Amruthadhaare ; ಫ್ಲಾಪ್ ಆಯ್ತು ಶಕುಂತಲಾ ಪ್ಲಾನ್, ಸತ್ಯ ಬಾಯಿ ಬಿಡ್ತಾಳಾ ಭಾಗ್ಯಮ್ಮ ?
ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಸೀಮಂತ ಕಾರ್ಯಕ್ರಮಕ್ಕೆ ಗೌತಮ್ ಒಪ್ಪಿಗೆ ನೀಡಿದ್ದಾನೆ. ಮತ್ತೊಂದು ಕಡೆ ಗೌತಮ್ ಇನ್ನೂ ಭೂಮಿಗೆ ಬಾರದ ಮಗು ಹೆಸರಿನಲ್ಲಿ ತನ್ನ ಬಹುತೇಕ ಆಸ್ತಿಯನ್ನು ನೀಡಿದ್ದಕ್ಕೆ ಶಕುಂತಲಾ ಮತ್ತು ಜೈದೇವ್ ಕೊತ ಕೊತ ಕುದಿಯುತ್ತಿದ್ದಾರೆ. ಭೂಮಿಕಾ ಹೊಟ್ಟೆಯಲ್ಲಿರುವ ಮಗು ಪ್ರಾಣ ತೆಗೆಯಲು ಸ್ಕೆಚ್ ಹಾಕಿದ್ದಾರೆ.
ಎಣ್ಣೆ ಸುರಿದ ಶಕುಂತಲಾ
ಭೂಮಿಕಾ ದೇವರು ಮನೆಗೆ ಬರುವ ದಾರಿಯಲ್ಲಿ, ಶಕುಂತಲಾ ಎಣ್ಣೆ ಚೆಲ್ಲಿದ್ದಾಳೆ. ಭೂಮಿಕಾ ಎಣ್ಣೆಯ ಮೇಲೆ ಕಾಲಿಡ್ತಾಳೆ ಅಲ್ಲಿಗೆ ಖೇಲ್ ಖತಂ ನಾಟಕ್ ಬಂದ್ ಎಂದು ಲೆಕ್ಕಾಚಾರ ಹಾಕಿ ಹೊರಗಡೆ ವಾಕಿಂಗ್ ಮಾಡುವ ನಾಟಕ ಮಾಡುತ್ತಾಳೆ.

ಭೂಮಿಗೆ ಭಾಗ್ಯಮ್ಮನೇ ಕಾವಲು
ಭೂಮಿಕಾ ದೇವರ ಮನೆಯತ್ತ ಹೆಜ್ಜೆ ಹಾಕಿದ್ದಾಳೆ. ಇನ್ನೇನು ಭೂಮಿಕಾ ಎಣ್ಣೆಯ ಮೇಲೆ ಕಾಲಿಡಬೇಕು ಅಷ್ಟರಲ್ಲಿ ಭಾಗ್ಯಮ್ಮ ಬಂದು ಭೂಮಿಕಾಳನ್ನು ಕಾಪಾಡಿದ್ದಾಳೆ.
ಎಣ್ಣೆ ಕಂಡು ಗಾಬರಿಯಾದ ಭೂಮಿಕಾ
ಭಾಗ್ಯಮ್ಮನ ವರ್ತನೆಯಿಂದ ಗಲಿಬಿಲಿಗೊಳಗಾಗುವ ಭೂಮಿಕಾ ಏನಾಯ್ತು ಅತ್ತೆ ಎಂದು ಕೇಳುತ್ತಾಳೆ. ನಾನು ಪೂಜೆ ಮಾಡಬೇಕು ಮಾಡದೇ ಇದ್ದರೆ ನನಗೆ ಸಮಾಧಾನ ಆಗಲ್ಲ ಎನ್ನುತ್ತಾಳೆ. ಆಗ ಸಂಜ್ಞೆಯ ಮೂಲಕ ಎಣ್ಣೆ ಬಿದ್ದಿರುವುದನ್ನು ತೋರಿಸುತ್ತಾಳೆ. ಎಣ್ಣೆ ಕಂಡು ಗಾಬರಿಯಾಗುವ ಭೂಮಿಕಾ ಎಣ್ಣೆ ಎಲ್ಲಿಂದ ಬಂತು ಎಂದು ಪ್ರಶ್ನೆ ಕೇಳುತ್ತಾಳೆ. ಎಣ್ಣೆ ಚೆಲ್ಲಿದೆ ಎಂದು ನಿಮಗೆ ಹೇಗೆ ಗೊತ್ತಾಯ್ತು ಎಂದು ಪ್ರಶ್ನೆ ಮಾಡುತ್ತಾಳೆ.
ಬಾಯಿ ಬಿಡ್ತಾಳಾ ಭಾಗ್ಯಮ್ಮ ?
