Amruthadhaare ; ದಿಯಾ ಹಠಕ್ಕೆ ಬಲಿಯಾದ ಜೈದೇವ್ : ರಾಜೇಂದ್ರ ಭೂಪತಿ ಗಾಳಕ್ಕೆ ಬಿದ್ದ ಜೀವನ್..!
ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಈಗ ತನ್ನ ಹೊಸ ಪ್ರಪಂಚಕ್ಕೆ ತೆರೆದುಕೊಳ್ಳುತ್ತಿದ್ದಾಳೆ. ಮಗುವಿನ ಬೆಳವಣಿಗೆಗೆ ಸಹಕಾರವಾಗುವಂತಹ ವಾತಾವರಣವನ್ನು ಸೃಷ್ಟಿಸಿಕೊಳ್ಳುತ್ತಿದ್ದಾಳೆ.ಪುಸ್ತಕ ಓದಲು ಬಯಸುತ್ತಿದ್ದ ಭೂಮಿಕಾ, ಈಗ ಮಗುವಿಗೆ ಲಾಲಿ ಹಾಡು ಹಾಡಲು ಕಲಿಯುತ್ತಿದ್ದಾಳೆ. ಗೌತಮ್ ತಂದೆಯೇ ಹುಟ್ಟಿ ಬರಲಿ ಎಂದು ಬಯಸಿದ್ದಾಳೆ. ಭೂಮಿಕಾಳಿಗೆ ಗೌತಮ್ ಅಜ್ಜಿಯೂ ಕೂಡ ಕಿವಿ ಮಾತನ್ನು ಹೇಳಿದ್ದು, ಎಚ್ಚರಿಕೆಯಿಂದ ಇರಬೇಕು. ಹೆಚ್ಚು ಕಾಳಜಿಯನ್ನು ವಹಿಸಬೇಕು ಎಂದು ಭೂಮಿಕಾಳಿಗೆ ಹೇಳಿಕೊಟ್ಟಿದ್ದಾರೆ.
ಜೈದೇವ್ ಮೇಲೆ ಒತ್ತಡ ಹಾಕಿದ ದಿಯಾ
ಇತ್ತ ದಿಯಾ ಮತ್ತು ಜೈದೇವ್ ನಡುವಿನ ಸಂಬಂಧ ಮೊದಲಿನಂತೆಯೇ ಮುಂದುವರೆದಿದೆ. ಆದರೆ, ಮಲ್ಲಿ ಬಹಳ ಸಮಯದಿಂದ ಮನೆಯಿಂದ ಕಾಣೆಯಾಗಿದ್ದು, ಮನೆಯವರು ಕೂಡ ಅವಳು ಇನ್ನೂ ಯಾಕೆ ತವರಿನಿಂದ ವಾಪಸ್ ಬರಲಿಲ್ಲ ಎಂಬುದನ್ನು ಯೋಚಿಸುತ್ತಿಲ್ಲ. ಮಲ್ಲಿ ಎಂಬವರು ತಮ್ಮ ಮನೆಯಲ್ಲಿದ್ದಾರೆ ಎಂಬುದನ್ನೇ ಮರೆತಂತೆ ಭಾಸವಾಗುತ್ತಿದೆ. ಜೈದೇವ್ ಹೇಗಿದ್ದರೂ ಮಲ್ಲಿ ಇಲ್ಲ ಎಂಬ ಕಾರಣಕ್ಕೆ ತಾನು ನಡೆದಿದ್ದೆ ದಾರಿ. ತನ್ನದೇ ಬದುಕು ಎಂಬಂತೆ ಸದಾ ದಿಯಾ ಜೊತೆಗೆ ಕಾಲ ಕಳೆಯುತ್ತಿರುತ್ತಾನೆ. ದಿಯಾಳಿಗೂ ಕದ್ದು ಮುಚ್ಚಿ ಭೇಟಿ ಮಾಡುವುದು ಸಾಕಾಗಿ ಹೋಗಿದೆ. ಹೀಗಾಗಿ ಮದುವೆಯಾಗೋಣ ಎಂದು ಪೀಡಿಸುತ್ತಲೇ ಇದ್ದಾಳೆ.

