Amruthadhaare; ಮನೆಯಾಚೆ ಹೋದ ಗೌತಮ್-ಭೂಮಿಕಾ, ಮತ್ತೊಂದು ಮಗುವನ್ನು ಕಿಡ್ನಾಪ್ ಮಾಡುತ್ತಾನಾ ಜೈದೇವ್ ?
ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾ ಬೇಡ ಅಂದರೂ ಕೂಡ ಜೈದೇವ್‌ಮನೆಗೆ ಬಂದಿದ್ದಾನೆ. ಆದರೆ.. ಪಾರ್ಥನ ಆಜ್ಞೆಯ ಮೇರೆಗೆ ಸೆಕ್ಯೂರಿಟಿ ಗಾರ್ಡ್ ಜೈದೇವ್‌ನನ್ನು ಮನೆಯೊಳಗೆ ಬಿಟ್ಟಿಲ್ಲ. ಇದರಿಂದ ಕೆರಳಿದ ಜೈದೇವ್, ಶಕುಂತಲಾಗೆ ಫೋನ್ ಮಾಡಿ ಗೇಟ್ ಬಳಿ ಕಾಯುತ್ತಿರುವ ವಿಚಾರ ಹೇಳುತ್ತಾನೆ. ಅಲ್ಲಿಯೇ ಇರುವ ಪಾರ್ಥನ ಮೇಲೆ ಕಿಡಿ ಕಾರಿರುವ ಶಕುಂತಲಾ ನಿನ್ನಂತೆಯೇ ಅವನು ನನ್ನ ಮಗ, ಅವನು ಏನೇ ಆದರೂ ನನ್ನ ಮಗ ಈ ಮನೆ ಮಗ ಎನ್ನುತ್ತಾಳೆ.
ಶಕುಂತಲಾ ಮಾತುಗಳಿಗೆ ಖಡಕ್ ಉತ್ತರ ನೀಡುವ ಪಾರ್ಥ ಅವನಂತಹ ಕ್ರಿಮಿನಲ್ ಯಾರು ಇಲ್ಲ ಅವನು ಯಾವುದೇ ಕಾರಣಕ್ಕೂ ಮನೆಯೊಳಗೆ ಬರಬಾರದು ಎನ್ನುತ್ತಾನೆ. ಅಣ್ಣ ಎನ್ನುವ ಯಾವ ಘನಂದಾರಿ ಕೆಲಸವನ್ನು ಅವನು ಮಾಡಿಲ್ಲ ಎನ್ನುತ್ತಾನೆ.

ಎಮೋಷನಲ್ ಬ್ಲ್ಯಾಕ್‌ಮೇಲ್ ಮಾಡುವ ಶಕುಂತಲಾ
ಪಾರ್ಥ ಮಾತು ಕೇಳದಿದ್ದಾಗ ಭೂಮಿಕಾ ಬಳಿ ತೆರಳುವ ಶಕುಂತಲಾ, ಜೈ ಮನೆಗೆ ಬಂದಿದ್ದಾನೆ. ಆದರೆ. ಅವನನ್ನು ಒಳಗಡೆ ಬಿಡ್ತಿಲ್ಲ, ಅವನನ್ನು ಈ ರೀತಿ ನಡೆಸಿಕೊಳ್ಳುತ್ತಿರುವುದು ನನಗೆ ನೋಡಲು ಆಗುತ್ತಿಲ್ಲ ಎಂದು ತನ್ನ ನೋವನ್ನು ಹೇಳಿಕೊಳ್ಳುತ್ತಾಳೆ.
ಇದಕ್ಕೆ ಒಪ್ಪದ ಭೂಮಿಕಾ ಅವರಿಗೂ ಮತ್ತು ಈ ಮನೆಗೆ ಇರುವ ಸಂಬಂಧ ಕಡಿದು ಹೋಗಿದೆ ಎನ್ನುತ್ತಾಳೆ. ಅವರು ಮನೆಗೆ ಬರುವುದು ಈ ಮನೆಗೂ ಶೋಭೆ ಅಲ್ಲ ಎನ್ನುತ್ತಾಳೆ. ಭೂಮಿಕಾಳ ಈ ಮಾತು ಕೇಳಿ ಶಕುಂತಲಾ ಎಮೋಷನಲ್ ಬ್ಲ್ಯಾಕ್ ಮೇಲ್ ಮಾಡುತ್ತಾಳೆ. ತಾಯಿ ಮಗನ ದೂರು ಮಾಡುವ ಪ್ರಯತ್ನ ಮಾಡಬೇಡ ಎನ್ನುತ್ತಾಳೆ. ತಾಯಿ ನೋವು ನಿನಗೆ ಅರ್ಥ ಆಗಲ್ವಾ ? ನಿನಗೂ ಒಂದು ಮಗು ಇದೆ. ನಿನ್ನ ಮಗುನಾ ನಿನ್ನಿಂದ ದೂರ ಮಾಡಿದರೆ ನಿನಗೆ ನೋವಾಗುತ್ತೋ ಇಲ್ವೋ ಎಂದೆಲ್ಲ ಮಾತನಾಡುತ್ತಾಳೆ. ವಿಧಿ ಇಲ್ಲದೇ ಭೂಮಿಕಾ ಒಪ್ಪಿಕೊಳ್ಳುತ್ತಾಳೆ.