ಶಕುಂತಲಾ ಬೆದರಿಕೆಗೆ ಬೆದರಿರುವ ಭಾಗ್ಯಮ್ಮ, ಭೂಮಿಕಾ ಎಷ್ಟೇ ಕೇಳಿದರೂ ಬಾಯಿ ಬಿಡುವುದಿಲ್ಲ. ಬದಲಿಗೆ ಶಕುಂತಲಾಳನ್ನು ನೆನೆದು ಸುಮ್ಮನಾಗುತ್ತಾಳೆ. ಅತ್ತೆ ಎಣ್ಣೆ ನಿಮ್ಮಿಂದ ಚೆಲ್ತಾ ಎಂದು ಕೂಡ ಭೂಮಿಕಾ ಕೇಳಿದರು ಭಾಗ್ಯಮ್ಮ ಬಾಯಿ ಬಿಡುವುದಿಲ್ಲ. ಬದಲಿಗೆ ಎಂದಿನಂತೆ ಮೌನವನ್ನೇ ವಹಿಸುತ್ತಾಳೆ. ಅಲ್ಲಿಂದ ಹೊರಟು ಹೋಗುತ್ತಾಳೆ. ಭಾಗ್ಯಮ್ಮ ಏನೂ ಹೇಳದೇ ಹೋದ ಕಾರಣದಿಂದ ಸದ್ಯ ಭೂಮಿಕಾ ತಲೆಯಲ್ಲಿ ಹತ್ತಾರು ಪ್ರಶ್ನೆಗಳು ಗಿರಕಿ ಹೊಡೆಯುತ್ತಿವೆ.
ಬಿದ್ದಿರುವ ಸೌಂಡೇ ಬರಲಿಲ್ಲ
ಹೊರಗಡೆ ಶಕುಂತಲಾ ಒಳಗಡೆ ಭೂಮಿಕಾ ಬೀಳುತ್ತಾಳೆ ಎಂದು ಕಾಯುತ್ತಿದ್ದಾಳೆ. ಆದರೆ, ಒಳಗಡೆಯಿಂದ ಯಾವುದೇ ಸೌಂಡ್ ಬರುವುದಿಲ್ಲ. ಆಗ ಶಕುಂತಲಾ ಅಣ್ಣ ಒಳಗಡೆ ಏನಾಯ್ತು ಎಂದು ನೋಡಲು ಹೋಗುತ್ತಾನೆ. ಭೂಮಿಕಾ ಹೆಜ್ಜೆ ಗುರುತು ಕಾಣದೇ ಆಶ್ಚರ್ಯಕ್ಕೊಳಗಾಗುತ್ತಾನೆ. ಪೂಜೆ ಮಾಡೋಕೆ ಬರಲೇ ಇಲ್ವಾ ಎಂದು ಅಂದುಕೊಳ್ಳುತ್ತಾನೆ. ಎಣ್ಣೆಯ ಮೇಲೆ ತಾನೇ ಕಾಲಿಡುವ ಮೂಲಕ ತಾನು ತೋಡಿದ ಖೆಡ್ಡಾಗೆ ತಾನೇ ಬೀಳುತ್ತಾನೆ.
ಅಣ್ಣನ ಪರಿಸ್ಥಿತಿ ಕಂಡು ಶಾಕ್ ಆಗುವ ಶಕುಂತಲಾ
ಕುಂಟುತ್ತಾ ಬಂದ ಅಣ್ಣನನ್ನು ಕಂಡು ಶಕುಂತಲಾ ಶಾಕ್ ಆಗುತ್ತಾಳೆ. ಏನಾಯ್ತು ಎಂದು ಕೇಳುತ್ತಾಳೆ. ಆಗ ಅಣ್ಣ ಭೂಮಿಕಾ ಪೂಜೆಗೆ ಬರಲೇ ಇಲ್ಲ ಪೂಜೆ ಕ್ಯಾನ್ಸಲ್ ಮಾಡಿದಾಳೆ ಎಂದು ಹೇಳುತ್ತಾನೆ. ಅವಳಿಗೋಸ್ಕರ ಹಾಕಿದ ಎಣ್ಣೆಯ ಮೇಲೆ ನಾನೇ ಕಾಲಿಟ್ಟು ಕೆಳಗೆ ಬಿದ್ದೇ ಎಂದು ಹೇಳುತ್ತಾನೆ. ಆಗ ಶಕುಂತಲಾ ಹಣೆ ಹಣೆ ಚಚ್ಚಿಕೊಳ್ಳುತ್ತಾಳೆ. ಆಗ ನಮ್ಮ ಟೈಮೇ ಸರಿ ಇಲ್ಲ ಬಿಡು ಎಂದು ಶಕುಂತಲಾಗೆ ಅಣ್ಣ ಹೇಳುತ್ತಾನೆ.
ಸದ್ಯ ಶಕುಂತಲಾ ಪ್ಲಾನ್ ಫ್ಲಾಪ್ ಆಗಿದೆ. ಆದರೆ ಭೂಮಿಕಾಗೆ ಅಪಾಯ ತಪ್ಪಿದ್ದಲ್ಲ. ಮುಂದೆ ಶಕುಂತಲಾ ಆಸ್ತಿಗೋಸ್ಕರ ಇನ್ಯಾವ ಪ್ಲಾನ್ ಮಾಡುತ್ತಾಳೆ, ಭೂಮಿಕಾ ಎಲ್ಲಿಯವರೆಗೆ ಶಕುಂತಲಾ ಹೆಣೆಯುವ ಜಾಲದಿಂದ ಪಾರಾಗುತ್ತಾ ಬರುತ್ತಾಳೆ ಎನ್ನುವುದನ್ನು ಸದ್ಯ ಕಾದು ನೋಡಬೇಕಿದೆ. ಅಮೃತಧಾರೆ ಧಾರಾವಾಹಿ ದಿನದಿಂದ ದಿನಕ್ಕೆ ಈ ಮೂಲಕ ಕುತೂಹಲ ಕೆರಳಿಸುವಲ್ಲಿ ಯಶಸ್ವಿಯಾಗುತ್ತಿದೆ.


Click it and Unblock the Notifications











