Amruthadhaare;ಶಕುಂತಲಾ ಕುತಂತ್ರಕ್ಕೆ ಭಾಗ್ಯ ಬಲಿ ? ಮಲ್ಲಿ ಎದುರು ಕಳಚಿಬಿತ್ತು ಮುಖವಾಡ !

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಡಾಕ್ಟರ್ ಮಾತುಗಳನ್ನು ಕೇಳಿ ಆತಂಕಗೊಂಡಿದ್ದಾನೆ. ಆದರೆ.. ಭೂಮಿಕಾ ಭಾಗ್ಯ ಅತ್ತೆ ಯಾರ ಮೇಲೆ ಹಲ್ಲೆ ಮಾಡಿಲ್ಲ, ಈ ವಿಚಾರ ದೊಡ್ಡದು ಮಾಡೋದು ಸರಿ ಅಲ್ಲ ಅನ್ನೋದು ನನ್ನ ಅನಿಸಿಕೆ ಎಂದು ಹೇಳಿದ್ದಾಳೆ. ಇದರ ನಡುವೆ ಜೈದೇವ್‌ಗೆ ದಿಯಾ ಇನ್ನೊಮ್ಮೆ ಹೊರಗಡೆ ಹೋಗೋಣ ಎಂದು ಕಾಡಿದ್ದು, ಜೈದೇವ್‌ ತನ್ನ ಎರಡನೇ ಹೆಂಡ್ತಿ ದಿಯಾಳನ್ನು ಕರೆದುಕೊಂಡು ಹೊರ ಬಂದಿದ್ದಾನೆ.

ಆದರೆ ದುರಾದೃಷ್ಟವಶಾತ್.. ಜೈದೇವ್‌ಗೆ ಅಲ್ಲಿಯೂ ಕೂಡ ಮಲ್ಲಿ ಎದುರಾಗಿದ್ದು, ಮಲ್ಲಿಯ ಹೊಟ್ಟೆಯನ್ನು ಉರಿಸಲು ಜೈದೇವ್ ಮತ್ತು ದಿಯಾ ಪ್ರಯತ್ನ ಮಾಡುತ್ತಾರೆ.

amruthadhaare-serial-july-31-episode-written-update

ಆದರೆ.. ಈ ಪ್ಲ್ಯಾನ್ ಕೂಡ ಉಲ್ಟಾ ಆಗಿದ್ದು ಭೂಮಿಕಾ ಸಹಾಯದಿಂದ ಜೈದೇವ್‌ ನ ಹೊಟ್ಟೆಯನ್ನು ಮಲ್ಲಿ ಉರಿಸಿದ್ದಾಳೆ. ಮಲ್ಲಿಯ ಮಾತುಗಳನ್ನು ಕೇಳಿ ಕೆರಳಿ ಕೆಂಡವಾಗಿರುವ ಜೈದೇವ್ ಬಂದು ಮಲ್ಲಿ ಹತ್ರ ಬಂದು ಪ್ರಶ್ನೆ ಮಾಡಿದ್ದು ಮಲ್ಲಿ ಸರಿಯಾದ ಉತ್ತರವನ್ನು ನೀಡಿದ್ದಾಳೆ. ನಿಮ್ಮ ಬೇಬಿಗೆ ಹೋಗಿ ಸ್ವೀಟ್ಸ್ ತಿನಿಸಿ ಎಂದು ಹೇಳಿದ್ದಾಳೆ. ಮಲ್ಲಿಯ ಮಾತನ್ನು ಕೇಳಿ ಜೈದೇವ್ ಅಲ್ಲಿಂದ ಜಾಗ ಖಾಲಿ ಮಾಡಿದ್ದಾನೆ.

ಭಾಗ್ಯಮ್ಮನ ಕೆಣಕುವ ಶಕುಂತಲಾ

ಮತ್ತೊಂದು ಕಡೆ ತನ್ನ ಪಾಡಿಗೆ ಸುಮ್ಮನೆ ಚಿಂತೆ ಮಾಡುತ್ತಾ ಕುಳಿತ ಭಾಗ್ಯಮ್ಮಳನ್ನು ಶಕುಂತಲಾ ಕೆಣಕಿದ್ದಾಳೆ. ನಾನು ಹೇಳುವ ಮಾತನ್ನು ಸರಿಯಾಗಿ ಕೇಳಿಸ್ಕೋ, ಇಷ್ಟು ದಿನ ಈ ಮನೆಗೆ ನಾನೊಬ್ಬಳೇ ಯಜಮಾನಿಯಾಗಿದ್ದೇ ಆದರೆ ಈಗ ನೀನು ಬಂದು ನನ್ನ ಪಾಲು ಕೇಳ್ತಿದ್ದೀಯಾ ಎಂದು ಶಕುಂತಲಾ ಎನ್ನುತ್ತಾಳೆ. ಇದೇ ವಿಚಾರ ನನ್ನ ಚಿಂತೆಗೆ ಕಾರಣವಾಗಿದ್ದು ನಿನ್ನಿಂದಾಗಿ ನನ್ನ ನೆಮ್ಮದಿ ಹಾಳಾಗ್ತಿದೆ ಎಂದು ಕಿಡಿ ಕಾರುತ್ತಾಳೆ. ನನ್ನ ಬುಡ ಅಲ್ಲಾಡಬಾರದು ಅಂದರೆ ನೀನು ಬದುಕಿರಬಾರದು ಎನ್ನುತ್ತಾಳೆ. ನಾನೊಂದು ಪ್ಲಾನ್ ಮಾಡಿದ್ದೀನಿ ಎಂದು ಚಾಕು ತೆಗೆಯುತ್ತಾಳೆ.

