Amruthadhaare ; ಶಕುಂತಲಾ ವಿರುದ್ಧದ ಮಹತ್ವದ ಸಾಕ್ಷಿ ಭೂಮಿಕಾ ಕೈ ಸೇರುತ್ತಾ ?
ಅಮೃತಧಾರೆ ಧಾರಾವಾಹಿಯಲ್ಲಿ ಕನಕದುರ್ಗದ ರಹಸ್ಯವನ್ನು ಭೂಮಿಕಾಗೆ ಆನಂದ್ ಹೇಳಿದ್ದಾನೆ. ನಿಮ್ಮಿಂದ ಒಂದು ವಿಷಯ ಮುಚ್ಚಿಟ್ಟಿದ್ದೇ ಈ ವಿಷಯ ತುಂಬಾನೇ ಶಾಕಿಂಗ್ ಎಂದು ಪೀಠಿಕೆ ಹಾಕುವ ಆನಂದ್ ಕನಕದುರ್ಗದಲ್ಲಿ ಆಗಿದ್ದೇ ಬೇರೆ ನಾನು ನಿಮಗೆ ಹೇಳಿದ್ದೇ ಬೇರೆ ಎನ್ನುತ್ತಾನೆ. ನಂಜಮ್ಮನ ಕುಡುಕ ಗಂಡ ತನ್ನೆದುರು ಹೇಳಿದ ವಿಚಾರವನ್ನೆಲ್ಲ ಭೂಮಿಕಾಗೆ ಆನಂದ್ ಹೇಳಿದ್ದಾನೆ. ಆನಂದ್ ಆಡಿದ ಈ ಮಾತುಗಳಿಂದ..
ಭೂಮಿಕಾ ಶಾಕ್ ಆಗಿದ್ದು ಅವತ್ತೇ ಇದೆಲ್ಲ ಯಾಕೆ ಹೇಳಲಿಲ್ಲ ಆನಂದ್ ಅವರೇ ಎಂದು ತರಾಟೆಗೆ ತೆಗೆದುಕೊಳ್ಳುತ್ತಾಳೆ. ಸಾಕ್ಷಿ ಸಿಕ್ಕಿಲ್ಲ ಎಂದು ಸುಳ್ಳು ಯಾಕೆ ಹೇಳಿದ್ರೀ ಎಂದು ಪ್ರಶ್ನೆ ಮಾಡುತ್ತಾಳೆ.ಆಗ ಆನಂದ್ ಅವತ್ತು ನನ್ನ ಪರಿಸ್ಥಿತಿ ಸರಿ ಇರಲಿಲ್ಲ ನಾನು ಹೇಳಿದರೆ ನೀವೆಲ್ಲ ಮತ್ತೆ ಎಲ್ಲಿ ಇನ್ನೂ ಟೆನ್ಷನ್ ಮಾಡಿಕೊಳ್ತೀರಾ ಎನ್ನುವ ಭಯದಲ್ಲಿ ನಾನು ಹೇಳಲಿಲ್ಲ ಎನ್ನುತ್ತಾನೆ. ನನ್ನ ಮೇಲೆ ಹಲ್ಲೆ ಮಾಡಿಸಿದ್ದು ಇವ್ರೇನೇ ಎಂದು ಕೂಡ ಹೇಳುತ್ತಾನೆ.

ಜಾತಕ ಹುಡುಕಿರುವ ಆನಂದ್
ನಂಜಮ್ಮ ನಡೆಯ ಮೇಲೆ ತನಗಿರುವ ಅನುಮಾನ ವ್ಯಕ್ತಪಡಿಸುವ ಆನಂದ್, ನನ್ನ ಮೇಲೆ ಹಲ್ಲೆ ನಡೆದಾಗ ನಂಜಮ್ಮ ಅಲ್ಲಿಯೇ ಇದ್ದಳು ಎನ್ನುತ್ತಾನೆ. ನನ್ನ ಮೇಲೆ ಹಲ್ಲೆ ಆದಾಗ ಇವ್ರದ್ದೇ ಕೈವಾಡ ಇರಬಹುದು ಎನ್ನುವ ಅನುಮಾನ ನನಗೆ ಇತ್ತು ಎಂದು ಹೇಳುತ್ತಾನೆ. ಹೀಗಾಗಿ ನನಗೆ ಪರಿಚಯ ಇರುವ ನಿವೃತ್ತ ಪೊಲೀಸ್ ಅಧಿಕಾರಿಗೆ ಹೇಳಿ ನಾನು ಲಕ್ಷ್ಮೀಕಾಂತ್ ಅವರ ಮೇಲಾಗಿರುವ ಎಫ್‌ಐಆರ್ ಪ್ರತಿ ಹುಡುಕೋಕೆ ಹೇಳಿದ್ದೇ, ಅವರು ಈಗ ಆ ಪ್ರತಿಯನ್ನು ಹುಡುಕಿಸಿದ್ದಾರೆ ಎಂದು ಹೇಳುತ್ತಾನೆ. ಅದರಲ್ಲಿ ಇವರದ್ದು ಟೋಟಲ್ ಜಾತಕ ಇದೆ ಎಂದು ಹೇಳುತ್ತಾನೆ.
ಎಫ್‌ಐಆರ್ ಜೊತೆ ಫೋಟೊ ಕೂಡ ಕೈ ಸೇರುತ್ತಾ ?
