Amruthadhaare ; ನಾಚಿಕೆಯಾಗಲ್ವಾ ? ಜೈದೇವ್ ಕೆನ್ನೆಗೆ ಚಟೀರ್ ಎಂದು ಬಾರಿಸಿದ ಭೂಮಿಕಾ ..!

ಭೂಮಿಕಾ ಮತ್ತು ಗೌತಮ್ ವಿಶೇಷ ಚೇತನ ಮಕ್ಕಳ ಆಶ್ರಮಕ್ಕೆ ಬರುತ್ತಾರೆ. ಆಶ್ರಮದಲ್ಲಿ ಮಕ್ಕಳಿಗೆ ಸಿಹಿಯನ್ನು ಹಂಚುತ್ತಾರೆ. ಆ ನಂತರ ಆ ಮಕ್ಕಳನ್ನು ನೋಡಿ ಗೌತಮ್ ತನ್ನ ಮನದ ನೋವು- ದುಖ- ದುಮ್ಮಾನವನ್ನು ಭೂಮಿಕಾ ಎದುರು ಹಂಚಿಕೊಂಡಿರುತ್ತಾನೆ. ಆಗ ಭೂಮಿಕಾ ಎಲ್ಲರನ್ನು ಸಂತುಷ್ಠವಾಗಿಡುವುದು ದೇವರ ಕೆಲಸ ಅಲ್ಲ. ಖುಷಿ ಮತ್ತು ಸಂತೋಷವನ್ನು ನಾವು ಕಂಡುಕೊಂಡು ಹೋಗಬೇಕು ಎಂದಿರುತ್ತಾಳೆ.

ನಮಗೆ ಈ ಮಕ್ಕಳನ್ನು ನೋಡಿದರೆ ಅಯ್ಯೋ ಪಾಪ ಅನ್ಸುತ್ತೆ. ಆದರೆ ಅವರಿಗೆ ಅದು ಸಮಸ್ಯೆನೇ ಅಲ್ಲ ಅದನ್ನೆಲ್ಲ ಮೀರಿ ಅವರು ಬದುಕುತ್ತಿದ್ದಾರೆ ಎಂದು ಹೇಳಿರುತ್ತಾಳೆ. ಅಲ್ಲಿಂದ ಇಬ್ಬರು ಹೊರಡುತ್ತಾರೆ. ಆ ನಂತರ ಭೂಮಿಕಾಳನ್ನು ಮನೆಗೆ ಬಿಡುವಂತೆ ಸೃಜನ್‌ಗೆ ಗೌತಮ್ ಹೇಳಿದ್ದು, ಭೂಮಿಕಾಳನ್ನು ಕರೆದುಕೊಂಡು ಮನೆಯತ್ತ ಸೃಜನ್ ಹೋಗುತ್ತಿರುತ್ತಾನೆ.

amruthadhaare-serial-june-23 -episode-written-update

ಇದೇ ಸಮಯದಲ್ಲಿ ಭೂಮಿಕಾ ಕಣ್ಣಿಗೆ ಜೈದೇವ್ ಬಿದ್ದಿರುತ್ತಾನೆ. ಜೈದೇವ್‌ನನ್ನು ಕಂಡು ಕಾರು ನಿಲ್ಲಿಸುವಂತೆ ಹೇಳುವ ಭೂಮಿಕಾ, ಜೈದೇವ್ ತೆರಳಿದ ಬಟ್ಟೆ ಅಂಗಡಿಗೆ ತೆರಳಿರುತ್ತಾಳೆ. ಅಲ್ಲಿ ಜೈದೇವ್ ಆಗ್ತಿರುವುದು ನಮ್ಮ ಮದುವೆ ಎಷ್ಟೇ ದುಬಾರಿಯಾದರೂ ಪರವಾಗಿಲ್ಲ ಸೀರೆ ತೆಗೆದುಕೊಳ್ಳುವಂತೆ ದಿಯಾಗೆ ಹೇಳಿರುತ್ತಾನೆ. ಇದೆಲ್ಲವನ್ನು ದೂರದಲ್ಲೇ ನಿಂತು ಗಮನಿಸುವ ಭೂಮಿಕಾ ರಕ್ತ ಕುದಿಯುತ್ತೆ.

ಮನೆಗೆ ಬಂದು ಮಲ್ಲಿಯನ್ನು ಕೆಣಕುವ ಜೈದೇವ್

ದಿಯಾಳನ್ನು ಭೇಟಿ ಮಾಡಿ ಆ ನಂತರ ಮನೆಗೆ ಬರುವ ಜೈದೇವ್, ಮನೆಗೆ ಬಂದರೆ ಸಾಕು ಜಗಳ ಮಾಡಲು ತುದಿಗಾಲಿನಲ್ಲಿ ನಿಲ್ಲುವಳು ಇವತ್ತು ಯಾಕೆ ಸೈಲೆಂಟ್ ಆಗಿದ್ದಾಳೆ ಎಂದು ಪ್ರಶ್ನೆ ಮಾಡುತ್ತಾನೆ. ಬರ್ತಾ ಬರ್ತಾ ತುಂಬಾನೇ ಡೇಂಜರ್ ಆಗ್ತಿದ್ದೀರಾ ಎಂದು ಹೇಳುತ್ತಾನೆ. ಆಗ ಇನ್ನೇನು ಮಾಡುವುದು ಕೆಲವರನ್ನು ದಾರಲು ಹಾಗೇ ಆಗಬೇಕಾಗುತ್ತೆ ಎಂದಾಗ ನಗುವ ಜೈದೇವ್ ಈ ಮಚ್ಚು, ಕಿಚ್ಚು, ಕೊಚ್ಚು ಇಂತಹ ಎಷ್ಟೇ ಬಿಲ್ಡಪ್ ಡೈಲಾಗ್‌ಗಳನ್ನು ಹೊಡೆದರೂ ಕೂಡ ನಿನ್ನ ಕೈಯಲ್ಲಿ ಏನೂ ಮಾಡ್ಕೋಳ್ಳೋಕಾಗಲ್ಲ ಎನ್ನುತ್ತಾನೆ.