ಭೂಮಿಕಾ ರೂಮ್‌ಗೆ ಬರುವ ಜೈದೇವ್
ಜೈದೇವ್‌ನ ಶಕುಂತಲಾ ಭೂಮಿಕಾ ಕೋಣೆಗೆ ಕರೆದುಕೊಂಡು ಬಂದಿದ್ದಾಳೆ. ಮಗುನ ನೋಡಬೇಕು ಅಂದ ಅದಕ್ಕೆ ಕರ್ಕೊಂಡು ಬಂದೆ ಎಂದು ಭೂಮಿಕಾಗೆ ಹೇಳುತ್ತಾಳೆ. ಜೈದೇವ್ ಮಗುನ ಎತ್ತಿಕೊಳ್ಳಲು ಮುಂದಾಗಿದ್ದು ಭೂಮಿಕಾ ತಡೆಯುತ್ತಾಳೆ. ಇದಕ್ಕೆ ಜೈದೇವ್ ನಾಟಕವಾಡಿದ್ದು ಹಳೆಯದೆಲ್ಲ ನನ್ನ ಮನಸಿನಲ್ಲಿ ಇಲ್ಲ ನನಗೇನು ಬರಬೇಕಿತ್ತೋ ನನಗೇನೋ ದಕ್ಕಬೇಕಿತ್ತೋ ಅದನ್ನೆಲ್ಲ ನಾನು ಪಡೆದುಕೊಂಡಿದ್ದೇನೆ ಎಂದು ಹೇಳುತ್ತಾನೆ. ಆ ವಿಚಾರಕ್ಕಾಗಲಿ ಮಗು ವಿಚಾರಕ್ಕಾಗಲಿ ಏನು ಸಂಬಂಧ ಎಂದು ಕೇಳುತ್ತಾನೆ. ಇದೇ ಸಮಯದಲ್ಲಿ ಮಲ್ಲಿ ಕೂಡ ಭೂಮಿಕಾ ರೂಮ್‌ಗೆ ಬಂದು ನಿಂತುಕೊಳ್ಳುತ್ತಾಳೆ.
ಗೌತಮ್‌ಗೆ ಫೋನ್ ಮಾಡುವ ಪಾರ್ಥ
ಜೈದೇವ್ ಮನೆಗೆ ಬಂದಿದ್ದಕ್ಕೆ ಪಾರ್ಥ್ ಅಪ್‌ಸೆಟ್ ಆಗಿದ್ದಾನೆ. ಅಪೇಕ್ಷಾ ಜೊತೆ ತನ್ನ ಅಸಮಾಧಾನ, ಆಕ್ರೋಶವನ್ನು ಹೊರ ಹಾಕಿದ್ದು ಗೌತಮ್‌ಗೆ ಫೋನ್ ಮಾಡುವಂತೆ ಅಪೇಕ್ಷಾ ಹೇಳುತ್ತಾಳೆ. ಅಪೇಕ್ಷಾ ಮಾತಿನಂತೆ ಗೌತಮ್‌ಗೆ ಫೋನ್ ಮಾಡಿ ಜೈದೇವ್ ಬಂದ ವಿಚಾರವನ್ನು ಗೌತಮ್‌ಗೆ ಹೇಳುತ್ತಾನೆ. ಪಾರ್ಥನ ಮಾತು ಕೇಳಿ ಶಾಕ್ ಆಗುವ ಗೌತಮ್ ಆಫೀಸ್‌ಗೆ ಹೋಗುವ ಬದಲು ಮತ್ತೆ ಮರಳಿ ಮನೆ ಕಡೆ ಹೋಗುವಂತೆ ಡ್ರೈವರ್‌ಗೆ ಹೇಳುತ್ತಾನೆ.
