Amruthadhaare Serial: ಮಲ್ಲಿ ರಾಜೇಂದ್ರ ಭೂಪತಿಯ ಮಗಳು; ಗೌತಮ್‌ಗೆ ಸತ್ಯ ಗೊತ್ತಾಯ್ತು.. ಮುಂದೇನು?

By ಪ್ರಿಯಾ ದೊರೆ

'ಅಮೃತಧಾರೆ' ಧಾರಾವಾಹಿಯಲ್ಲಿ ಭೂಮಿಕಾ ಅನುಮಾನ ಬಂದ ಕೂಡಲೇ ಪರಿಹರಿಸಿಕೊಳ್ಳಲು ಮುಂದಾಗಿದ್ದಾಳೆ. ಈ ಸರದಲ್ಲಿ ಮೈಕ್‌ ಇಟ್ಟವರು ಯಾರು ಎಂದು ನೇರವಾಗಿ ಶಕುಂತಲಾಳನ್ನು ಪ್ರಶ್ನೆ ಮಾಡಿದ್ದಾಳೆ.

ಸಿಕ್ಕಿ ಬಿದ್ದೆ ಎಂದು ಗಾಬರಿಯಾದ ಶಕುಂತಲಾ ನನಗೆ ಗೊತ್ತಿಲ್ಲ. ಇದು ಮೈಕ್‌ ಎಂಬುದೇ ನನಗೆ ಗೊತ್ತಿಲ್ಲ ಎಂದು ನೆಪ ಹೇಳಿದ್ದಾಳೆ. ಶಕುಂತಲಾ ನಡವಳಿಕೆಯನ್ನು ಕಂಡ ಭೂಮಿಕಾ ತನ್ನ ಅನುಮಾನವೇ ಸುಳ್ಳಿರಬೇಕು ಎಂದು ಸುಮ್ಮನಾಗಿದ್ದಾಳೆ.

Amruthadhaare Serial March 20th 2025 episode highlights

ಕೆಲಸ ಮುಗಿದ ಬಳಿಕ ಸರದಿಂದ ಮೈಕ್‌ ತೆಗೆಯದ ಕಾರಣ ಶಕುಂತಲಾ ಲಕ್ಷ್ಮೀಕಾಂತನನ್ನು ಬೈದಿದ್ದಾಳೆ. ಲಕ್ಷ್ಮೀಕಾಂತ ಭೂಮಿಕಾಳಿಗೆ ನಾವೇ ಈ ಕೆಲಸ ಮಾಡಿದ್ದು ಎಂಬುದು ಗೊತ್ತಾಗದೇ ಹೋದರೆ ಅಷ್ಟೇ ಸಾಕು ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದಾನೆ.

ಜೀವನ್‌ಗೆ ಸದಾಶಿವ ಕ್ಲಾಸ್

ಇನ್ನು ಜೀವನ್‌ ಪದೇ ಪದೇ ಕುಡಿದು ಮನೆಗೆ ಬರುತ್ತಿರುವುದಲ್ಲದೇ, ಮಹಿಮಾಳ ಬಳಿ ಕೆಟ್ಟದಾಗಿ ನಡೆದುಕೊಂಡು ತನ್ನ ತಪ್ಪನ್ನು ಸಮರ್ಥಿಸಿಕೊಳ್ಳುತ್ತಿದ್ದಾನೆ. ಇದರಿಂದ ಮಹಿಮಾಳಲ್ಲಿ ಹೊಸ ಆತಂಕ ಶುರುವಾಗಿದೆ. ಮಾವ ಸದಾಶಿವನ ಬಳಿ ಎಲ್ಲಾ ಸತ್ಯವನ್ನು ಬಾಯಿ ಬಿಟ್ಟಿದ್ದಾಳೆ. ಬಿಸಿನೆಸ್‌ ಮಾಡುತ್ತಾ ಬೆಳವಣಿಗೆ ಕಾಣುತ್ತಿರುವ ಮಗ, ಅಡ್ಡ ದಾರಿಯೂ ಹಿಡಿಯುತ್ತಿದ್ದಾನೆ ಎಂಬುದನ್ನು ಅರಿತು ಗಾಬರಿಯಾಗಿದ್ದಾರೆ. ಇದೆಲ್ಲಾ ಒಳ್ಳೆಯ ಲಕ್ಷಣಗಳಲ್ಲ ಎಂದು ಮಹಿಮಾ ಬಳಿ ಆತನೂ ಆತಂಕವನ್ನು ತೋರ್ಪಡಿಸಿಕೊಂಡಿದ್ದಾನೆ. ಜೀವನ್‌ ಮನೆಗೆ ಬರಲಿ ನಾನು ವಿಚಾರಿಸಿಕೊಳ್ಳುತ್ತೇನೆ. ಹೀಗೆ ಬಿಟ್ಟರೆ, ಜೀವನ್‌ ಮುಂದೆ ಕೈಗೆ ಸಿಗದಂತೆ ಕೆಟ್ಟ ದಾರಿಯಲ್ಲಿ ಕಣ್ಮರೆಯಾಗುತ್ತಾನೆ ಎಂದು ಸೊಸೆಯ ಮುಂದೆ ಆತಂಕದ ಜೊತೆಗೆ ಎಚ್ಚರಿಕೆಯ ಮಾತನ್ನೂ ಆಡಿದ್ದಾರೆ.