ಜೈದೇವ್ ಕೆನ್ನೆಗೆ ಬಾರಿಸುವ ಭೂಮಿಕಾ

ಮಾತಿಗೆ ಮಾತು ಬೆಳೆದು ಮಕ್ಕಳ ಡೈಪರ್ ಮಾತ್ರ ಬದಲಿಸಲು ನಿನ್ನಿಂದ ಸಾಧ್ಯ ಎಂದು ಜೈದೇವ್, ಮಲ್ಲಿಗೆ ಹೇಳುತ್ತಾನೆ. ಆಗ ಮಲ್ಲಿ ಹೆಂಡ್ತಿಯನ್ನು ಅಯ್ಯೋ ಅನಿಸಿ ಘನಂದಾರಿ ಕೆಲಸ ಮಾಡಿರುವಂತೆ ಫೋಸ್ ಕೊಡಲು ನಾಚಿಕೆಯಾಗಲ್ವಾ ? ಅವಳು ಬಿಡಿ ಮೂರು ಬಿಟ್ಟು ನಿಂತವಳೇ, ಇಬ್ಬರ ಜೋಡಿ ಸರಿ ಇದೆ ಮಾನ-ಮರ್ಯಾದೆ ಇಲ್ಲದವರು ಎಂದು ಹೇಳುತ್ತಾಳೆ. ಮಲ್ಲಿಯ ಈ ಮಾತುಗಳನ್ನು ಕೇಳಿ ಕೆರಳುವ ಜೈದೇವ್, ಮಲ್ಲಿಯ ಕೆನ್ನೆಗೆ ಹೊಡೆಯಲು ಮುಂದಾಗುತ್ತಾನೆ. ಅಷ್ಟರಲ್ಲಿ ಮಧ್ಯೆ ಜೈದೇವ್ ಕೆನ್ನೆಗೆ ಭೂಮಿಕಾ ಚಟೀರ್ ಎಂದು ಬಾರಿಸುತ್ತಾಳೆ.

ಮನುಷ್ಯತ್ವನೇ ಇಲ್ಲ ಎಂದು ಕೇಳುವ ಭೂಮಿಕಾ

ಭೂಮಿಕಾ ತನ್ನ ಮೇಲೆ ಕೈ ಮಾಡಿದ್ದರಿಂದ ಶಾಕ್ ಆಗುವ ಜೈದೇವ್, ನನ್ನ ಮೇಲೆಯೇ ಕೈ ಮಾಡ್ತೀರಾ ಎಂದು ಕೇಳುತ್ತಾನೆ. ಆಗ ಭೂಮಿಕಾ ಮನುಷ್ಯತ್ವನೇ ನಿಮಗೆ ಇಲ್ವಾ, ಮಲ್ಲಿ ಬೇರೆ ಯಾರು ಅಲ್ಲ ನಿಮ್ಮ ಹೆಂಡತಿ ಎನ್ನುತ್ತಾಳೆ. ಹೆಂಡ್ತಿಯ ಜೊತೆ ಹೇಗೆ ನಡಿಬೇಕು ನಡೆಸ್ಕೊಂಡು ಹೋಗಬೇಕೆನ್ನುವುದು ಗೊತ್ತಿಲ್ವಾ ನಿಮಗೆ ಎಂದು ಕಿಡಿ ಕಾರುತ್ತಾಳೆ.

amruthadhaare-serial-june-23 -episode-written-update

ರೂಮ್‌ನಲ್ಲಿ ಯೋಚನೆ ಮಾಡುತ್ತಾ ಕೂರುವ ಭೂಮಿಕಾ

ಮತ್ತೊಂದು ಕಡೆ ರೂಮ್‌ನಲ್ಲಿ ಭೂಮಿಕಾ ಇದ್ದಾಗ, ಆಕೆಯ ಕಣ್ಣೆದ್ದುರು ಜೈದೇವ್ ಮತ್ತು ದಿಯಾ ಶಾಪಿಂಗ್ ಮಾಡುತ್ತಿದ್ದ ದೃಶ್ಯಾವಳಿಗಳೇ ಬರುತ್ತಿರುತ್ತವೆ. ಆಗ ಅಲ್ಲಿ ಗೌತಮ್ ಬರುತ್ತಾನೆ. ಸೀಮಂತ ಮುಗಿಸಿಕೊಂಡು ಅಮ್ಮನ ಮನೆಗೆ ಹೋಗಿ ಇದ್ದಕ್ಕಿಂದ್ದಂತೆಯೇ ವಾಪಸ್ಸು ಬಂದ್ರೀ ಯಾಕೆ ಎಂದು ಕೇಳುತ್ತಾನೆ.

More from Filmibeat

English summary
Amruthadhaare Kannada Serial: Find Out The Highlights Of June 23 Episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X