Amruthadhaare ; ಹಗಲುಗನಸು ಕಾಣುತ್ತಿದ್ದ ಶಕುಂತಲಾಗೆ ಶಾಕ್ ನೀಡಿದ ಗೌತಮ್, ಯಾರ‍್ಯಾರಿಗೆ ಏನು ಸಿಕ್ತು ?
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಮೇಲೆ ಹಲ್ಲೆ ನಡೆದಿದೆ. ನಡೆದ ಹಲ್ಲೆಯಿಂದ ಗೌತಮ್ ವಿಚಲಿತಗೊಂಡಿದ್ದು ಆಸ್ತಿಯನ್ನು ಹಂಚಲು ಮುಂದಾಗಿದ್ದಾನೆ. ತಾನು ಬದುಕಿದ್ದಾಗಲೇ ಯಾರು ಯಾರಿಗೆ ಏನು ಸಿಗಬೇಕು ಅದನ್ನು ನೀಡಬೇಕೆಂಬ ನಿರ್ಧಾರವನ್ನು ಮಾಡಿರುವ ಗೌತಮ್ ಸದ್ಯ ಶಕುಂತಲಾ ಬಳಿ ತನ್ನ ಮನದ ಮಾತು ಹಂಚಿಕೊಂಡಿದ್ದಾನೆ. ಮತ್ತೊಂದು ಕಡೆ ತನ್ನ ಗಂಡನ ಮೇಲೆ ಹಲ್ಲೆ ನಡೆದ ವಿಚಾರ ತಿಳಿದು ಆತಂಕಕ್ಕೆ ಒಳಗಾಗಿರುವ ಗರ್ಭಿಣಿ ಭೂಮಿಕಾ ಹಲ್ಲೆ ಮಾಡಿದ್ದು ಯಾರು ಎನ್ನುವ ಚಿಂತೆ ಮಾಡುತ್ತಿದ್ದಾಳೆ. ಇನ್ನೊಂದು ಕಡೆ ಜೈದೇವ್ ತನ್ನ ಪ್ರಿಯತಮೆ ದಿಯಾ ಮನೆಯಲ್ಲಿ ಕಾಲ ಕಳೆಯುತ್ತಿದ್ದಾನೆ.
ವಿಲ್ ಬರೆಯುವುದಾಗಿ ಶಕುಂತಲಾಗೆ ಹೇಳಿದ ಗೌತಮ್
ಶಕುಂತಲಾ ಎದುರು ಗೌತಮ್ ಆಸ್ತಿಯಲ್ಲಿ ಭಾಗ ಮಾಡುವ ಮಾತುಗಳನ್ನಾಡುತ್ತಾನೆ. ಗೌತಮ್ ಮಾತು ಕೇಳಿ ಮನದಲ್ಲಿ ಖುಷಿ ಪಡುವ ಶಕುಂತಲಾ ಅದರ ಅವಶ್ಯಕತೆ ಈಗೇನಿದೆ ಎಂದು ಕೇಳುತ್ತಾಳೆ. ಆಗ ಗೌತಮ್ ತುಂಬಾನೇ ಅವಶ್ಯಕತೆ ಇದೆ ಎಲ್ಲ ಚೆನ್ನಾಗಿರುವಾಗಲೇ ಆಗಬೇಕು ಎನ್ನುತ್ತಾನೆ.

ಯಾರು ಯಾರಿಗೆ ಏನೇನು ಹೋಗಬೇಕು ಎನ್ನುವುದು ನಿರ್ಧಾರ ಆಗಬೇಕು ಆಗ ಎಲ್ಲರಿಗೆ ಒಂದು ಭದ್ರತೆ ಇರುತ್ತೆ, ಭವಿಷ್ಯದ ಚಿಂತೆ ಇರುವುದಿಲ್ಲ ಎನ್ನುವ ಗೌತಮ್ ಇನ್ನೇನು ಲಾಯರ್ ಬರ್ತಾರೆ ಇವತ್ತೇ ಎಲ್ಲ ಮುಗಿಸಿ ಬಿಡ್ತೀನಿ ಎನ್ನುತ್ತಾನೆ. ಗೌತಮ್ ಮಾತು ಕೇಳಿ ಶಕುಂತಲಾ ಬಾಯಿಗೆ ಲಡ್ಡು ಬಂದು ಬಿದ್ದಂತಾಗುತ್ತೆ.
