Amruthadhaare ; ಅಂತೂ ಇಂತೂ ಕೊನೆಗೂ ಕನಕದುರ್ಗದ ರಹಸ್ಯವನ್ನು ಭೂಮಿಕಾಗೆ ಹೇಳಿದ ಆನಂದ್, ಮುಂದೇನು ?

ಅಮೃತಧಾರೆ ಧಾರಾವಾಹಿಯಲ್ಲಿ ಸದ್ಯ ಭೂಮಿಕಾ ಸೀಮಂತ ಸಂಭ್ರಮ ನಡೆಯುತ್ತಿದೆ. ಹಾಲ್‌ನಲ್ಲಿ ತನ್ನ ಮುದ್ದಿನ ಹೆಂಡ್ತಿಯ ಸೀಮಂತ ಮಾಡದ ಗೌತಮ್ ದೇವಸ್ಥಾನದಲ್ಲಿ ಸೀಮಂತ ಕಾರ್ಯಕ್ರಮ ಮಾಡುತ್ತಿದ್ದಾನೆ. ಈ ಹಿನ್ನೆಲೆ ಮನೆಯ ದೇವರಿಗೆ ಕೈ ಮುಗಿದ ಭೂಮಿಕಾ ಮತ್ತು ಗೌತಮ್ ದೇವಸ್ಥಾನದತ್ತ ಹೊರಡಲು ಮುಂದಾಗುತ್ತಾರೆ. ಆದರೆ ಅದಕ್ಕೂ ಮೊದಲು ಅಮ್ಮನ ಆಶೀರ್ವಾದ ಪಡೆಯುವಂತೆ ಭೂಮಿಕಾಗೆ ಗೌತಮ್ ಹೇಳುತ್ತಾನೆ.

ಗೌತಮ್ ಆಡಿದ ಈ ಮಾತುಗಳಿಗೆ ತಬ್ಬಿಬ್ಬಾಗುವ ಶಕುಂತಲಾ ಪರವಾಗಿಲ್ಲ ಗೌತಮ್ ದೇವರ ಆಶೀರ್ವಾದ ಇದ್ದರೆ ಸಾಕು ಎನ್ನುತ್ತಾಳೆ. ಆಗ ನಮಗೆ ಯಾರು ಒಳ್ಳೆಯದು ಬಯಸುತ್ತಾರೋ ಅವರ ಆಶಿರ್ವಾದ ಕೂಡ ಮುಖ್ಯವಾಗುತ್ತೆ ಎಂದು ಹೇಳುತ್ತಾನೆ. ಆ ನಂತರ ಭೂಮಿಕಾ ಆಶೀರ್ವಾದ ಪಡೆಯಲು ಬಾಗಿದಾಗ ಇರಲಿ ಈ ಟೈಮ್‌ನಲ್ಲಿ ಕುಳಿತು ಎದ್ದು ಮಾಡಬಾರದು ಎಂದು ಶಕುಂತಲಾ ಹೇಳುತ್ತಾಳೆ.

amruthadhaare-serial-june-13-episode-written-update

ಮುಂದುವರೆದು ನನ್ನ ಆಶೀರ್ವಾದ ಯಾವತ್ತು ನಿನ್ನ ಮೇಲಿರುತ್ತೆ ಎನ್ನುತ್ತಾಳೆ. ಇದಕ್ಕೆ ಭೂಮಿಕಾ ನಾನಂದ್ರೆ ನಿಮಗೆ ಎಷ್ಟು ಇಷ್ಟ ಅನ್ನೋದು ನನಗೆ ಗೊತ್ತು ಅತ್ತೆ ಎಂದು ಮಾರ್ಮಿಕವಾಗಿ ಹೇಳುತ್ತಾಳೆ. ಆ ನಂತರ ಯಾವದಾದರೂ ಹಾಲ್‌ನಲ್ಲಿ ಸೀಮಂತ ಕಾರ್ಯಕ್ರಮ ಮಾಡಿದ್ದರೆ ಅವಳು ಉಳಿಯುತ್ತಿದ್ದಳು ಆದರೆ ದೇವಸ್ಥಾನದಲ್ಲಿ ಸೀಮಂತ ಕಾರ್ಯಕ್ರಮ ಮಾಡ್ತಿದ್ದಾನೆ, ಇವತ್ತು ನಡೆಯುವುದು ಸೀಮಂತ ಅಲ್ಲ ಅವಳ ತಿಥಿ ಎಂದು ಮನದಲ್ಲಿಯೇ ಅಂದುಕೊಳ್ಳುತ್ತಾಳೆ.

ಸೀಮಂತ ಕಾರ್ಯಕ್ರಮಕ್ಕೆ ಗೈರಾದ ಭಾಗ್ಯಮ್ಮ

ಸೀಮಂತ ಕಾರ್ಯಕ್ರಮಕ್ಕೆ ಭೂಮಿಕಾ ಕಡೆಯ ಮನೆಯವರು ಆಗಲೇ ದೇವಸ್ಥಾನಕ್ಕೆ ಬಂದಿದ್ದಾರೆ. ಈ ಕಡೆ ಭೂಮಿಕಾಳನ್ನು ಕರೆದುಕೊಂಡು ಗೌತಮ್ ಕೂಡ ಬಂದಿದ್ದಾನೆ. ಆನಂದ್ ಕೂಡ ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದಾನೆ. ಆದರೆ ಭಾಗ್ಯಮ್ಮ ಮಾತ್ರ ಕಾಣಿಸುವುದಿಲ್ಲ. ಈ ಬಗ್ಗೆ ಕೇಳಿದಾಗ ಅಮ್ಮನಿಗೆ ಹುಷಾರಿಲ್ಲ, ಸುಧಾ ಮನೆಯಲ್ಲಿ ನೋಡಿಕೊಳ್ಳುತ್ತಿದ್ದಾಳೆ ಎನ್ನುತ್ತಾನೆ. ನಾವು ಅವರ ಆಶೀರ್ವಾದ ಪಡೆದುಕೊಂಡೇ ಇಲ್ಲಿಗೆ ಬಂದಿದ್ದೀವಿ ಎಂದು ಹೇಳುತ್ತಾನೆ. ಆಗ ಭೂಮಿಕಾ ತಂದೆ ಓ ಹಂಗಾದ್ರೆ ಸರಿ ಒಟ್ನಲ್ಲಿ ಭಾಗ್ಯಕ್ಕ ಆಶೀರ್ವಾದ ಸಿಕ್ಕಿದ್ದರೆ ಸಾಕು ಎನ್ನುತ್ತಾರೆ.

