Amruthadhaare ; ಕಳಚಿ ಬಿತ್ತು ಜೈದೇವ್ ಮುಖವಾಡ, ಗೌತಮ್‌ಗೆ ಸತ್ಯ ಹೇಳ್ತಾಳಾ ಭೂಮಿಕಾ ?
ಅಮೃತಧಾರೆ ಧಾರಾವಾಹಿಯಲ್ಲಿ ತವರು ಮನೆಯಲ್ಲಿರುವ ತನ್ನ ಪತ್ನಿ ಭೂಮಿಕಾಳನ್ನು ಗೌತಮ್ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾನೆ. ಹೀಗಾಗಿ ಆನಂದ್ ಜೊತೆ ಗೌತಮ್ ಸೀದಾ ಭೂಮಿಕಾ ಮನೆಗೆ ಬಂದಿದ್ದು ಕಾಂಪೌಂಡ್ ಹಾರುವ ಪ್ರಯತ್ನ ಮಾಡಿದ್ದಾನೆ. ಇದೇ ಸಮಯದಲ್ಲಿ ತನ್ನ ಪ್ರಯತ್ನದಲ್ಲಿ ವಿಫಲವಾಗಿ ಭೂಮಿಕಾ ಮನೆಯವರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಕುಡಿದ ಮತ್ತಿನಲ್ಲಿರುವ ಆನಂದ್ ಮತ್ತು ಗೌತಮ್ ಮನೆಯವರ ಬಳಿ ಸಿಕ್ಕಿ ಹಾಕಿಕೊಂಡಿದ್ದು, ಭೂಮಿಕಾ ತಂದೆ ಏನಪ್ಪಾ ಆನಂದ್ ಇದೆಲ್ಲ ಎಂದು ಪ್ರಶ್ನೆ ಮಾಡುತ್ತಾರೆ.

ಇದಕ್ಕೆ ಆನಂದ್ ನನಗೂ ಇದಕ್ಕೂ ಸಂಬಂಧ ಇಲ್ಲ ಎಂದು ಹೇಳಿ ಸಮಜಾಯಿಷಿ ನೀಡಲು ಮುಂದಾಗುತ್ತಾನೆ. ಅದು ಸಂಸಾರಸ್ಥರ ಮನೆ ನಾವು ಈಗ ಮಾಡ್ತಿರುವುದು ಮರ್ಯಾದಸ್ಥರು ಮಾಡುವ ಕೆಲಸ ಅಲ್ಲ ಎಂದು ನಾನು ಹೇಳಿದೆ ಆದರೆ ಗೌತಮ್ ಕೇಳಲಿಲ್ಲ ಬದಲಿಗೆ ಈ ವಯಸ್ಸಿನಲ್ಲಿ ಕಾಂಪೌಂಡ್ ಹಾರದೇ ನಮ್ಮ ಮಾವನ ವಯಸ್ಸಿನಲ್ಲಿ ಹಾರೋಕಾಗುತ್ತಾ ಎಂದು ಫಿಟ್ಟಿಂಗ್ ಇಡ್ತಾನೆ.
ರೂಮ್‌ಗೆ ಆ ನಂತರ ಬರುವ ಗೌತಮ್, ತಾನು ಮಾಡಿದ ತಪ್ಪಿಗೆ ಭೂಮಿಕಾ ಬಳಿ ಕ್ಷಮೆ ಕೇಳುತ್ತಾನೆ. ಗೌತಮ್‌ನ ಈ ಸಾಹಸದಿಂದ ಒಳಗೊಳಗೆ ಖುಷಿಯಾಗಿರುವ ಭೂಮಿಕಾ ಎಲ್ಲರೆದುರು ನನಗೊಂದು ತರಾ ಆಗೋಯ್ತು, ಅಲ್ಲಾ ಗೌತಮ್ ಅವರೇ ನಾನು ಒಂದು ದಿನ ಮನೆಯಲ್ಲಿ ಇಲ್ಲಾ ಅಂದರೆ ನೀವು ಹೀಗೆಲ್ಲ ಮಾಡಬಹುದಾ ಎಂದು ಕೇಳಿ ಆ ನಂತರ ಗೌತಮ್‌ಗೆ ಮಲಗುವಂತೆ ಹೇಳುತ್ತಾಳೆ.
ವಿಶೇಷ ಚೇತನ ಮಕ್ಕಳ ಆಶ್ರಮಕ್ಕೆ ತೆರಳುವ ಗೌತಮ್ ಮತ್ತು ಭೂಮಿಕಾ
ಮರು ದಿನ ಭೂಮಿಕಾ ಮತ್ತು ಗೌತಮ್ ವಿಶೇಷ ಚೇತನ ಮಕ್ಕಳ ಆಶ್ರಮಕ್ಕೆ ಬರುತ್ತಾರೆ. ಆಶ್ರಮದಲ್ಲಿ ಮಕ್ಕಳಿಗೆ ಸಿಹಿಯನ್ನು ಹಂಚುತ್ತಾರೆ. ಆ ನಂತರ ಆ ಮಕ್ಕಳನ್ನು ನೋಡಿ ಗೌತಮ್ ತನ್ನ ಮನದ ನೋವು- ದುಖ- ದುಮ್ಮಾನವನ್ನು ಭೂಮಿಕಾ ಎದುರು ಹಂಚಿಕೊಳ್ಳುತ್ತಾನೆ.
ದೇವರು ಇದಾನೆ ಎಂದ ಮೇಲೆ ನಮ್ಮ ನಡುವೆ ಯಾಕೆ ಈ ಭೇದ ಭಾವ ಎಂದು ಕೇಳುತ್ತಾನೆ. ನಮ್ಮಂತೆಯೇ ಚೆನ್ನಾಗಿ ಬದುಕುವ ಅಧಿಕಾರ ಅವರಿಗೂ ಇದೆ ಆದರೆ ದೇವರು ಅವರ ಹಕ್ಕನ್ನು ಕಿತ್ತುಕೊಂಡಿದ್ದಾನೆ ಎಂದು ಬೇಸರ ಮಾಡಿಕೊಳ್ಳುತ್ತಾನೆ.
ಆಗ ಭೂಮಿಕಾ ಎಲ್ಲರನ್ನು ಸಂತುಷ್ಠವಾಗಿಡುವುದು ದೇವರ ಕೆಲಸ ಅಲ್ಲ. ಖುಷಿ ಮತ್ತು ಸಂತೋಷವನ್ನು ನಾವು ಕಂಡುಕೊಂಡು ಹೋಗಬೇಕು ಎನ್ನುತ್ತಾಳೆ. ನಮಗೆ ಈ ಮಕ್ಕಳನ್ನು ನೋಡಿದರೆ ಅಯ್ಯೋ ಪಾಪ ಅನ್ಸುತ್ತೆ. ಆದರೆ ಅವರಿಗೆ ಅದು ಸಮಸ್ಯೆನೇ ಅಲ್ಲ ಅದನ್ನೆಲ್ಲ ಮೀರಿ ಅವರು ಬದುಕುತ್ತಿದ್ದಾರೆ ಎಂದು ಹೇಳುತ್ತಾಳೆ.

