Amruthadhaare ; ಊಸರವಳ್ಳಿ ಆಟ ಶುರು ಮಾಡಿದ ಶಕುಂತಲಾ, ಮತ್ತೆ ನಂಬ್ತಾನಾ ಗೌತಮ್?

ಅಮೃತಧಾರೆ ಧಾರಾವಾಹಿಯಲ್ಲಿ ಸದ್ಯ ಶಕುಂತಲಾ ಮುಖವಾಡ ಕಳಚಿ ಬಿದ್ದಿದೆ. ಸತ್ಯವನ್ನು ಅರಿತು ಗೌತಮ್ ಬೆಚ್ಚಿ ಬಿದ್ದಿದ್ದಾನೆ. ಭೂಮಿಕಾಗೆ ಕೂಡ ಸತ್ಯ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಇದೀಗ ಶಕುಂತಲಾ ಅಣ್ಣ ಬಲಿ ಕಾ ಬಕ್ರಾ ಆಗಲು ಮುಂದೆ ಬಂದಿದ್ದಾನೆ. ಎಲ್ಲವೂ ತನ್ನಿಂದ ಆಗಿದ್ದು ಎಂದು ಹೇಳಿದ್ದಾನೆ. ನಿನ್ನನ್ನೂ ರಕ್ಷಾ ಕವಚವನ್ನಾಗಿ ಮಾಡಿಕೊಂಡು ಎಲ್ಲವನ್ನೂ ಮಾಡಿದ್ದು ನಾನೇ ಎಂದು ಹೇಳಿದ್ದಾನೆ.

ಶಕುಂತಲಾ ಅಣ್ಣ ಆಡಿದ ಈ ಮಾತುಗಳಿಂದ ಗೌತಮ್-ಭೂಮಿಕಾ-ಆನಂದ್ ಸೇರಿ ಎಲ್ಲರೂ ದಿಗ್ಬ್ರಾಂತರಾಗಿದ್ದಾರೆ. ಇದೇ ಸಮಯದಲ್ಲಿ ತನ್ನನ್ನೂ ತಾನು ಸಂಭಾಳಿಸಿಕೊಳ್ಳುವ ತನಗೆ ತಾನೇ ಸಮಾಧಾನ ಮಾಡಿಕೊಳ್ಳುವ ಶಕುಂತಲಾ ನಾಚಿಕೆಯಾಗಬೇಕು ಅಣ್ಣ ನಿನಗೆ ಯಾಕೆ ಹೀಗೆ ಎಲ್ಲ ಮಾಡಿದೆ ಎಂದು ಅಲವತ್ತುಕೊಂಡು ಕಣ್ಣೀರು ಹಾಕಿದಂತೆ ನಾಟಕ ಮಾಡುತ್ತಾಳೆ.

amruthadhaare-serial-june-17-episode-written-update

ಅಣ್ಣನ ಮಾತು ಕೇಳಿ ಶಕುಂತಲಾ ಹೇಳಿದ್ದೇನು ?

ಆಗ ಶಕುಂತಲಾ ಅಣ್ಣ ನನ್ನ ತಂಗಿಗೆ ನನ್ನ ತಂಗಿ ಮಕ್ಕಳಿಗೆ ನ್ಯಾಯ ಕೊಡಿಸುವುದಕ್ಕೆ ನಾನು ಇದೆಲ್ಲ ಮಾಡಿದೆ ಎಂದು ಹೇಳುತ್ತಾನೆ. ಆಗ ಆಶ್ಚರ್ಯ ಚಕಿತಗೊಂಡಂತೆ ಅಭಿನಯಿಸುವ ಶಕುಂತಲಾ, ಯಾಕೆ ಅಣ್ಣ ಹೀಗೆಲ್ಲ ಮಾಡಿದೆ ಎಂದು ಕೇಳುತ್ತಾಳೆ. ಇದಕ್ಕೆ ಶಕುಂತಲಾ ಅಣ್ಣ ನನ್ನ ತಂಗಿಗೆ ನನ್ನ ತಂಗಿಗೆ ನನ್ನ ಮಕ್ಕಳಿಗೆ ನ್ಯಾಯ ಕೊಡಿಸಲು ಹೀಗೆಲ್ಲ ಮಾಡಿದೆ ಎಂದು ಹೇಳುತ್ತಾನೆ.

ಬಿಡಿಗಾಸನ್ನು ಬಿಸ್ಕೆಟ್ ಹಾಕಿದಂತೆ ಹಾಕಿದ

ಮುಂದುವರೆದು ಇಷ್ಟು ವರ್ಷ ನೀನು ಈ ಮನೆಗೋಸ್ಕರ ಏನೆಲ್ಲ ಮಾಡಿದೆ, ಆದರೆ.. ನಿನ್ನ ಮಗ ಗೌತಮ್ ನಿನಗೆ ಬಿಡಿಗಾಸನ್ನು ಬಿಸ್ಕೆಟ್ ಬಿಸಾಕಿದಂತೆ ಬಿಸಾಕಿದ ಎಂದು ಹೇಳುತ್ತಾನೆ. ಮೊದಲಿಂದಲೂ ನಿನಗೆ ಮತ್ತು ನಿನ್ನ ಮಕ್ಕಳಿಗೆ ಈ ಮನೆಯಲ್ಲಿ ಅನ್ಯಾಯನೇ ಆಗ್ತಿದೆ ಎಂದು ಹೇಳುತ್ತಾನೆ. ನನಗೆ ಮೊದಲಿಂದ ಕೋಪ ಇತ್ತು, ನನ್ನ ಕೈಯಿಂದ ಏನೆಲ್ಲಾ ಸಾಧ್ಯವೋ ಅದನ್ನೆಲ್ಲ ಮಾಡಿಯೇ ತೀರುವ ಶಪಥ ನಾನು ಮಾಡಿದ್ದೇ ಎಂದು ಹೇಳುತ್ತಾನೆ. ಮೊದಲಿಂದ ಈ ಮನೆಯಲ್ಲಿ ನಿನಗೆ ಮತ್ತೆ ನಿನ್ನ ಮಕ್ಕಳಿಗೆ ಈ ಮನೆಯಲ್ಲಿ ಅನ್ಯಾಯ ಆಗ್ತಾನೇ ಇದೆ ಎಂದು ಹೇಳುತ್ತಾನೆ.