ಬೆಚ್ಚಿ ಬೀಳುವ ಭಾಗ್ಯಮ್ಮ

ಶಕುಂತಲಾಳ ಈ ವರ್ತನೆಯಿಂದ ಭಾಗ್ಯಮ್ಮ ಬೆಚ್ಚಿ ಬಿದ್ದಿದ್ದು, ಶಕುಂತಲಾ ಕಿರುಚಬೇಡ.. ಕಿರುಚಿದರೆ ಚುಚ್ಚಿ ಬಿಡ್ತೀನಿ ಎಂದು ಹೇಳುತ್ತಾ ತನ್ನ ಕೈ ಮೇಲೆ ತಾನೇ ಹಲ್ಲೆ ಮಾಡಿಕೊಳ್ಳುತ್ತಾಳೆ. ಚಾಕುವನ್ನು ಭಾಗ್ಯಮ್ಮ ಕೈಗೆ ನೀಡಿ ಗೌತಮ್, ಭೂಮಿಕಾ, ಪಾರ್ಥ ಎಂದು ಕೂಗಿಕೊಳ್ಳುತ್ತಾಳೆ. ಶಕುಂತಲಾಳ ಈ ನಡೆಯಿಂದ ಭಾಗ್ಯಮ್ಮಗೆ ದಿಕ್ಕು ತೋಚದಂತಾಗಿದ್ದು ಭಾಗ್ಯಕ್ಕ ತುಂಬಾ ವೈಲೆಂಟ್ ಆಗಿ ವರ್ತನೆ ಮಾಡ್ತಿದ್ದಾರೆ ಎಂದು ಗೌತಮ್ ಎದುರು ಶಕುಂತಲಾ ಕಣ್ಣೀರು ಹಾಕುತ್ತಾಳೆ. ನರಳುತ್ತಾಳೆ.

ಭಾಗ್ಯಮ್ಮನ ಸಮಾಧಾನ ಮಾಡುವ ಭೂಮಿಕಾ

ಶಕುಂತಲಾಳ ಈ ಪ್ಲ್ಯಾನ್‌ದಿಂದ ದಿಕ್ಕೆಟ್ಟು ಭಾಗ್ಯಮ್ಮನ್ನು ಭೂಮಿಕಾ ಸಮಾಧಾನ ಮಾಡಿದ್ದು, ನನಗೆ ಗೊತ್ತು ನೀವು ಈ ತರ ಮಾಡಲು ಸಾಧ್ಯ ಇಲ್ಲ ಎನ್ನುತ್ತಾಳೆ. ನೀವು ಮಗು ತರ, ನಿಮಗೆ ಗೊತ್ತಿಲ್ಲದೇ ಆಗಿರಬಹುದು, ನೀವ್ಯಾಕೇ ಚಾಕು ತಗೊಂಡ್ರೀ ಹೇಳಿ ಎಂದು ಪ್ರಶ್ನೆ ಕೇಳುತ್ತಾಳೆ. ಭಾಗ್ಯ ಉತ್ತರ ಹೇಳುವ ಪ್ರಯತ್ನ ಮಾಡುತ್ತಾಳಾದರೂ ಭೂಮಿಕಾಗೆ ಅರ್ಥವಾಗಲ್ಲ. ಹೀಗಾಗಿ ಒಂದಿಲ್ಲೊಂದು ದಿನ ಎಲ್ಲ ಸರಿ ಹೋಗುತ್ತೆ ಅತ್ತೆ ಎಂದು ಭೂಮಿಕಾ ಹೇಳುತ್ತಾಳೆ.

