Amruthadhaare ; ಅಷ್ಟರಲ್ಲೇ ಜಸ್ಟ್ ಮಿಸ್, ಭೂಮಿಕಾ ಮನೆಯವರಿಂದ ಪಾರಾದ ಗೌತಮ್..!

ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಮತ್ತು ಗೌತಮ್ ವಿರುದ್ಧ ಶಕುಂತಲಾ ಕತ್ತಿ ಮಸೆಯುತ್ತಿದ್ದಾಳೆ. ತನ್ನ ಅಣ್ಣನನ್ನು ಜೈಲಿಗೆ ಕಳುಹಿಸಿದ ಭೂಮಿಕಾ ಮತ್ತು ಗೌತಮ್ ವಿರುದ್ಧ ಸೇಡು ತೀರಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾಳೆ. ಭಾಗ್ಯಮ್ಮಗೆ ಹಾನಿಯುಂಟು ಮಾಡುವ ಉದ್ದೇಶದಿಂದ ರೂಮ್‌ಗೆ ನುಗ್ಗಿದ್ದಾಳೆ. ಆದರೆ.. ಅಲ್ಲಿ ಭಾಗ್ಯಮ್ಮ ಇಲ್ಲ. ಭಾಗ್ಯಮ್ಮ ಬದಲು ರೂಮ್‌ನಲ್ಲಿ ಸುಧಾ ಮಲಗಿರುತ್ತಾಳೆ. ಶಕುಂತಲಾ ಹಿಂದೆಯೇ ಜೈದೇವ್ ಕೂಡ...

ಓಡಿ ಬಂದಿದ್ದು ನಿದ್ದೆಯಿಂದ ಎಚ್ಚೆತ್ತ ಸುಧಾ ನೀವೇನು ಇಲ್ಲಿ ಎಂದು ಶಕುಂತಲಾಗೆ ಕೇಳುತ್ತಾಳೆ. ಆಗ ಶಕುಂತಲಾ ಸಾವರಿಸಿಕೊಂಡು ಅಕ್ಕನ ಮಾತನಾಡಿಸಿಕೊಂಡು ಹೋಗೋಣ ಎಂದು ಬಂದೆ ಎಂದು ಹೇಳುತ್ತಾಳೆ.

amruthadhaare-serial-june-20-episode-written-update

ಆಗ ಸುಧಾ ಅಮ್ಮನಿಗೆ ಹುಶಾರು ಇರಲಿಲ್ಲವಲ್ಲಾ ಅದಕ್ಕೆ ಭೂಮಿಕಾ ಅತ್ತಿಗೆಯನ್ನು ನೋಡಿಕೊಳ್ಳುವುದಕ್ಕೆ ಅವರ ತವರು ಮನೆಗೆ ಕರೆಸಿಕೊಂಡಿದ್ದಾರೆ, ಈಗಷ್ಟೇ ಪಾರ್ಥ ಬಂದು ಕರೆದುಕೊಂಡು ಹೋದ ಎನ್ನುತ್ತಾಳೆ. ಆಗ ಸುಧಾ ಸೀಮಂತ ಕಾರ್ಯಕ್ರಮ ಎಲ್ಲ ಚೆನ್ನಾಗಾಯ್ತಾ ಎಂದು ಶಕುಂತಲಾಗೆ ಕೇಳುತ್ತಾಳೆ. ಸುಧಾ ಮಾತುಗಳಿಂದ ಇನ್ನೂ ದುಖಿತಳಾಗಳುವ ಶಕುಂತಲಾ ಕೆಳಗಡೆ ಬಂದು ಜೈದೇವ್ ಎದುರು ತನ್ನ ನೋವು ತೋಡಿಕೊಳ್ಳುತ್ತಾಳೆ.

ಎಣ್ಣೆ ಹೊಡ್ಕೊಂಡು ಬಂದ ಗೌತಮ್

ಮತ್ತೊಂದು ಕಡೆ ತವರು ಮನೆಯಲ್ಲಿರುವ ತನ್ನ ಪತ್ನಿ ಭೂಮಿಕಾಳನ್ನು ಗೌತಮ್ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾನೆ. ಹೀಗಾಗಿ ಆನಂದ್ ಜೊತೆ ಗೌತಮ್ ಸೀದಾ ಭೂಮಿಕಾ ಮನೆಗೆ ಬಂದಿದ್ದು ಕಾಂಪೌಂಡ್ ಹಾರುವ ಪ್ರಯತ್ನ ಮಾಡಿದ್ದಾನೆ. ಇದೇ ಸಮಯದಲ್ಲಿ ತನ್ನ ಪ್ರಯತ್ನದಲ್ಲಿ ವಿಫಲವಾಗಿ ಭೂಮಿಕಾ ಮನೆಯವರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ಆನಂದ್ ಏನಪ್ಪಾ ಇದೆಲ್ಲ ಎಂದು ಕೇಳಿದ ಡುಮ್ಮ ಸಾರ್ ಮಾವ

