Amruthadhaare: ಇತ್ತ ಭೂಮಿಕಾ ಗೌತಮ್ ರೊಮ್ಯಾಂಟಿಕ್ ಜರ್ನಿ; ಪುಟ್ಟಕ್ಕನ ಮಗಳ ಕೈ ರುಚಿಗೆ ಫಿದಾ
ಭೂಮಿಕಾ ಜೀವನದಲ್ಲಿ ಗೌತಮ್ ಸಿಕ್ಕಿದ್ದು ಆಕೆಯ ಪಾಲಿನ ಬಹುದೊಡ್ಡ ನಿಧಿ ಎಂದರೆ ತಪ್ಪಾಗದು. ಭೂಮಿಕಾಗೆ ನೂರೆಂಟು ಕನಸುಗಳು ಆಕೆಯ ಆ ಕನಸುಗಳಿಗೆ ಕೈ ಜೋಡಿಸಿದ್ದು ಮಾತ್ರ ಆಕೆಯ ಮಾತ್ರ ಆಕೆಯ ಜೀವದ ಗೆಳೆಯ ಗೌತಮ್. ಇಷ್ಟವಿಲ್ಲದೆ ಮದುವೆ ಆದರೂ ಉತ್ತಮ ಸಂಗತಿಯಾಗಿ ಭೂಮಿಕಾ ಬಾಳಲ್ಲಿ ಬಂದಿದ್ದಾರೆ. ಭೂಮಿಕಾಗೆ ಗೌತಮ್ ಎಂದರೆ ಪ್ರಾಣ. ಈಗೀಗ ಈ ಇಬ್ಬರು ಪ್ರಣಯ ಪಕ್ಷಿಗಳು ಹೊರಗಡೆ ಸುತ್ತಾಡುತ್ತಿದ್ದಾರೆ. ಭೂಮಿಕಾ ಪ್ರೀತಿ ಮೂಡ್‌ನಲ್ಲಿ ಗೌತಮ್‌ಗೆ ಪಾರ್ಟಿ ಕೊಡುತ್ತಿದ್ದಾಳೆ.
ಗೌತಮ್ ದಿವಾನ್ ಸಿರಿವಂತ. ಆತನಿಗೆ ಇದೇನಿದು ನನ್ನ ಹೆಂಡತಿ ಮೂರು ಸಾವಿರ ರೂಪಾಯಿನಲ್ಲಿ ನನಗೆ ಏನು ತೆಗೆಸಿ ಕೊಟ್ಟಾಳು ಎನ್ನುವ ಆಲೋಚನೆ ಮೂಡಿದೆ. ಇದೀಗ ಹೊರಗಡೆ ಊಟ ಮಾಡಲು ರಾತ್ರಿಯ ಸಮಯ ಗೌತಮ್ ಹಾಗೂ ಭೂಮಿಕಾ ರಸ್ತೆ ಬದಿಯಲ್ಲಿ ಮಾರಾಟ ಮಾಡುವ ತಳ್ಳುಗಾಡಿಯ ಬಳಿಗೆ ಬಂದಿದ್ದಾರೆ. ತಳ್ಳುಗಾಡಿಯನ್ನು ನೋಡಿದ ಗೌತಮ್ ದಿವಾನ್ "ಇಲ್ಲಿ ಎಲ್ಲಾ ಯಾಕೆ ಊಟ ಮಾಡುವುದು. ನಾವು ಬೇರೆ ಎಲ್ಲಾದರೂ ಹೋಗಿ ಊಟ ಮಾಡೋಣ" ಎಂದು ಹೇಳುತ್ತಾರೆ. ಸಲಿಗೆ ಭೂಮಿಕಾ ಕರೆದುಕೊಂಡು ಬರೋದು ಪುಟ್ಟಕ್ಕನ ಮಗಳು ಸಹನಾ ಅಂಗಡಿ ಬಳಿ.