Amruthadhaare Serial March 20th 2025 episode highlights

ಬದುಕಿರುವ ರಾಜೇಂದ್ರ ಭೂಪತಿ ಪುತ್ರಿ

ಇತ್ತ ಇಷ್ಟು ದಿನಗಳಿಂದ ಕಾಣೆಯಾಗಿದ್ದ ನಟಿ ಮಲ್ಲಿ ಪುನಃ ಎಲ್ಲರ ಕಣ್ಣಿಗೆ ಕಾಣಿಸಿಕೊಂಡಿದ್ದಾಳೆ. ಜೈದೇವ್‌ ನಿಜವಾದ ಬಣ್ಣವನ್ನು ತಿಳಿದುಕೊಂಡ ಮಲ್ಲಿ ಬೇಸರ ಮಾಡಿಕೊಂಡು ತವರು ಮನೆಗೆ ಹೋಗಿದ್ದಳು. ಜೈದೇವ್‌ಗೆ ಪಾಠ ಕಲಿಸುತ್ತಾಳೆ ಎಂದು ಎಲ್ಲರೂ ನಂಬಿದ್ದರು. ಆದರೆ, ಬಹಳ ದಿನಗಳೇ ಕಳೆದರೂ ಮಲ್ಲಿ ವಾಪಸ್‌ ಬಾರದೇ ಹೋಗಿದ್ದಾಳೆ. ತಾತನ ಮನೆಯಲ್ಲೇ ನೆಮ್ಮದಿಯನ್ನು ಕಂಡು ಕೊಂಡಿರುವ ಮಲ್ಲಿಯನ್ನು ನೋಡುವ ಸಲುವಾಗಿ ಸ್ವತಃ ಗೌತಮ್‌ ಆಗಮಿಸಿದ್ದಾನೆ. ಮಲ್ಲಿ ಪಕ್ಕದ ಮನೆಗೆ ಹೋಗಿರುವ ಸಮಯದಲ್ಲಿ ತಾತ ಹಳೆಯ ಫೋಟೋವೊಂದನ್ನು ತೆಗೆದಿದ್ದು, ಇದರಿಂದ ರಾಜೇಂದ್ರ ಭೂಪತಿಯ ಮಗಳು ಬದುಕಿದ್ದಾಳೆ ಎಂಬ ಸತ್ಯ ಗೊತ್ತಾಗಿದೆ.

ಮಲ್ಲಿಯೇ ರಾಜೇಂದ್ರ ಭೂಪತಿ ಮಗಳು

ಮಲ್ಲಿಯನ್ನು ನೋಡಲು ಬಂದ ಗೌತಮ್‌ ದಿವಾನ್‌ ಕಣ್ಣಿಗೆ ಈ ಹಳೆಯ ಫೋಟೋ ಸಿಕ್ಕಿದೆ. ರಾಜೇಂದ್ರ ಭೂಪತಿ, ಅವನ ಪತ್ನಿ ಹಾಗೂ ಮಗಳು ಇರುವ ಫೋಟೋ ಅದಾಗಿದ್ದು, ಅವಳೇ ಮಲ್ಲಿ ಎಂಬ ಸತ್ಯ ಗೌತಮ್‌ಗೆ ಅರಿವಾಗಿದೆ. ಮಲ್ಲಿಯೇ ರಾಜೇಂದ್ರ ಭೂಪತಿಯ ಮಗಳು. ನನ್ನ ಶತ್ರು ಎಂದುಕೊಂಡಿರುವ ರಾಜೇಂದ್ರ ಅವರ ಮಗಳು ನಮ್ಮ ಮನೆಯ ಸೊಸೆಯಾಗಿದ್ದಾಳೆ ಎಂದು ಒಂದು ಕಡೆ ಸಂತೋಷ ಪಟ್ಟಿದ್ದು, ಮತ್ತೊಂದು ಕಡೆ ಆತಂಕವೂ ಹುಟ್ಟಿಕೊಂಡಿದೆ.

Take a Poll

ಸತ್ಯ ತಿಳಿದ ಗೌತಮ್‌ ಏನು ಮಾಡುತ್ತಾನೆ..?

ಅಲ್ಲಿಗೆ ಸದಾ ನಮ್ಮಿಂದ ತನ್ನ ಮಗಳು ಸಾವನ್ನಪ್ಪಿದಳು ಎಂದು ಭಾವಿಸಿರುವ ರಾಜೇಂದ್ರ ಭೂಪತಿಗೆ ಈ ಸತ್ಯ ತಿಳಿಸಬೇಕು ಎಂದು ಅಂದುಕೊಂಡಿದ್ದಾನೆ. ಆದರೆ, ಗೌತಮ್‌ ಮಲ್ಲಿ ಬಗ್ಗೆ ರಾಜೇಂದ್ರ ಭೂಪತಿಗೆ ಸತ್ಯ ಹೇಳಿದರೆ, ನಂಬುತ್ತಾನಾ..? ಇಲ್ಲ ಇದರಿಂದ ಗೌತಮ್‌ ಕುಟುಂಬಕ್ಕೆ ಸಮಸ್ಯೆ ಆಗುತ್ತದೆಯಾ? ಮಲ್ಲಿ ಮತ್ತು ರಾಜೇಂದ್ರ ಸೇರಿಕೊಂಡು ಜೈದೇವ್‌ ಮೇಲೆ ಹಾಗೂ ಗೌತಮ್‌ ಮೇಲೆ ಸೇಡು ತೀರಿಸಿಕೊಳ್ಳುತ್ತಾರಾ ಎಂಬ ಕುತೂಹಲವೂ ಮೂಡಿದೆ.

More from Filmibeat

English summary
Gautham learns truth about rajendra bhoopathi daughter malli;
Read more about: filmibeat original serial tv show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X