Amruthadhaare ; ಸಾಧ್ಯವಾದರೆ ನನ್ನನ್ನೂ ಕ್ಷಮಿಸಿಬಿಡು ಮಗಳೇ, ಆತ್ಮಹತ್ಯೆ ಮಾಡಿಕೊಳ್ತಾನಾ ರಾಜೇಂದ್ರ ಭೂಪತಿ ?

ಗೌತಮ್‌ನ ಈ ನಡೆ ಶಕುಂತಲಾ ಸೇರಿ ಜೈದೇವ್ ಮತ್ತು ಭೂಪತಿಯನ್ನು ಆಘಾತಕ್ಕೀಡು ಮಾಡುತ್ತೆ. ಜೈದೇವ್ ಎದುರು ಉತ್ತರ ನೀಡಲು ಮುಂದಾದಾಗ ಮಾತನಾಡಬೇಡ ನಿನಗೂ ಈ ಮನೆಗೂ ಸಂಬಂಧ ಇಲ್ಲ ಜಾಗ ಖಾಲಿ ಮಾಡು ಎಂದು ಗೌತಮ್ ಎಚ್ಚರಿಕೆ ನೀಡುತ್ತಾನೆ. ಆಗ ನನ್ನ ಪಾಲಿಗೆ ಸೇರಬೇಕಾದ ಆಸ್ತಿಯನ್ನು ಬೀಸಾಕುವಂತೆ ಗೌತಮ್‌ಗೆ ಹೇಳುತ್ತಾನೆ.ಎಲ್ಲವನ್ನೂ ಮೊದಲೇ ತಯಾರಿ ಮಾಡಿಕೊಂಡ..

ಬಂದ ಗೌತಮ್ ಹೀಗೆಲ್ಲ ಮಾಡೋಕೆ ಮನಸಾದರೂ ಹೇಗೆ ಬಂತು ನಿನಗೆ, ದುಡ್ಡೇ ಮುಖ್ಯ ಆಯ್ತಾ ಎಂದು ಕೇಳುತ್ತಾನೆ. ಸಂಬಂಧ ಅಂದರೆ ಉಪಯೋಗಿಸಿ ಬಿಸಾಕುವ ಟಿಶ್ಯೂ ಪೇಪರಾ ಎಂದು ಕಿಡಿ ಕಾರುತ್ತಾನೆ. ಜೈದೇವ್ ಸಮಜಾಯಿಷಿ ಅವನ ಮಾತುಗಳನ್ನು ಕೇಳಿ ಕೆರಳಿ ಆಸ್ತಿ ಪತ್ರವನ್ನು ಜೈದೇವ್ ಮುಖದ ಮೇಲೆ ಬಿಸಾಕುತ್ತಾನೆ.

amruthadhaare-serial-june-29-episode-written-update

ಇದೇ ಸಮಯದಲ್ಲಿ ಮಲ್ಲಿ ತಾತ ಸಮಯ-ಸಂದರ್ಭ ಎಂತಹವರನ್ನೂ ಮುಠ್ಠಾಳವನ್ನಾಗಿಸುತ್ತೆ, ಕೆಲವು ಸಲ ನಾವು ಹೆಣೆದ ಬಲೆಯಲ್ಲಿ ನಾವೇ ಸಿಕ್ಕಿಹಾಕಿಕೊಳ್ಳುತ್ತೇವೆ ಎಂದು ತಾತ ಹೇಳುತ್ತಾನೆ. ನಿಮ್ಮ ಹಠಕ್ಕೆ.. ನಿಮ್ಮ ದ್ವೇಷಕ್ಕೆ.. ನೀವೆ ನಿಮ್ಮ ಕೈಯಾರೆ ನಿಮ್ಮ ಮಗಳ ಜೀವನ ಹಾಳು ಮಾಡಿದ್ರಲ್ಲಾ ಯಜಮಾನರೇ ಎಂದು ಹೇಳುತ್ತಾನೆ.

ತಾತನ ಈ ಮಾತುಗಳನ್ನು ಕೇಳಿದ ರಾಜೇಂದ್ರ ಭೂಪತಿ, ಸತ್ತೋಗಿರುವ ನನ್ನ ಮಗಳಿಗೂ ಇದಕ್ಕೂ ಏನು ಸಂಬಂಧ ಎಂದು ತಾತನ ಬಳಿ ಪ್ರಶ್ನೆ ಮಾಡುತ್ತಾನೆ. ಆಗ ಗೌತಮ್ ನಿಮ್ಮ ಮಗಳು ಸತ್ತಿಲ್ಲ ಬದುಕಿದ್ದಾಳೆ ಎನ್ನುತ್ತಾನೆ. ಮಲ್ಲಿನೇ ನಿಮ್ಮ ಮಗಳು ಎಂದು ಹೇಳುತ್ತಾನೆ. ಇದನ್ನು ಕೇಳಿದ ಮನೆಯವರಿಗೆಲ್ಲರಿಗೂ ಭೂಮಿಯೇ ಕುಸಿದಂತೆ ಆಗುತ್ತೆ. ಮುಂದುವರೆದು ಅವಳ ಸಂಸಾರಕ್ಕೆ ಕೊಳ್ಳಿ ಇಟ್ಟು ಅವಳ ಜೀವನ ಹಾಳು ಮಾಡಿದ್ರೀ ಎಂದು ಗೌತಮ್ ಹೇಳುತ್ತಾನೆ.

