Amruthadhaare; ಪ್ರೀತಿ ವಿಚಾರ ಹೇಳಿಕೊಂಡ ಅಪ್ಪಿ; ಭೂಮಿಕಾ ವಿರೋಧಿಸಿದ್ದೇಕೆ?

By ಪೂರ್ವ

ಕೊನೆಗೂ ಅಪ್ಪಿ ತನ್ನ ಮನಸ್ಸಿನಲ್ಲಿರುವುದನ್ನು ಅಕ್ಕನ ಬಳಿ ಹೇಳಿಕೊಂಡಿದ್ದಾಳೆ. ಭೂಮಿಕಾಗೆ ಪಾರ್ಥ ಹಾಗೂ ಅಪ್ಪಿ ವಿಚಾರ ಮೊದಲೇ ತಿಳಿದಿದ್ದರೂ ಏನು ತಿಳಿಯದ ಹಾಗೆ ನಟನೆ ಮಾಡಿಕೊಂಡು ಬಂದಿದ್ದಾರೆ. ಆಕೆಗೆ ಬಹಳ ಬೇಸರ ಅಪ್ಪಿ ಹಾಗೂ ಪಾರ್ಥ ಒಟ್ಟಿಗೆ ಮದುವೆ ಆಗಿದ್ದರೆ ಎಷ್ಟು ಒಳ್ಳೆಯದಿತ್ತು ಎನ್ನುವ ಆಸೆ ಆಕೆಯ ಮನಸ್ಸಿನಲ್ಲಿ ಇತ್ತು. ಪಾರ್ಥ ಕೂಡ ಅತ್ತಿಗೆಯ ಬಳಿ ಎಲ್ಲಾ ವಿಚಾರಗಳನ್ನು ಹೇಳಿಕೊಳ್ಳುತ್ತಿದ್ದ. ಆದರೆ, ಭೂಮಿಕಾಗೆ ಶಕುಂತಲಾ ದೇವಿಯ ಮಾತಿನಿಂದಾಗಿ ಕೈ ಕಟ್ಟಿ ಹಾಕಿ ಬಿಟ್ಟಿದೆ.

ಆಕೆ ಏನು ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಪಾರ್ಥನ ಮನೆಗೆ ಹುಡುಗಿ ಕಡೆಯವರು ಬಂದಿದ್ದಾರೆ. ಆದರೆ, ಈ ವಿಚಾರ ಕೇಳಿ ಪಾರ್ಥಗೆ ಶಾಕ್ ಆಗಿದೆ. ಶಕುಂತಲಾ ದೇವಿ ತನ್ನ ಮಕ್ಕಳು ನಾನು ಹೇಳಿದ ಹಾಗೆ ಕೇಳಿಲ್ಲ. ಪಾರ್ಥ ಆದರೂ ನನ್ನ ಮಾತನ್ನ ಕೇಳುತ್ತಾನೆ ಎನ್ನುವುದು ಆಕೆಯ ಮನಸ್ಸಿನಲ್ಲಿ ಇರುತ್ತದೆ. ಅಪ್ಪಿ ಹಾಗೂ ಪಾರ್ಥ ಪ್ರೀತಿ ಬಗ್ಗೆ ಕೂಡ ಶಕುಂತಲಾ ದೇವಿಗೆ ತಿಳಿಯುತ್ತೆ. ಈ ವಿಚಾರದಲ್ಲಿ ಶಕುಂತಲಾ ದೇವಿ ಬಹಳ ಬೇಸರ ಮಾಡಿಕೊಂಡು ಇರುತ್ತಾಳೆ. ಆಕೆಗೆ ಶ್ರೀಮಂತ ಮನೆತನದ ಹುಡುಗಿಯ ಜೊತೆ ಮದುವೆ ಮಾಡಬೇಕು ಎನ್ನುವುದು ಶಕುಂತಲಾ ದೇವಿ ಕನಸಾಗಿರುತ್ತದೆ.

Amruthadhaare serial July 29th episode

ಅದೇ ರೀತಿ ಗೌತಮ್ ಬಳಿ ವಿಚಾರ ಪ್ರಸ್ತಾಪ ಆಗುತ್ತದೆ. ಗೌತಮ್ ಕೂಡ ಅದಾಗಲೇ ಪಾರ್ಥಗೆ ಮದುವೆ ಮಾಡಬೇಕು ಎನ್ನುವ ಮಾತನ್ನು ಹೇಳುತ್ತಾರೆ. ಆದರೆ, ಪಾರ್ಥ ಮಾತ್ರ ಏನು ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲ. ಆತ ಅಪ್ಪಿ ಮುಖ ನೋಡಿ ಬಹಳ ಬೇಸರ ವ್ಯಕ್ತ ಪಡಿಸಿದರೆ, ಅಪ್ಪಿಗೆ ತಾನು ಇನ್ನೂ ಕಾಲಹರಣ ಮಾಡಿದರೆ ಖಂಡಿತವಾಗಿಯೂ ಪಾರ್ಥ ನನ್ನ ಮದುವೆ ಆಗುವುದಿಲ್ಲ ಎನ್ನುವುದು ತಿಳಿಯುತ್ತದೆ.