ಜೈದೇವ್ ಮೇಲೆ ಕೆಂಡ ಕಾರುವ ಗೌತಮ್
ಜೈದೇವ್ ಮಗು ಎತ್ತಿ ಆಡಿಸುತ್ತಿದ್ದಾಗ ಬರುವ ಪಾರ್ಥ ತನ್ನ ಕೋಪ ಹೊರ ಹಾಕುತ್ತಾನೆ. ಮಗು ಇಟ್ಟು ಹೊರಡುವಂತೆ ಹೇಳುತ್ತಾನೆ. ಇದೇ ಸಮಯಕ್ಕೆ ಮನೆಗೆ ಗೌತಮ್ ಬಂದಿದ್ದು ಈ ಮನೆ ಕಡೆ ಯಾವತ್ತು ತಲೆ ಹಾಕಬೇಡ ಅಂದರೂ ಮನೆಗೆ ಯಾವ ಮುಖ ಇಟ್ಕೊಂಡು ಬಂದಿದ್ದೀಯಾ ಎಂದು ರೇಗುತ್ತಾನೆ. ಆಗ ಶಕುಂತಲಾ ಅವನು ನನ್ನನ್ನು ನೋಡೋಕೆ ಬಂದ ಮಗುನ ನೋಡುವ ಆಸೆ ವ್ಯಕ್ತಪಡಿಸಿದ ಎಂದು ಹೇಳುತ್ತಾಳೆ. ಅಮ್ಮನ ನೋಡಬೇಕು ಅಂದರೆ ನೀನು ಇರುವ ಜಾಗಕ್ಕೆ ಕರೆಸ್ಕೋ ಎಂದು ಗೌತಮ್, ಜೈದೇವ್‌ಗೆ ಹೇಳುತ್ತಾನೆ. ಮರುಮಾತನಾಡದೇ ಜೈದೇವ್ ಅಲ್ಲಿಂದ ಹೊರಡುತ್ತಾನೆ.
ಮತ್ತೊಂದು ಮಗು ಕಿಡ್ಯಾಪ್ ಮಾಡ್ತಾನಾ ಜೈದೇವ್ ?
ಮನೆಯಲ್ಲಿ ಎಲ್ಲರ ಎದುರಾದ ಅವಮಾನದಿಂದ ಜೈದೇವ್ ಕೆರಳಿದ್ದಾನೆ. ಮತ್ತೊಂದು ಮಗುವಿನ ಪ್ರಾಣಕ್ಕೆ ಸಂಚಕಾರ ತರುವ ಮಾತುಗಳನ್ನಾಡಿದ್ದಾನೆ. ಮತ್ತೊಂದು ಕಡೆ ಭೂಮಿಕಾ ಮುಖದಲ್ಲಿನ ಬೇಸರ-ಆತಂಕ ಕಂಡು ಮಲ್ಲಿ ಮತ್ತು ಸುಧಾಳನ್ನು ಗೌತಮ್ ರೂಮ್‌ಗೆ ಕರೆಸಿಕೊಂಡಿದ್ದು ಭೂಮಿಕಾ ಜೊತೆ ಲಾಂಗ್ ಡ್ರೈವ್ ಹೋಗಲು ಮುಂದಾಗಿದ್ದಾನೆ. ಮಗುನ ಮಲ್ಲಿ ಮತ್ತು ಸುಧಾ ನೋಡಿಕೊಳ್ಳುತ್ತಾರೆ ಬನ್ನಿ ಹೋಗೋಣ ಎನ್ನುತ್ತಾನೆ. ಭೂಮಿಕಾ ಮೊಗದಲ್ಲಿ ಮಂದಹಾಸವನ್ನು ಮೂಡಿಸುತ್ತಾನೆ.
ಸದ್ಯ ಗೌತಮ್ ಮತ್ತು ಭೂಮಿಕಾ ಮನೆಯಾಚೆ ಹೋಗಿದ್ದು, ಸಮಯ ನೋಡಿಕೊಂಡು ಮತ್ತೆ ಗೌತಮ್ ಮನೆಗೆ ಬಂದಿರೋ ಜೈದೇವ್ ಮಾಸ್ಕ್ ಹಾಕಿಕೊಂಡು ಆ ಮಗು ಕಿಡ್ನ್ಯಾಪ್ ಮಾಡಲು ಬಂದಂತೆ ಇಂದಿನ ಪ್ರೋಮೋದಲ್ಲಿ ತೋರಿಸಲಾಗಿದೆ. ಈ ಹಿನ್ನೆಲೆ ಮತ್ತೊಂದು ಮಗುವನ್ನು ಕೂಡ ಜೈದೇವ್ ಕಿಡ್ನಾಪ್ ಮಾಡುತ್ತಾನಾ ? ಮೊದಲ ಮಗು ಕಿಡ್ನಾಪ್ ಮಾಡಿದ್ದು ಜೈದೇವ್ ಎನ್ನುವ ವಿಚಾರ ಗೌತಮ್‌ಗೆ ಗೊತ್ತಾಗುತ್ತಾ ? ಎನ್ನುವ ಕುತೂಹಲ ಈಗ ಹಲವರನ್ನು ಕಾಡುತ್ತಿದೆ.


Click it and Unblock the Notifications