ಭೂಮಿಕಾ ಕಣ್ಮುಂದೆ ಕಳಚಿಬಿತ್ತು ಜೈದೇವ್ ಮುಖವಾಡ!
ಅಲ್ಲಿಂದ ಇಬ್ಬರು ಹೊರಡುತ್ತಾರೆ. ಆ ನಂತರ ಭೂಮಿಕಾಳನ್ನು ಮನೆಗೆ ಬಿಡುವಂತೆ ಸೃಜನ್‌ಗೆ ಹೇಳುತ್ತಾನೆ. ಅದರಂತೆ ಭೂಮಿಕಾಳನ್ನು ಕರೆದುಕೊಂಡು ಮನೆಯತ್ತ ಹೋಗುತ್ತಿರುತ್ತಾನೆ.
ಇದೇ ಸಮಯದಲ್ಲಿ ಭೂಮಿಕಾ ಕಣ್ಣಿಗೆ ಜೈದೇವ್ ಬೀಳುತ್ತಾನೆ. ಜೈದೇವ್‌ನನ್ನು ಕಂಡು ಕಾರು ನಿಲ್ಲಿಸುವಂತೆ ಹೇಳುವ ಭೂಮಿಕಾ, ಜೈದೇವ್ ತೆರಳಿದ ಬಟ್ಟೆ ಅಂಗಡಿಗೆ ತೆರಳುತ್ತಾಳೆ.
ಅಲ್ಲಿ ಜೈದೇವ್ ಆಗ್ತಿರುವುದು ನಮ್ಮ ಮದುವೆ ಎಷ್ಟೇ ದುಬಾರಿಯಾದರೂ ಪರವಾಗಿಲ್ಲ ಸೀರೆ ತೆಗೆದುಕೊಳ್ಳುವಂತೆ ದಿಯಾಗೆ ಹೇಳುತ್ತಾನೆ. ಇದೆಲ್ಲವನ್ನು ದೂರದಲ್ಲೇ ನಿಂತು ಗಮನಿಸುವ ಭೂಮಿಕಾಗೆ ಜೈದೇವ್ ಇಷ್ಟು ದಿನ ಬದಲಾಗಿದ್ದೇನೆ ಎಂದು ಸುಳ್ಳು ಹೇಳಿರುವುದು ಮನದಟ್ಟಾಗುತ್ತೆ. ಮಲ್ಲಿಗೆ ಮೋಸ ಮಾಡ್ತಿದ್ದಾರೆ ಎಂದು ಕೋಪ ಮಾಡಿಕೊಳ್ಳುತ್ತಾಳೆ. ಅಷ್ಟರಲ್ಲಿ ಭೂಮಿಕಾಗೆ ಆಕೆಯ ತಂದೆಯ ಫೋನ್ ಬರುತ್ತೆ. ಹೀಗಾಗಿ ಅಲ್ಲಿಂದ ಭೂಮಿಕಾ ಮನೆಯತ್ತ ಹೊರಟಿದ್ದಾಳೆ.


Click it and Unblock the Notifications











