Amruthadhaare: ಆನಂದ್‌ನಿಂದ ಯಾವ ಕೆಲಸವೂ ಆಗ್ತಿಲ್ಲ ಎಂದು ಜೈದೇವ ಬೇಸರ

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಮಹಿಮಾ ಮನೆಯಲ್ಲಿ ಎಲ್ಲರೂ ಹೊರಗಡೆ ಹೋಗಿರುತ್ತಾರೆ. ಜೀವನ್ ಕೂಡ ಆಫಿಸಿಗೆ ಹೊರಟಿರುತ್ತಾನೆ. ಆದರೆ ಜೀವನ್‌ಗೆ ಮಹಿಮಾ ರಜೆ ಹಾಕಲು ಹೇಳುತ್ತಾಳೆ.

ಮಹಿಮಾಗೋಸ್ಕರ ಜೀವನ್ ಕೂಡ ರಜೆ ಹಾಕುತ್ತಾನೆ. ಅಪರೂಪಕ್ಕೆ ಮನೆಯಲ್ಲಿ ಇಬ್ಬರೇ ಇದ್ದಾರೆ. ಹಾಗಾಗಿ ಜೀವನ್ ಹಾಗೂ ಮಹಿಮಾ ಸೇರಿ ಅಡುಗೆ ಮಾಡಲು ಮುಂದಾಗಿದ್ದಾರೆ.

ಇತ್ತ ಭೂಮಿಕಾ ಹಾಗೂ ಗೌತಮ್ ಇಡೀ ದಿನ ಚೆನ್ನಾಗಿರುತ್ತಾರೆ. ರಾತ್ರಿ ಮಲಗುವ ಸಂದರ್ಭದಲ್ಲಿ ಜಗಳ ಆಡುತ್ತಾರೆ. ಇಬ್ಬರದ್ದೂ ನಿತ್ಯ ಇದೇ ಕಥೆಯಾಗಿದೆ.

Amruthdhaare-serial

ಮತ್ತೆ ಜಗಳ ಮಾಡಿಕೊಂಡ ಜೋಡಿ

ಗೌತಮ್- ಭೂಮಿಕಾ ವಿಷಯವೇ ಇಲ್ಲದೇ ಇಬ್ಬರೂ ಕಿತ್ತಾಡುತ್ತಾರೆ. ಗೌತಮ್ ಕೂಡ ಕೋಪ ಮಾಡಿಕೊಂಡು ರೂಮಿನಿಂದ ಆಚೆ ಹೊರಟು ಹೋಗುತ್ತಾನೆ. ನಂತರ ರೂಮಿನ ಬಾಗಿಲಲ್ಲಿ ನಿಂತು, ನನ್ನನ್ನು ಅರ್ಥ ಮಾಡಿಕೊಳ್ಳುವಂತವಳು ನನಗೆ ಬೇಕು. ನನ್ನ ವಯಸ್ಸು, ನನಗಿರುವ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುತ್ತೀರಾ ಎಂದುಕೊಂಡಿದ್ದೇನೆ ಎಂದು ರಿಕ್ವೆಸ್ಟ್ ಮಾಡುತ್ತಾನೆ. ಆದರೆ, ಭುಮಿಕಾ ಕಿವಿಗೆ ಹತ್ತಿ ಇಟ್ಟುಕೊಂಡು ಕುಳಿತಿರುತ್ತಾಳೆ. ಗೌತಮ್ ಮಾತನಾಡುವುದೇನನ್ನೂ ಕೇಳಿಸಿಕೊಳ್ಳುವುದಿಲ್ಲ.

ಭೂಮಿಕಾ ನಾಟಕ ಮಾಡುತ್ತಿದ್ದಾಳಾ?

ರೂಮಿನೊಳಗೆ ಬಂದ ಮೇಲೆ ಭೂಮಿಕಾ ಕೇಳಿಸಿಕೊಂಡಳಾ? ಇಲ್ಲ, ನಾಟಕ ಮಾಡುತ್ತಿದ್ದಾಳಾ? ಎಂಬುದು ಅರ್ಥವಾಗುವುದಿಲ್ಲ. ಇದನ್ನು ಕನ್ಫರ್ಮ್ ಮಾಡಿಕೊಳ್ಳಲು ಪದೇ ಪದೇ ಭೂಮಿಕಾ ಬಳಿ ನಾನು ಮಾತನಾಡಿದ್ದು, ನಿಮಗೆ ಅರ್ಥವಾಯ್ತ ಎಂದು ಕೇಳುತ್ತಾನೆ. ಭೂಮಿಕಾ ಅದೇನು ಎಂದು ಸರಿಯಾಗಿ ಹೇಳಿ ಎಂದು ಕೇಳುತ್ತಾಳೆ. ಆಗ ಗೌತಮ್ ಇನ್ನೊಮ್ಮೆ ಹೇಳುತ್ತೇನೆ ಬಿಡಿ ಎಂದು ಸುಮ್ಮನಾಗುತ್ತಾನೆ.