ಮದುವೆಯಾಗಲು ಒಪ್ಪಿಸಿದ ದಿಯಾ
ಈಗ ಮದುವೆಯಾಗೋಣ, ಆಗ ಆಗೋಣ ಎಂದು ಜೈದೇವ್ ದಿಯಾಳಿಗೆ ಭರವಸೆಯನ್ನು ಮಾತ್ರವೇ ನೀಡುತ್ತಿದ್ದ. ಆದರೆ, ದಿಯಾಳನ್ನು ಮದುವೆಯಾಗದೆಯೇ ಅವಳೊಂದಿಗೆ ಹೆಚ್ಚು ಕಾಲ ಕಳೆಯುತ್ತಿದ್ದ. ಮಲ್ಲಿಯನ್ನು ಬಿಡದೇ, ತನ್ನ ಜೊತೆಗೆ ಸಂಬಂಧ ಇಟ್ಟುಕೊಂಡಿರುವುದು ದಿಯಾಳಿಗೂ ಇಷ್ಟವಿಲ್ಲ. ಹಾಗಾಗಿ ದಿಯಾ ಅದೇನು ಆಗುತ್ತೋ ನೋಡೋಣ. ನಾವೀಗ ಮದುವೆಯಾಗೋಣ. ಆಮೇಲೆ ಮಲ್ಲಿಗೆ ಡಿವೋರ್ಸ್ ಕೊಡಿ ಎಂದು ಬಲವಂತವಾಗಿ ಒಪ್ಪಿಸಿದ್ದಾಳೆ. ಜೈದೇವ್ ಕೂಡ ಬೇರೆ ದಾರಿ ಇಲ್ಲದೇ ಒಪ್ಪಿಕೊಂಡಿದ್ದು, ಇಬ್ಬರೂ ಮದುವೆಯಾಗಿ ಮನೆಗೆ ಎಂಟ್ರಿ ಕೊಟ್ಟರೆ ಏನಾಗಬಹುದು ಎಂಬ ಕುತೂಹಲ ಮೂಡಿದೆ. ಇನ್ನು ಮಲ್ಲಿ ಯಾವ ರೀತಿ ನಡೆದುಕೊಳ್ಳುತ್ತಾಳೆ. ಜೈದೇವ್ ನಿರ್ಧಾರ ಮನೆಯಲ್ಲಿ ಯಾವ ಸಮಸ್ಯೆ ಉದ್ಭವವಾಗುವಂತೆ ಮಾಡುತ್ತದೋ ಕಾಯಬೇಕಿದೆ.
ರಾಜೇಂದ್ರ ಭೂಪತಿಗೆ ದಾಳವಾದ ಜೀವನ್
ಇತ್ತ ರಾಜೇಂದ್ರ ಭೂಪತಿ ಗೌತಮ್ ಮೇಲೆ ಸೇಡು ತೀರಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾನೆ. ಆದರೆ, ಗೌತಮ್ ಬದುಕಿನಲ್ಲಿ ಸಿಹಿ ಘಟನೆಗಳು ಸಂಭವಿಸುತ್ತಿದ್ದು, ಇದರಿಂದ ರಾಜೇಂದ್ರ ಭೂಪತಿ ಕಂಗಾಲಾಗಿದ್ದಾನೆ. ಈಗಾಗಲೇ ಜೈದೇವ್ ನನ್ನು ತನ್ನ ಕಡೆಗೆ ಸೆಳೆದುಕೊಂಡಿರುವ ರಾಜೇಂದ್ರ ಭೂಪತಿ ಇನ್ನೊಂದು ಕಡೆ ಜೀವನ್ ಕೂಡ ತನ್ನೊಂದಿಗೆ ಇರುವಂತೆ ಮಾಡಿಕೊಂಡಿದ್ದಾನೆ. ಆದರೆ, ಜೀವನ್ ಗೆ ರಾಜೇಂದ್ರ ಭೂಪತಿ ದುರಾಲೋಚನೆಯ ಬಗ್ಗೆ ಇನ್ನೂ ಅರಿವಾಗಿಲ್ಲ. ಹೀಗಾಗಿ ಮನೆಯವರ ಮಾತುಗಳನ್ನು ಕೇಳದೆ ರಾಜೇಂದ್ರ ಭೂಪತಿ ಮಾತುಗಳೇ ಸತ್ಯ ಎಂದು ನಂಬಿದ್ದಾನೆ.
ರಾಜೇಂದ್ರ ಮಾತುಗಳಿಗೆ ಬಲಿಯಾಗ್ತಾನಾ ಜೀವನ್ ?
ರಾಜೇಂದ್ರ ಭೂಪತಿಯ ಮಾತುಗಳಿಗೆ ಜೀವನ್ ಬಲಿಯಾಗುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ. ಆದರೆ, ರಾಜೇಂದ್ರ ಭೂಪತಿ ಗೌತಮ್ ಮನೆಯನ್ನು ಹಾಳು ಮಾಡಲು ಯಾವ ರೀತಿಯಲ್ಲಿ ಲೆಕ್ಕಾಚಾರ ಹಾಕುತ್ತಿದ್ದಾನೆ. ಜೀವನ್ ಕಡೆಯಿಂದ ಹೇಗೆ ಗೌತಮ್ ಗೆ ನೋವು ಕೊಡುತ್ತಾನೆ ಎಂಬ ಕುತೂಹಲ ಒಂದುಕಡೆ ಇದ್ದರೆ. ಮತ್ತೊಂದು ಕಡೆ, ಜೀವನ್ ಕುರುಡು ನಂಬಿಕೆ ಹಾಗೂ ಜೈದೇವ್ ಆಸೆಯ ಕಿಚ್ಚನ್ನೇ ಬಳಿಸಿಕೊಂಡು ಗೌತಮ್ ಬದುಕಿನಲ್ಲಿ ಬೆಂಕಿ ಹಚ್ಚುವುದಂತೂ ಪಕ್ಕಾ ಆಗಿದೆ. ಸದ್ಯ ಗೌತಮ್ ಕುಟುಂಬದಲ್ಲಿ ಸಂಬ್ರಮವೇ ತುಂಬಿ ತುಳುಕುತ್ತಿದೆ. ಈ ಸಂಭ್ರಮ ಯಾವಾಗ ಮರೆಯಾಗಿ ನೋವಿನ ಕಡಲು ಉಕ್ಕುತ್ತದೋ ಕಾದು ನೋಡಬೇಕಿದೆ.


Click it and Unblock the Notifications











