Amruthadhaare ; ಶಕುಂತಲಾ ಎದುರು ಗುಡುಗಿದ ಭೂಮಿಕಾ, ಗೌತಮ್ ಎದುರು ಬಯಲಾಗುತ್ತಾ ಕಳ್ಳ ಸಂಬಂಧ..?
ದಿಯಾಳನ್ನು ಭೇಟಿ ಮಾಡಿ ಆ ನಂತರ ಮನೆಗೆ ಬಂದ ಜೈದೇವ್, ಮಲ್ಲಿ ಹತ್ರ ಜಗಳಕ್ಕಿಳಿಯುತ್ತಾನೆ. ಮಚ್ಚು, ಕಿಚ್ಚು, ಕೊಚ್ಚು ಇಂತಹ ಎಷ್ಟೇ ಬಿಲ್ಡಪ್ ಡೈಲಾಗ್‌ಗಳನ್ನು ಹೊಡೆದರೂ ಕೂಡ ನಿನ್ನ ಕೈಯಲ್ಲಿ ಏನೂ ಮಾಡ್ಕೋಳ್ಳೋಕಾಗಲ್ಲ ಎನ್ನುತ್ತಾನೆ. ಆಗ ಹೆಂಡ್ತಿಯನ್ನು ಅಯ್ಯೋ ಅನಿಸಿ ಘನಂದಾರಿ ಕೆಲಸ ಮಾಡಿರುವಂತೆ ಫೋಸ್ ಕೊಡಲು ನಾಚಿಕೆಯಾಗಲ್ವಾ ? ಅವಳು ಬಿಡಿ ಮೂರು ಬಿಟ್ಟು ನಿಂತವಳೇ, ಇಬ್ಬರ ಜೋಡಿ ಸರಿ ಇದೆ ಮಾನ-ಮರ್ಯಾದೆ ಇಲ್ಲದವರು ಎಂದು ಹೇಳುತ್ತಾಳೆ.
ಮಲ್ಲಿಯ ಈ ಮಾತುಗಳನ್ನು ಕೇಳಿ ಕೆರಳುವ ಜೈದೇವ್, ಮಲ್ಲಿಯ ಕೆನ್ನೆಗೆ ಹೊಡೆಯಲು ಮುಂದಾಗುತ್ತಾನೆ. ಅಷ್ಟರಲ್ಲಿ ಮಧ್ಯೆ ಜೈದೇವ್ ಕೆನ್ನೆಗೆ ಭೂಮಿಕಾ ಚಟೀರ್ ಎಂದು ಬಾರಿಸುತ್ತಾಳೆ. ಭೂಮಿಕಾ ತನ್ನ ಮೇಲೆ ಕೈ ಮಾಡಿದ್ದರಿಂದ ಶಾಕ್ ಆಗುವ ಜೈದೇವ್, ನನ್ನ ಮೇಲೆಯೇ ಕೈ ಮಾಡ್ತೀರಾ ಎಂದು ಕೇಳುತ್ತಾನೆ.

ಆಗ ಭೂಮಿಕಾ ಮನುಷ್ಯತ್ವನೇ ನಿಮಗೆ ಇಲ್ವಾ, ಮಲ್ಲಿ ಬೇರೆ ಯಾರು ಅಲ್ಲ ನಿಮ್ಮ ಹೆಂಡತಿ ಎನ್ನುತ್ತಾಳೆ. ಹೆಂಡ್ತಿಯ ಜೊತೆ ಹೇಗೆ ನಡಿಬೇಕು ನಡೆಸ್ಕೊಂಡು ಹೋಗಬೇಕೆನ್ನುವುದು ಗೊತ್ತಿಲ್ವಾ ನಿಮಗೆ ಎಂದು ಕಿಡಿ ಕಾರುತ್ತಾಳೆ.


Click it and Unblock the Notifications











