Amruthadhaare; ಭಾಗ್ಯಮ್ಮನ ವಂಶ ಸರ್ವನಾಶ ಮಾಡಲು ಮುಂದಾದ ಶಕುಂತಲಾ ಬದುಕುಳಿದ ಮಗುನ ಕೊಲ್ತಾಳಾ..?
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಮಗುವನ್ನು ಕಿಡ್ನಾಪ್ ಮಾಡುವಲ್ಲಿ ಜೈದೇವ್ ವಿಫಲನಾಗಿದ್ದಾನೆ. ಮಲ್ಲಿ ಮತ್ತು ಸುಧಾ ಕೈಯಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಶಕುಂತಲಾ ಕಳ್ಳನ ವಿಚಾರವನ್ನು ಯಾವುದೇ ಕಾರಣಕ್ಕೂ ಗೌತಮ್ ಮತ್ತು ಭೂಮಿಕಾಗೆ ಹೇಳಬೇಡಿ ಎಂದು ಹೇಳಿದ್ದಾಳೆ. ಈ ಸುದ್ದಿ ಕೇಳಿದರೆ ಅವರು ಆಘಾತಕ್ಕೊಳಗಾಗುತ್ತಾರೆ ಎಂದು ಶಕುಂತಲಾ ಇಬ್ಬರ ಮನ ಒಲಿಸಿದ್ದಾಳೆ. ಆದರೂ ಕೂಡ ಮಲ್ಲಿಗೆ ಸಮಾಧಾನವಾಗುತ್ತಿಲ್ಲ.
ಹೀಗಾಗಿ ಗೌತಮ್ ಎದುರು ಬಂದು ಮಲ್ಲಿ ಸತ್ಯವನ್ನು ಹೇಳಿದ್ದಾಳೆ. ಮೊನ್ನೆ ನೀವು ಮನೆಯಾಚೆ ಹೋದಾಗ ಮನೆಗೆ ಕಳ್ಳ ಬಂದಿದ್ದ ಎಂದು ನಡೆದಿದ್ದನ್ನೆಲ್ಲ ವಿವರಿಸಿದ್ದಾಳೆ. ಮಲ್ಲಿಯ ಮಾತು ಕೇಳಿ ಬೆಚ್ಚಿ ಬಿದ್ದಿದ್ದು ಯಾವುದೇ ಕಾರಣಕ್ಕೂ ಈ ವಿಚಾರವನ್ನು ಭೂಮಿಕಾಗೆ ಹೇಳಬೇಡ ಎನ್ನುತ್ತಾನೆ. ಆ ಕಳ್ಳನ ಮುಖ ನೋಡಿದಿಯಾ ಎಂದು ಕೇಳುತ್ತಾನೆ. ಆಗ ಮಲ್ಲಿ ಮುಖಕ್ಕೆ ಆತ ಮಾಸ್ಕ್ ಹಾಕಿಕೊಂಡಿದ್ದ ಎಂದು ಹೇಳಿದ್ದು, ಆಸ್ಪತ್ರೆಯಲ್ಲಿ ಮಗುನ ಹೊತ್ತು ಒಯ್ದೋರು ಇಲ್ಲಿಯೂ ಬಂದಿದ್ದರಾ ಎಂದು ಗೌತಮ್ ಯೋಚನೆ ಮಾಡುತ್ತಾನೆ. ಆನಂದ್‌ಗೆ ಫೋನ್ ಮಾಡಿ ಪೊಲೀಸರನ್ನು ಭೇಟಿ ಮಾಡಲು ನಿರ್ಧರಿಸಿದ್ದಾನೆ.

ಇಂಗು ತಿಂದ ಮಂಗನಂತಾದ ಜೈದೇವ್
ಮಲ್ಲಿ ಮತ್ತು ಸುಧಾ ಕಡೆಯಿಂದ ಪೆಟ್ಟು ತಿಂದು ತಪ್ಪಿಸಿಕೊಂಡು ಬಂದ ಜೈದೇವ್ ಮನೆಗೆ ಬಂದು ದಿಯಾ ಕಡೆಯಿಂದ ಶಾಖ ತಗೊಳ್ತಿದ್ದಾನೆ. ದರಿದ್ರವರು ಯರ್ರಾಬಿರಿ ಹೊಡೆದು ಹಾಕಿದರು ಎಂದು ಹೇಳುತ್ತಾನೆ. ದಿಯಾ ಎಲ್ಲಿ ಹೋಗಿದ್ರೀ ಇಷ್ಟ್ಯಾಕೆ ಪೆಟ್ಟು ಬಿದ್ದಿದೆ ಎಂದು ಕೇಳಿದಾಗ ಅಣ್ಣನ ಎರಡನೇ ಮಗುನ ಕಿಡ್ನಾಪ್ ಮಾಡೋಕೆ ಹೋಗಿದ್ದೇ ಎಂದು ಹೇಳುತ್ತಾನೆ. ಯಡವಟ್ಟಾಯ್ತು ಎನ್ನುತ್ತಾನೆ.
