Amruthadhaare ; ಅಬ್ಬಾ, ಏನ್ ಗುರು ಇದು ಟ್ವಿಸ್ಟ್ ಮೇಲೆ ಟ್ವಿಸ್ಟ್, ಹಸೆಮಣೆ ಏರಿದ ಗೌತಮ್ ಮಾಡಿದ್ದೇನು ?
ಅಮೃತಧಾರೆ ಧಾರಾವಾಹಿಯಲ್ಲಿ ಭಾಗ್ಯ ಅತ್ತೆ ಪೂಜೆ ಮಾಡಿ ಕೊಡುವ ಹಣ್ಣನ್ನು ಭೂಮಿಕಾ ಬೇಡ ಎಂದು ತಿರಸ್ಕರಿಸಿದ್ದಾಳೆ. ಈ ಬಗ್ಗೆ ಸದಾಶಿವ ತಲೆ ಕೆಡಿಸಿಕೊಂಡಿದ್ದಾರೆ. ಹೀಗಾಗಿ ಮಹಿಮಾ, ಜೀವನ್ ಬಳಿ ನೀವು ಒಮ್ಮೆ ಭೂಮಿಕಾ ಅತ್ತಿಗೆ ಬಳಿ ಈ ಬಗ್ಗೆ ಮಾತನಾಡಿ. ಆಗ ಅವರು ನಿಮ್ಮ ಮಾತನ್ನು ಕೇಳಬಹುದು ಎಂದು ಒತ್ತಾಯ ಮಾಡಿದ್ದಾಳೆ. ಜೀವನ್ ಕೂಡ ಇದಕ್ಕೆ ಒಪ್ಪಿಗೆ ಕೊಟ್ಟಿದ್ದು, ಭೂಮಿಕಾ ಜೊತೆಗೆ ಮಾತನಾಡಲು ನಿರ್ಧರಿಸಿದ್ದಾನೆ. ಇತ್ತ ಗೌತಮ್ ಎರಡನೇ ಮದುವೆಯಾದ ಕೂಡಲೇ ಜೈದೇವ್ ತಾನೂ ದಿಯಾಳನ್ನು ವರಿಸಲು ಆಲೋಚಿಸಿದ್ದಾನೆ.
ಶಾಕಿಂಗ್ ವಿಚಾರ ಕೇಳಿದ ಗೌತಮ್
ಇನ್ನು ಗೌತಮ್ ಮತ್ತು ಮಧುರ ಕೆಫೆಯಲ್ಲಿ ಕುಳಿತು ಮಾತನಾಡಿದ್ದು, ಮಧುರ ಮದುವೆ ಬಗ್ಗೆ ಪ್ರಸ್ತಾಪ ಮಾಡಿದ್ದಾಳೆ. ಇದೇನು ಹೀಗೆ ಹೇಳುತ್ತಿದ್ದೀರಾ ಎಂದು ಗೌತಮ್ ಮರು ಪ್ರಶ್ನೆ ಮಾಡಿದ್ದು, ಮಧುರ ನಾವಿಬ್ಬರು ಮದುವೆಯಾಗುವುದು ಪಕ್ಕಾ. ಅದಕ್ಕಾಗಿಯೇ ಶಕುಂತಲಾ ಮೇಡಂ ಮತ್ತು ಭೂಮಿಕಾ ಅವರು ನಾವಿಬ್ಬರು ಭೇಟಿಯಾಗುವಂತೆ ಮಾಡಿದ್ದು. ಬಹುಶಃ ನಿಮಗೆ ಸರ್ಪ್ರೈಸ್ ಕೊಡುವ ಸಲುವಾಗಿ ಈ ವಿಚಾರವನ್ನು ನಿಮ್ಮ ಬಳಿ ತಿಳಿಸಿಲ್ಲ ಎಂದು ಕಾಣಿಸುತ್ತದೆ ಎನ್ನುತ್ತಾಳೆ. ಈ ಮಾತನ್ನು ಕೇಳಿದ ಗೌತಮ್, ಇದು ಸರ್ಪ್ರೈಸ್ ಅನಿಸುತ್ತಿಲ್ಲ. ಬಹಳ ಶಾಕಿಂಗ್ ಆಗಿದೆ. ಈ ಮದುವೆ ಸಾಧ್ಯವಿಲ್ಲ ಎಂದು ಹೇಳಿ ಅಲ್ಲಿಂದ ಹೊರಟಿದ್ದಾನೆ.

