Amruthadhaare:ಮಗನಿಗೆ ಮದುವೆ ಮಾಡಿ ಭೂಮಿಕಾಳನ್ನು ಕಟ್ಟಿ ಹಾಕುತ್ತಾಳಾ ಶಕುಂತಲಾ?
'ಅಮೃತಧಾರೆ' ಧಾರಾವಾಹಿಯಲ್ಲಿ ಶಕುಂತಲಾ ಆತ್ಮಹತ್ಯೆ ಮಾಡಿಕೊಳ್ಳುತ್ತೀನಿ ಎಂದಾಗಿನಿಂದಲೂ ಭುಮಿಕಾ ಡಲ್ ಆಗಿದ್ದಾಳೆ. ಯಾರ ಬಳಿಯೂ ಹೆಚ್ಚಾಗಿ ಮಾತನಾಡುತ್ತಿಲ್ಲ.
ಭೂಮಿಕಾಳಲ್ಲಿನ ಬದಲಾವಣೆಯನ್ನು ಗಮನಿಸಿದ ಮಲ್ಲಿ, ವಿಚಾರಿಸುತ್ತಾಳೆ. ಯಾಕೆ ಹೀಗಿದ್ದೀರಾ. ಪಾರ್ಥನಿಗೆ ನೀವೆಂದರೆ ಬಹಳ ಇಷ್ಟ. ಅವನಿಗೆ ಯಾವುದು ಸರಿ? ಯಾವುದು ತಪ್ಪು ಎಂಬುದು ನಿಮಗೆ ಗೊತ್ತಿರುತ್ತದೆ.

ಆದರೆ, ಮನೆಯಲ್ಲಿ ಪಾರ್ಥನಿಗೆ ಹುಡುಗಿಯನ್ನು ಹುಡುಕುತ್ತಿದ್ದರೆ, ನೀವು ಅದರ ಕಡೆಗೆ ಗಮನವನ್ನೇ ಕೊಡುತ್ತಿಲ್ಲ ಎಂದು ಕೇಳುತ್ತಾಳೆ. ಆದರೆ, ಭೂಮಿಕಾ ಹಾಗೇನು ಇಲ್ಲ ಎಂದು ಹೇಳುತ್ತಾಳೆ.
ಅಪೇಕ್ಷಾ-ಪಾರ್ಥ ಭೇಟಿ
ಅಪೇಕ್ಷಾ ಅಕಸ್ಮಾತ್ ಆಗಿ ಪಾರ್ಥ ಇರುವ ಶಾಲೆಗೆ ಹೋಗಿದ್ದಾಳೆ. ಅಲ್ಲಿ ಪಾರ್ಥನನ್ನು ನೋಡಿದ ಅಪೇಕ್ಷಾ ಮಾತನಾಡಿಸಲು ಮುಂದಾಗುತ್ತಾಳೆ. ಪಾರ್ಥ ಮತ್ತು ಅಪೇಕ್ಷಾ ಇಬ್ಬರೂ ಮಾತು ಶುರು ಮಾಡುವಷ್ಟರಲ್ಲಿ ಸದಾಶಿವ ಅಲ್ಲಿಗೆ ಬರುತ್ತಾನೆ. ಆಗ ಅಪೇಕ್ಷಾ ಪಾರ್ಥನಿಗೆ ಹೇಳುವ ಬದಲು ಸದಾಶಿವನ ಬಳಿ ನಾನು ಮಿಸ್ ಇಂಡಿಯಾ ಸ್ಫರ್ಧೆಯಲ್ಲಿ ಭಾಗವಹಿಸುತ್ತಿದ್ದೇನೆ. ನಾನು ಈ ಸ್ಫರ್ಧೆಯಲ್ಲಿ ಗೆದ್ದು ಬರುತ್ತೇನೆ ಎಂದು ಪಾರ್ಥನಿಗೆ ತಿಳಿಸಿ ಎನ್ನುತ್ತಾಳೆ. ಪಾರ್ಥ ಕೂಡ ಹುಡುಗರನ್ನು ಒಳ್ಳೆಯ ದಾರಿಗೆ ತಂದು ಅವರು ಪರೀಕ್ಷೆಯಲ್ಲಿ ಪಾಸ್ ಆಗುವಂತೆ ಮಾಡುತ್ತೇನೆ ಎಂದು ಹೇಳುತ್ತಾನೆ. ಒಂದು ಕ್ಷಣ ಸದಾಶಿವನಿಗೆ ಗೊಂದಲವಾಗುತ್ತದೆ. ಇವರಿಬ್ಬರೇ ಮಾತನಾಡುತ್ತಿದ್ದಾರಾ ಇಲ್ಲ ತನಗೆ ಹೇಳುತ್ತಿದ್ದಾರಾ? ಎಂಬುದು ಗೊತ್ತಾಗುವುದಿಲ್ಲ.