ಇದಕ್ಕೆ ನೊಂದುಕೊಳ್ಳುವ ಮಲ್ಲಿ ನಾನು ಇವನ ಮಗಳಾ ಸಾಧ್ಯನೇ ಇಲ್ಲ ಎಂದು ಕಣ್ಣೀರು ಹಾಕಲು ಶುರುಮಾಡುತ್ತಾಳೆ. ಮನುಷ್ಯತ್ವ ಇಲ್ಲದಿರುವ ಪಾಪಿ ಇವನು, ಇವನ ಮಗಳು ನಾನು ಅಂದರೆ ನಾನು ಒಪ್ಪಲು ಸಾಧ್ಯವೇ ಇಲ್ಲ ಎನ್ನುತ್ತಾಳೆ.

ಮಲ್ಲಿಯನ್ನು ಮಗಳೇ ಎಂದು ಒಪ್ಪಿಕೊಂಡು ಭೂಪತಿ

ಸತ್ಯ ತಿಳಿದ ಮಲ್ಲಿ ಸದ್ಯ ಶಾಕ್‌ನಲ್ಲಿದ್ದು ರಾಜೇಂದ್ರ ಭೂಪತಿ ತನ್ನ ಮಗಳನ್ನು ಮಾತನಾಡಿಸಲು ಬಂದಿದ್ದಾನೆ. ಮಗಳೇ ಎಂದು ಹೇಳಿದ್ದಾನೆ. ಇಷ್ಟು ವರ್ಷದ ನಂತರ ಮಗಳೇ ಎಂದು ಕರೆಯುತ್ತಿದ್ದೇನೆ ಖುಷಿಯಾಗುತ್ತಿದೆ ಎಂದು ಹೇಳುತ್ತಾನೆ.

amruthadhaare-serial-june-29-episode-written-update

ಇಷ್ಟು ವರ್ಷ ಈ ಖುಷಿ ಕಳ್ಕೊಂಡೇ ಎನ್ನುವ ನೋವು ಕೂಡ ಇದೆ ಎಂದು ಹೇಳುತ್ತಾನೆ. ಇಷ್ಟು ದಿನ ನೀನು ಇಲ್ಲ ಎಂದು ತಿಳಿದುಕೊಂಡಿದ್ದೇ ಅದಕ್ಕೆಲ್ಲ ಕಾರಣ ಆ ದಿವಾನ ಮನೆತನದವರು ಎಂದು ದ್ವೇಷ ಸಾಧಿಸುತ್ತಿದ್ದೆ ಎಂದು ಹೇಳುತ್ತಾನೆ. ಕೊನೆಗೆ ಆ ವಿಷ ನನ್ನ ಮಗಳ ಬಾಳನ್ನೇ ಬಲಿ ಪಡೆಯಿತು ಎಂದು ಬಿಕ್ಕುತ್ತಾನೆ. ನೀನು ನನ್ನ ಮಗಳು ಎಂದು ಗೊತ್ತಾಗದೇ ಅನ್ಯಾಯ ಮಾಡಿದೆ ದಯವಿಟ್ಟು ನನ್ನ ಕ್ಷಮಿಸು ಎನ್ನುತ್ತಾನೆ.

ಭೂಪತಿಗೆ ಕೈ ಮುಗಿದ ಮಲ್ಲಿ

ನನ್ನ ಯಾವುದೇ ಕಾರಣಕ್ಕೂ ಮಗಳು ಎಂದು ಕರೆಯಬೇಡ ಎಂದು ಮಲ್ಲಿ, ರಾಜೇಂದ್ರ ಭೂಪತಿಗೆ ಕೈ ಮುಗಿಯುತ್ತಾಳೆ. ನನ್ನ ಮೈಯೆಲ್ಲ ಉರಿಯುತ್ತೆ ಕಾದ ಕಬ್ಬಿಣ ಸುಟ್ಟಂಗಾಗುತ್ತೆ ಎಂದು ಹೇಳುತ್ತಾಳೆ. ಅದಕ್ಕೆ ತಪ್ಪು ಮಾಡಿದೀನಿ ನಿಜಾ, ನಾನು ಒಪ್ಕೋತೀನಿ ಯಾಕೆ ಇಷ್ಟು ಖಾರವಾಗಿ ಮಾತನಾಡ್ತೀಯಾ ಎಂದು ರಾಜೇಂದ್ರ ಭೂಪತಿ ಹೇಳುತ್ತಾನೆ. ಆದರೂ ನಾನು ನಿನ್ನ ತಂದೆ ತಾನೇ ಎಂದು ಕೇಳುತ್ತಾನೆ.

ಆತ್ಮಹತ್ಯೆ ಮಾಡಿಕೊಳ್ತಾನಾ ಭೂಪತಿ ?

ಮಲ್ಲಿಯ ಈ ಮಾತುಗಳನ್ನು ಕೇಳಿ ಆಘಾತಕ್ಕೊಳಗಾಗಿರುವ ರಾಜೇಂದ್ರ ಭೂಪತಿ, ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾನೆ. ಸಾಧ್ಯವಾದರೆ ನನ್ನನ್ನೂ ಕ್ಷಮಿಸಿ ಬಿಡು ಮಗಳೇ ಎಂದು ಪಿಸ್ತೂಲ್ ತೆಗೆದು ತನ್ನ ಹಣೆಗೆ ಇಟ್ಟುಕೊಂಡಿದ್ದಾನೆ. ಮತ್ತೊಂದು ಕಡೆ ಶಕುಂತಲಾ, ಭೂಮಿಕಾ ಮತ್ತು ಗೌತಮ್ ಬದುಕು ಸರ್ವನಾಶ ಮಾಡುವ ಶಪಥವನ್ನು ಮಾಡಿದ್ದು ಮುಂದೆ ಧಾರಾವಾಹಿ ಯಾವ ತಿರುವುನ್ನು ಪಡೆಯುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Amruthadhaare Kannada Serial: Find Out The Highlights Of June 29 Episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X