ಇದನ್ನು ಕೇಳಿದ ಭೂಮಿಕಾ "ಬೇಡ ಬೇಡ ನಾವು ಇಲ್ಲಿಯೇ ಊಟ ಮಾಡೋಣ" ಎಂದು ಹೇಳಿ ಆತನ ಮನವೊಳಿಸಿತ್ತಾಳೆ. ಭೂಮಿಕಾ ಮಾತಿಗೆ ಒಪ್ಪಿ ರಸ್ತೆ ಬದಿ ಊಟ ಮಾಡಲು ಒಪ್ಪಿಕೊಳ್ಳುತ್ತಾರೆ. ಇನ್ನೂ ಭೂಮಿಕಾ ಆ ಅಂಗಡಿ ಮಾಲೀಕಳನ್ನು ಕರೆದು ನಿಮ್ಮಿಬ್ಬರಿಗೆ ತಿನ್ನಲು ಏನಾದರು ಸ್ಪೆಷಲ್ ಇದೆಯಾ?" ಎಂದಾಗ ಸಹನಾ ಭೂಮಿಕಾಳನ್ನು ನೋಡುತ್ತಾಳೆ. ಆ ಕೂಡಲೇ ಸಹನಾ ಗೌತಮ್ ದಿವಾನ್‌ನನ್ನು ನೋಡಿ, "ನೀವು ಗೌತಮ್ ದಿವಾನ್ ಅಲ್ವಾ? ನಾನು ನಿಮ್ಮ ಬಗ್ಗೆ ಸಾಕಷ್ಟು ಕೇಳಿದ್ದೇನೆ" ಎಂದು ಹೇಳಿದಾಗ ಗೌತಮ್ ಮನದಲ್ಲಿ ಹಿರಿ ಹಿರಿ ಹಿಗ್ಗುತ್ತಾನೆ.
ರುಚಿಯಾದ ಅಡುಗೆ ಬಡಿಸಿದ ಸಹನಾ
ಸಹನಾ ಇಬ್ಬರಿಗೂ ಬಿಸಿ ಬಿಸಿ ದೋಸೆ ಕೊಡುತ್ತಾಳೆ. ಇದನ್ನು ತಿಂದ ಗೌತಮ್ "ನೀವೇ ಇಷ್ಟು ಚೆನ್ನಾಗಿ ಅಡುಗೆ ಮಾಡುತ್ತೀರಾ? ಎಂದಾದರೆ ನಿಮ್ಮ ತಾಯಿ ಇನ್ನೆಷ್ಟು ಚೆನ್ನಾಗಿ ಅಡುಗೆ ಮಾಡಬಹುದು" ಎಂದು ಹೇಳುತ್ತಾರೆ. ಇದನ್ನೆಲ್ಲ ಕೇಳಿದ ಸಹನಾ "ನಮ್ಮ ಅಮ್ಮ ಬಹಳ ಅದ್ಭುತವಾಗಿ ಅಡುಗೆ ಮಾಡುತ್ತಾರೆ. ಆಕೆಯಿಂದಾಗಿ ನಾನು ಇಷ್ಟೆಲ್ಲ ಅಡುಗೆ ಮಾಡಲು ಕಲಿತಿರುವೆ" ಎಂದು ಹೇಳುತ್ತಾಳೆ.

