Amruthadhaare: ಶಕುಂತಲಾ ದೇವಿ ಮಾಸ್ಟರ್ ಪ್ಲಾನ್‌: ತಂಗಿಯಿಂದ ದೂರವಾಗುತ್ತಾಳಾ ಭೂಮಿಕಾ?

By ಪೂರ್ವ

ಭೂಮಿಕಾ ಬಳಿ ಅದೆಷ್ಟು ಬಾರಿ ಅಪ್ಪಿ ಹಾಗೂ ಪಾರ್ಥ ಗೋಗರಿದರು ಆಕೆಯ ಮನಸ್ಸಿನ ಬದಲಾಯಿಸುವುದಿಲ್ಲ. ಮನಸ್ಸಿಗೆ ಬಹಳ ನೋವಾಗುತ್ತಿದ್ದರೂ, ಏನು ಮಾಡಲಾಗದ ಸ್ಥಿತಿಯಲ್ಲಿ ಭೂಮಿಕಾ ಇರುತ್ತಾಳೆ. ತಂದೆ ಸದಾಶಿವ ಕೂಡ ಈ ಮದುವೆ ಆಗಬಾರದು ಎಂದು ಪಟ್ಟು ಹಿಡಿದಿದ್ದಾರೆ.

"ಪಾರ್ಥ ಚಿನ್ನದಂತ ಹುಡುಗ ಆದರೆ, ಈಗಾಗಲೇ ಊರಿನವರು ಸಾಕಷ್ಟು ಕೆಟ್ಟ ಮಾತುಗಳನ್ನು ಹೇಳುತ್ತಿದ್ದಾರೆ. ಇನ್ನೂ ಆ ಮಾತುಗಳನ್ನ ಕೇಳಿಸಿಕೊಳ್ಳಲು ನಾನು ರೆಡಿ ಇಲ್ಲ. ಆದ ಕಾರಣ ಶ್ರೀಮಂತ ಮನೆಯ ಸಂಬಂಧ ನಮಗೆ ಬೇಡ. ಅಪ್ಪಿನಾ ಒಳ್ಳೆ ಹುಡುಗನಿಗೆ ಕೊಟ್ಟು ನಾನು ಮದುವೆ ಮಾಡುತ್ತೇನೆ. ಆದರೆ ಅಪ್ಪಿ ಹಾಗೂ ಪಾರ್ಥ ಇಬ್ಬರೂ ಕೂಡ ಒಂದಾಗಬಾರದು" ಎಂದು ಭೂಮಿಕಾ ಜೊತೆ ಹೇಳಿದಾಗ ಭೂಮಿಗೆ ಖಂಡಿತವಾಗಲೂ ಬಹಳ ನೋವಾಗುತ್ತದೆ.

Amruthadhaare serial July 31st episode update

ಒಂದು ಕಡೆ ಅಪ್ಪಿ, ಇನ್ನೊಂದು ಕಡೆ ಪಾರ್ಥ. ಒಂದು ಕಡೆ ತಂದೆ ಮಾತು. ಇನ್ನೊಂದು ಕಡೆ ಅತ್ತೆಗೆ ಕೊಟ್ಟ ಮಾತು. ಇವೆಲ್ಲವನ್ನೂ ಉಳಿಸಿಕೊಳ್ಳಬೇಕು ಎನ್ನುವುದು ಭೂಮಿಕಾಗೆ ಮನಸ್ಸಿನಲ್ಲಿ ಇರುತ್ತೆ. ಆದರೆ ಶಕುಂತಲಾ ದೇವಿಯ ಪ್ಲಾನ್ ಬೇರೆ ಇದೆ. ಭೂಮಿಕಾನ ಎಲ್ಲರ ಎದುರು ಕೆಟ್ಟವರನ್ನಾಗಿ ಮಾಡಬೇಕು ಎನ್ನುವುದು ಶಕುಂತಲಾ ದೇವಿ ಪ್ಲಾನ್. ತನ್ನ ಮಗ ಸಂಜು ತನ್ನಿಂದ ದೂರ ಆಗುತ್ತಿದ್ದಾನೆ ಅನ್ನುವ ನೋವು ಶಕುಂತಲಾ ದೇವಿಗೆ ಇರುತ್ತದೆ. ಆದರೆ, ಅದೇ ಪಾರ್ಥನ ಬಳಿಗೆ ಬಂದು ಅಮ್ಮ ನಾನು ಅಪೇಕ್ಷಳನ್ನು ಬಹಳ ಪ್ರೀತಿ ಮಾಡುತ್ತಿದ್ದೇನೆ. ನಮ್ಮಿಬ್ಬರಿಗೆ ಮದುವೆ ಮಾಡಿಸಿ. ಇಲ್ಲವಾದರೆ ನಾನು ಖಂಡಿತವಾಗಿಯೂ ಜೀವಂತ ಇರಲಾರೆನು. ನೀನು ಹುಡುಕಿದ್ದ ಸಂಬಂಧ ನನಗೆ ಬೇಡ ಎಂದು ಪಾರ್ಥ ನೇರವಾಗಿ ತನ್ನ ತಾಯಿಯ ಬಳಿಗೆ ಬಂದು ಹೇಳುತ್ತಾನೆ.

