Amruthadhaare ; ಮಲ್ಲಿ 'ಜನ್ಮರಹಸ್ಯ' ಬಯಲು, ಗೌತಮ್ ಮಾತು ಕೇಳಿ ಬೆಚ್ಚಿ ಬಿದ್ದ ಭೂಪತಿ..!
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್-ಭೂಮಿಕಾ ಮತ್ತು ಮಲ್ಲಿಗೆ ಸೆಡ್ಡು ಹೊಡೆದು ದಿಯಾ ಜೊತೆ ಜೈದೇವ್ ಮದುವೆಯಾಗಲು ಅಣಿಯಾಗಿದ್ದಾನೆ. ಕಲ್ಯಾಣ ಮಂಟಪಕ್ಕೆ ತೆರಳದೇ ತನ್ನ ಮನೆಯಲ್ಲಿಯೇ ದಿಯಾ ಜೊತೆ ಸಪ್ತಪದಿ ತುಳಿಯೋದಕ್ಕೆ ಸಕಲ ಸಿದ್ಧತೆ ಮಾಡಿಕೊಂಡು,ಗೌತಮ್ ದಿವಾನ್ ಗೆ ಕಾಯುತ್ತಿದ್ದಾನೆ. ಇದೇ ಸಮಯಕ್ಕೆ ಗೌತಮ್ ದಿವಾನ್ ಬಂದಿದ್ದು ಮದುವೆಯಾಗಲು ಜೈದೇವ್‌ಗೆ ಅಪ್ಪಣೆಯನ್ನು ನೀಡುತ್ತಾನೆ. ನಾವು ಬಂದಿರುವುದು ಮದುವೆ ನಿಲ್ಲಿಸೋಕೆ ಅಲ್ಲ ಕಟ್ಟು ತಾಳಿ ಎಂದು ಹೇಳುತ್ತಾನೆ.
ಗೌತಮ್ ಹೇಳಿದ ಈ ಮಾತುಗಳಿಂದ ಎಲ್ಲರು ಶಾಕ್ ಆಗುತ್ತಾರೆ. ಇದರ ನಡುವೆ ತಾಳಿ ಕಟ್ಟಿದ ನಂತರ ಜೈದೇವ್, ತನ್ನ ಅಣ್ಣ ಗೌತಮ್ ಬಳಿ ತೆರಳಿದ್ದು ನಿನ್ನ ಸಹಕಾರಕ್ಕೆ ಧನ್ಯವಾದ ಯಾವುದಕ್ಕೂ ನಿಂದೊಂದು ಆಶೀರ್ವಾದ ಇರಲಿ ಎಂದು ಹೇಳುತ್ತಾನೆ. ಆಗ ಜೈದೇವ್ ಕೆನ್ನೆಗೆ ಗೌತಮ್ ಚಟೀರ್ ಎಂದು ಬಾರಿಸುತ್ತಾನೆ.

ಜಾಗ ಖಾಲಿ ಮಾಡು ಎಂದ ಗೌತಮ್, ಆಸ್ತಿಯಲ್ಲಿ ಹಕ್ಕು ಕೇಳಿದ ಜೈದೇವ್
ಗೌತಮ್‌ನ ಈ ನಡೆ ಶಕುಂತಲಾ ಸೇರಿ ಜೈದೇವ್ ಮತ್ತು ಭೂಪತಿಯನ್ನು ಆಘಾತಕ್ಕೀಡು ಮಾಡುತ್ತೆ. ಜೈದೇವ್ ಎದುರು ಉತ್ತರ ನೀಡಲು ಮುಂದಾದಾಗ ಮಾತನಾಡಬೇಡ ನಿನಗೂ ಈ ಮನೆಗೂ ಸಂಬಂಧ ಇಲ್ಲ ಜಾಗ ಖಾಲಿ ಮಾಡು ಎಂದು ಗೌತಮ್ ಎಚ್ಚರಿಕೆ ನೀಡುತ್ತಾನೆ. ಆಗ ನನ್ನ ಪಾಲಿಗೆ ಸೇರಬೇಕಾದ ಆಸ್ತಿಯನ್ನು ಬೀಸಾಕುವಂತೆ ಗೌತಮ್‌ಗೆ ಹೇಳುತ್ತಾನೆ.
ಎಲ್ಲವನ್ನೂ ಮೊದಲೇ ತಯಾರಿ ಮಾಡಿಕೊಂಡ ಬಂದ ಗೌತಮ್ ಹೀಗೆಲ್ಲ ಮಾಡೋಕೆ ಮನಸಾದರೂ ಹೇಗೆ ಬಂತು ನಿನಗೆ, ದುಡ್ಡೇ ಮುಖ್ಯ ಆಯ್ತಾ ಎಂದು ಕೇಳುತ್ತಾನೆ. ಸಂಬಂಧ ಅಂದರೆ ಉಪಯೋಗಿಸಿ ಬಿಸಾಕುವ ಟಿಶ್ಯೂ ಪೇಪರಾ ಎಂದು ಕಿಡಿ ಕಾರುತ್ತಾನೆ. ಜೈದೇವ್ ಸಮಜಾಯಿಷಿ ಅವನ ಮಾತುಗಳನ್ನು ಕೇಳಿ ಕೆರಳಿ ಆಸ್ತಿ ಪತ್ರವನ್ನು ಜೈದೇವ್ ಮುಖದ ಮೇಲೆ ಬಿಸಾಕುತ್ತಾನೆ.
