Amruthadhaare; ಶಕುಂತಲಾ ಬಲೆಗೆ ಬಿದ್ದ ಭಾಗ್ಯಮ್ಮ, ಸಂದಿಗ್ಧ ಪರಿಸ್ಥಿತಿಯಲ್ಲಿ ಗೌತಮ್..!
ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ರೂಮ್‌ಗೆ ಹೋಗಿ ಮಗುನ ಕೊಲ್ಲುವ ಪ್ರಯತ್ನ ಮಾಡಿದ್ದಾಳೆ. ಸರಿಯಾದ ಸಮಯಕ್ಕೆ ಅಲ್ಲಿ ಭಾಗ್ಯಮ್ಮ ಬಂದಿದ್ದು ಶಕುಂತಲಾ ಭಾಗ್ಯಮ್ಮನ ಕತ್ತು ಹಿಸುಕಿ ನಿನ್ನನ್ನ ಯಾವತ್ತೋ ಸಾಯಿಸಬೇಕು ಎಂದುಕೊಂಡಿದ್ದೇ ಆದರೆ ಹೇಗೋ ಬದುಕಿದೆ. ಸಾಲದಕ್ಕೆ ಈ ಮನೆಗೆ ಬಂದು ಝಾಂಡಾ ಹೂಡಿದಿಯಾ, ಯಾರೇ ಬರಲಿ ಯಾರೇ ಹೋಗಲಿ ಈ ಮನೆ ಮತ್ತು ಈ ಆಸ್ತಿ ನನಗೆ ಮತ್ತು ನನ್ನ ಮಕ್ಕಳಿಗೆ ಮಾತ್ರ ಎನ್ನುತ್ತಾಳೆ.
ನಿಮ್ಮನ್ನ್ಯಾರನ್ನು ಉಳಿಸುವುದಿಲ್ಲ ಈಗಾಗಲೇ ಒಂದು ಮಗುನ ಕಾಣೆ ಮಾಡಿಯಾಗಿದೆ, ಗೌತಮ್‌ಗೆ ಹುಟ್ಟಿದ್ದು ಒಂದಲ್ಲ.. ಎರಡು ಮಗು ಎಂದು ಹೇಳಿರುವ ಶಕುಂತಲಾ, ಆ ಮಗು ತರ ಈ ಮಗುಗೂ ಒಂದು ಗತಿ ಕಾಣಿಸ್ತೀನಿ ಎಂದು ಹೇಳಿರುವ ಶಕುಂತಲಾ ಅ ನಂತರ ಗೌತಮ್‌ಗೂ ಕೂಡ ಒಂದು ಗತಿ ಕಾಣಸ್ತೀನಿ ಎಂದು ಹೇಳಿದ್ದಾಳೆ. ನಾನು ಹೆತ್ತ ಮಗುನ ಗೌತಮ್ ಹೊರ ಹಾಕಿದ ನನ್ನ ರಕ್ತ ಕುದಿಯಲ್ವಾ ಎಂದು ಹೇಳುತ್ತಾಳೆ. ನೀನೇದಾರೂ ಸರಿ ಹೋದರೆ ನೀನು ಉಳಿಯಲ್ಲ ಯಾರು ಉಳಿಯಲ್ಲ ಎಂದು ಹೇಳುತ್ತಾಳೆ. ಶಕುಂತಲಾ ಆಡಿದ ಈ ಎಲ್ಲಾ ಮಾತು ಕೇಳಿ ಭಾಗ್ಯಮ್ಮ ಬೆಚ್ಚಿ ಬಿದ್ದಿದ್ದಾಳೆ.

ಆತಂಕದಲ್ಲಿ ಭಾಗ್ಯಮ್ಮ
ಶಕುಂತಲಾ ಮಾತು ಕೇಳಿ ಭಾಗ್ಯಮ್ಮಗೆ ದಿಕ್ಕು ತೋಚದಂತಾಗದೇ ಒದ್ದಾಡುತ್ತಿದ್ದಾಳೆ. ಇದೇ ಸಮಯದಲ್ಲಿ ಸುಧಾ ಬಂದಿದ್ದು ಸುಧಾ ಯಾಕಿಷ್ಟು ಹೆದರಿಕೊಂಡಿದ್ದೀಯಾ ಏನಾಯ್ತು ಎಂದು ಕೇಳುತ್ತಾಳೆ. ನೀರು ಕುಡಿದು ಸುಧಾರಿಸಿಕೋ ಎನ್ನುತ್ತಾಳೆ. ಆದರೂ ಭಾಗ್ಯಮ್ಮ ಆತಂಕದಲ್ಲಿಯೇ ಇದ್ದಾಳೆ.
