Amruthadhaare; ಪ್ಲಾನ್ ಎಲ್ಲಾ ಉಲ್ಟಾ ಪಲ್ಟಾ, ಮಲ್ಲಿ ಕೈಯಿಂದ ಅಷ್ಟರಲ್ಲೇ ಜಸ್ಟ್ ಮಿಸ್ ಆದ ಜೈದೇವ್..!

ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್ ಮನೆಗೆ ಬಂದು ಹೋದ ನಂತರ ಭೂಮಿಕಾ ಮನದಲ್ಲಿ ನಿರಾಸೆಯ ಭಾವ ಇದೆ. ಮುಖದಲ್ಲಿ ಉತ್ಸಾಹ ಹೀನತೆ ಇದೆ. ಈ ಹಿನ್ನೆಲೆ.. ಭೂಮಿಕಾಳನ್ನು ಗೌತಮ್‌ ಮನೆಯಾಚೆ ಕರೆದೊಯ್ಯುಲು ಮುಂದಾಗುತ್ತಾನೆ. ಆದರೆ.. ಮಗುನ ಮನೆಯಲ್ಲಿ ಬಿಟ್ಟು ಹೋಗಲು ಭೂಮಿಕಾಗೆ ಮನಸು ಇರುವುದಿಲ್ಲ. ಆದರೂ ಕೂಡ ಮಲ್ಲಿ ಮತ್ತು ಸುಧಾಳನ್ನು ಕರೆದು ಭೂಮಿಕಾ ಮನವೊಲಿಸುತ್ತಾನೆ.

ಸದ್ಯ ಇಬ್ಬರು ಮನೆಯ ಹೊರಗಡೆ ಬಂದಿದ್ದಾರೆ. ಲಾಂಗ್ ಡ್ರೈವ್‌ಗೆ ಹೊರಟಿದ್ದಾರೆ. ಆದರೂ ಕೂಡ ಭೂಮಿಕಾ ಮನಸು ಮನೆಯಲ್ಲಿಯೇ ಇದೆ. ಮಲ್ಲಿಗೆ ಫೋನ್ ಮಾಡಿ ಮಗು ಬಗ್ಗೆ ವಿಚಾರಿಸುತ್ತಾಳೆ. ಮಲ್ಲಿ ತಲೆ ಕೆಡಿಸಿಕೊಳ್ಳಬೇಡಿ ಆರಾಮಾಗಿ ಹೋಗಿ ಬನ್ನಿ ಎನ್ನುತ್ತಾಳೆ.

amruthadhaare-serial-july-26-episode-written-update

ಶಕುಂತಲಾಗೆ ಫೋನ್ ಮಾಡುವ ಜೈದೇವ್

ಬೇಡ ಅಂದರೂ ಮನೆಗೆ ಹೋಗಿ ಅವಮಾನ ಮಾಡಿಸಿಕೊಂಡು ಬಂದ ಜೈದೇವ್, ಸದ್ಯ ಪ್ರತಿಕಾರಕ್ಕೆ ಹಾತೊರೆಯುತ್ತಿದ್ದಾನೆ. ಹೀಗಾಗಿಯೇ ಶಕುಂತಲಾಗೆ ಕರೆ ಮಾಡುವ ಜೈದೇವ್ ಮನೆಯಲ್ಲಿ ಎಲ್ಲರು ಮಲಗಿದ್ದಾರಾ ಎಂದು ಕೇಳುತ್ತಾನೆ.

ಜೈದೇವ್‌ನ ಈ ಪ್ರಶ್ನೆಯಿಂದ ಅನುಮಾನಗೊಂಡ ಶಕುಂತಲಾ ಯಾಕೆ ಕೇಳ್ತಿದ್ದೀಯಾ ಎಂದು ಪ್ರಶ್ನೆ ಮಾಡುತ್ತಾಳೆ. ಗೌತಮ್ ಮತ್ತು ಭೂಮಿಕಾ ಮನೆಯಾಚೆ ಹೋದ ವಿಚಾರ ಹೇಳುತ್ತಾಳೆ.