ಕಳ್ಳನ ಬಗ್ಗೆ ಶಕುಂತಲಾ ಬಳಿ ವಿಚಾರಿಸುವ ಗೌತಮ್
ಶಕುಂತಲಾ ಬಳಿ ಬಂದು ಕಳ್ಳನ ಬಗ್ಗೆ ಗೌತಮ್ ವಿಚಾರಿಸುತ್ತಾನೆ. ಶಕುಂತಲಾ ಶಾಕ್ ಆಗಿದ್ದು ಯಾರು ಹೇಳಿದರು ಎಂದು ವಿಚಾರಿಸಿದಾಗ ಮಲ್ಲಿಯ ಹೆಸರೇಳುವ ಗೌತಮ್ ನಿಮ್ಮ ಮೇಲೆ ಕೂಡ ಹಲ್ಲೆ ಮಾಡಿದಾ ಅಂತೆ ಒಂದು ಮಾತು ನನಗೆ ಹೇಳಬಾರದಾ ಎನ್ನುತ್ತಾನೆ. ಇದಕ್ಕೆ ಫೋನ್ ಮಾಡಿದರೆ ನಿನ್ನ ಮೂಲಕ ಭೂಮಿಕಾಗೆ ವಿಚಾರ ಗೊತ್ತಾಗಿ ಆಕೆ ಟೆನ್ಷನ್ ಮಾಡಿಕೊಳ್ತಾಳೆ ಎಂದು ನಾನು ಹೇಳಲಿಲ್ಲ ಇವತ್ತು ಹೇಳೋಣ ಅನ್ಕೊಂಡಿದ್ದೇ ಅಷ್ಟರಲ್ಲಿ ನಿನಗೆ ವಿಚಾರ ಗೊತ್ತಾಯ್ತು ಎಂದು ಹೇಳುತ್ತಾಳೆ.
ಆಗ ತನ್ನ ಅನುಮಾನ ವ್ಯಕ್ತಪಡಿಸುವ ಗೌತಮ್ ಆಸ್ಪತ್ರೆಯಲ್ಲಿ ಮಗು ಕಿಡ್ನಾಪ್ ಮಾಡಿದವನು ನಿನ್ನೆ ಮನೆಗೆ ಬಂದವನು ಒಬ್ಬನೇ ಇರಬಹುದಾ ಎಂದು ಹೇಳುತ್ತಾನೆ. ಆಗ ಗಾಬರಿಯಾಗುವ ಶಕುಂತಲಾ ನಿನ್ನೆ ಬಂದವನು ಬರೀ ಕಳ್ಳತನಕ್ಕೆ ಬಂದಿದ್ದ ಎಂದು ಹೇಳುತ್ತಾಳೆ. ಇಲ್ಲ ಅವನು ಮಗುನ ಕಿಡ್ನಾಪ್ ಮಾಡಲು ಬಂದಿದ್ದೆ ಎಂದು ಮಲ್ಲಿ ಹೇಳಿದ್ದಾಳೆ ಎಂದು ಗೌತಮ್ ಹೇಳುತ್ತಾನೆ. ಸ್ಕೆಚ್ ಆರ್ಟಿಸ್ಟ್‌ನ ಕರೆಸ್ತಿದ್ದೀನಿ, ಪೊಲೀಸರಿಗೆ ದೂರು ಕೊಡ್ತಿದ್ದೀನಿ ಅವನನ್ನು ಮಾತ್ರ ಸುಮ್ಮನೆ ಬಿಡಲ್ಲ ಎನ್ನುತ್ತಾನೆ. ಅವನು ಬದುಕಬಾರದು ಎನ್ನುತ್ತಾನೆ. ಗೌತಮ್ ಮಾತು ಕೇಳಿ ಸದ್ಯ ಶಕುಂತಲಾ ಆತಂಕಕ್ಕೀಡಾಗಿದ್ದು ಸಿಕ್ಕಿ ಹಾಕಿಕೊಂಡರೆ ಏನು ಮಾಡೋದು ಎಂದು ಒದ್ದಾಡುತ್ತಿದ್ದಾಳೆ.