ಮಗುಗೆ ಕಾಲ್ಗೆಜ್ಜೆ ತಂದ ಗೌತಮ್
ಮತ್ತೊಂದು ಕಡೆ ಭೂಮಿಕಾಗೆ ಸರ್‌ಪ್ರೈಸ್ ನೀಡಿದ್ದಾನೆ. ಮಗುಗೆ ಬಳೆ. ಕಾಲ್ಗೆಜ್ಜೆ ತಂದಿದ್ದಾನೆ. ಗೌತಮ್‌ನ ಸರ್‌ಫ್ರೈಸ್‌ಗೆ ಭೂಮಿಕಾ ಖುಷಿಯಾಗಿದ್ದಾಳೆ. ಆದರೆ ಇದೇ ಸಮಯದಲ್ಲಿ ಇಷ್ಟೆಲ್ಲಾ ಗಂಡು ಮಗುಗೆ ಯಾರು ಅಲಂಕಾರ ಮಾಡ್ತಾರೆ, ಹೆಣ್ಣು ಮಗು ಆಗಿದ್ದರೆ ಮಾಡಬಹುದಿತ್ತು. ಗಂಡು ಮಗುಗೆ ಇಷ್ಟೆಲ್ಲಾ ಮಾಡ್ತಿದ್ದೀರಾ ಇನ್ನು ಹೆಣ್ಣು ಮಗು ಆಗಿದ್ದರೆ ಅವಳನ್ನು ಬಂಗಾರದಲ್ಲಿಯೇ ಮುಚ್ತಿದ್ದರೀ ಏನೋ ಎಂದು ಹೇಳುತ್ತಾಳೆ. ಭೂಮಿಕಾಳ ಈ ಮಾತು ಗೌತಮ್‌ನ ಭಾವುಕವಾಗಿಸಿದೆ.
ಗೌತಮ್‌ನ ಸಮಾಧಾನ ಮಾಡುವ ಭಾಗ್ಯಮ್ಮ
ಭಾವುಕಗೊಂಡ ಗೌತಮ್ ರೂಮಿನಾಚೆ ಬಂದು ಕಳೆದು ಹೋದ ಹೆಣ್ಣು ಮಗುನ ನೆನೆದು ಕಣ್ಣೀರು ಹಾಕುತ್ತಾನೆ. ಇದೇ ಸಮಯದಲ್ಲಿ ಭಾಗ್ಯಮ್ಮ ಬಂದಿದ್ದು ಗೌತಮ್‌ನ ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಸಂತೈಸುತ್ತಾಳೆ. ಭಾಗ್ಯಮ್ಮ ಮಡಿಲಿನಲ್ಲಿ ಮಲಗಿ ಗೌತಮ್ ಕಣ್ಣೀರು ಹಾಕಿದ್ದು, ಭಾಗ್ಯಮ್ಮ ಕೂಡ ಕಣ್ಣೀರಾಕುತ್ತಾಳೆ. ನಿನ್ನ ಮಡಿಲಿನಲ್ಲಿ ಯಾವಾಗಲೂ ನೆಮ್ಮದಿ, ನಿನಗೆ ಕೆಲ ವಿಷಯಗಳನ್ನು ಹೇಳಬೇಕು ಆದರೆ ನಿನಗೆ ಅರ್ಥ ಆಗಲ್ಲ ನಿನ್ನ ಮಡಿಲಿನಲ್ಲಿ ಮಲಗಿದ್ದರೆ ನನಗೇನೋ ನೆಮ್ಮದಿ ಎನ್ನುತ್ತಾನೆ.

ಶಕುಂತಲಾ ಬಲೆಗೆ ಬಿದ್ದ ಭಾಗ್ಯಮ್ಮ
ಮಗುಗೆ ಶಕುಂತಲಾ ಏನಾದರೂ ಮಾಡುತ್ತಾಳೆ ಎಂದು ಭಾಗ್ಯಮ್ಮ ಕಾವಲು ಕುಂತಿದ್ದಾಳೆ. ಇದನ್ನರಿತ ಶಕುಂತಲಾ ಬೇಕು ಬೇಕಂತಲೇ ಮಗು ಇರುವ ರೂಮ್‌ಗೆ ತೆರಳಿದ್ದಾಳೆ. ಇದನ್ನು ಕಂಡ ಭಾಗ್ಯಮ್ಮ ಆತಂಕದಲ್ಲಿ ಅಡುಗೆ ಕೋಣೆಗೆ ಬಂದು ಅಪಾಯದ ಮುನ್ಸೂಚನೆ ನೀಡುತ್ತಾಳೆ. ಭಾಗ್ಯಮ್ಮ ಹಾವ ಭಾವ ಕಂಡು ಹೆದರುವ ಭೂಮಿಕಾ ಭಯದಲ್ಲಿ ಮಗು ಬಳಿ ಓಡಿ ಹೋಗುತ್ತಾಳೆ. ಆದರೆ ಅಲ್ಲಿ ಹೋಗಿ ನೋಡಿದಾಗ ಭಾಗ್ಯಮ್ಮಗೆ ಆಘಾತವಾಗುತ್ತೆ. ಮಗುನ ಆಡಿಸುತ್ತಿರುವಂತೆ ಶಕುಂತಲಾ ನಾಟಕವಾಡುತ್ತಿರುತ್ತಾಳೆ.
