Amruthadhaare;ಜೈದೇವ್‌ಗೆ ಅನುಮಾನ ತರಿಸಿದ ಮಲ್ಲಿಯ ಮಾತುಗಳು : ಆತಂಕ ತಂದ ಭೂಮಿಕಾ ಕನಸು..!
ಅಮೃತಧಾರೆ ಧಾರಾವಾಹಿಯಲ್ಲಿ ಕ್ಯಾಬ್ ಡ್ರೈವರ್ ಸುಧಾಳನ್ನು ಎಲ್ಲೋ ನೋಡಿದ್ದು, ಪದೇ ಪದೇ ಪ್ರಶ್ನೆ ಮಾಡಿದ್ದಾನೆ. ನಿಮ್ಮನ್ನು ಎಲ್ಲೋ ನೋಡಿದ್ದೀನಿ, ನೀವು ಯಾರು ಹೇಳಿ ಎಂದು ಕೇಳಿದ್ದಾನೆ. ಆದರೆ, ಸುಧಾಳಿಗೆ ಕ್ಯಾಬ್ ಡ್ರೈವರ್ ಕೇಳಿದ ಪ್ರಶ್ನೆಗಳು ಇರಿಟೇಟ್ ಮಾಡಿದೆ. ಇವರಿಬ್ಬರ ಹಿಂದೆ ಯಾವುದಾದರೂ ದೊಡ್ಡ ಕಥೆ ಇರಬಹುದಾ ಎಂಬ ಅನುಮಾನ ಶುರುವಾಗಿದೆ. ಇತ್ತ ಅಪೇಕ್ಷಾ ತವರು ಮನೆಯಿಂದ ಬಂದ ತಿಂಡಿಗಳನ್ನು ಸವಿಯುತ್ತಿದ್ದು, ಪಾರ್ಥನ ಬಳಿ ವಿಚಿತ್ರವಾಗಿ ನಡೆದುಕೊಂಡಿದ್ದಾಳೆ. ಪಾರ್ಥನಿಗೆ ಅಪೇಕ್ಷಾಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಮುನ್ನವೇ ಪ್ರೀತಿಸಿ ಮದುವೆಯಾಗಿ ತಪ್ಪು ಮಾಡಿದೆ ಎಂಬ ಭಾವನೆ ಶುರುವಾಗಿದೆ.
ಜೈದೇವ್ ಗೆ ಅನುಮಾನ ತಂದ ಮಲ್ಲಿ ಮಾತು
ಜೈದೇವ್ ಮಲ್ಲಿ ಮನೆಗೆ ಬಂದಿದ್ದರೂ ಕೊಂಚವೂ ಆತಂಕ ಪಡದೇ ತನ್ನ ಪಾಡಿಗೆ ತಾನು ದಿಯಾ ಮನೆಗೆ ಹೋಗಿ, ಅವಳೊಂದಿಗೆ ದಿನಗಟ್ಟಲೇ ಕಾಲ ಕಳೆಯುತ್ತಿದ್ದಾನೆ. ಅಲ್ಲದೇ, ಮಲ್ಲಿಗೆ ಆಫೀಸ್ ಕೆಲಸ ಜಾಸ್ತಿ ಇದೆ ಎಂದು ಮತ್ತದೇ ಹಳೆಯ ಸುಳ್ಳನ್ನು ಹೇಳುತ್ತಿದ್ದಾನೆ. ಈಗ ಮಲ್ಲಿಗೆ ಜೈದೇವ್ ಸುಳ್ಳುಗಳ ಹಿಂದಿನ ಸತ್ಯ ಗೊತ್ತಿರುವ ಕಾರಣ ಉಲ್ಟಾ ಮಾತನಾಡುತ್ತಿದ್ದಾಳೆ. ನಿಮಗೆ ಕೆಲಸ ಜಾಸ್ತಿಯಾಗಿದೆ. ನಾನು ಗೌತಮ್ ಭಾವನ ಬಳಿ ಮಾತನಾಡಿ ಕೆಲಸ ಕಡಿಮೆ ಮಾಡುವಂತೆ ಕೇಳುತ್ತೇನೆ. ಇಷ್ಟು ಕಷ್ಟಪಟ್ಟರೆ ನಿಮ್ಮ ಆರೋಗ್ಯಕ್ಕೆ ಸಮಸ್ಯೆ ಆಗುತ್ತದೆ ಎಂದೆಲ್ಲಾ ಹೇಳಿದ್ದಾಳೆ. ಅಲ್ಲದೇ, ತಾನು ದಡ್ಡಿಯಾಗಿದ್ದು, ಯಾವ ವಿಚಾರವೂ ಅರ್ಥವಾಗುವುದಿಲ್ಲ ಎಂದು ತಾನೇ ಒಪ್ಪಿಕೊಂಡಿದ್ದಾಳೆ. ಮಲ್ಲಿಯ ಈ ಮಾತುಗಳೆಲ್ಲವೂ ಜೈದೇವ್ ಗೆ ಅನುಮಾನವನ್ನು ಮೂಡಿಸಿದೆ.

