Amruthadhaare ;ಭಾಗ್ಯಮ್ಮ ಪಾತ್ರ ಕೊನೆಯಾಗುತ್ತಾ?ಭೂಮಿಕಾ-ಗೌತಮ್ ವಿರುದ್ದ ಸೇಡು ತೀರಿಸಿಕೊಳ್ಳಲು ಮುಂದಾದ ಶಕುಂತಲಾ !

ಅಮೃತಧಾರೆ ಧಾರಾವಾಹಿಯಲ್ಲಿ ಸದ್ಯ ಶಕುಂತಲಾ ಮುಖವಾಡ ಕಳಚಿ ಬಿದ್ದಿದೆ. ಸತ್ಯವನ್ನು ಅರಿತು ಗೌತಮ್ ಬೆಚ್ಚಿ ಬಿದ್ದಿದ್ದಾನೆ. ಭೂಮಿಕಾಗೆ ಕೂಡ ಸತ್ಯ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮತ್ತೊಂದು ಕಡೆ ಶಕುಂತಲಾ ಅಣ್ಣ ಜೈಲು ಪಾಲಾಗಿದ್ದಾನೆ. ಶಕುಂತಲಾ ಏನೂ ಮಾಡಲಾಗದಂತಹ ಅಸಹಾಯಕ ಪರಿಸ್ಥಿತಿಯಲ್ಲಿದ್ದಾಳೆ. ಅಣ್ಣ ಯಾಕೆ ಹೀಗೆ ಎಲ್ಲ ಮಾಡಿದೆ ಎಂದು ಅಲವತ್ತುಕೊಂಡು ಕಣ್ಣೀರು ಹಾಕಿದಂತೆ ನಾಟಕ ಮಾಡಿದ್ದಾಳೆ.

ಆಗ ಆಕೆಯ ಅಣ್ಣ ನೀನು ಈ ಮನೆಗೋಸ್ಕರ ಏನೆಲ್ಲ ಮಾಡಿದೆ, ಆದರೆ.. ನಿನ್ನ ಮಗ ಗೌತಮ್ ನಿನಗೆ ಬಿಡಿಗಾಸನ್ನು ಬಿಸ್ಕೆಟ್ ಬಿಸಾಕಿದಂತೆ ಬಿಸಾಕಿದ ಎಂದು ಹೇಳುತ್ತಾನೆ.

amruthadhaare-serial-june-18-episode-written-update

ಮೊದಲಿಂದಲೂ ನಿನಗೆ ಮತ್ತು ನಿನ್ನ ಮಕ್ಕಳಿಗೆ ಈ ಮನೆಯಲ್ಲಿ ಅನ್ಯಾಯನೇ ಆಗ್ತಿದೆ ಎಂದು ಹೇಳುತ್ತಾನೆ. ನನಗೆ ಮೊದಲಿಂದ ಕೋಪ ಇತ್ತು, ನನ್ನ ಕೈಯಿಂದ ಏನೆಲ್ಲಾ ಸಾಧ್ಯವೋ ಅದನ್ನೆಲ್ಲ ಮಾಡಿಯೇ ತೀರುವ ಶಪಥ ನಾನು ಮಾಡಿದ್ದೇ ಎಂದು ಹೇಳುತ್ತಾನೆ. ಮೊದಲಿಂದ ಈ ಮನೆಯಲ್ಲಿ ನಿನಗೆ ಮತ್ತೆ ನಿನ್ನ ಮಕ್ಕಳಿಗೆ ಈ ಮನೆಯಲ್ಲಿ ಅನ್ಯಾಯ ಆಗ್ತಾನೇ ಇದೆ ಎಂದು ಹೇಳುತ್ತಾನೆ.

ಶಪಥ ಮಾಡಿದ ಶಕುಂತಲಾ

ತನ್ನ ಅಣ್ಣ ಜೈಲಿಗೆ ಹೋದ ಹಿನ್ನೆಲೆ ಸದ್ಯ ಶಕುಂತಲಾ ಕೆರಳಿ ಕೆಂಡವಾಗಿದ್ದಾಳೆ. ತನ್ನ ಅಣ್ಣನನ್ನು ಜೈಲಿಗೆ ಕಳುಹಿಸಿದ ಭೂಮಿಕಾ ಮತ್ತು ಗೌತಮ್‌ಗೆ ಬುದ್ದಿ ಕಲಿಸಬೇಕೆಂದು ಶಪಥ ಮಾಡಿದ್ದಾಳೆ. ಅದೇ ಕೋಪದಲ್ಲಿ ಮನೆಗೆ ಬರುವ ಶಕುಂತಲಾಳನ್ನು ಆಕೆಯ ಮಗ ಜೈದೇವ ಅಡ್ಡಗಟ್ಟಿದ್ದಾನೆ. ಯಾಕೆ ಏನಾಯ್ತು ಎಂದು ಕೇಳುತ್ತಾನೆ.

ಆಗ ಶಕುಂತಲಾ ನನ್ನಣ್ಣನ ನನ್ನಿಂದ ದೂರ ಮಾಡಿದ್ದಾಳೆ. ಅದೇ ರೀತಿ ನಾನು ಅವನಿಂದ ಅವನ ತಾಯಿಯನ್ನು ದೂರ ಮಾಡಲು ಹೊರಟಿದ್ದೇನೆ ಎನ್ನುತ್ತಾಳೆ. ನಮ್ಮವರು ನಮ್ಮಿಂದ ದೂರ ಆದರೆ ಆಗುವ ನೋವೇನು ಎನ್ನುವುದು ಅವನಿಗೆ ಕೂಡ ಗೊತ್ತಾಗಬೇಕು ಎಂದು ಭಾಗ್ಯಮ್ಮ ರೂಮ್‌ ಕಡೆ ಹೆಜ್ಜೆ ಹಾಕುತ್ತಾಳೆ. ಜೈದೇವ್ ಏನು ಮಾಡೋಕೆ ಹೋಗ್ತಿದ್ದೀಯಾ ಎಂದು ಕೇಳಿದರೂ ಕೂಡ ಶಕುಂತಲಾ ಮಾತು ಕೇಳಿಸಿಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ.

