Amruthadhaare ; ಭೂಮಿಕಾ ಬದುಕು ಸರ್ವನಾಶ ಮಾಡುವ ಶಪಥ ಮಾಡಿದ ಶಕುಂತಲಾ, ದಿಯಾಗೆ ಭೂಪತಿ ಕಂಟಕ..!
ಅಮೃತಧಾರೆ ಧಾರಾವಾಹಿಯಲ್ಲಿ ಸದ್ಯ ರಾಜೇಂದ್ರ ಭೂಪತಿಗೆ ಮಲ್ಲಿ ತನ್ನ ಮಗಳೆಂದು ಗೊತ್ತಾಗಿದೆ. ಸತ್ಯ ತಿಳಿದ ಮಲ್ಲಿ ಸದ್ಯ ಶಾಕ್‌ನಲ್ಲಿದ್ದು ರಾಜೇಂದ್ರ ಭೂಪತಿ ತನ್ನ ಮಗಳನ್ನು ಮಾತನಾಡಿಸಲು ಬಂದಿದ್ದಾನೆ. ಮಗಳೇ ಎಂದು ಹೇಳಿದ್ದಾನೆ. ಇಷ್ಟು ವರ್ಷದ ನಂತರ ಮಗಳೇ ಎಂದು ಕರೆಯುತ್ತಿದ್ದೇನೆ ಖುಷಿಯಾಗುತ್ತಿದೆ ಎಂದು ಹೇಳುತ್ತಾನೆ. ಇಷ್ಟು ವರ್ಷ ಈ ಖುಷಿ ಕಳ್ಕೊಂಡೇ ಎನ್ನುವ ನೋವು ಕೂಡ ಇದೆ ಎಂದು ಹೇಳುತ್ತಾನೆ.
ಇಷ್ಟು ದಿನ ನೀನು ಇಲ್ಲ ಎಂದು ತಿಳಿದುಕೊಂಡಿದ್ದೇ ಅದಕ್ಕೆಲ್ಲ ಕಾರಣ ಆ ದಿವಾನ ಮನೆತನದವರು ಎಂದು ದ್ವೇಷ ಸಾಧಿಸುತ್ತಿದ್ದೆ ಎಂದು ಹೇಳುತ್ತಾನೆ. ಕೊನೆಗೆ ಆ ವಿಷ ನನ್ನ ಮಗಳ ಬಾಳನ್ನೇ ಬಲಿ ಪಡೆಯಿತು ಎಂದು ಬಿಕ್ಕುತ್ತಾನೆ. ನೀನು ನನ್ನ ಮಗಳು ಎಂದು ಗೊತ್ತಾಗದೇ ಅನ್ಯಾಯ ಮಾಡಿದೆ ದಯವಿಟ್ಟು ನನ್ನ ಕ್ಷಮಿಸು ಎನ್ನುತ್ತಾನೆ.

ನನ್ನ ಯಾವುದೇ ಕಾರಣಕ್ಕೂ ಮಗಳು ಎಂದು ಕರೆಯಬೇಡ ಎಂದು ಮಲ್ಲಿ, ರಾಜೇಂದ್ರ ಭೂಪತಿಗೆ ಕೈ ಮುಗಿಯುತ್ತಾಳೆ. ನನ್ನ ಮೈಯೆಲ್ಲ ಉರಿಯುತ್ತೆ ಕಾದ ಕಬ್ಬಿಣ ಸುಟ್ಟಂಗಾಗುತ್ತೆ ಎಂದು ಹೇಳುತ್ತಾಳೆ.