ಪಾರ್ಥನಿಗಾಗಿ ಹುಡುಗಿ ಹುಡುಕಾಟ
ಇತ್ತ ಮನೆಯಲ್ಲಿ ಪಾರ್ಥನಾ ಮದುವೆ ಮಾಡಲು ಎಲ್ಲಾ ರೀತಿಯ ತಯಾರಿಗಳು ನಡೆಯುತ್ತಿವೆ. ಗೌತಮ್ ಅದಾಗಲೇ ಮ್ಯಾಟ್ರಿಮೋನಿಗೆ ಮಾಹಿತಿ ನೀಡಿದ್ದು, ಈಗಾಗಲೇ ಒಳ್ಳೊಳ್ಳೆ ಪ್ರೊಫೈಲ್‌ಗಳು ಸಿಕ್ಕಿವೆ. ಗೌತಮ್ ಯಾವ ಹುಡುಗಿಯನ್ನು ಆಯ್ಕೆ ಮಾಡುವುದು ಎಂದು ತಲೆ ಕೆಡಿಸಿಕೊಂಡಿದ್ದಾನೆ. ಮನೆಯವರೆಲ್ಲಾ ಇಬ್ಬರು ಹುಡುಗಿಯರ ಫೋಟೋವನ್ನು ಫೈನಲ್ ಮಾಡಿದ್ದು, ಅವರಿಬ್ಬರಲ್ಲಿ ಪಾರ್ಥನಿಗೆ ಯಾರು ಸೂಕ್ತ ಎಂಬ ಬಗ್ಗೆ ಆನಂದ್‌ಗೆ ಫೋಟೋ ಕಳಿಸಿ ಆಯ್ಕೆ ಮಾಡಲು ಹೇಳಿದ್ದಾನೆ. ಇದೇ ವೇಳೆ ಗೌತಮ್, ಅಪರ್ಣಾ ಜೊತೆಗೆ ಮಾತನಾಡಿದ್ದು, ಜೂಲಿ ಎಂಬ ಹುಡುಗಿ ಇಲ್ಲ ನಾನೇ ಬೇಕಂತಲೇ ಫಿಟ್ಟಿಂಗ್ ಇಟ್ಟಿದ್ದು ಎಂಬ ಸತ್ಯವನ್ನು ಹೇಳುತ್ತಾನೆ.