ಶಕುಂತಲಾಳಿಂದ ಮಗು ಕಿತ್ತುಕೊಳ್ಳುವ ಭೂಮಿಕಾ
ಮಗು ವಿಚಾರದಲ್ಲಿ ತುಂಬಾ ಪೊಸೆಸಿವ್ ಆಗಿರುವ ಭೂಮಿಕಾ, ಶಕುಂತಲಾ ಬಳಿ ಮಗು ಕಿತ್ತುಕೊಳ್ಳುತ್ತಾಳೆ. ನನ್ನ ಮಗುನ ನಾನು ನೋಡಿಕೊಳ್ತೀನಿ ಎಂದು ಅಲ್ಲಿಂದ ಹೊರಟು ಹೋಗುತ್ತಾಳೆ. ಇದೆಲ್ಲವನ್ನು ಕಂಡು ಗೌತಮ್ ಆತಂಕಗೊಂಡಿದ್ದು, ಶಕುಂತಲಾ ಇಲ್ಲೇನು ನಡೆಯುತ್ತಿದೆ, ನಾನು ಮಗುನ ಆಡಿಸೋಕೆ ಬಂದಿದ್ದೇ ಭಾಗ್ಯಕ್ಕ ಕೂಡ ಇಲ್ಲಿಯೇ ಇದ್ದಳು ನನ್ನ ನೋಡಿ ಓಡಿ ಹೋದರು, ಈಗ ನೋಡಿದರೆ ಭೂಮಿಕಾ ನೋಡಿದರೆ ಏನೇನೋ ಮಾತನಾಡಿ ಹೋದಳು ಎನ್ನುತ್ತಾಳೆ.
ಮುಂದುವರೆದು ಅಕ್ಕ ಏನೇನೋ ಕಲ್ಪನೆ ಮಾಡಿಕೊಳ್ತಿದ್ದಾರೆ, ಅವರ ಪರಿಸ್ಥಿತಿ ಸುಧಾರಿಸಿಕೊಳ್ಳುತ್ತಿಲ್ಲ ಬದಲಿಗೆ ಇನ್ನು ಹಾಳಾಗುತ್ತಿದೆ ಕೂಡಲೇ ಡಾಕ್ಟರ್ ಬಳಿ ಅವಳನ್ನು ತೋರಿಸುವುದು ಒಳ್ಳೆಯದು ಎನ್ನುತ್ತಾಳೆ. ಭಾಗ್ಯಕ್ಕನಿಗೆ ಏನೂ ಅರ್ಥವಾಗಲ್ಲ ಆದರೆ ಭೂಮಿಕಾ.. ನನ್ನಿಂದ ಮಗುನ ಹೇಗೆ ಕಿತ್ಕೊಂಡು ಹೋದಳು ನೋಡಿದಿಯಲ್ಲ ಎನ್ನುತ್ತಾನೆ. ಶಕುಂತಲಾ.. ಭಾಗ್ಯಮ್ಮ ಮತ್ತು ಭೂಮಿಕಾ ವಿಚಾರದಲ್ಲಿ ಸಂದಿಗ್ದ ಪರಿಸ್ಥಿತಿಯಲ್ಲಿ ಗೌತಮ್ ಸಿಲುಕಿದ್ದು ಭೂಮಿಕಾ ಪರಿಸ್ಥಿತಿ ನಿಮಗೆ ಗೊತ್ತು, ಅವರು ಈ ತರ ಮಾಡಬಾರದಿತ್ತು ಎನ್ನುವುದು ನಿಜಾ ಆದರೆ ಮಗು ವಿಚಾರದಲ್ಲಿ ಭೂಮಿಕಾ ತುಂಬಾ ಪೊಸೆಸಿವ್ ಆಗಿದ್ದಾರೆ, ನಿಮ್ಮ ಮೇಲೆ ಬೇಜಾರ ಇಲ್ಲ ನೀವು ಬೇಜಾರ ಮಾಡ್ಕೋಬೇಡಿ ಎನ್ನುತ್ತಾನೆ. ಭೂಮಿಕಾ ಮತ್ತು ಮಗು ವಿಚಾರದಲ್ಲಿ ಸ್ವಲ್ಪ ಹುಷಾರಾಗಿರಿ ಎಂದು ಮನವಿಯನ್ನು ಮಾಡಿಕೊಳ್ಳುತ್ತಾನೆ.


Click it and Unblock the Notifications