ಇದಕ್ಕೆ ಬಯಸದೇ ಬಂದ ಭಾಗ್ಯ ಎನ್ನುವ ಜೈದೇವ್ ಹೇಗಾದರೂ ಮಾಡಿ ಎಷ್ಟೇ ರಿಸ್ಕ್ ಆದರೂ ಕೂಡ ಇವತ್ತು ಆ ಮಗುನ ಎತ್ತಾಕಿಕೊಂಡು ಹೋಗುತ್ತೇನೆ ಎಂದು ಹೇಳುತ್ತಾನೆ. ಜೈದೇವ್‌ನ ಈ ಮಾತು ಕೇಳಿ ಶಕುಂತಲಾ ಗಾಬರಿಯಾಗುತ್ತಾಳೆ. ಹಾಗೆಲ್ಲ ಮಾಡಬೇಡ ಬರಬೇಡ ಎನ್ನುತ್ತಾಳೆ. ಆದರೂ ಶಕುಂತಲಾ ಮಾತುಗಳನ್ನು ಜೈದೇವ್ ಕೇಳುವುದಿಲ್ಲ.

ಐಸ್‌ಕ್ರೀಮ್ ತರುವ ಗೌತಮ್

ಮತ್ತೊಂದು ಕಡೆ ಇದ್ಯಾವುದರ ಅರಿವು ಇಲ್ಲದ ಗೌತಮ್ ಕಾರು ನಿಲ್ಲಿಸಿ ಭೂಮಿಕಾಗೆ ಐಸ್‌ಕ್ರೀಮ್ ತಂದಿದ್ದಾನೆ. ಇದೇ ಸಮಯದಲ್ಲಿ ಆನಂದ್ ಫೋನ್ ಮಾಡಿದ್ದು ಭೂಮಿಕಾ ಐಸ್‌ಕ್ರೀಮ್ ತಿನ್ನಲ್ಲ ಅಂತಿದ್ದಾರೆ ನೀನೇ ಹೇಳು ಎನ್ನುತ್ತಾನೆ. ಇದಕ್ಕೆ ಅಪೇಕ್ಷಾ ಬಳಿ ಆನಂದ್ ಫೋನ್ ನೀಡಿದ್ದು ಅಪೇಕ್ಷಾ ಐಸ್‌ಕ್ರೀಮ್ ತಿನ್ನಬಹುದು ಏನಾಗುವುದಿಲ್ಲ ಎಂದು ಹೇಳುತ್ತಾಳೆ. ಬೇಗ ತಿನ್ಕೋ ಕರಗಿ ಹೋಗುತ್ತೆ ಎನ್ನುತ್ತಾಳೆ. ಇಬ್ಬರು ಕಾರಿನಲ್ಲಿ ಕುಳಿತು ಐಸ್‌ಕ್ರೀಮ್ ತಿನ್ನುತ್ತಾರೆ.

amruthadhaare-serial-july-26-episode-written-update

ಮನೆಯೊಳಗೆ ನುಗ್ಗಿದ ಜೈದೇವ್

ಶಕುಂತಲಾ ಬೇಡ ಅಂದರೂ ಕೂಡ ಜೈದೇವ್ ಮನೆಗೆ ಬಂದು ಸೆಕ್ಯೂರಿಟಿ ಗಾರ್ಡ್‌ನ ಪ್ರಜ್ಞೆ ತಪ್ಪಿಸಿದ್ದಾನೆ. ಮನೆಯೊಳಗೆ ಹೋಗಿ ಭೂಮಿಕಾ ರೂಮ್ ತಲುಪಿದ್ದಾನೆ. ಇದೇ ಸಮಯದಲ್ಲಿ ಮಲ್ಲಿಯ ಕಣ್ಣಿಗೆ ಜೈದೇವ್ ಬಿದ್ದಿದ್ದು ಫ್ಲವರ್ ಪಾಟ್ ತಗೆದುಕೊಂಡು ಜೈದೇವ್‌ ಮೇಲೆ ಮಲ್ಲಿ ಹಲ್ಲೆ ಮಾಡುತ್ತಾಳೆ. ಸುಧಾ ಕೂಡ ಬಂದು ಜೊತೆಯಾಗುತ್ತಾಳೆ. ಜೈದೇವ್‌ನನ್ನು ಥಳಿಸುತ್ತಾಳೆ.