ಅದಕ್ಕೆ ತಪ್ಪು ಮಾಡಿದೀನಿ ನಿಜಾ, ನಾನು ಒಪ್ಕೋತೀನಿ ಯಾಕೆ ಇಷ್ಟು ಖಾರವಾಗಿ ಮಾತನಾಡ್ತೀಯಾ ಎಂದು ರಾಜೇಂದ್ರ ಭೂಪತಿ ಹೇಳುತ್ತಾನೆ. ಆದರೂ ನಾನು ನಿನ್ನ ತಂದೆ ತಾನೇ ಎಂದು ಕೇಳುತ್ತಾನೆ. ಸಾಧ್ಯವಾದರೆ ನನ್ನನ್ನೂ ಕ್ಷಮಿಸಿ ಬಿಡು ಮಗಳೇ ಎಂದು ಪಿಸ್ತೂಲ್ ತೆಗೆದು ತನ್ನ ಹಣೆಗೆ ಇಟ್ಟುಕೊಂಡಿದ್ದಾನೆ.
ಶಕುಂತಲಾ ಶಪಥ
ಮತ್ತೊಂದು ಕಡೆ ಕೊತ ಕೊತ ಕುದಿಯುತ್ತಿರುವ ಶಕುಂತಲಾ ಎದುರು ಕುಳಿತ ಭೂಮಿಕಾ, ನಿಮಗೆ ಗೊತ್ತು ನಾನು ಅವರ ಹತ್ರ ರಿಕ್ವೆಸ್ಟ್ ಮಾಡ್ಕೊಂಡೆ.. ತಿಳಿಸಿ ಹೇಳಿದೆ.. ತಿದ್ದಿಕೊಂಡು ಬದುಕುವುದಕ್ಕೆ ಒಂದು ಅವಕಾಶ ಕೊಟ್ಟೆ, ಆದರೆ ತಿದ್ದಿಕೊಳ್ಳಲಿಲ್ಲ ಬದಲಿಗೆ ತಿರುಗಿ ಬಿದ್ದರು ಎಂದು ಹೇಳುತ್ತಾಳೆ. ಇದೆಲ್ಲದಕ್ಕೂ ಅವರೇ ಹೊಣೆ ಎನ್ನುತ್ತಾಳೆ. ನಿಮಗೆ ಎಷ್ಟು ನೋವಾಗಿದೆ ಎನ್ನುವುದು ನನಗೆ ಗೊತ್ತು ಅತ್ತೆ ಬೇಜಾರ್ ಮಾಡಿಕೊಳ್ಳಬೇಡಿ ಎಂದು ಹೇಳುತ್ತಾಳೆ.
ಭೂಮಿಕಾ ಮಾತುಗಳನ್ನೆಲ್ಲ ಕೇಳಿಸಿಕೊಳ್ಳುವ ಶಕುಂತಲಾ ಭೂಮಿಕಾ ಎದ್ದು ಹೋದ ನಂತರ, ನನ್ನ ಮಗನನ್ನು ನನ್ನಿಂದ ದೂರ ಮಾಡಿದೆಯಲ್ಲಾ.. ನಿನ್ನ ಮಗುನ ನಾನು ಹೇಗೆ ದೂರ ಮಾಡ್ತೀನಿ ಅಂತ ನೋಡ್ತಾ ಇರು ಎಂದು ಹೇಳುತ್ತಾಳೆ. ಇದು ನನ್ನ ಶಪಥ ಎನ್ನುತ್ತಾಳೆ.