ಜೈದೇವ್‌ಗೆ ಫೋನ್ ಮಾಡಿದ ಶಕುಂತಲಾ
ಖುಷಿಯಲ್ಲಿ ಜೈದೇವ್‌ಗೆ ಶಕುಂತಲಾ ಫೋನ್ ಮಾಡುತ್ತಾಳೆ. ಗೌತಮ್ ವಿಲ್ ಬರೆಯಲು ಮುಂದಾಗಿರುವುದನ್ನು ಹೇಳುತ್ತಾಳೆ. ಅವನ ಮೇಲೆ ಅಟ್ಯಾಕ್ ಆಯ್ತಲ್ಲ ಹೆದರಿಕೊಂಡಿದ್ದಾನೆ, ತನಗೇನಾದರೂ ಆದರೆ ಹೆಂಡ್ತಿಗೆ, ಮಗುಗೆ, ತಮ್ಮಂದಿರ ಕಥೆ ಏನಾಗುತ್ತೆ ಎಂದು ಗಂಭೀರವಾಗಿ ಯೋಚನೆ ಮಾಡಿದ್ದಾನೆ ಎನ್ನುತ್ತಾಳೆ.
ನಮ್ಮ ಕೆಲಸ ಸುಲಭ ಆಯ್ತು ಎನ್ನುವ ಶಕುಂತಲಾ ಅವನು ಹೇಗೂ ಎಲ್ಲರಿಗೂ ಸಮವಾಗಿ ಹಂಚುತ್ತಾನೆ, ಬೇಕಿದ್ದರೆ ಅವನ ಪಾಲನ್ನು ಕೂಡ ಅವನು ಕೊಡ್ತಾನೆ, ಯಾರಿಗೂ ಅನ್ಯಾಯ ಮಾಡಲ್ಲ ಅವನು, ಈ ವಿಚಾರದಲ್ಲಿ ಗೌತಮ್ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ, ಹೀಗಾಗಿ ಈ ವಿಚಾರದಲ್ಲಿ ನನಗೆ ಯಾವ ಟೆನ್ಷನ್ ಕೂಡ ಇಲ್ಲ, ನಮಗೇನು ಬೇಕೋ ಅದು ಅವನು ಕೊಡ್ತಾನೇ ಎಂದು ಜೈದೇವ್‌ಗೆ ಹೇಳುತ್ತಾಳೆ.
ಆಸ್ತಿ ಬೇಡ ಎಂದ ಸುಧಾ.
ಮನೆಗೆ ವಕೀಲರು ಬಂದಿದ್ದಾರೆ. ಮನೆಯ ಎಲ್ಲ ಸದಸ್ಯರು ಹಾಜರಾಗಿದ್ದಾರೆ. ಈ ಸಮಯದಲ್ಲಿ ಗೌತಮ್ ಮುಂದೆ ಸುಧಾ ಬೇಡಿಕೆಯನ್ನಿಟ್ಟಿದ್ದು ನನಗೆ ಯಾವ ಆಸ್ತಿನೂ ಬೇಡ ಅಣ್ಣ ಎಂದಿದ್ದಾಳೆ. ಈ ಮಾತು ಕೇಳಿ ಆಶ್ಚರ್ಯಗೊಳ್ಳುವ ಗೌತಮ್ ಯಾಕೆ ಎಂದು ಕೇಳುತ್ತಾನೆ. ಆಗ ಶಕುಂತಲಾ ಅವಳ ಭಾವನೆಗೆ ಕೂಡ ನಾವು ಬೆಲೆ ಕೊಡಬೇಕಾಗುತ್ತೆ. ಹೇಗೋ ಕೊನೆಯವರೆಗೆ ನಿನ್ನ ಆಶ್ರಯದಲ್ಲಿಯೇ ಅವಳು ಇರುವುದು ಎಂದು ಶಕುಂತಲಾ ಅಣ್ಣ ಹೇಳುತ್ತಾನೆ. ಇದಕ್ಕೆ ಗೌತಮ್ ಒಪ್ಪಿಕೊಂಡಿದ್ದಾನೆ.
ಯಾರಿಗೆ ಏನ್ ಸಿಕ್ತು ?