ಭಾಗ್ಯಮ್ಮ ಮಿಸ್ಸಿಂಗ್ ಶಾಕ್ ಆದ ಶಕುಂತಲಾ

ಕೋಪದಲ್ಲಿ ಭಾಗ್ಯಮ್ಮ ರೂಮ್‌ಗೆ ಬರುವ ಶಕುಂತಲಾಗೆ ಮತ್ತೊಂದು ಆಘಾತ ಕಾದಿರುತ್ತೆ. ಭಾಗ್ಯಮ್ಮ ಬದಲು ರೂಮ್‌ನಲ್ಲಿ ಸುಧಾ ಮಲಗಿರುತ್ತಾಳೆ. ಶಕುಂತಲಾ ಹಿಂದೆಯೇ ಜೈದೇವ್ ಕೂಡ ಓಡಿ ಬಂದಿದ್ದು ನಿದ್ದೆಯಿಂದ ಎಚ್ಚೆತ್ತ ಸುಧಾ ನೀವೇನು ಇಲ್ಲಿ ಎಂದು ಶಕುಂತಲಾಗೆ ಕೇಳುತ್ತಾಳೆ.

amruthadhaare-serial-june-18-episode-written-update

ಆಗ ಶಕುಂತಲಾ ಸಾವರಿಸಿಕೊಂಡು ಅಕ್ಕನ ಮಾತನಾಡಿಸಿಕೊಂಡು ಹೋಗೋಣ ಎಂದು ಬಂದೆ ಎಂದು ಹೇಳುತ್ತಾಳೆ. ಆಗ ಸುಧಾ ಅಮ್ಮನಿಗೆ ಹುಶಾರು ಇರಲಿಲ್ಲವಲ್ಲಾ ಅದಕ್ಕೆ ಭೂಮಿಕಾ ಅತ್ತಿಗೆಯನ್ನು ನೋಡಿಕೊಳ್ಳುವುದಕ್ಕೆ ಅವರ ತವರು ಮನೆಗೆ ಕರೆಸಿಕೊಂಡಿದ್ದಾರೆ, ಈಗಷ್ಟೇ ಪಾರ್ಥ ಬಂದು ಕರೆದುಕೊಂಡು ಹೋದ ಎನ್ನುತ್ತಾಳೆ. ಆಗ ಸುಧಾ ಸೀಮಂತ ಕಾರ್ಯಕ್ರಮ ಎಲ್ಲ ಚೆನ್ನಾಗಾಯ್ತಾ ಎಂದು ಶಕುಂತಲಾಗೆ ಕೇಳುತ್ತಾಳೆ.

ಅಣ್ಣನ ಬಿಟ್ಟು ನಾನು ಒಂದು ದಿನ ಇಲ್ಲ ಎಂದ ಶಕುಂತಲಾ

ಸುಧಾ ಮಾತುಗಳಿಂದ ಇನ್ನೂ ದುಖಿತಳಾಗಳುವ ಶಕುಂತಲಾ ಕೆಳಗಡೆ ಬಂದು ಜೈದೇವ್ ಎದುರು ತನ್ನ ನೋವು ತೋಡಿಕೊಳ್ಳುತ್ತಾಳೆ. ನಾನು ನನ್ನ ಅಪ್ಪ ಅಮ್ಮನ ಬಿಟ್ಟಿದ್ದೆ ಆದರೆ ಅಣ್ಣನ ಒಂದು ದಿನ ನಾನು ಬಿಟ್ಟಿರಲಿಲ್ಲ ಎನ್ನುತ್ತಾಳೆ. ಒಂದು ದಿನ ಕೂಡ ಅವರ ಮುಖ ನೋಡದೇ ನನ್ನ ದಿನಾ ಕಳೆದೇ ಇಲ್ಲ ಎನ್ನುತ್ತಾಳೆ. ಆದರೆ ಆ ಭೂಮಿಕಾಯಿಂದ ನನ್ನ ಕಣ್ಣೆದುರೇ ನನ್ನ ಅಣ್ಣ ಜೈಲಿಗೆ ಹೋದ ಎಂದು ಕಿಡಿ ಕಾರುತ್ತಾಳೆ.

ಮುಂದುವರೆದು ಅವಳನ್ನು ಮಾತ್ರ ನಾನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡಲ್ಲ ಅವಳಿಗೆ ಒಂದು ಗತಿ ಕಾಣಿಸಿಯೇ ಕಾಣಿಸುತ್ತೀನಿ ಎಂದು ಹೇಳುತ್ತಾಳೆ. ರೊಚ್ಚಿಗೆದ್ದಿರುವ ಶಕುಂತಲಾಳನ್ನು ಜೈದೇವ್ ಸಮಾಧಾನ ಮಾಡಲು ಪ್ರಯತ್ನ ಮಾಡಿದರು ಕೂಡ ಶಕುಂತಲಾ ಕೋಪ ತಣ್ಣಗಾಗುವುದಿಲ್ಲ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X