ಅಪೇಕ್ಷಾ ಹೊಟ್ಟೆ ಉರಿಸುತ್ತಿರುವ ಜೈದೇವ್
ಜೈದೇವ್ ಮತ್ತು ಅಶ್ವಿನಿ ಇಬ್ಬರೂ ಅಪೇಕ್ಷಾ ಹೊಟ್ಟೆಯನ್ನು ಉರಿಸಬೇಕು ಎಂದು ಪ್ಲಾನ್ ಮಾಡುತ್ತಾರೆ. ಮಹಿಮಾಳಿಗೆ ಫೋನ್ ಮಾಡಿ ಪಾರ್ಥನಿಗೆ ಹುಡುಗಿ ಹುಡುಕುತ್ತಿರುವ ವಿಚಾರವನ್ನು ಹೇಳು ಆಗ ಅಪೇಕ್ಷಾ ಹೊಟ್ಟೆ ಉರಿದುಕೊಳ್ಳುತ್ತಾಳೆ ಎಂದು ಜೈದೇವ್, ಅಶ್ವಿನಿಗೆ ಹೇಳುತ್ತಾನೆ. ಮಹಿಮಾ ಸುದ್ಧಿ ಕೇಳಿ ಖುಷಿಯಿಂದ ಮನೆಯಲ್ಲಿ ತಿಳಿಸಿದಾಗ ಅಪೇಕ್ಷಾ ವಿಚಾರ ತಿಳಿದು ಗಾಬರಿಯಾಗುತ್ತಾಳೆ. ಈ ಬಗ್ಗೆ ಸದಾಶಿವನ ಬಳಿ ಮಾತನಾಡುತ್ತಾಳೆ. ಆದರೆ, ಸದಾಶಿವ ಖಡಾಖಂಡಿತವಾಗಿ ಪಾರ್ಥ ಚಾಲೆಂಜ್‌ನಲ್ಲಿ ಗೆಲ್ಲದೇ ತಮ್ಮಿಬ್ಬರ ಮದುವೆ ಅಸಾಧ್ಯ ಎಂದಿದ್ದಾನೆ. ಈಗ ಜೈದೇವ್ ಬೇಕಂತಲೇ ಮಹಿಮಾಳಿಗೆ ಹುಡುಗಿಯ ಫೋಟೋಗಳನ್ನು ಕಳಿಸಿದ್ದಾನೆ.
ಭೂಮಿಕಾ ಕೈ ಕಟ್ಟಿ ಹಾಕಲು ಪ್ಲಾನ್
ಭೂಮಿಕಾ ಶಕುಂತಲಾ ಆಡಿದ ನಾಟಕವನ್ನು ನಿಜ ಎಂದು ನಂಬಿದ್ದಾಳೆ. ತನ್ನಿಂದ ಯಾರಿಗೂ ನೋವಾಗಬಾರದು ಎಂದು ಸುಮ್ಮನಿದ್ದಾಳೆ. ಇದೇ ಅವಕಾಶವನ್ನು ಬಳಸಿಕೊಂಡಿರುವ ಶಕುಂತಲಾ ಭೂಮಿಕಾಳನ್ನು ಸಂಪೂರ್ಣವಾಗಿ ಮಟ್ಟ ಹಾಕಬೇಕು ಎಂದುಕೊಂಡಿದ್ದಾಳೆ. ಇದಕ್ಕಾಗಿ ಶಕುಂತಲಾ ನಿತ್ಯ ಪ್ಲಾನ್ ಮಾಡುತ್ತಿದ್ದಾಳೆ. ಪಾರ್ಥನಾ ಮದುವೆಯನ್ನು ತನ್ನಿಷ್ಟದಂತೆಯೇ ಮಾಡಬೇಕು. ಬಳಿಕ ಎಲ್ಲಾ ಅಧಿಕಾರವನ್ನು ತನ್ನ ವಶ ಪಡಿಸಿಕೊಳ್ಳಬೇಕು ಎಂದು ಆಲೋಚಿಸಿದ್ದಾಳೆ. ಈ ವಿಚಾರ ಭೂಮಿಕಾಳಿಗೆ ಗೊತ್ತಾದರೆ, ಅತ್ತೆಗೆ ರೈಟ್-ಲೆಫ್ಟ್ ಕ್ಲಾಸ್ ತೆಗೆದುಕೊಳ್ಳುವುದು ಪಕ್ಕಾ.


Click it and Unblock the Notifications











