Amruthadhaare Serial:ಮದುವೆ ಬಗ್ಗೆ ಮಧುರಾ ಪ್ರಸ್ತಾಪ: ಒಪ್ಪಿಗೆ ಕೊಟ್ನಾ ಗೌತಮ್? ಇಂದು ಏನಾಗುತ್ತೆ?
'ಅಮೃತಧಾರೆ' ಧಾರಾವಾಹಿಯಲ್ಲಿ ಶಕುಂತಲಾ ಮಾತಿಗೆ ಮರುಳಾಗಿ ಈಗಾಗಲೇ ಗೌತಮ್‌ಗೆ ನೋಡಿರುವ ಹುಡುಗಿಯನ್ನು ಭೂಮಿಕಾ ಮಾತನಾಡಿಸಿ ಬಂದಿದ್ದಾಳೆ.
ಹುಡುಗಿಯನ್ನೂ ಒಪ್ಪಿಕೊಂಡಿದ್ದು, ಮನೆಗೂ ಆಹ್ವಾನ ಕೊಟ್ಟಿದ್ದಾಳೆ. ಅಲ್ಲದೇ, ಇತ್ತ ಗೌತಮ್ ಬಳಿ ರೇಗಾಡಿ ಮನೆಯಲ್ಲೇ ಉಳಿದುಕೊಳ್ಳುವಂತೆ ತಾಕೀತು ಮಾಡಿದ್ದಾಳೆ.
ಗೌತಮ್ ಕೂಡ ಭೂಮಿಕಾ ಮನಸ್ಥಿತಿಯನ್ನು ಅರಿತುಕೊಂಡಿದ್ದು, ಸದ್ಯ ಏನೇ ಹೇಳಿದರೂ ಓಕೆ ಎನ್ನುತ್ತಿದ್ದಾನೆ. ಭೂಮಿಕಾ ಮಧುರಾ ಮನೆಗೆ ಬರುವ ದಾರಿಯನ್ನೇ ಕಾಯುತ್ತಿದ್ದಾಳೆ.

ಮಧುರಾ ಜೊತೆಗೆ ಕೆಫೆಗೆ ತೆರಳಿದ ಗೌತಮ್
ಮನೆಗೆ ಮಧುರಾ ಬಂದಾಗ ಗೌತಮ್‌ಗೆ ಭೂಮಿಕಾ ಪರಿಚಯ ಮಾಡಿಸಿಕೊಟ್ಟಿದ್ದು. ಇಬ್ಬರೂ ಕೆಲ ಸಮಯ ಮಾತನಾಡುತ್ತಾರೆ. ಆಕೆ ಮನೆಯಿಂದ ಹೊರಟ ಮೇಲೆ ಭೂಮಿಕಾ ಗೌತಮ್ ಬಳಿ ಮಧುರಾ ಬಗ್ಗೆ ನಿಮ್ಮ ಅನಿಸಿಕೆ ಏನು ಎಂದು ಪ್ರಶ್ನಿಸಿದ್ದಳು. ಆಗ ಗೌತಮ್ ಪಾಸಿಟಿವ್ ಆಗಿ ಉತ್ತರಿಸುತ್ತಾನೆ. ಇದು ಭೂಮಿಕಾಗೆ ದುಃಖ ಬರುವಂತೆ ಮಾಡಿದೆ. ಇನ್ನು ಗೌತಮ್ ಆಫೀಸಿಗೆ ಹೊರಟಾಗ ಭೂಮಿಕಾ ಫೋನ್ ಮಾಡಿ ಮಧುರಾ ಅವರ ಗಾಡಿ ಕೈ ಕೊಟ್ಟಿದೆ. ಅವರನ್ನು ಡ್ರಾಪ್ ಮಾಡಿ ಎಂದು ಪ್ಲಾನ್ ಮಾಡಿ ಹೇಳುತ್ತಾಳೆ. ಮಧುರಾಳನ್ನು ಪಿಕ್ ಮಾಡುವ ಗೌತಮ್ ಆಕೆಯ ಕೆಫೆ ವರೆಗೂ ಡ್ರಾಪ್ ಮಾಡುತ್ತಾನೆ. ಆಗ ಮಧುರಾ ಜೊತೆ ಕಾಫಿ ಕುಡಿದು ಹೋಗಿದ್ದಾರೆ. ಮಧುರಾ ಹಾಗೂ ಜೊತೆಗೆ ಸಮಯ ಕಳೆದಿದ್ದಾನೆ.
ಗೌತಮ್ ಬಳಿ ಮದುವೆ ಬಗ್ಗೆ ಮಧುರಾ ಮಾತು
ಗೌತಮ್‌ಗೆ ಕೆಫೆ ನೋಡಿ ಖುಷಿಯಾಗುತ್ತದೆ. ಆದರೆ, ಗೌತಮ್‌ಗೆ ಈ ಭೇಟಿಯ ಹಿಂದಿನ ರಹಸ್ಯವಾಗಲೀ, ಮುಂದೆ ನಡೆಯುವ ಆಘಾತಕಾರಿ ಘಟನೆಗಳ ಬಗ್ಗೆ ಆಗಲೀ ಕೊಂಚವೂ ಅರಿವಿಲ್ಲ. ಮಧುರಾ ಜೊತೆಗೆ ಕೆಫೆಯಲ್ಲಿ ಕೂತು ಮಾತನಾಡುವಾಗ ಮಧುರಾ ಪ್ರಶ್ನೆ ಮಾಡುತ್ತಾಳೆ. ಭೂಮಿಕಾ ಅವರು ನಿಮಗೇನು ರೆಸ್ಟ್ರಿಕ್ಟ್ ಮಾಡುವುದಿಲ್ವಾ ಎಂದು ಪ್ರಶ್ನೆ ಮಾಡುತ್ತಾಳೆ. ಆಗ ಗೌತಮ್ ನಿಮಗೆ ಹೇಗೆ ಇಷ್ಟಾನೋ ಹಾಗಿರಿ ಎಂದು ಹೇಳುತ್ತಾಳೆ ಎಂದು ಸಿಂಪಲ್ ಆಗಿ ಉತ್ತರಿಸುತ್ತಾನೆ. ಈ ಮಾತನ್ನು ಕೇಳಿದ ಮಧುರಾ ನಾಳೆಯ ದಿನ ನಾನೂ ನೀವು ಹೀಗೆ ಇರಬೇಕಲ್ವಾ? ಎಂದು ಕೇಳಿದ್ದಕ್ಕೆ ಗೌತಮ್ ನೀವ್ಯಾಕೆ ಹೀಗಿರಬೇಕು ಎಂದು ಮರುಪ್ರಶ್ನೆ ಮಾಡಿದಾಗ, ಮಧುರ ಮದುವೆ ಬಗ್ಗೆ ಹೇಳುತ್ತಾಳೆ.

