ಭೂಮಿಕಾ ಪ್ರೀತಿಗಾಗಿ ಹಂಬಲಿಸುತ್ತಿರುವ ಗೌತಮ್; ಆತಂಕದಲ್ಲಿರುವ ಶಕುಂತಲಾ ದೇವಿ

By ಪೂರ್ವ

ಇತ್ತೀಚೇಗಿನ ದಿನಗಳಲ್ಲಿ ಗೌತಮ್ ಹಾಗೂ ಭೂಮಿಕಾ ಮಧ್ಯೆ ಪ್ರೀತಿ ಚಿಗುರೊಡೆಯುತ್ತಿದೆ. ಅದಕ್ಕೆ ಆನಂದ್ ಸೊಪ್ಪು ಹಾಕುತ್ತಿದ್ದಾನೆ. ಗೌತಮ್ ಹೇಗಪ್ಪಾ ಭೂಮಿಕಾಗೆ ಪ್ರಪೋಸ್ ಮಾಡುವುದು ಎಂದು ಆಲೋಚನೆ ಮಾಡುತ್ತಿದ್ದರೆ, ಆನಂದ್‌ಗೆ ಇದೊಂಥರಾ ಬಹಳ ಖುಷಿ. ಗೌತಮ್ ಮೊದಲ ಸಲ ಭೂಮಿಕಾಗಾಗಿ ಚಡಪಡಿಸುತ್ತಿದ್ದಾನೆ. ಭೂಮಿಕಾ ತೋರಿಸುತ್ತಿರುವ ಕಾಳಜಿಗೆ, ಪ್ರೀತಿಗೆ ಡುಮ್ಮ ಸರ್ ಕಳೆದು ಹೋಗಿದ್ದಾರೆ.

ಇದರಿಂದ ಗೌತಮ್‌ಗೆ, ಹೇಗಪ್ಪಾ ನಾನು ಭೂಮಿಕಾ ಜೊತೆ ಪ್ರೀತಿಯನ್ನು ಹೇಳಿಕೊಳ್ಳಲಿ ಎನಿಸುತ್ತಿದೆ. ಪ್ರೀತಿ ವ್ಯಕ್ತಪಡಿಸಲು ಪ್ರಾಕ್ಟೀಸ್ ಮಾಡುತ್ತಿರುತ್ತಾನೆ. ಯಾವ ರೀತಿ ಭೂಮಿಕಾ ಪ್ರಪೋಸ್ ಮಾಡಿದರೆ ಖುಷಿ ಆಗಬಹುದು? ಆಕೆ ನನ್ನನ್ನು ಒಪ್ಪಿಕೊಳ್ಳುತ್ತಾರಾ? ಎನ್ನುವ ಮನೋಭಾವದಲ್ಲಿ ಗೌತಮ್ ಇರುತ್ತಾರೆ. ಇನ್ನೂ ಆಫೀಸ್‌ನಲ್ಲಿ ಬೇರೆ ಆನಂದ್ ಗೌತಮ್ ಕಾಲೆಳೆಯುತ್ತಿರುತ್ತಾನೆ. "ಏನೋ ಇತ್ತೀಚೆಗೆ ಕೊಂಚ ಬದಲಾಗಿ ಬಿಟ್ಟಿದ್ದಿಯಾ.. ಏನು ನಿನ್ನ ಕಥೆ? ಎಂದು ಕಿಚಾಯಿಸುತ್ತಾನೆ.

Amruthadhaare serial March 30th episode update

ಆನಂದ್ ಮಾತು ಕೇಳಿ ನಮ್ಮ ಡುಮ್ಮ ಸರ್ ಫುಲ್ ಬ್ಲಷ್ ಆಗಿ ಹೋಗುತ್ತಾರೆ. ಇನ್ನೂ ಭೂಮಿಕಾ ಆಕೆ ಅನುಭವಿಸಿದ ಖುಷಿಯ ಕ್ಷಣವನ್ನೂ ಡೈರಿಯಲ್ಲಿ ಬರೆದಿಡುವ ಕ್ರಮ. ಆಕೆಗೆ ಪ್ರೀತಿ ಆದರೂ ಗೌತಮ್ ಜೊತೆ ಇರುವ ಒಡನಾಟದ ಬಗ್ಗೆ ಡೈರಿ ತುಂಬಾ ಅದನ್ನೇ ಬರೆಯುತ್ತಿರುತ್ತಾಳೆ. ಆದರೆ, ಇದೀಗ ಗೌತಮ್ ಜೊತೆ ಮನದ ಮಾತನ್ನು ಹೇಳುವ ಕ್ಷಣ ಹತ್ತಿರ ಬಂದಿದೆ. ಇನ್ನೂ ಗೌತಮ್ ಕೈಯಲ್ಲಿ ರೆಡ್ ರೋಸ್ ಹಿಡಿದು ಒಬ್ಬೊಂಟಿಯಾಗಿ ಭೂಮಿಕಾಗೆ ಪ್ರಪೋಸ್ ಮಾಡುತ್ತಿರುತ್ತಾನೆ.