ಫಿಟ್ಟಿಂಗ್ ಇಟ್ಟ ರಾಜೇಂದ್ರ ಭೂಪತಿ
ರಾಜೇಂದ್ರ ಭೂಪತಿಗೆ ಸದಾಶಿವ ಫೋನ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾಗಿದೆ. ಇದಾದ ಬಳಿಕ ರಾಜೇಂದ್ರ ಭೂಪತಿಯನ್ನು ಭೇಟಿಯಾಗಲು ಜೀವನ್ ಆಗಮಿಸಿದ್ದಾನೆ. ಇಲ್ಲಿ ನನ್ನ ಜೊತೆಗೆ ನಗು ನಗುತಾ, ನೀವೇ ದೇವರು ಅಂತ ಮಾತನಾಡುವುದು. ಅಲ್ಲಿಗೆ ಹೋಗಿ ಅಪ್ಪನಿಂದ ಫೋನ್ ಮಾಡಿಸಿ ಬೈಯುವಂತೆ ಮಾಡುವುದು ಎಂದು ವ್ಯಂಗ್ಯ ಮಾತನಾಡಿದ್ದಾನೆ. ನಿಮ್ಮ ತಂದೆ ನನ್ನನ್ನು ತರಾಟೆಗೆ ತೆಗೆದುಕೊಂಡರು. ನಾನು ನಿನ್ನನ್ನು ಹಾಳು ಮಾಡುತ್ತಿದ್ದೀನಂತೆ ಎಂದು ಹೇಳಿದ್ದಾನೆ. ಜೀವನ್ ಹಾಗೆಲ್ಲಾ ಏನಿಲ್ಲ ಎಂದು ಹೇಳಿದ್ದು, ಮನೆಗೆ ಹೋಗಿದ್ದೇ ರಾಜೇಂದ್ರ ಭೂಪತಿಯ ಫೀಟ್ಟಿಂಗ್ ಕಾರ್ಯ ನಿರ್ವಹಿಸುವಂತೆ ಮಾಡಿದ್ದಾನೆ.
ಅಪ್ಪ-ಮಗನ ನಡುವೆ ಶುರುವಾಗುತ್ತಾ ಜಗಳ..?
ತಂದೆ ಸದಾಶಿವನ ಜೊತೆಗೆ ಗಲಾಟೆ ಮಾಡಿಕೊಂಡಿದ್ದಾನೆ. ನನ್ನ ಬಿಸಿನೆಸ್ ಪಾರ್ಟ್ನರ್ ಜೊತೆಗೆ ನಿಮಗೇನು ಕೆಲಸ. ನಾನೇನು ಸ್ಕೂಲ್ ಹುಡುಗನಾ..? ನೀವ್ಯಾಕೆ ಅವರಿಗೆ ಫೋನ್ ಮಾಡಬೇಕಿತ್ತು. ನನ್ನ ಬದುಕಿನಲ್ಲಿ ನೀವ್ಯಾಕೆ ಆಟವಾಡುತ್ತಿದ್ದೀರಾ ಎಂದೆಲ್ಲಾ ಪ್ರಶ್ನೆ ಮಾಡಿದ್ದಾನೆ. ಸದಾಶಿವನಿಗೆ ಜೀವನ್ ಮಾತುಗಳು ಬಹಳ ಕಠೋರ ಎನಿಸಿದೆ. ಮನಸ್ಸಿಗೆ ಬೇಸರ ಮಾಡಿಕೊಂಡಿದ್ದಾರೆ.
ಗೌತಮ್ ಗೆ ರಾಜೇಂದ್ರ ಭೂಪತಿ ಮೇಲೆ ಅನುಮಾನ
ಇತ್ತ ಭೂಮಿಕಾ ನಿದ್ದೆಯಲ್ಲಿ ಬೆಚ್ಚಿ ಬಿದ್ದಿದ್ದಾಳೆ. ಕೆಟ್ಟ ಕನಸು ಬಿತ್ತು ಎಂದು ಗಾಬರಿಯಾಗಿದ್ದಾಳೆ. ಗೌತಮ್ ಪ್ರಶ್ನೆಗಳಿಗೆ ಉತ್ತರ ಕೊಡಲಾಗದೇ ಒದ್ದಾಡಿದ ಭೂಮಿಕಾ ಕೊನೆಗೆ ಸತ್ಯ ಹೇಳಿದ್ದಾಳೆ. ಸರದಲ್ಲಿ ಮೈಕ್ ಸಿಕ್ಕಿದ ವಿಚಾರವನ್ನೂ ಹೇಳಿದ್ದು, ತಮ್ಮನ್ನು ಅಟ್ಯಾಕ್ ಮಾಡಲು ಬಂದವರ ಬಗ್ಗೆಯೂ ವಿವರಿಸಿದ್ದಾಳೆ. ಇದೆಲ್ಲವನ್ನೂ ಕೇಳಿದ ಗೌತಮ್ ಗೆ ಶಾಕ್ ಆಗಿದೆ. ಭೂಮಿಕಾ ಪ್ರಾಣಕ್ಕೆ ಯಾರು ತಾನೆ ಅಪಾಯ ತರಲು ಸಾಧ್ಯ ಎಂದು ಯೋಚಿಸಿದ್ದು. ಇದೆಲ್ಲಾ ರಾಜೇಂದ್ರ ಭೂಪತಿಯ ಕೆಲಸವಿರಬೇಕು ಎಂದು ಗೆಸ್ ಮಾಡಿದ್ದಾನೆ. ಗೌತಮ್ ಈಗ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