ರಕ್ತ ಕುದಿಯುತ್ತಿದೆ ಎಂದ ಅಣ್ಣ

ನಿಮಗೆಲ್ಲ ನೆರಳಾಗಿರಬೇಕು ಎನ್ನುವ ಉದ್ದೇಶದಿಂದ ನಾನು ಒಂಟಿಯಾಗಿಯೇ ಉಳಿದೆ ಎನ್ನುವ ಶಕುಂತಲಾ ಅಣ್ಣ, ನಿನಗೆ ಅನ್ಯಾಯವಾಗುತ್ತಿದ್ದರೆ ನಾನು ಹೇಗೆ ಸುಮ್ಮನಿರಲಿ ಸಿಸ್ಟರ್ ಹೇಳು ಎನ್ನುತ್ತಾನೆ. ನನ್ನ ರಕ್ತ ಕುದಿಯುತ್ತಿತ್ತು ಅದಕ್ಕೆ ಇದೆಲ್ಲ ಮಾಡಿದೆ ಎಂದು ಹೇಳುತ್ತಾನೆ.

ಅಣ್ಣನನ್ನೇ ವಿಲನ್ ಮಾಡಿದ ಶಕುಂತಲಾ

ತನ್ನ ಅಣ್ಣ ಮಾಡಿದ ತ್ಯಾಗಕ್ಕೆ ಭಾವುಕಳಾಗುವ ಶಕುಂತಲಾ ತನ್ನ ಮನದ ನೋವು ಮರೆ ಮಾಚಿ ಮಾಡೋದೆಲ್ಲ ಮಾಡಿ ಮಧ್ಯದಲ್ಲಿ ನನ್ನನ್ನೂ ತರಬೇಡ ಎನ್ನುತ್ತಾಳೆ. ನಿನ್ನ ಮೇಲಿದ್ದ ಗೌರವ, ಪ್ರೀತಿಯನ್ನೆಲ್ಲ ಕಳೆದುಕೊಂಡೆ ನೀನು ಎಂದು ಕಿಡಿ ಕಾರುತ್ತಾಳೆ. ನನ್ನ ಕಣ್ಣಿಗೆ ತುಂಬಾ ಚೀಪಾಗಿ ಕಾಣ್ತಿದ್ದೀಯಾ ನಿನ್ನ ಅಣ್ಣ ಅಂತ ಹೇಳಿಕೊಳ್ಳೋಕು ನನಗೆ ನಾಚಿಕೆಯಾಗ್ತಿದೆ ಎಂದು ಹೇಳುತ್ತಾಳೆ.

ಕಂಬಿ ಹಿಂದೆ ಹೋದ ಶಕುಂತಲಾ ಅಣ್ಣ

ಸದ್ಯ ಶಕುಂತಲಾ ಅಣ್ಣನನ್ನು ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ಜೈದೇವ್ ಕೂಡ ಉಲ್ಟಾ ಹೊಡೆದಿದ್ದು ಶಕುಂತಲಾ ತನ್ನ ಅಣ್ಣನ ಪರಿಸ್ಥಿತಿ ಕಂಡು ಭಾವುಕಳಾಗಿದ್ದಾಳೆ. ಗೌತಮ್ ನನ್ನನ್ನೂ ತಪ್ಪಾಗಿ ತಿಳಿದುಕೊಳ್ಳಬೇಡ ನನ್ನ ನಿಜವಾದ ಹೆಸರು, ನನ್ನ ಹಿನ್ನೆಲೆ ಎಲ್ಲ ನಿಮ್ಮೆಲ್ಲರಿಂದ ಮುಚ್ಚಿಟ್ಟಿದ್ದು ನಿಜಾ ಆದರೆ ಅದರ ಉದ್ದೇಶ ನಿಮಗೆಲ್ಲ ಮೋಸ ಮಾಡಬೇಕು ಎನ್ನುವುದು ಆಗಿರಲಿಲ್ಲ ಎಂದು ಹೇಳುತ್ತಾಳೆ. ಪಂಕಜಾ ಎಂಬ ನನ್ನ ಹೆಸರನ್ನು ನಿನ್ನ ತಂದೆಯೇ ಬದಲಿಸಿದ್ದು ಎಂದು ಹೊಸ ಬಾಂಬ್ ಎಸೆಯುತ್ತಾಳೆ. ಅವರೇ ನನಗೆ ಶಕುಂತಲಾ ಎಂದು ಹೆಸರಿಟ್ಟರು ಎಂದು ಹೇಳುತ್ತಾಳೆ.

More from Filmibeat

English summary
Amruthadhaare Kannada Serial: Find Out The Highlights Of June 17 Episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X