ಜೈದೇವ್ ಬಳಿ ಬೇಡಿಕೊಂಡ ರಾಜೇಂದ್ರ ಭೂಪತಿ
ಮಲ್ಲಿ ತನ್ನ ಮಗಳು ಎಂದು ಗೊತ್ತಾದ ತಕ್ಷಣ ಪ್ರಾಯಶ್ಚಿತದ ಬೇಗೆಯಲ್ಲಿ ಬೇಯ್ತಿರುವ ರಾಜೇಂದ್ರ ಭೂಪತಿ, ಜೈದೇವ್ ಮನವೊಲಿಸುವ ಪ್ರಯತ್ನ ಮಾಡುತ್ತಾನೆ. ಇವಳಿಗಿಂತ ಅವಳೇ ನಿನಗೆ ಸರಿಯಾದ ಜೋಡಿ, ನೀನು ಮೋಸ ಮಾಡ್ತೀಯಾ ಎಂದು ಗೊತ್ತಿದ್ದರೂ ಕೂಡ ಅವಳು ನಿನ್ನ ಜೊತೆ ಬದುಕಿದ್ದಾಳೆ, ನಿನ್ನ ನಂಬ್ಕೊಂಡಿದ್ದಾಳೆ ಎನ್ನುತ್ತಾನೆ. ನಿಮ್ಮ ಇಬ್ಬರನ್ನು ನಾನು ಒಂದು ಮಾಡಿದಾಗಲೇ ಅವಳು ನನ್ನ ತಂದೆ ಅಂತ ಒಪ್ಪಿಕೊಳ್ಳುವುದು ಎಂದು ಹೇಳುತ್ತಾನೆ. ಆ ಅವಕಾಶ ನನ್ನಿಂದ ಕಿತ್ಕೋಬೇಡ, ನನ್ನ ಮಗಳ ಜೊತೆ ಅವಕಾಶ ನನಗೆ ಮಾಡಿಕೊಡು ಎಂದು ಬೇಡಿಕೊಳ್ಳುತ್ತಾನೆ.
ನನಗೆ ಅನ್ಯಾಯವಾಗಲ್ವಾ ಎಂದು ಕಿಡಿ ಕಾರಿದ ದಿಯಾ
ರಾಜೇಂದ್ರ ಭೂಪತಿಯ ಮಾತುಗಳನ್ನು ಕೇಲಿ ದಿಯಾ ಕೆರಳಿ ಕೆಂಡವಾಗುತ್ತಾಳೆ. ನನಗೆ ಅನ್ಯಾಯವಾಗಲ್ವಾ, ತಲೆ ಕೆಟ್ಟಿದೆಯಾ ನಿಮಗೆ ಎಂದು ಹೇಳುತ್ತಾಳೆ. ನಾವು ಇಬ್ಬರು ಈಗಷ್ಟೇ ಮದುವೆಯಾಗಿ ನೆಮ್ಮದಿಯಾಗಿದ್ದೇವೆ, ನಮ್ಮ ನೆಮ್ಮದಿ ಕಿತ್ಕೋಬೇಡಿ ಎಂದು ಹೇಳುತ್ತಾಳೆ. ಜೈದೇವ್ ಕೂಡ ರಾಜೇಂದ್ರ ಭೂಪತಿ ವಿರುದ್ದ ತಿರುಗಿ ಬೀಳ್ತಾನೆ. ಮನೆಯಿಂದ ಹೊರ ಹೋಗುವಂತೆ ಹೇಳುತ್ತಾನೆ.
ಇದರಿಂದ ಕೋಪಗೊಳ್ಳುವ ರಾಜೇಂದ್ರ ಭೂಪತಿ ನನಗೆ ಅವಮಾನ ಮಾಡ್ತಿದ್ದೀಯಾ ? ನಾನು ಯಾರು ಅಂತ ಗೊತ್ತು ತಾನೇ ? ನನ್ನ ಇನ್ನೊಂದು ಮುಖ ನೋಡಿದೀಯಾ ತಾನೇ ? ನನ್ನ ಮಗಳ ಜೀವನ ಹಾಳು ಮಾಡಿ ನೀವು ಇಬ್ಬರು ಅದ್ಹೇಗೆ ನೆಮ್ಮದಿಯಿಂದ ಇರ್ತೀರಾ ಎಂದು ನಾನು ನೋಡ್ತೀನಿ ಎಂದು ಹೇಳುತ್ತಾನೆ. ನನ್ನ ಮಗಳ ಜೊತೆಯಲ್ಲಿಯೇ ನೀನು ಬದುಕಬೇಕು ನಿನಗೆ ಬೇರೆ ಆಯ್ಕೆ ಇಲ್ಲ ಯಾಕೆಂದರೆ ಇವಳೇ ಇರಲ್ಲ ಎಂದು ಹೇಳಿ ಗನ್ ತೆಗೆಯುತ್ತಾನೆ.


Click it and Unblock the Notifications