ಇದನ್ನು ಕೇಳಿ ಶಕುಂತಲಾ ದೇವಿ "ನೀನು ಇದನ್ನೆಲ್ಲಾ ಈಗಲೇ ನನ್ನತ್ರ ಹೇಳಿದ್ದು ಒಳ್ಳೆಯದಾಯಿತು. ಇಲ್ಲವಾದರೆ ಬಹಳ ಕಷ್ಟ ಆಗುತ್ತಿತ್ತು. ನೋಡೋಣ ಏನಾದರೂ ಒಂದು ಮಾಡೋಣ" ಎಂದು ಹೇಳಿ ಅಲ್ಲಿಂದ ಹೋಗುತ್ತಾಳೆ. ಮಲ್ಲಿಕಾ ಶಕುಂತಲಾ ದೇವಿ, ಲಕ್ಷ್ಮೀ ಕಾಂತನ ಬಳಿಗೆ ಬಂದು ಹೇಳುತ್ತಾಳೆ. ಅಣ್ಣ, ನಾನು ಅಪ್ಪಿ ಹಾಗೂ ಪಾರ್ಥನ ಮದುವೆ ಮಾಡಿಸುತ್ತೇನೆ. ಈಗಾಗಲೇ ಭೂಮಿಕಾ ಈ ಮದುವೆಗೆ ಒಪ್ಪಿಗೆ ಸೂಚಿಸಿಲ್ಲ. ಆದ ಕಾರಣ ಭೂಮಿಕಾನನ್ನು ವಿಲನ್ ಮಾಡಿ ಬಿಡೋಣ ಎಂದು ಶಕುಂತಲಾ ದೇವಿ ಅಣ್ಣನ ಬಳಿ ಹೇಳುತ್ತಾಳೆ.

ಶಕುಂತಲಾ ದೇವಿ ನಿಲುವಿಗೆ ಲಕ್ಷ್ಮೀ ಕಾಂತ್ ಅಚ್ಚರಿ

ಅಣ್ಣ ಬೇಗ ನಾವು ಮಂದಾಕಿನಿ ಅವರ ಮನೆಗೆ ಹೋಗೋಣ ಅಲ್ಲಿ ಮಾತನಾಡೋಣ ಎಂದು ಹೇಳುತ್ತಾರೆ. ಇದನ್ನು ಕೇಳಿದ ಲಕ್ಷ್ಮೀಕಾಂತನಿಗೆ ಏನು ಹೇಳಬೇಕು ಎಂದು ತಿಳಿಯದಾಗುತ್ತದೆ. ಇತ್ತ ಮಂದಾಕಿನಿ ಭೂಮಿಕಾಗೆ ಕರೆ ಮಾಡಿ ಅಪ್ಪಿ ಏನು ರೆಸ್ಪಾನ್ಸ್ ಮಾಡುತ್ತಿಲ್ಲ. ಯಾಕೆ ಏನು ಎಂಬುವುದು ತಿಳಿಯುತ್ತಿಲ್ಲ. ಅಪ್ಪಿ ಇತ್ತೀಚೆಗೆ ಬಹಳ ಬೇಸರ ಮಾಡಿಕೊಂಡಿದ್ದಾಳೆ. ಯಾರ ಜೊತೆಯೂ ಮಾತನಾಡಲು ಕೂಡ ಆಕೆ ಒಪ್ಪುತ್ತಿಲ್ಲ ಎಂದು ಹೇಳುತ್ತಾನೆ.

Amruthadhaare serial July 31st episode update

ಭೂಮಿಕಾ ಜೊತೆ ಮಾತನಾಡದ ಅಪ್ಪಿ

"ಅಮ್ಮ ಆಕೆಯ ಜೊತೆ ಒಮ್ಮೆ ಫೋನ್ ಕೊಡು ನಾನು ಮಾತನಾಡುತ್ತೇನೆ" ಎಂದು ಹೇಳಿದಾಗ ಅಪ್ಪಿಗೆ ಅಕ್ಕನ ಜೊತೆ ಮಾತನಾಡಲು ಕೂಡ ಇಷ್ಟ ಆಗಲಿಲ್ಲ. "ಅಮ್ಮ ನಾನು ಯಾರ ಜೊತೆಯೂ ಮಾತನಾಡುವ ಸ್ಥಿತಿಯಲ್ಲಿ ನಾನಿಲ್ಲ" ಎಂದು ಕೊಂಚ ಜೋರಾಗಿಯೇ ಹೇಳುತ್ತಾಳೆ. ಆಕೆ ಮಾತನಾಡುತ್ತಿರುವ ಧ್ವನಿ ಭೂಮಿಕಾಗೆ ಕೇಳಿಸುತ್ತದೆ. ಇನ್ನೂ ಭೂಮಿಕಾ ಮಾತ್ರ ಏನು ಮಾತನಾಡಲಾಗದ ಪರಿಸ್ಥಿತಿಯಲ್ಲಿ ಇರುತ್ತಾಳೆ.

ನಿಜ ಹೇಳಲು ಮುಂದಾದ ಅಪ್ಪಿ

ಆಗ ಗೌತಮ್ ಬಂದು ಇನ್ನೂ ಪಾರ್ಥ, ಅಪೆಕ್ಷಾ ಕೆಂಗಣ್ಣಿಗೆ ಭೂಮಿಕಾ ಗುರಿ ಆಗಿರುವುದು ನಿಜ. ಅವರಿಬ್ಬರನ್ನು ತನ್ನೆಡೆಗೆ ಎಳೆದುಕೊಂಡು ಭೂಮಿಕಾಗೆ ಚಳಿ ಬಿಡಿಸಬೇಕು ಎನ್ನುವ ಉದ್ದೇಶ ಶಕುಂತಲಾ ದೇವಿಗೆ ಇರುತ್ತದೆ.

More from Filmibeat

English summary
Amruthadhaare serial July 31st episode update
Read more about: serial poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X