ನಿನ್ನ ನೋಡಿದರೆ ಪಾಪ ಅನ್ಸುತ್ತೆ ಎಂದ ರಾಜೇಂದ್ರ ಭೂಪತಿ
ಇನ್ನು ಇದೇ ಸಮಯದಲ್ಲಿ ಮಧ್ಯಬರುವ ರಾಜೇಂದ್ರ ಭೂಪತಿ, ನಿನ್ನ ನೋಡಿದರೆ ನನಗೆ ಪಾಪ ಅನ್ಸುತ್ತೆ ಎಂದು ಗೌತಮ್ ದಿವಾನ್‌ಗೆ ಹೇಳುತ್ತಾನೆ. ನಿನ್ನ ಮನೆ ಇಷ್ಟು ದಿವಸ ಜೇನು ಗೂಡಿನಂತೆ ಇತ್ತು, ನನ್ನ ಒಂದೇ ಒಂದು ಏಟಿಗೆ ಅಲ್ಲೋಲ ಕಲ್ಲೋಲವಾಯ್ತು ಎಂದು ಹೇಳಿ ಖುಷಿ ಪಡುತ್ತಾನೆ. ಆದರೆ ಈ ಸಮಯದಲ್ಲಿ ಎಂಟ್ರಿಯಾಗುವ ಮಲಲ್ಇಯ ತಾತ ರಾಜೇಂದ್ರ ಭೂಪತಿಗೆ ತಪರಾಕಿ ಹಾಕುತ್ತಾನೆ. ಕೆಟ್ಟದನ್ನು ಮಾಡಿದೆ ಎಂದು ಬೀಗ್ತಿದ್ದೀರಲ್ಲಾ ನಿಮ್ಮನ್ನು ನೋಡಿ ನಗಬೇಕೋ ಅಳಬೇಕೋ ಗೊತ್ತಾಗುತ್ತಿಲ್ಲ ಎನ್ನುತ್ತಾನೆ.
ತಾತನ ಮಾತು ಕೇಳಿ ವಿಚಲಿತಗೊಳ್ಳುವ ರಾಜೇಂದ್ರ ಭೂಪತಿ
ಮಲ್ಲಿ ತಾತನ ಈ ಮಾತುಗಳನ್ನು ಕೇಳಿ ರಾಜೇಂದ್ರ ಭೂಪತಿ ವಿಚಲಿತಗೊಂಡು ಏನ್ ಹೇಳ್ತೀದ್ದೀಯಾ ನೀನು ಎಂದು ಕೇಳುತ್ತಾನೆ. ಆಗ ಸಮಯ-ಸಂದರ್ಭ ಎಂತಹವರನ್ನೂ ಮುಠ್ಠಾಳವನ್ನಾಗಿಸುತ್ತೆ, ಕೆಲವು ಸಲ ನಾವು ಹೆಣೆದ ಬಲೆಯಲ್ಲಿ ನಾವೇ ಸಿಕ್ಕಿಹಾಕಿಕೊಳ್ಳುತ್ತೇವೆ ಎಂದು ತಾತ ಹೇಳುತ್ತಾನೆ. ನಿಮ್ಮ ಹಠಕ್ಕೆ.. ನಿಮ್ಮ ದ್ವೇಷಕ್ಕೆ.. ನೀವೆ ನಿಮ್ಮ ಕೈಯಾರೆ ನಿಮ್ಮ ಮಗಳ ಜೀವನ ಹಾಳು ಮಾಡಿದ್ರಲ್ಲಾ ಯಜಮಾನರೇ ಎಂದು ಹೇಳುತ್ತಾನೆ.
ನನ್ನ ಮಗಳೂ ಸತ್ತೋಗಿದ್ದಾಳೆ ಎಂದ ರಾಜೇಂದ್ರ ಭೂಪತಿ
ತಾತನ ಈ ಮಾತುಗಳನ್ನು ಕೇಳಿದ ರಾಜೇಂದ್ರ ಭೂಪತಿ, ಸತ್ತೋಗಿರುವ ನನ್ನ ಮಗಳಿಗೂ ಇದಕ್ಕೂ ಏನು ಸಂಬಂಧ ಎಂದು ತಾತನ ಬಳಿ ಪ್ರಶ್ನೆ ಮಾಡುತ್ತಾನೆ. ಆಗ ಗೌತಮ್ ನಿಮ್ಮ ಮಗಳು ಸತ್ತಿಲ್ಲ ಬದುಕಿದ್ದಾಳೆ ಎನ್ನುತ್ತಾನೆ. ಮಲ್ಲಿನೇ ನಿಮ್ಮ ಮಗಳು ಎಂದು ಹೇಳುತ್ತಾನೆ. ಇದನ್ನು ಕೇಳಿದ ಮನೆಯವರಿಗೆಲ್ಲರಿಗೂ ಭೂಮಿಯೇ ಕುಸಿದಂತೆ ಆಗುತ್ತೆ. ಮುಂದುವರೆದು ಅವಳ ಸಂಸಾರಕ್ಕೆ ಕೊಳ್ಳಿ ಇಟ್ಟು ಅವಳ ಜೀವನ ಹಾಳು ಮಾಡಿದ್ರೀ ಎಂದು ಗೌತಮ್ ಹೇಳುತ್ತಾನೆ. ಇದಕ್ಕೆ ನೊಂದುಕೊಳ್ಳುವ ಮಲ್ಲಿ ನಾನು ಇವನ ಮಗಳಾ ಸಾಧ್ಯನೇ ಇಲ್ಲ ಎಂದು ಕಣ್ಣೀರು ಹಾಕಲು ಶುರುಮಾಡುತ್ತಾಳೆ. ಮನುಷ್ಯತ್ವ ಇಲ್ಲದಿರುವ ಪಾಪಿ ಇವನು, ಇವನ ಮಗಳು ನಾನು ಅಂದರೆ ನಾನು ಒಪ್ಪಲು ಸಾಧ್ಯವೇ ಇಲ್ಲ ಎನ್ನುತ್ತಾಳೆ.


Click it and Unblock the Notifications