amruthadhaare-serial-july-31-episode-written-update

ಗೌತಮ್ ಮುಂದೆ ಸುಳ್ಳು ಹೇಳುವ ಶಕುಂತಲಾ

ಗೌತಮ್ ಎದುರು ಸುಳ್ಳು ಹೇಳಿ ನಾಟಕವಾಡುವ ಶಕುಂತಲಾ, ಭಾಗ್ಯಕ್ಕನ ಆಸ್ಪತ್ರೆಗೆ ಸೇರಿಸುವುದು ಒಳ್ಳೆಯದು ಎನ್ನುತ್ತಾಳೆ. ನನ್ನ ಜಾಗದಲ್ಲಿ ಮಗು ಇದ್ದಿದ್ದರೆ ಏನಾಗುತ್ತಿತ್ತು ? ನಡೆಯಬಾರದು ನಡೆದು ಹೋಗ್ತಿತ್ತು ಎಂದು ಹೇಳುತ್ತಾಳೆ. ಸ್ವಲ್ಪ ದಿನ ಮಟ್ಟಿಗೆ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡು ಎನ್ನುತ್ತಾಳೆ. ಮುಂದುವರೆದು ಮಗು ವಿಚಾರವನ್ನು ಮುಂದಿಟ್ಟುಕೊಂಡು ಎಮೋಷನಲ್ ಬ್ಲ್ಯಾಕ್ ಮೇಲ್ ಮಾಡುತ್ತಾಳೆ. ಈ ಮಗುನೂ ಕಳ್ಕೊಂಡ್ರೆ ಹೇಗೆ ಇರ್ತೀಯಾ ಎನ್ನುತ್ತಾಳೆ.

ಭಾಗ್ಯಗೆ ಮತ್ತೆ ಬೆದರಿಕೆ ಹಾಕುವ ಶಕುಂತಲಾ

ಗೌತಮ್ ಹತ್ರ ಮಾತನಾಡಿಕೊಂಡು ಬರುವ ಶಕುಂತಲಾ, ಸೀದಾ ಭಾಗ್ಯ ರೂಮ್‌ಗೆ ಬರುತ್ತಾಳೆ. ಈ ಮನೆಯಲ್ಲಿ ನಿನ್ನದು ಇದು ಕೊನೆಯ ದಿನ ಎಂದು ಹೇಳುತ್ತಾಳೆ. ಹೀಗಾಗಿ ಸ್ವಲ್ಪ ಹೊತ್ತು ಮಾತನಾಡೋಣ ಅಂತ ಬಂದೆ, ಬೆಳಗ್ಗೆ ಆಗ್ತಿದ್ದಂತೆಯೇ ಸೀದಾ ಆಸ್ಪತ್ರೆಗೆ ಅಡ್ಮಿಟ್ ಆಗ್ತೀಯಾ ಎಂದು ಹೇಳುತ್ತಾಳೆ. ನಿನ್ನ ನೋಡಿದರೆ ಅಯ್ಯೋ ಅನಸ್ತಿದೆ ಎಂದು ಹೇಳುವ ಶಕುಂತಲಾ ವಾಪಸ್ ಬಂದು ತಪ್ಪು ಮಾಡಿಬಿಟ್ಟೆ ಭಾಗ್ಯ ಮುಂದೆ ಏನೆಲ್ಲಾ ಆಗುತ್ತೆ ನೋಡ್ತೀರು ಎಂದು ಹೇಳುತ್ತಾಳೆ.

ಶಕುಂತಲಾ ಮಾತು ಕೇಳಿಸಿಕೊಳ್ಳುವ ಮಲ್ಲಿ

ಭಾಗ್ಯ ಜೊತೆ ಶಕುಂತಲಾ ಮಾತನಾಡುತ್ತಿರುವುದನ್ನು, ಬದಲಾದ ಶಕುಂತಲಾ ಹಾವ ಭಾವವನ್ನು ಮಲ್ಲಿ ನೋಡಿದ್ದಾಳೆ. ಭಾಗ್ಯ ಅತ್ತೆ ಹತ್ರ ಶಕುಂತಲಾ ಅತ್ತೆ ಏನ್ ಮಾತಾಡ್ತಿದ್ದಾರೆ, ಏನು ನಡಿತಿದೆ ಇಲ್ಲಿ ಎಂದು ಮಲ್ಲಿ ತಲೆ ಕೆಡಿಸಿಕೊಂಡಿದ್ದಾಳೆ. ಭಾಗ್ಯ ಅತ್ತೆ ಯಾಕೆ ಕೈ ಮುಗಿತಿದ್ದಾರೆ ಎಂದು ಮನದಲ್ಲಿಯೇ ಅಂದುಕೊಳ್ಳುತ್ತಾಳೆ. ಇದೇ ಸಮಯದಲ್ಲಿ ಭಾಗ್ಯ ಅಲ್ಲಿಂದ ಹೊರ ನಡೆದಿದ್ದು ಮಲ್ಲಿ ತಲೆಯಲ್ಲಿ ಹತ್ತಾರು ಪ್ರಶ್ನೆಗಳು ಸದ್ಯ ಗಿರಕಿ ಹೊಡೆಯುತ್ತಿವೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X