Amruthadhaare ; ದಿಯಾ ಜೊತೆ ಮದ್ವೆ ಮಾಡಿಕೊಳ್ಳಲು ಮುಂದಾದ ಜೈದೇವ್, ಮುಂದೇನು ಮಾಡ್ತಾನೆ ಗೌತಮ್..!
ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿಗೆ ಮತ್ತು ದಿವಾನ್ ಮನೆತನಕ್ಕೆ ಜೈದೇವ್ ಮಾಡುತ್ತಿರುವ ಮೋಸ ಭೂಮಿಕಾಗೆ ಗೊತ್ತಾಗಿದೆ. ಮಚ್ಚು, ಕಿಚ್ಚು, ಕೊಚ್ಚು ಇಂತಹ ಎಷ್ಟೇ ಬಿಲ್ಡಪ್ ಡೈಲಾಗ್‌ಗಳನ್ನು ಹೊಡೆದರೂ ಕೂಡ ನಿನ್ನ ಕೈಯಲ್ಲಿ ಏನೂ ಮಾಡ್ಕೋಳ್ಳೋಕಾಗಲ್ಲ ಎಂದು ಮಲ್ಲಿ ಎದುರು ಜೈದೇವ್ ಹೇಳಿದಾಗ ಸಹನೆ ಕಳೆದುಕೊಂಡು ಜೈದೇವ್‌ಗೆ ಭೂಮಿಕಾ ಕಪಾಳ ಮೋಕ್ಷ ಮಾಡಿದ್ದಾಳೆ. ಮತ್ತೊಂದೆಡೆ ರಾಜೇಂದ್ರ ಭೂಪತಿ ಮನೆಯಲ್ಲಿ ಶೋಕ ಆವರಿಸಿದೆ.
ದಿವ್ಯಾ ಕಣ್ಣೀರು ಹಾಕುತ್ತಾ ಕುಂತಿದ್ದಾಳೆ. ಇದೇ ಸಮಯದಲ್ಲಿ ಬರುವ ಜೈದೇವ್ ಬೇಬಿ ಯಾಕೆ ಅಳ್ತಿದ್ದೀಯಾ ಎನ್ನುತ್ತಾನೆ. ಆಗ ರಾಜೇಂದ್ರ ಭೂಪತಿ ಇದಕ್ಕೆಲ್ಲ ನೀನೆ ಕಾರಣ ಎನ್ನುತ್ತಾನೆ. ಆಗ ಜೈದೇವ್ ನಾನ್ಹೇಗೆ ಕಾರಣ ಎಂದು ಕೇಳಿದಾಗ ಮದ್ವೆಯಾಗಲ್ಲ ಅಂತ ಹೇಳಿದೆ ಅಲ್ಲ ಅದಕ್ಕೆ ಅಳ್ತಿದ್ದಾಳೆ ಎಂದು ರಾಜೇಂದ್ರ ಭೂಪತಿ ಹೇಳುತ್ತಾನೆ. ಆಗ ಮುಂದೆ ಹೋದರು ನಾನೇ ಬಲಿ ಹಿಂದೆ ಬಂದರೂ ನಾನೇ ಬಲಿ ಸಿಕ್ಕಾಕಿಕೊಂಡು ಒದ್ದಾಡುತ್ತಿದ್ದೇನೆ ಎಂದು ಜೈದೇವ್ ಹೇಳುತ್ತಾನೆ.

ಭೂಮಿಕಾ ಕೈ ಸೇರಿದ ಆಮಂತ್ರಣ ಪತ್ರಿಕೆ
ಸದ್ಯ ಭೂಮಿಕಾ ಮತ್ತು ಮಲ್ಲಿಯನ್ನು ಜೈದೇವ್ ಪಾರ್ಕ್‌ಗೆ ಬರುವಂತೆ ಹೇಳಿದ್ದಾನೆ. ಅಲ್ಲಿ ಬಂದ ಜೈದೇವ್ ಇಬ್ಬರ ಬಳಿ ನಾನೇನು ಮಾಡ್ತಿದ್ದೆ ಎನ್ನುವುದು ನನಗೆ ಗೊತ್ತಾಗಲಿಲ್ಲ, ಇಷ್ಟು ದಿನ ಬುದ್ದಿಗೆ ಮಂಕು ಬಡಿದಂತೆ ಆಗಿತ್ತು ಎಂದು ಹೇಳುತ್ತಾನೆ. ನೀವು ಹೇಳಿದ ಮೇಲೆ ನಾನು ಮಾಡ್ತಿರುವ ತಪ್ಪಿನ ಅರಿವು ನನಗಾಗಿದೆ ಎಂದು ಭೂಮಿಕಾಗೆ ಹೇಳುತ್ತಾನೆ. ಇನ್ಮೇಲೆ ಈ ತರ ತಪ್ಪು ಮಾಡಬಾರದು ಅಂತಾ ಡಿಸೈಡ್ ಮಾಡಿದ್ದೇನೆ, ಎಲ್ಲರಂತೆ ಒಳ್ಳೇಯ ರೀತಿ ಜೀವನ ಮಾಡಬೇಕು ಅಂದುಕೊಂಡಿದ್ದೇನೆ ಎಂದು ಹೇಳುತ್ತಾನೆ. ಭೂಮಿಕಾಗೆ ಕಾಲಿಗೆ ಬಿದ್ದು ಕ್ಷಮೆ ಕೇಳಲು ಕೂಡ ಮುಂದಾಗುತ್ತಾನೆ.