Amruthdhaare-serial

ಸಂಸಾರದ ಪಾಠ ಮಾಡಿದ ಆನಂದ್

ಇತ್ತ ಆನಂದ್ ಸಮಯ ಸಿಕ್ಕಾಗಲೆಲ್ಲಾ ಗೌತಮ್‌ಗೆ ಸಂಸಾರದ ಪಾಠ ಮಾಡುತ್ತಿರುತ್ತಾನೆ. ನೀನು ಅತ್ತಿಗೆಯ ಜೊತೆಗೆ ಹೀಗಿರಬೇಕು. ಹಾಗಿರಬೇಕು ಎಂದು ಹೇಳಿಕೊಡುತ್ತಾನೆ. ಆದರೆ, ಗೌತಮ್‌ಗೆ ಈಗೋ ಪ್ರಾಬ್ಲಮ್ ಇದೆ. ಹಾಗಾಗಿ ತಾನು ಭೂಮಿಕಾ ಜೊತೆಗೆ ಹೊಂದಿಕೊಳ್ಳಲು ಹೆಚ್ಚು ಸಮಯ ಕೊಡುತ್ತಿಲ್ಲ. ಆನಂದ್ ಗಂಡ ಹೆಂಡತಿ ಎಷ್ಟು ಅನ್ಯೋನ್ಯವಾಗಿರಬೇಕು ಇಬ್ಬರೂ ಸದಾ ಖುಷಿ ಖುಷಿಯಾಗಿರಬೇಕು ಎಂದು ಹೇಳುತ್ತಾನೆ. ಇದಕ್ಕೂ ಗೌತಮ್‌ಗೆ ಇರಿಟೇಟ್ ಆಗುತ್ತದೆ.

ಜೈದೇವ ಕೈತಪ್ಪಿದ ಅವಕಾಶ

ಕಂಪನಿಯಲ್ಲಿ ವಂಚನೆಯಾಗಿರುವುದು ಬೆಳಕಿಗೆ ಬಂದ ಕಾರಣ ಅಕೌಂಟೆಂಟ್ ಅನ್ನು ಕೆಲಸದಿಂದ ತೆಗೆಯಲಾಗಿದೆ. ಈಗ ಆ ಜವಾಬ್ದಾರಿಯನ್ನು ಆನಂದ್‌ಗೆ ಗೌತಮ್ ವಹಿಸಿದ್ದಾನೆ. ಇದರಿಂದ ಜೈದೇವನಿಗೆ ಸಂಕಷ್ಟ ಎದುರಾಗಿದೆ. ಹಣ ಪಡೆಯಲು ಪದೇ ಪದೇ ಆನಂದ್ ಬಳಿ ಲೆಕ್ಕ ಹೇಳಬೇಕಾಗಿದೆ. ಇದು ಜೈದೇವನಿಗೆ ಕಷ್ಟದ ಕೆಲಸ. ಹೀಗಾಗಿ ಬೇರೆ ಕೆಲಸದವರನ್ನು ಕರೆಸಿಕೊಳ್ಳಲು ಜೈದೇವ ಪ್ಲಾನ್ ಮಾಡುತ್ತಾನೆ. ಆದರೆ, ಅಕೌಂಟೆಂಟ್‌ಗೆ ಸಂದರ್ಶನ ಮಾಡುವ ಅವಕಾಶವೂ ಜೈದೇವನ ಕೈತಪ್ಪಿದ್ದು, ಅದೂ ಕೂಡ ಆನಂದ್ ಹೆಗಲೇರಿದೆ.

ಆನಂದ್ ಕಥೆ ಮುಗಿಸುತ್ತಾಳಾ ಶಕುಂತಲಾ?

ಜೈದೇವ, ಲಕ್ಷ್ಮೀಕಾಂತ ಹಾಗೂ ಶಕುಂತಲಾ ಮೂವರು ಬೇಸರ ಮಾಡಿಕೊಂಡಿದ್ದಾರೆ. ದಿನ ಕಳೆದಂತೆ ಆನಂದ್ ಪ್ರತಿಯೊಂದು ಕೆಲಸಕ್ಕೂ ಅಡ್ಡವಾಗುತ್ತಿದ್ದಾನೆ. ಮನೆಯಲ್ಲೂ ಆನಂದ್ ಇರುತ್ತಾನೆ. ಆಫಿಸಿನ ಪ್ರತಿಯೊಂದು ಕೆಲಸದಲ್ಲೂ ಆನಂದ್ ಕೈ ಇದೆ. ಹೀಗೆ ಬಿಟ್ಟರೆ, ನಾವು ಪ್ರತಿಯೊಂದಕ್ಕೂ ಕಷ್ಟ ಪಡಬೇಕಾಗುತ್ತದೆ. ಆನಂದ್‌ಗೆ ಈ ಮನೆಯಲ್ಲಿ ಇನ್ನು ಜಾಗ ಬಿಡಬಾರದು. ಹೇಗಾದರೂ ಮಾಡಿ ಆನಂದ್ ಕಥೆಯನ್ನು ಮುಗಿಸಬೇಕು ಎಂದು ಶಕುಂತಲಾ ಅಂದುಕೊಂಡಿದ್ದಾಳೆ. ಸ್ನೇಹಿತನ ಒಳಿತಿಗಾಗಿ ಹಗಲು-ರಾತ್ರಿ ಕಷ್ಟ ಪಡುತ್ತಿರುವ ಆನಂದ್‌ಗೆ ಶಕುಂತಲಾ ಹೊಸ ಸಂಕಷ್ಟವನ್ನು ತಂದೊಡ್ಡುತ್ತಾಳಾ..? ಸ್ನೇಹಿತರನ್ನು ಸಂಪೂರ್ಣವಾಗಿ ದೂರ ಮಾಡುತ್ತಾಳಾ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
Amruthadhaare kannada Serial last episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X