ಸಹನಾ ಅಡುಗೆ ತಿಂದು ಖುಷಿಪಟ್ಟ ಗೌತಮ್
ರಸ್ತೆ ಬದಿಯ ಊಟ ಚೆನ್ನಾಗಿ ಇರುವುದಿಲ್ಲ ಎಂದು ಹೇಳುತ್ತಿದ್ದ ಗೌತಮ್ ಬಾಯಿ ಚಪ್ಪರಿಸಿಕೊಂಡು ಊಟ ಮಾಡುತ್ತಿದ್ದಾರೆ. ಇದನ್ನು ನೋಡಿ ಸಹನಾಗೆ ಖುಷಿ ಆಗುತ್ತದೆ. ಕೊನೆಗೆ ಅವರಿಬ್ಬರೂ ಹೊರಡುವ ವೇಳೆ ಇಬ್ಬರ ಕೈಯಿಂದಲು ಸಹನಾ ಸೆಲ್ಫಿ ತೆಗೆದುಕೊಂಡು ಕಳುಹಿಸುತ್ತಾಳೆ. ಇತ್ತ ಪಾರ್ಥ ಬಹಳ ಬೇಸರಗೊಂಡ ಇರುತ್ತಾನೆ. ಜೈದೇವ್‌ನ ತಂತ್ರ ಫಲಿಸಿದೆ. ಅಪ್ಪಿ ಹಾಗೂ ಪಾರ್ಥನನ್ನು ದೂರ ದೂರ ಮಾಡಿದೆ. ಭೂಮಿಕಾ ಈ ಮುಂಚೆಯೇ ಪಾರ್ಥ ಹಾಗೂ ಅಪ್ಪಿಗೆ ಷರತ್ತು ಹಾಕಿದ್ದಳು .
ಅಪ್ಪಿ ನೆನೆದು ಕೊರಾಗುತ್ತಿರುವ ಪಾರ್ಥ
"ಅಪ್ಪಿಯನ್ನು ನೀನು ಇನ್ನೂ ಆಗಾಗ ಮೀಟ್ ಆಗಬಾರದು. ನೀವು ಇಬ್ಬರು ಮೈ ಮರೆತು ಮಾತನಾಡಿಕೊಂಡಿರಬಾರದು" ಎಂದು ಭೂಮಿಕಾ ಹೇಳಿರುತ್ತಾಳೆ. ಆದರೆ, ಆಕೆಯ ಮಾತಿಗೆ ಕೊಂಚವೂ ಮರ್ಯಾದೆ ಕೊಡದೆ ಇಬ್ಬರು ಪರಸ್ಪರ ಮಾತನಾಡಿಕೊಂಡು ಇರುತ್ತಾರೆ. ಇದನ್ನು ಭೂಮಿಕಾ ತಂದೆ ನೋಡಿ ಮತ್ತಷ್ಟು ಕೋಪ ಮಾಡಿಕೊಂಡು ಇರುತ್ತಾರೆ. ಅಪೇಕ್ಷ ಕೆನ್ನೆಗೆ ಹೊಡೆದು ಬುದ್ದಿ ಮಾತು ಹೇಳಿ ಆಕೆಯನ್ನು ಮನೆಗೆ ಕರೆದುಕೊಂಡು ಹೋಗುತ್ತಾರೆ. ಇತ್ತ ಪಾರ್ಥಗೆ ಏನು ಮಾಡಬೇಕು ಎಂದು ತಿಳಿಯದೇ ಕಂಗಾಲಾಗಿರುತ್ತಾನೆ. ಪಾರ್ಥ ಇರುವಲ್ಲಿಗೆ ಬಂದ ಜೈ ದೇವ್ "ಏನಾಯಿತು? ಪಾರ್ಥ ಯಾಕೆ ಹೀಗೆ ಮಂಕಾಗಿದ್ದಿಯಾ?" ಎಂದಾಗ ಪಾರ್ಥ ಹಾಗೇನಿಲ್ಲ ಅಣ್ಣ ಸುಮ್ಮನೆ ಕುಳಿತಿದ್ದೆ. ಹಾಗೇನಾದರೂ ಇದ್ದರೆ ನಾನು ನಿನ್ನ ಬಳಿ ಹೇಳುತ್ತಿದ್ದೆ ಎಂದು ಹೇಳಿದಾಗ ಜೈದೇವ್‌ಗೆ ಒಳಗೊಳಗೆ ನಗು.


Click it and Unblock the Notifications