ಆದರೆ ಆ ನಂತರ ಜೈದೇವ್ ಉಲ್ಟಾ ಹೊಡೆಯುತ್ತಾನೆ. ನನ್ನಂತ ಸ್ವಾರ್ಥಿ ಈ ಪ್ರಪಂಚದಲ್ಲಿ ಯಾರಿಲ್ಲಾ ಎಂದು ಹೇಳುತ್ತಾನೆ. ನನ್ನ ಜೀವನ ನೀವು ಬಯಸಿದಂತೆ ನಾನು ಹೀಗೆ ಬದುಕಬೇಕು ಎಂದು ಹೇಳುವ ಅರ್ಹತೆ ಯೋಗ್ಯತೆ ನಿಮಗೆ ಏನಿದೆ ಎಂದು ಪ್ರಶ್ನೆ ಮಾಡುತ್ತಾನೆ. ನೀವು ಇಬ್ಬರು ನನ್ನ ಮದುವೆಗೆ ಬಂದು ಶುಭ ಹಾರೈಸಬೇಕೆಂದು ಮದುವೆಯ ಆಮಂತ್ರಣ ಪತ್ರಿಕೆಯನ್ನು ಕೂಡ ನೀಡುತ್ತಾನೆ.
ಮಲ್ಲಿ ಇರುವಾಗ ಮತ್ತೊಂದು ಮದ್ವೆನಾ- ಗೌತಮ್
ಆ ನಂತರ ಗೌತಮ್‌ನ ಭೂಮಿಕಾ ಪಾರ್ಕ್‌ಗೆ ಕರೆಸಿಕೊಳ್ತಾಳೆ. ಪಾರ್ಕ್‌ಗೆ ಆನಂದ್ ಜೊತೆ ಬರುವ ಗೌತಮ್ ಮದುವೆಯ ಆಮಂತ್ರಣ ಪತ್ರಿಕೆ ಕಂಡು ಶಾಕ್ ಆಗುತ್ತಾನೆ. ಮಲ್ಲಿ ಇರುವಾಗ ಮತ್ತೊಂದು ಮದುವೆನಾ ಎಷ್ಟೊಂದು ಧೈರ್ಯ ಅವನಿಗೆ ಎಂದು ಹೇಳುತ್ತಾನೆ. ಆಗ ನಾವು ಅಂದುಕೊಂಡಂತೆ ದಿಯಾ ಜೊತೆ ಅವರು ಯಾವತ್ತು ಸಂಬಂಧ ಕಡಿದುಕೊಂಡಿರಲಿಲ್ಲ ಗೌತಮ್ ಅವರೇ ಎಂದು ಭೂಮಿಕಾ ಹೇಳುತ್ತಾಳೆ. ನಮ್ಮ ಕಣ್ಣಿಗೆ ಮಣ್ಣೇರಚಿ ಅವರು ಕದ್ದು ಮುಚ್ಚಿ ಭೇಟಿಯಾಗ್ತಾನೇ ಇದ್ದರು ಎಂದು ಹೇಳುತ್ತಾಳೆ. ನಿರಂತರವಾಗಿ ಸಂಪರ್ಕದಲ್ಲಿದ್ದರು ಈ ವಿಚಾರ ಗೊತ್ತಾಗಿಯೇ ನಾನು ಮನೆಗೆ ವಾಪಸು ಬಂದಿದ್ದು ಎಂದು ಹೇಳುತ್ತಾಳೆ. ನಾನು ಎಚ್ಚರಿಕೆ ನೀಡಿದ್ದೇ ಆದರೂ ಕೂಡ ಅವರು ಮುಂದುವರೆದಿದ್ದಾರೆ ಎಂದು ಹೇಳುತ್ತಾಳೆ.
ಮುಂದೇನ್ಮಾಡುತ್ತಾನೆ ಗೌತಮ್ ?
ವಿಷಯ ಮೊದಲೇ ಹೇಳದಿರುವುದಕ್ಕೆ ಭೂಮಿಕಾ ಮೇಲೆ ಕಿಡಿ ಕಾರುವ ಗೌತಮ್, ಅವನು ಬದಲಾಗಲಿಲ್ಲ, ಬದಲಾಗಿದ್ದೇನೆ ಎಂದು ನಮ್ಮನ್ನೆಲ್ಲ ನಂಬಿಸಿದ ಅಷ್ಟೇ ಎಂದು ಹೇಳುತ್ತಾನೆ. ಲಾಸ್ಟ್ ಟೈಮ್ ಅವನು ಸಿಕ್ಕಿಹಾಕಿಕೊಂಡಾಗಲೇ ಅವನಿಗೆ ಬುದ್ದಿ ಕಲಿಸಬೇಕಿತ್ತು ಎಂದು ಹೇಳುವ ಗೌತಮ್, ಇಲ್ಲಿಯವರೆಗೆ ಮನೆಯಲ್ಲಿ ನಡೆದಿರುವ ಘಟನೆಗಳಿಗೆ ಕೇವಲ ಮಾವ ಮಾತ್ರ ಅಲ್ಲ ಇವನ ಕಾಂಟ್ರಿಬ್ಯೂಷನ್ ಕೂಡ ಇದೇ ಎಂದು ಹೇಳುತ್ತಾನೆ.


Click it and Unblock the Notifications