ಅತ್ತಿಗೆಯನ್ನು ಕರೆದುಕೊಂಡು ಬರಲು ಅಪರ್ಣಾಗೆ ಹೇಳುವ ಆನಂದ್

ಸ್ವಲ್ಪ ತಮಾಷೆ ಸನ್ನಿವೇಶಗಳ ನಂತರ ಎಲ್ಲರೂ ದೇವಸ್ಥಾನದೊಳಗೆ ಹೋಗುವಾಗ, ಅಪರ್ಣಾ ಬಳಿ ಬರುವ ಆನಂದ್, ಭೂಮಿಕಾ ಅತ್ತಿಗೆಯನ್ನು ಪ್ರತೈಕವಾಗಿ ಕರೆದುಕೊಂಡು ಬರುವಂತೆ ಹೇಳಿ ಜಾಗ ತೋರಿಸುತ್ತಾನೆ. ಅಪರ್ಣಾ ಯಾಕೆ ಎಂದು ಪ್ರಶ್ನೆ ಕೇಳಿದರೂ ನಾನು ಆಮೇಲೆ ಹೇಳ್ತೀನಿ ಮೊದಲು ಕರ್ಕೊಂಡು ಬಾ ಎನ್ನುತ್ತಾನೆ. ಬೇರೆ ವಿಧಿ ಇಲ್ಲದೇ ಅಪರ್ಣಾ ಸರಿ ಎಂದು ಹೊರಡುತ್ತಾಳೆ.

ಕನಕದುರ್ಗದ ರಹಸ್ಯವನ್ನು ಕೊನೆಗೂ ಹೇಳಿದ ಆನಂದ್

ದೇವಸ್ಥಾನದಲ್ಲಿ ಭೂಮಿಕಾಗೆ ಆನಂದ್ ಕೊನೆಗೂ ಕನಕದುರ್ಗದ ರಹಸ್ಯ ಹೇಳಿದ್ದಾನೆ. ನಿಮ್ಮಿಂದ ಒಂದು ವಿಷಯ ಮುಚ್ಚಿಟ್ಟಿದ್ದೇ ಈ ವಿಷಯ ತುಂಬಾನೇ ಶಾಕಿಂಗ್ ಎಂದು ಪೀಠಿಕೆ ಹಾಕುವ ಆನಂದ್ ಕನಕದುರ್ಗದಲ್ಲಿ ಆಗಿದ್ದೇ ಬೇರೆ ನಾನು ನಿಮಗೆ ಹೇಳಿದ್ದೇ ಬೇರೆ ಎನ್ನುತ್ತಾನೆ. ನಂಜಮ್ಮನ ಕುಡುಕ ಗಂಡ ತನ್ನೆದುರು ಹೇಳಿದ ವಿಚಾರವನ್ನೆಲ್ಲ ಭೂಮಿಕಾಗೆ ಆನಂದ್ ಹೇಳುತ್ತಾನೆ.

ಆನಂದ್ ಮಾತು ಕೇಳಿ ಗಾಬರಿಯಾಗುವ ಭೂಮಿಕಾ

ಆನಂದ್ ಮಾತುಗಳನ್ನು ಕೇಳಿ ಭೂಮಿಕಾಗೆ ಗರ ಬಡಿದಂತಾಗುತ್ತೆ. ಅವತ್ತೇ ಇದೆಲ್ಲ ಯಾಕೆ ಹೇಳಲಿಲ್ಲ ಆನಂದ್ ಅವರೇ ಎಂದು ತರಾಟೆಗೆ ತೆಗೆದುಕೊಳ್ಳುತ್ತಾಳೆ. ಸಾಕ್ಷಿ ಸಿಕ್ಕಿಲ್ಲ ಎಂದು ಸುಳ್ಳು ಯಾಕೆ ಹೇಳಿದ್ರೀ ಎಂದು ಪ್ರಶ್ನೆ ಮಾಡುತ್ತಾಳೆ. ಆಗ ಆನಂದ್ ಅವತ್ತು ನನ್ನ ಪರಿಸ್ಥಿತಿ ಸರಿ ಇರಲಿಲ್ಲ ನಾನು ಹೇಳಿದರೆ ನೀವೆಲ್ಲ ಮತ್ತೆ ಎಲ್ಲಿ ಇನ್ನೂ ಟೆನ್ಷನ್ ಮಾಡಿಕೊಳ್ತೀರಾ ಎನ್ನುವ ಭಯದಲ್ಲಿ ನಾನು ಹೇಳಲಿಲ್ಲ ಎನ್ನುತ್ತಾನೆ. ನನ್ನ ಮೇಲೆ ಹಲ್ಲೆ ಮಾಡಿಸಿದ್ದು ಇವ್ರೇನೇ ಎಂದು ಕೂಡ ಹೇಳುತ್ತಾನೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X