ಮದುವೆ ವಿಚಾರಕ್ಕೆ ಕೆಂಡಾಮಂಡಲ
ಯಾಕೆಂದರೆ ನಾಳೆ ನಾನು ನೀವು ಮದುವೆ ಆಗುತ್ತೇವೆ. ಹಾಗಾಗಿ ಈ ಮಾತನ್ನು ಕೇಳಿದೆ ಎನ್ನುತ್ತಾಳೆ. ಆಗ ಗೌತಮ್ ದಿಗ್ಭ್ರಾಂತನಾಗುತ್ತಾನೆ. ಒಂದು ಕ್ಷಣ ಗಾಬರಿಯಾಗುತ್ತಾನೆ. ಪ್ರಾಣಕ್ಕೆ ಪ್ರಾಣ ಕೊಡುವ ಹೆಂಡತಿ ಇರುವಾಗ ನಾನ್ಯಾಕೆ ನಿಮ್ಮನ್ನು ಮದುವೆ ಆಗಬೇಕು. ಭೂಮಿಕಾ ಗೆಳತಿ ಅನ್ನೋ ಕಾರಣಕ್ಕೆ ನಿಮ್ಮನ್ನು ಡ್ರಾಪ್ ಮಾಡಲು ಒಪ್ಪಿಕೊಂಡೆ. ಆದರೆ, ನೀವೀಗ ಮದುವೆ ಅಂತೆಲ್ಲಾ ಮಾತನಾಡುತ್ತಿದ್ದೀರಲ್ಲ ಎಂದು ಗಾಬರಿ ಮಾಡಿಕೊಳ್ಳುತ್ತಾನೆ. ಮಧುರಾ ಮೇಲೆ ಕೂಗಾಡುತ್ತಾನೆ. ಕೆಂಡಾಮಂಡಲಗೊಂಡ ಗೌತಮ್ ಮಧುರ ಜೊತೆಗೆ ಗಲಾಟೆ ಮಾಡಿಕೊಂಡು ಮನೆಗೆ ಬರುತ್ತಾನೆ.
ಭೂಮಿಕಾ ಜೊತೆ ಗೌತಮ್ ಜಗಳ ?
ಎಲ್ಲರ ಎದುರಿಗೂ ಮನೆಯಲ್ಲಿ ಕೂಗಾಡುತ್ತಾನೆ. ನಾನ್ಯಾಕೆ ಮಧುರಾಳನ್ನು ಮದುವೆಯಾಗಬೇಕು ಭೂಮಿಕಾ ಎಂದು ಪ್ರಶ್ನೆ ಮಾಡುತ್ತಾನೆ. ಭೂಮಿಕಾ ಒಂದು ಕ್ಷಣ ಏನು ಉತ್ತರಿಸಬೇಕು ಎಂಬುದೇ ಗೊತ್ತಾಗುವುದಿಲ್ಲ. ಸ್ವಲ್ಪ ಸಮಯದ ಬಳಿಕ ತನಗೆ ಮಕ್ಕಳಾಗುತ್ತಿಲ್ಲ. ಈ ಮನೆಯ ವಂಶ ಬೆಳೆಯಬೇಕು ಎಂದು ನಾನು ಈ ತೀರ್ಮಾನವನ್ನು ಮಾಡಿದ್ದೇನೆ. ದಯವಿಟ್ಟು ಈ ಮದುವೆಗೆ ಒಪ್ಪಿಕೊಳ್ಳಿ ಎಂದು ಕೇಳಿಕೊಳ್ಳುತ್ತಾಳೆ. ಆಗ ಗೌತಮ್ ಭೂಮಿಕಾ ಜೊತೆಗೆ ಜೋರಾಗಿ ಜಗಳ ಮಾಡುತ್ತಾನೆ. ಇದು ಸಾಧ್ಯವೇ ಇಲ್ಲ ಎನ್ನುತ್ತಾನೆ. ಆಗ ಭೂಮಿಕಾ ಕೂಡ ಹಠ ಮಾಡಲು ಶುರು ಮಾಡಿದ್ದು, ಮನೆ ಬಿಟ್ಟು ಹೋಗಲು ಮುಂದಾಗಿದ್ದಾಳೆ.


Click it and Unblock the Notifications