ಜೈದೇವ್ ಮನೆಗೆ ಓಡೋಡಿ ಬರುವ ಶಕುಂತಲಾ
ಗೌತಮ್ ಮಾತು ಕೇಳಿ ಕೋಪ ಮತ್ತು ಆತಂಕದಲ್ಲಿ ಜೈದೇವ್ ಮನೆಗೆ ಶಕುಂತಲಾ ಬಂದಿದ್ದಾಳೆ. ಜೈದೇವ್ ಮೇಲೆ ಕೂಗಾಡಿದ್ದಾಳೆ. ಶಕುಂತಲಾಗೆ ಸಮಾಧಾನ ಮಾಡುವ ಜೈದೇವ್ ಪ್ಲಾನ್ ಸಕ್ಸಸ್ ಆಗಿದ್ದರೆ ಇವತ್ತು ಗೌತಮ್ ಕಣ್ಣೀರು ಹಾಕುತ್ತಿದ್ದ ಅದರ ಬಗ್ಗೆ ನೀನು ಮಾತನಾಡುವುದೇ ಇಲ್ಲ ಎನ್ನುತ್ತಾನೆ. ಫಲಿತಾಂಶವೇನು ಎನ್ನುವುದು ಯೋಚನೆ ಮಾಡದೇ ಮುನ್ನುಗ್ಗಬೇಕು ಆ ಮಲ್ಲಿ ಬರದಿದ್ದರೆ ನನ್ನ ಪ್ಲಾನ್ ಸಕ್ಸಸ್ ಆಗುತ್ತಿತ್ತು ಎಂದು ಹೇಳುತ್ತಾನೆ. ನನಗೆ ಯಾರ ಭಯ ಕೂಡ ಇಲ್ಲ ಎನ್ನುತ್ತಾನೆ.
ಆ ಮನೆಯಲ್ಲಿರುವ ಮಗುನ ಹೇಗಾದರೂ ಮಾಡಿ ಕಿಡ್ನಾಪ್ ಮಾಡಬೇಕು ಎನ್ನುತ್ತಾನೆ. ಆಗ ಶಕುಂತಲಾ ಆ ವಿಚಾರ ನಾನು ನೋಡಿಕೊಳ್ತೀನಿ ನೀನು ಸುಮ್ಮನೆ ಇರು ಎನ್ನುತ್ತಾಳೆ.
ಮಗು ಕೊಲ್ಲಲು ಮುಂದಾದ ಶಕುಂತಲಾ
ಜೈದೇವ್ ಮನೆಯಿಂದ ಮನೆಗೆ ಬರುವ ಶಕುಂತಲಾ, ಭೂಮಿಕಾ ರೂಮ್‌ಗೆ ಹೋಗಿ ಮಗುನ ಕೊಲ್ಲುವ ಪ್ರಯತ್ನ ಮಾಡುತ್ತಾಳೆ. ಸರಿಯಾದ ಸಮಯಕ್ಕೆ ಅಲ್ಲಿ ಭಾಗ್ಯಮ್ಮ ಬಂದಿದ್ದು ಶಕುಂತಲಾ ಭಾಗ್ಯಮ್ಮನ ಕತ್ತು ಹಿಸುಕಿ ನಿನ್ನನ್ನ ಯಾವತ್ತೋ ಸಾಯಿಸಬೇಕು ಎಂದುಕೊಂಡಿದ್ದೇ ಆದರೆ ಹೇಗೋ ಬದುಕಿದೆ. ಸಾಲದಕ್ಕೆ ಈ ಮನೆಗೆ ಬಂದು ಝಾಂಡಾ ಹೂಡಿದಿಯಾ, ಯಾರೇ ಬರಲಿ ಯಾರೇ ಹೋಗಲಿ ಈ ಮನೆ ಮತ್ತು ಈ ಆಸ್ತಿ ನನಗೆ ಮತ್ತು ನನ್ನ ಮಕ್ಕಳಿಗೆ ಮಾತ್ರ ಎನ್ನುತ್ತಾಳೆ. ನಿಮ್ಮನ್ನ್ಯಾರನ್ನು ಉಳಿಸುವುದಿಲ್ಲ ಈಗಾಗಲೇ ಒಂದು ಮಗುನ ಕಾಣೆ ಮಾಡಿಯಾಗಿದೆ, ಗೌತಮ್‌ಗೆ ಹುಟ್ಟಿದ್ದು ಒಂದಲ್ಲ.. ಎರಡು ಮಗು ಎಂದು ಹೇಳುತ್ತಾಳೆ. ಶಕುಂತಲಾ ಮಾತು ಕೇಳಿ ಭಾಗ್ಯಮ್ಮ ಬೆಚ್ಚಿ ಬಿದ್ದಿದ್ದಾಳೆ.


Click it and Unblock the Notifications