ಗೆಳೆಯನ ಅವಸ್ಥೆ ನೋಡಿ ನಕ್ಕ ಆನಂದ್

ಯಾರು ಇಲ್ಲದ ವೇಳೆ ಪ್ರಪೋಸ್ ಮಾಡುವ ಹಾಗೆ ಆಕ್ಟಿಂಗ್ ಮಾಡುತ್ತಿರುತ್ತಾನೆ. ಇದನ್ನು ನೋಡಿದ ಶಕುಂತಲಾ ದೇವಿಗೆ ಆಶ್ಚರ್ಯ ಆಗುತ್ತದೆ. ಅರೆರೆ, ಗೌತಮ್ ಇಲ್ಲಿ ಏನು ಮಾಡುತ್ತಿದ್ದಾನೆ? ಕೈಯಲ್ಲಿ ಬೇರೆ ರೆಡ್ ರೋಸ್ ಹಿಡಿದುಕೊಂಡು ಇದ್ದಾನೆ ಎಂದು ನೋಡುತ್ತಾ ಇರುವಾಗ ಗೌತಮ್ ಆಕ್ಟಿಂಗ್ ಕಂಡು ಆನಂದ್‌ಗೆ ನಗು ಬರುತ್ತದೆ. ಏನಿದು ಬಂಧನ ಪಿಚ್ಚರ್ ತೋರಿಸುತ್ತಿದ್ದಾನೆ ಎಂದು ಆನಂದ್ ಗೊಣಗುತ್ತಿರುತ್ತಾನೆ.

Amruthadhaare serial March 30th episode update

ಗೌತಮ್ ಪ್ರೀತಿ ವಿಚಾರ ಶಕುಂತಲಾಗೆ ಗೊತ್ತಾ?

ಇತ್ತ ಶಕುಂತಲಾ ದೇವಿಗೆ ಆತಂಕ ಶುರು ಆಗಿ ಬಿಟ್ಟಿದೆ. ಎಲ್ಲಿ ನನ್ನ ಮಾತು ಕೇಳದೆ ಆ ಭೂಮಿಕಾ ಮಾತು ಕೇಳಲು ಶುರು ಮಾಡುತ್ತಾನೋ ಏನೋ? ನಮಗೆ ಇನ್ನೂ ಮೇಲೆ ಕಂಟಕ ಗ್ಯಾರಂಟಿ ಎಂದುಕೊಂಡು ಇರುತ್ತಾಳೆ. ಗೌತಮ್ ಹೆಂಡತಿಯನ್ನು ಹೇಗಾದರೂ ಮಾಡಿ ಗೌತಮ್ ಬಾಳಲ್ಲಿ ಇದ್ದು ಇಲ್ಲದ ಹಾಗೆ ಮಾಡಬೇಕು ಎನ್ನುವ ಆಲೋಚನೆ ಶಕುಂತಲಾಗೆ. ಆದರೆ ಭೂಮಿಕಾ ಬಹಳ ಬುದ್ದಿವಂತೆ. ಅತ್ತೆ ಚಾಪೆಯ ಕೆಳಗೆ ನುಗ್ಗಿದರೆ, ಭೂಮಿಕಾ ರಂಗೊಲಿಯೊಳಗೆ ನುಗ್ಗುತ್ತಾರೆ.

ಮನೆಯವರ ಜೊತೆ ಹೊಂದಿಕೊಂಡ ಮಹಿಮಾ

ಮಹಿಮಾ ಭೂಮಿಕಾ ಮನೆಯವರಿಗೆ ಹೊಂದಿಕೊಂಡಿದ್ದಾರೆ. ಮಹಿಮಾಗೆ ಈಗೀಗ ಗಂಡನ ಮನೆಯವರ ಪ್ರೀತಿ ಕಾಳಜಿಯ ಅರಿವಾಗುತ್ತಿರುತ್ತದೆ. ತನ್ನ ಸ್ವಾರ್ಥಕ್ಕಾಗಿ ಮಗುವನ್ನು ತೆಗೆಸಿದ ವಿಚಾರದಲ್ಲಿ ಮಹಿಮಾಗೆ ಬಹಳ ನೋವಿದೆ. ಆದರೆ, ಕಳೆದು ಹೋದ ವಿಚಾರಕ್ಕೆ ಚಿಂತಿಸಿ ಫಲವಿಲ್ಲ ಎನ್ನುವ ಹಾಗೆ ಅದರ ಬಗ್ಗೆ ಚಿಂತೆ ಮಾಡದೇ, ಇನ್ನೂ ಮುಂದೆ ಆದರೂ ನಾನು ನನ್ನ ಕುಟುಂಬಕ್ಕಾಗಿ ಬದಲಾಗಬೇಕು ಎನ್ನುವ ಆಲೋಚನೆ ಮಾಡುತ್ತಿರುತ್ತಾಳೆ.

More from Filmibeat

English summary
Amruthadhaare serial March 30th episode update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X