ಶಕುಂತಲಾ ಬಳಿ ಈ ಮದುವೆ ಸಾಧ್ಯವಿಲ್ಲ ಎಂದ ಗೌತಮ್
ಸೀದಾ ಶಕುಂತಲಾ ಬಳಿ ಹೋಗಿ ನೀವು ಇದೇನು ಕೆಲಸ ಮಾಡಿದ್ದೀರಾ. ನಾನ್ಯಾಕೆ ಮಧುರಾಳನ್ನು ಮದುವೆಯಾಗಬೇಕು ಎಂದು ಕೇಳುತ್ತಾನೆ. ಆಗ ಶಕುಂತಲಾ ಮಗು, ವಂಶೋದ್ಧಾರಕನ ವಿಚಾರವನ್ನು ತೆಗೆದಿದ್ದಾಳೆ. ಈ ಮದುವೆ ನೀನು ಆಗಲೇಬೇಕು. ಅದು ಬಿಟ್ಟು ನಿನಗೆ ಬೇರೆ ದಾರಿಯಿಲ್ಲ ಎಂದು ಶಕುಂತಲಾ ಹೇಳುತ್ತಾಳೆ. ಆದರೆ, ಗೌತಮ್ ನೀವೇನೇ ಅನ್ನಿ ಭೂಮಿಕಾ ಬಿಟ್ಟು ನಾನು ಮತ್ಯಾರನ್ನೂ ಮದುವೆಯಾಗಲು ಒಪ್ಪುವುದಿಲ್ಲ ಎಂದು ಹೇಳುತ್ತಾನೆ. ಶಕುಂತಲಾಳಿಗೆ ಭೂಮಿಕಾ ಮೇಲೆ ಕಾನ್ಫಿಡೆನ್ಸ್ ಇದೆ. ಹೇಗಾದರೂ ಮಾಡಿ ಭೂಮಿಕಾ ಗೌತಮ್ ನನ್ನು ಒಪ್ಪಿಸುತ್ತಾಳೆ. ಹಾಗಾಗಿ ಈ ಬಗ್ಗೆ ನಾನು ತಲೆಕೆಡಿಸಿಕೊಳ್ಳುವಂತಹ ಪರೀಸ್ಥಿತಿಯೇ ಭಾರದು ಎಂದು ಸುಮ್ಮನಿರುತ್ತಾಳೆ.
ಮದುವೆ ಮಂಟಪದಲ್ಲಿ ಹಸೆಮಣೆ ಏರಿದ ಮಧುರ
ಭೂಮಿಕಾ ಬಳಿ ಹೋಗಿ ಗೌತಮ್ ಈ ಬಗ್ಗೆ ಚರ್ಚೆ ಮಾಡುತ್ತಾನೆ. ಆದರೆ, ಭೂಮಿಕಾ ಯಾರ ಮಾತಿಗೂ ಜಗ್ಗದೆಯೇ ಗೌತಮ್ ಗೆ ಇನ್ನೊಂದು ಮದುವೆಯಾಗುವಂತೆ ಒತ್ತಾಯ ಮಾಡುತ್ತಾಳೆ. ಜಗಳ ಮಾಡಿ, ಕೂಗಾಡುವ ಭೂಮಿಕಾ ಗೌತಮ್ ನನ್ನು ಮದುವೆಗೆ ಒಪ್ಪಿಸುತ್ತಾಳೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಭೂಮಿಕಾ ಮಾತುಗಳಿಗೆ ಸೋಲುವ ಗೌತಮ್ ಮದುವೆಯಾಗಲು ಒಪ್ಪುತ್ತಾನೆ. ಇನ್ನು ಮಧುರ ಮತ್ತು ಗೌತಮ್ ಮದುವೆಯನ್ನು ಮನೆಯಲ್ಲಿಯೇ ಸಿಂಪಲ್ ಆಗಿ ಅರೇಂಜ್ ಮಾಡಲಾಗುತ್ತದೆ. ಗೌತಮ್ ಪಕ್ಕದಲ್ಲಿ ಮಧುರ ಕುಳಿತು ಮದುವೆ ಶಾಸ್ತ್ರಗಳನ್ನು ಮಾಡುತ್ತಿರುತ್ತಾಳೆ.
ಭೂಮಿಕಾಳನ್ನು ಬಿಟ್ಟು ಕೊಡದ ಗೌತಮ್ ದಿವಾನ್
ಮಧುರ ಗೌತಮ್ ಕುತ್ತಿಗೆಗೆ ಮೊದಲು ಹಾರವನ್ನು ಹಾಕುತ್ತಾಳೆ. ಬಳಿಕ ಗೌತಮ್ ಮಧುರ ಕುತ್ತಿಗೆಗೆ ಹಾರವನ್ನು ಹಾಕಲಿದ್ದು, ತಾಳಿಯನ್ನು ಕೈಯಲ್ಲಿ ಹಿಡಿದುಕೊಳ್ಳುತ್ತಾನೆ. ಒಂದು ಕ್ಷಣ ಭೂಮಿಕಾಳ ಮುಖವನ್ನು ನೋಡುತ್ತಾನೆ. ಹಳದಿ ಸೀರೆ ಉಟ್ಟು ಗಂಡನ ಮದುವೆ ಮಾಡಿಸುವ ಭೂಮಿಕಾ ತಾಳಿ ಕಟ್ಟುವ ಸಮಯಕ್ಕೆ ಸರಿಯಾಗಿ ಕಣ್ಣು ಮುಚ್ಚಿಕೊಳ್ಳುತ್ತಾಳೆ. ಹಸೆಮಣೆಯಿಂದ ಎದ್ದು ಗೌತಮ್ ನೇರವಾಗಿ ಭೂಮಿಕಾ ಬಳಿ ಬಂದು ತಾಳಿ ಕಟ್ಟುತ್ತಾನೆ. ಬಳಿಕ ಎಲ್ಲರ ಮುಂದೆಯೂ ನನಗೆ ಇವಳೇ ಸರ್ವಸ್ವ ಎಂದು ಹೇಳುತ್ತಾನೆ.


Click it and Unblock the Notifications