ಪಾರ್ಥಗೆ ಮದುವೆ ನಿಶ್ಚಯ

ಪಾರ್ಥ ಜೊತೆ ಅಪ್ಪಿ ಮದುವೆ ಮಾಡಲು ಸದಾ ಶಿವ ಬಿಲ್ಕುಲ್‌ ಒಪ್ಪುವುದಿಲ್ಲ. ಯಾಕೆ? ಏನು? ಎತ್ತ? ಎನ್ನುವ ವಿಚಾರವನ್ನು ಮಾಡುತ್ತಾರೆ. ಪಾರ್ಥಗೆ ಜವಾಬ್ದಾರಿ ಇಲ್ಲ ಎನ್ನುವ ಕಾರಣಕ್ಕೆ ಆತನಿಗೆ ಈಗಾಗಲೇ ಟಾಸ್ಕ್ ನೀಡಿದ್ದಾರೆ. ಅಪ್ಪಿ ಪಡೆದುಕೊಳ್ಳಲು ಏನು ಮಾಡಬೇಕಾದರೂ ನಾನು ರೆಡಿ ಎನ್ನುವ ಮಾತನ್ನು ಆಡುತ್ತಾನೆ. ಆದರೆ, ಇದೀಗ ಮನೆಯಲ್ಲಿ ನಡೆಯುತ್ತಿರುವ ಈ ವಿಚಾರವನ್ನು ನೋಡಿ ಪಾರ್ಥಗೆ ಶಾಕ್ ಆಗಿದೆ. ಜೈ ದೇವ್ ಅಪ್ಪಿ ಹಾಗೂ ಪಾರ್ಥ ತೊಳಲಾಡುತ್ತಿರುವುದನ್ನು ನೋಡಿ ಬಹಳ ಖುಷಿ ಪಡುತ್ತಾನೆ.

Amruthadhaare serial July 29th episode

ಪಾರ್ಥ ಮುಖ ನೋಡಿ ಖುಷಿಪಟ್ಟ ಜೈದೇವ್

ನನಗೆ ಸಿಗದಿದ್ದದ್ದು ಪಾರ್ಥಗೂ ಸಿಗಬಾರದು ಎನ್ನುವ ಆಲೋಚನೆ ಆತನಿಗೆ. ಪಾರ್ಥ ನೋಡಿದ ಹುಡುಗಿ ನನಗೆ ಹುಡುಗ ಒಪ್ಪಿಗೆ ಎಂದು ಮನೆಯಲ್ಲಿ ಎಲ್ಲರೆದುರೂ ಹೇಳಿದಾಗ ಅಪ್ಪಿ ಕಣ್ಣಾಲಿಗಳು ತುಂಬಿ ಬಂದವು. ಆದರೂ, ಏನು ಮಾತನಾಡದೆ ಸುಮ್ಮನೆ ಇರುತ್ತಾರೆ. ಕೊನೆಗೆ ಭೂಮಿಕಾ ಬಳಿ ನಿಜ ವಿಚಾರ ಹೇಳಿದಾಗ, ಅಪ್ಪಿ ನೀನು ಪಾರ್ಥನ ಇಷ್ಟ ಪಡುವುದು ಸರಿಯಲ್ಲ ಎಂದು ಮನಸ್ಸಿನಲ್ಲಿ ನೋವು ಇಟ್ಟುಕೊಂಡು ಹೇಳುತ್ತಾಳೆ.


ಅಕ್ಕನ ಬಳಿ ಪ್ರೀತಿ ವಿಚಾರ ಹೇಳಿದ ಅಪ್ಪಿ

ಅಕ್ಕನ ಬಳಿ ಅಪ್ಪಿ "ಅಕ್ಕ ನೀನು ನನ್ನನ್ನು ಅರ್ಥ ಮಾಡಿಕೊಳ್ಳುತ್ತಿಯ ಎಂದು ನಿನ್ನ ಜೊತೆ ವಿಚಾರ ಎಲ್ಲಾ ಹೇಳಿದೆ. ಹೇಗಾದರೂ ಮಾಡಿ ಈ ಮದುವೆ ತಪ್ಪಿಸಿ ಬಿಡು" ಎಂದಾಗ ಭೂಮಿಕಾ ಕಡ್ಡಿ ಮುರಿದ ಹಾಗೆ ಅದು ಸಾಧ್ಯವಿಲ್ಲ ಎಂದು ಹೇಳುತ್ತಾಳೆ.

More from Filmibeat

Read more about: serial poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X