಆ ಬಗ್ಗೆ ಯೋಚಿಸುತ್ತಿರುವೆ ಎಂದು ಹೇಳುತ್ಥಾಳೆ. ಇನ್ನೂ ಭೂಮಿಕಾ ಬಳಿಗೆ ಬಂದ ಶಕುಂತಲಾ ದೇವಿ ಸೆಂಟಿಮೆಂಟ್ ಕ್ರಿಯೇಟ್ ಮಾಡುತ್ತಾಳೆ. ನನ್ನ ಮೂವರು ಮಕ್ಕಳು ನನ್ನ ವಿರುದ್ಧವಾಗಿಯೇ ಮದುವೆ ಮಾಡಿಕೊಂಡಿದ್ದಾರೆ. ಮಹಿಮಾ ಮದುವೆ ಆಗಿ ಮಾಧ್ಯಮ ವರ್ಗ ಜೀವನ ನಡೆಸುತ್ತಿದ್ದಾಳೆ ಎನ್ನುತ್ತಾರೆ.

ಭೂಮಿಕಾ ಜೊತೆ ಶಕುಂತಲಾ ಅಳಲು

ಆದರೆ, ಜೀವ ಒಳ್ಳೆಯವನು ನನಗೆ ಅದನ್ನು ನೋಡಿ ಸಹಿಸಲು ಆಗುತ್ತಿಲ್ಲ. ಇನ್ನೂ ಜೈ ದೇವ್, ಮಲ್ಲಿ ಜೊತೆ ಹೇಗೆ ಮದುವೆ ಆದ ಎಂಬುವುದು ನಿನಗೆ ತಿಳಿದಿದೆ. ಅಶ್ವಿನಿ ಕೂಡ ಆಕೆಯ ಗಂಡನ ಸ್ಥಿತಿಗತಿ ಚೆನ್ನಾಗಿಲ್ಲ. ಇದರಿಂದಾಗಿ ನನಗೆ ಬಹಳ ಬೇಸರ ಆಗಿದೆ. ಇದೀಗ ಪಾರ್ಥ ಕೂಡ ಹಾಗೆ ನಡೆದುಕೊಂಡರೆ ಎನ್ನುವ ಸಣ್ಣ ಭಯ ನನ್ನಲ್ಲಿ ಕಾಡತೊಡಗಿದೆ. ನನ್ನ ಮಾತು ನನ್ನ ಇಷ್ಟ ಯಾರಿಗೂ ಬೇಡ ಆಗಿದೆ. ಅವರವರ ಇಷ್ಟದ ಪ್ರಕಾರ ಜೀವನ ನಡೆಸುತ್ತಿದ್ದಾರೆ ಎಂದು ಆಕೆ ಹೇಳುತ್ತಾಳೆ.

ಅತ್ತೆಯ ಮಾತಿಗೆ ಕರಗಿದ ಭೂಮಿಕಾ

ಆಕೆಯ ಮಾತು ಕೇಳಿದ ಭೂಮಿ ಮೌನವಾಗಿ ಇರುತ್ತಾಳೆ. ಕೊನೆಗೆ ಶಕುಂತಲಾ ದೇವಿ "ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ" ಎಂದು ಹೇಳುತ್ತಾಳೆ ಇದನ್ನು ಕೇಳಿದ ಭೂಮಿಕಾ "ಸರಿ ಅತ್ತೆ ನೀವು ಏನು ಹೇಳಿದರು ಅದನ್ನು ಮಾಡಲು ನಾನು ರೆಡಿ ಆಗಿದ್ದೇನೆ. ನೀವು ತಲೆ ಕೆಡಿಸಿಕೊಳ್ಳಬೇಡಿ" ಎಂದು ಹೇಳಿ ಅತ್ತೆಯನ್ನು ಸಮಾಧಾನ ಮಾಡುತ್ತಾಳೆ.

Amruthadhaare serial July 22nd episode update

ಗೌತಮ್‌ಗೆ ಪಾರ್ಥನದ್ದೆ ಚಿಂತೆ

ಗೌತಮ್, ಪಾರ್ಥನ ಸ್ಥಿತಿ ನೋಡಿ ಬಹಳ ಬೇಸರ ಪಡುತ್ತಾನೆ. "ನನ್ನ ತಮ್ಮ ಹೇಗೆ ಇದ್ದ. ಆದರೆ ಇದೀಗ ತಾನೆ ಬೇರೆ ಬಿಸಿನೆಸ್ ಮಾಡಬೇಕು ಎನ್ನುವ ಆಲೋಚನೆ ಆತನಿಗೆ. ಆ ಪ್ರಕಾರವೇ ಪಾರ್ಥ ಮಾಡಲಿ. ಆತನಿಗೆ ಏನೇ ಸಹಾಯ ಬೇಕಾದರೂ ನಾನು ಮಾಡುತ್ತೇನೆ" ಎಂದು ಮನದಲ್ಲಿ ಅಂದುಕೊಳ್ಳುತ್ತಾನೆ.

More from Filmibeat

English summary
Amruthadhaare serial July 22nd episode update:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X