ಕೂಗಾಟ ಕೇಳಿ ಹೋಗುವ ಶಕುಂತಲಾ

ಮಲ್ಲಿ ಮತ್ತು ಸುಧಾಳ ಕೂಗಾಟ-ಚೀರಾಟವನ್ನು ಕೇಳಿ, ಶಕುಂತಲಾಗೆ ಜೈದೇವ್‌ ಬಂದಿರುವುದು ಮನವರಿಕೆಯಾಗಿದ್ದು ಭೂಮಿಕಾ ರೂಮ್‌ಗೆ ಹೋಗಿದ್ದಾಳೆ. ಇದೇ ಸಮಯದಲ್ಲಿ ಶಕುಂತಲಾ ಕತ್ತಿನ ಮೇಲೆ ಚಾಕು ಇಡುವ ಜೈದೇವ್, ಹೇಗಾದರೂ ಮಾಡಿ ಇಲ್ಲಿಂದ ಪಾರು ಮಾಡುವಂತೆ ಶಕುಂತಲಾ ಕಿವಿಯಲ್ಲಿ ಪಿಸುಗುಡುತ್ತಾನೆ. ಆ ನಂತರ ಶಕುಂತಲಾಳನ್ನು ತಳ್ಳಿ ಅಲ್ಲಿಂದ ಓಡಿ ಹೋಗುತ್ತಾನೆ.

ಸತ್ಯ ಮುಚ್ಚಿಡುವಂತೆ ಹೇಳುವ ಶಕುಂತಲಾ

ಜೈದೇವ್ ಮನೆಯಿಂದ ಓಡಿ ಹೋಗಿದ್ದು ಮಲ್ಲಿ ಮತ್ತು ಸುಧಾ ಆತಂಕಕ್ಕೀಡಾಗಿದ್ದಾರೆ. ಇದೇ ಸಮಯದಲ್ಲಿ ಶಕುಂತಲಾ ಈ ವಿಚಾರವನ್ನು ಯಾವುದೇ ಕಾರಣಕ್ಕೂ ಗೌತಮ್ ಮತ್ತು ಭೂಮಿಕಾಗೆ ಹೇಳಬೇಡಿ ಎನ್ನುತ್ತಾಳೆ. ಆದರೆ ಮಲ್ಲಿ ಇಷ್ಟು ದೊಡ್ಡ ವಿಚಾರ ಮುಚ್ಚಿಡುವುದು ಸರಿ ಅಲ್ಲ ಎನ್ನುತ್ತಾಳೆ. ಆಗ ಈ ಸುದ್ದಿ ಕೇಳಿದರೆ ಅವರು ಆಘಾತಕ್ಕೊಳಗಾಗುತ್ತಾರೆ ಎಂದು ಶಕುಂತಲಾ ಇಬ್ಬರ ಮನ ಒಲಿಸುತ್ತಾಳೆ. ಇಬ್ಬರು ಕೂಡ ಸತ್ಯ ಹೇಳದಿರಲು ತೀರ್ಮಾನ ಮಾಡುತ್ತಾರೆ. ಸದ್ಯ ಬಚಾವ್ ಆದ್ವಿ ಎಂದು ಶಕುಂತಲಾ ನಿಟ್ಟುಸಿರು ಬಿಟ್ಟಿದ್ದಾಳೆ.

More from Filmibeat

English summary
Amruthadhaare Kannada Serial: Find Out The Highlights Of July 26 Episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X