ಹೆಸರಘಟ್ಟದಲ್ಲಿರುವ ತನ್ನ ಫಾರ್ಮ್‌ಹೌಸ್‌ನ್ನು ಜೈದೇವ್ ಹೆಸರಿಗೆ ಗೌತಮ್ ಮಾಡಿದ್ದಾನೆ. ಸದಾಶಿವನಗರದ ಮನೆ ಪಾರ್ಥನ ಪಾಲಾಗಿದೆ. ರಾಜಸ್ತಾನದಲ್ಲಿರುವ ಮನೆಯನ್ನು ತನ್ನ ತಂಗಿ ಅಶ್ವಿನಿ ಹೆಸರಿಗೆ ಗೌತಮ್ ಮಾಡಿದ್ದಾನೆ. ದುಬೈನಲ್ಲಿರುವ ಅಪಾರ್ಟ್‌ಮೆಂಟ್‌ನ ಮಹಿಮಾಗೆ ಸಿಕ್ಕಿದೆ. ಮನೆಯಲ್ಲಿರುವ ಕ್ಯಾಶ್‌ನ ಸಮನಾಗಿ ಹಂಚಲು ಗೌತಮ್ ನಿರ್ಧರಿಸಿದ್ದಾನೆ.
ಜೈದೇವ್‌ಗೆ ಶಾಕ್
ಕಂಪನಿಗೆ ಗೌತಮ್ ದಿವಾನ್ ನಂತರ ನಾನೇ ಉತ್ತರಾಧಿಕಾರಿ ಎಂದು ಜೈದೇವ್ ಅಂದುಕೊಂಡಿರುತ್ತಾನೆ. ಆದರೆ. ಜೈದೇವ್‌ನ ಈ ಆಸೆ ಈಗ ಮಣ್ಣು ಪಾಲಾಗಿದೆ. ನನ್ನ ಸ್ಥಾನಕ್ಕೆ ಪಾರ್ಥ ಸೂಕ್ತವಾದ ವ್ಯಕ್ತಿ ಎಂದು ಗೌತಮ್ ದಿವಾನ್ ಘೋಷಣೆ ಮಾಡಿದ್ದಾನೆ. ಜೈದೇವ್ ಈಗಾಗಲೇ ಕಂಪನಿಯ ಡೈರೆಕ್ಟರ್ ಆಗಿದ್ದಾನೆ, ಹೀಗಾಗಿ ನನ್ನ ಜಾಗದಲ್ಲಿ ಪಾರ್ಥ ಕುಳಿತರೆ ಅವನಿಗೂ ಜವಾಬ್ಧಾರಿ ಇರುತ್ತೆ ಎಂದು ಹೇಳುತ್ತಾನೆ. ಇದರಿಂದ ಜೈದೇವ್‌ಗೆ ಆಘಾತವಾಗಿದೆ. ಇನ್ಮುಂದೆ ನನ್ನ ತಮ್ಮಂದಿರೇ ಎಲ್ಲ ನಡೆಸಿಕೊಂಡು ಹೋಗ್ತಾರೆ, ನಾನು ಕೇವಲ ನಿಗಾ ವಹಿಸುತ್ತೇನೆ ಎಂದು ಗೌತಮ್ ಹೇಳುತ್ತಾನೆ.
ಶಕುಂತಲಾಗೆ ಸಿಕ್ತಾ ಆಸ್ತಿ ?
ಶಕುಂತಲಾಗೆ ಗೌತಮ್ ಶಾಕ್ ನೀಡಿದ್ದಾನೆ. ನನ್ನ ಹೆಸರಿನಲ್ಲಿರುವ 51 % ಶೇರ್ ಹಾಗೂ ನನ್ನ ಹೆಸರಿನಲ್ಲಿ ಏನೆಲ್ಲ ಆಸ್ತಿ ಇದೆಯೋ ಅದೆಲ್ಲವನ್ನು ನಾನು ನನ್ನ ಮಗು ಮತ್ತು ಭೂಮಿಕಾ ಹೆಸರಿಗೆ ಮಾಡುವ ನಿರ್ಧಾರ ಮಾಡಿದ್ದೇನೆ ಎಂದು ಗೌತಮ್ ಹೇಳಿದ್ದಾನೆ. ಗೌತಮ್‌ನ ಈ ಮಾತು ಕೇಳಿ ಜೈದೇವ್ ಮತ್ತು ಶಕುಂತಲಾ ಕೆರಳಿ ಕೆಂಡವಾಗಿದ್ದಾರೆ. ಮುಂದೆ. ಆಸ್ತಿಯ ಸಲುವಾಗಿ ಭೂಮಿಕಾಗೆ ಶಕುಂತಲಾ ಸಮಸ್ಯೆಯನ್ನೊಡುತ್ತಾಳಾ ? ಆಸ್ತಿಗಾಗಿ ಏನೆಲ್ಲ ಪ್ಲ್ಯಾನ್ ಮಾಡ್ತಾಳೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