ಮುಂದುವರೆದು ಎಫ್‌ಐಆರ್ ಪ್ರತಿ ಮಾತ್ರ ಅಲ್ಲ ಅವರ ಫೋಟೋ ಕೂಡ ನಮ್ಮ ಕೈ ಸೇರುತ್ತೆ, ಇಲ್ಲಿಯೇ ಬಂದು ಕೊಡುತ್ತಾರೆ ಎಂದು ಆನಂದ್, ಭೂಮಿಕಾಗೆ ಹೇಳುತ್ತಾನೆ. ಆ ದಾಖಲೆಗಳೆಲ್ಲ ಬಂದು ನಮ್ಮ ಕೈ ಸೇರಲಿ ಆ ನಂತರ ಏನ್ಮಾಡೋದು ಎನ್ನುವ ಯೋಚನೆ ಮಾಡೋಣ ಅಲ್ಲಿಯವರೆಗೆ ನಮಗೇನೂ ಗೊತ್ತೇ ಇಲ್ಲ ಎನ್ನುವಂತೆ ನಾವು ಇರೋಣ ಎಂದು ಆನಂದ್ ಹೇಳುತ್ತಾನೆ. ಭೂಮಿಕಾಗೆ ಕೂಡ ಆನಂದ್ ಮಾತು ಸರಿಯೆನಿಸುತ್ತೆ.
ಭೂಕಂಪ ಆಗುತ್ತಾ ?
ಶ್ಯಾಮ್ ಸುಂದರ್ ಅವರಿಗೆ ಕರೆ ಮಾಡಿ ಆನಂದ್ ಸಾಕ್ಷಿಗಳನ್ನೆಲ್ಲ ದೇವಸ್ಥಾನಕ್ಕೆ ಕಳುಹಿಸುವಂತೆ ಹೇಳಿದ್ದಾನೆ. ಇದೇ ಸಮಯದಲ್ಲಿ ಭೂಮಿಕಾ ಅಲ್ಲಿ ಬಂದಿದ್ದು ಆನಂದ್ ಇನ್ನೊಂದು ಅರ್ಧ ಗಂಟೆಯಲ್ಲಿ ಅವರು ಇಲ್ಲಿ ಬರುತ್ತಾರೆ ಎಂದು ಹೇಳುತ್ತಾನೆ. ಈ ಮಾತು ಕೇಳಿ ಖುಷಿಯಾಗುವ ಭೂಮಿಕಾ ಇವತ್ತು ಭೂಕಂಪ ಆಗುವುದಂತೂ ನಿಜಾ, ಕೊನೆಗೂ ನಾವು ಅಂದುಕೊಂಡ ದಿನ ಬಂದೇ ಬಿಡ್ತು ಆನಂದ್ ಅವ್ರೇ, ಇವತ್ತು ಎಲ್ಲ ಗೊಂದಲಕ್ಕೂ ಒಂದು ಫುಲ್ ಸ್ಟಾಫ್ ಸಿಗುತ್ತೆ ಎಂದು ಹೇಳುತ್ತಾಳೆ.
ವಿಷಯ ಕೇಳಿಸಿಕೊಳ್ಳುವ ಶಕುಂತಲಾ ಅಣ್ಣ
ಆನಂದ್ ಮತ್ತು ಭೂಮಿಕಾ ನಡುವಿನ ಈ ಸಂಭಾಷಣೆಯನ್ನು ದೂರದಿಂದಲೇ ಗಮನಿಸುವ ಶಕುಂತಲಾ ಅಣ್ಣ ಆತಂಕಕ್ಕೊಳಗಾಗುತ್ತಾನೆ. ಇದೇನಿದು ಇಬ್ಬರು ರಹಸ್ಯವಾಗಿ ಮಾತನಾಡುತ್ತಿದ್ದಾರೆ ಎಂದುಕೊಳ್ಳುತ್ತಾನೆ. ಆದರೆ ಇದೇ ಸಮಯದಲ್ಲಿ ವಿಷಯ ಇವತ್ತು ಗೊತ್ತಾದರೂ ಎಲ್ಲರೆದುರು ಇವತ್ತು ಹೇಳೋದು ಬೇಡ, ಯಾಕೆಂದರೆ ನಿಮ್ಮ ಸೀಮಂತ ನಡೆಯುತ್ತಿದೆ, ಹಾಲಲ್ಲಿ ಹುಳಿ ಹಿಂಡಿದಂತಾಗುತ್ತೆ ಎಂದು ಭೂಮಿಕಾಗೆ ಆನಂದ್ ಹೇಳುತ್ತಾನೆ. ಇದಕ್ಕೆ ಹೇಗೂ ಸಾಕ್ಷಿ ಬರ್ತಿದೆಯಲ್ಲ ಅದನ್ನು ಹಿಡ್ಕೊಂಡು ಮಾತನಾಡೋಣ ಎಂದು ಭೂಮಿಕಾ ಹೇಳುತ್ತಾಳೆ. ಇವರಿಬ್ಬರ ಸಂಭಾಷಣೆಗಳನ್ನು ಕೇಳಿಸಿಕೊಳ್ಳುವ ಶಕುಂತಲಾ ಅಣ್ಣ ಸದ್ಯ ಗಾಬರಿಯಾಗಿದ್ದು ರಹಸ್ಯ ದಾಖಲೆಯ ಕುರಿತು ಸಿಸ್ಟರ್‌ಗೆ ಹೇಳಲೇಬೇಕೆಂದು ಹೊರಟಿದ್ದಾನೆ.


Click it and Unblock the Notifications











