Amruthadhaare ; ದಿಯಾಗೆ ತಾಳಿ ಕಟ್ಟುವಂತೆ ಜೈದೇವ್‌ಗೆ ಹೇಳಿದ ಗೌತಮ್, ಮನೆಮಂದಿ ಎಲ್ಲಾ ಕಕ್ಕಾಬಿಕ್ಕಿ..!
ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿಗೆ ಮತ್ತು ದಿವಾನ್ ಮನೆತನಕ್ಕೆ ಜೈದೇವ್ ಮಾಡುತ್ತಿರುವ ಮೋಸ ಭೂಮಿಕಾಗೆ ಗೊತ್ತಾಗಿದೆ. ಭೂಮಿಕಾ ಮತ್ತು ಮಲ್ಲಿಯನ್ನು ಪಾರ್ಕ್‌ಗೆ ಬರುವಂತೆ ಹೇಳಿದ್ದ ಜೈದೇವ್, ನಾನೇನು ಮಾಡ್ತಿದ್ದೆ ಎನ್ನುವುದು ನನಗೆ ಗೊತ್ತಾಗಲಿಲ್ಲ, ಇಷ್ಟು ದಿನ ಬುದ್ದಿಗೆ ಮಂಕು ಬಡಿದಂತೆ ಆಗಿತ್ತು ಎಂದು ಹೇಳುತ್ತಾನೆ. ನೀವು ಹೇಳಿದ ಮೇಲೆ ನಾನು ಮಾಡ್ತಿರುವ ತಪ್ಪಿನ ಅರಿವು ನನಗಾಗಿದೆ ಎಂದು ಭೂಮಿಕಾಗೆ ಹೇಳುತ್ತಾನೆ.
ಇನ್ಮೇಲೆ ಈ ತರ ತಪ್ಪು ಮಾಡಬಾರದು ಅಂತಾ ಡಿಸೈಡ್ ಮಾಡಿದ್ದೇನೆ, ಎಲ್ಲರಂತೆ ಒಳ್ಳೇಯ ರೀತಿ ಜೀವನ ಮಾಡಬೇಕು ಅಂದುಕೊಂಡಿದ್ದೇನೆ ಎಂದು ಹೇಳುತ್ತಾನೆ. ಭೂಮಿಕಾಗೆ ಕಾಲಿಗೆ ಬಿದ್ದು ಕ್ಷಮೆ ಕೇಳಲು ಕೂಡ ಮುಂದಾಗುತ್ತಾನೆ.

ಆದರೆ ಆ ನಂತರ ಜೈದೇವ್ ಉಲ್ಟಾ ಹೊಡೆಯುತ್ತಾನೆ. ನನ್ನಂತ ಸ್ವಾರ್ಥಿ ಈ ಪ್ರಪಂಚದಲ್ಲಿ ಯಾರಿಲ್ಲಾ ಎಂದು ಹೇಳುತ್ತಾನೆ. ನನ್ನ ಜೀವನ ನೀವು ಬಯಸಿದಂತೆ ನಾನು ಹೀಗೆ ಬದುಕಬೇಕು ಎಂದು ಹೇಳುವ ಅರ್ಹತೆ ಯೋಗ್ಯತೆ ನಿಮಗೆ ಏನಿದೆ ಎಂದು ಪ್ರಶ್ನೆ ಮಾಡುತ್ತಾನೆ. ನೀವು ಇಬ್ಬರು ನನ್ನ ಮದುವೆಗೆ ಬಂದು ಶುಭ ಹಾರೈಸಬೇಕೆಂದು ಮದುವೆಯ ಆಮಂತ್ರಣ ಪತ್ರಿಕೆಯನ್ನು ಕೂಡ ನೀಡುತ್ತಾನೆ.


Click it and Unblock the Notifications