ಕುಡಿದ ಮತ್ತಿನಲ್ಲಿರುವ ಆನಂದ್ ಮತ್ತು ಗೌತಮ್ ಮನೆಯವರ ಬಳಿ ಸಿಕ್ಕಿ ಹಾಕಿಕೊಂಡಿದ್ದು, ಭೂಮಿಕಾ ತಂದೆ ಏನಪ್ಪಾ ಆನಂದ್ ಇದೆಲ್ಲ ಎಂದು ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಆನಂದ್ ನನಗೂ ಇದಕ್ಕೂ ಸಂಬಂಧ ಇಲ್ಲ ಎಂದು ಹೇಳಿ ಸಮಜಾಯಿಷಿ ನೀಡಲು ಮುಂದಾಗುತ್ತಾನೆ. ಅದು ಸಂಸಾರಸ್ಥರ ಮನೆ ನಾವು ಈಗ ಮಾಡ್ತಿರುವುದು ಮರ್ಯಾದಸ್ಥರು ಮಾಡುವ ಕೆಲಸ ಅಲ್ಲ ಎಂದು ನಾನು ಹೇಳಿದೆ ಆದರೆ ಗೌತಮ್ ಕೇಳಲಿಲ್ಲ ಬದಲಿಗೆ ಈ ವಯಸ್ಸಿನಲ್ಲಿ ಕಾಂಪೌಂಡ್ ಹಾರದೇ ನಮ್ಮ ಮಾವನ ವಯಸ್ಸಿನಲ್ಲಿ ಹಾರೋಕಾಗುತ್ತಾ ಎಂದು ಫಿಟ್ಟಿಂಗ್ ಇಡ್ತಾನೆ.

ಭೂಮಿಕಾಗೆ ಕ್ಷಮೆ ಕೇಳಿದ ಗೌತಮ್

ರೂಮ್‌ಗೆ ಆ ನಂತರ ಬರುವ ಗೌತಮ್, ತಾನು ಮಾಡಿದ ತಪ್ಪಿಗೆ ಭೂಮಿಕಾ ಬಳಿ ಕ್ಷಮೆ ಕೇಳುತ್ತಾನೆ. ಗೌತಮ್‌ನ ಈ ಸಾಹಸದಿಂದ ಒಳಗೊಳಗೆ ಖುಷಿಯಾಗಿರುವ ಭೂಮಿಕಾ ಎಲ್ಲರೆದುರು ನನಗೊಂದು ತರಾ ಆಗೋಯ್ತು, ಅಲ್ಲಾ ಗೌತಮ್ ಅವರೇ ನಾನು ಒಂದು ದಿನ ಮನೆಯಲ್ಲಿ ಇಲ್ಲಾ ಅಂದರೆ ನೀವು ಹೀಗೆಲ್ಲ ಮಾಡಬಹುದಾ ಎಂದು ಕೇಳುತ್ತಾಳೆ.

ಮುಂದುವರೆದು ಇಲ್ಲಿ ಬರುವ ಮುಂಚೆಯೇ ಕುಡಿದರಾ ಅಥವಾ ಇಲ್ಲಿ ಬರಬೇಕು ಅಂತಾನೇ ಕುಡಿದರಾ ಎಂದು ಪ್ರಶ್ನೆಯನ್ನು ಮಾಡುತ್ತಾಳೆ. ಆಗ ಎರಡು ಅಲ್ಲ ಇಲ್ಲಿ ಬಂದ ಮೇಲೆ ಸ್ವಲ್ಪ ಧೈರ್ಯ ಬರಲಿ ಎಂದು ಕುಡಿದೆ ಎಂದು ಗೌತಮ್ ಹೇಳುತ್ತಾನೆ. ಎಲ್ಲದಕ್ಕೂ ಆನಂದ್ ಕಾರಣ ಎಂದು ಹೇಳುತ್ತಾನೆ. ಗೌತಮ್‌ನ ಈ ಮಾತುಗಳಿಂದ ನಗು ಬಂದರೂ ಕೂಡ ಭೂಮಿಕಾ ಕಂಟ್ರೋಲ್ ಮಾಡಿಕೊಂಡಿದ್ದಾಳೆ.

ಸದ್ಯ ಭೂಮಿಕಾ ಮನೆಯಲ್ಲಿ ಗೌತಮ್ ಬಿಡಾರ ಹೂಡಿದ್ದು, ಆ ಕಡೆ ಕೊತ ಕೊತ ಕುದಿಯುತ್ತಿರುವ ಶಕುಂತಲಾ ಮುಂದೇನು ಮಾಡುತ್ತಾಳೆ ಎನ್ನುವುದನ್ನು ಈಗ ಕಾದು ನೋಡಬೇಕಿದೆ. ಶಕುಂತಲಾ ಮುಂದಿನ ನಡೆ ಕುತೂಹಲ ಕೆರಳಿಸಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X