ಮಧುರಾಳನ್ನು ಮೆಚ್ಚಿಕೊಳ್ಳುತ್ತಾಳಾ ಭೂಮಿಕಾ? ಗೌತಮ್ ಬಳಿ ಸತ್ಯ ಹೇಳುತ್ತಾಳಾ ಟೀಚರಮ್ಮ?
'ಅಮೃತಧಾರೆ' ಧಾರಾವಾಹಿಯಲ್ಲಿ ಭೂಮಿಕಾ ಮಧುರಾಳನ್ನು ಭೇಟಿ ಮಾಡುವ ಮುನ್ನ ಅಪೇಕ್ಷಾಳ ಬಳಿ ತನ್ನ ಕಷ್ಟವನ್ನು ಹೇಳಿಕೊಳ್ಳಲು ಮುಂದಾಗುತ್ತಾಳೆ.
ಆದರೆ ಅಪೇಕ್ಷಾ ಇಯರ್ ಬಡ್ಸ್ ಮೂಲಕ ಹಾಡು ಕೇಳುತ್ತಿರುತ್ತಾಳೆ. ಭೂಮಿಕಾ ಮಾತನಾಡಿದ ಯಾವ ಮಾತುಗಳೂ ಅಪೇಕ್ಷಾಳಿಗೆ ಕೇಳಿಸಿರುವುದಿಲ್ಲ. ಕೊನೆಯಲ್ಲಿ ಭೂಮಿಕಾಳಿಗೆ ಅಪೇಕ್ಷಾ ತನ್ನ ಮಾತನ್ನು ಕೇಳಿಸಿಕೊಂಡಿಲ್ಲ ಎಂಬುದು ತಿಳಿದಾಗ ಬೇಸರ ಮಾಡಿಕೊಳ್ಳುತ್ತಾಳೆ.

ಇವರಿಬ್ಬರ ಮಾತುಕತೆಯನ್ನು ದೂರದಿಂದ ಗಮನಿಸಿದ ಪಾರ್ಥ ಅಪೇಕ್ಷಾ ಬಳಿ ಚರ್ಚೆ ಮಾಡುತ್ತಾನೆ. ಕೊನೆಗೆ ಅಪೇಕ್ಷಾಳಿಗೆ ಭೂಮಿಕಾ ಮಾತು ಕೇಳಲಿಲ್ಲ ಎಂಬುದನ್ನು ತಿಳಿದು ಪಾರ್ಥ ಬೇಸರ ಮಾಡಿಕೊಳ್ಳುತ್ತಾನೆ.
ಮಧುರಾಳನ್ನು ಮನೆಗೆ ಆಹ್ವಾನಿಸಿದ ಭೂಮಿಕಾ
ಇನ್ನು ಭೂಮಿಕಾ, ಮಧುರಾ ಬಳಿ ಪ್ರಶ್ನೆ ಮಾಡುತ್ತಾಳೆ. ಎರಡನೇ ಮದುವೆಯಾಗಲು ಕಾರಣವೇನು ಎಂದು ಕೇಳುತ್ತಾಳೆ. ಆಗ ಮಧುರಾ ನನಗೆ ಇಷ್ಟು ಸಮಯ ಮದುವೆಯ ಬಗ್ಗೆ ನಂಬಿಕೆ ಇರಲಿಲ್ಲ. ಕೇವಲ ಅಡ್ಜಸ್ಟ್‌ಮೆಂಟ್ ಎಂಬುದನ್ನು ಗಮನಿಸಿದ್ದೆ. ಆದರೆ, ನಿಮ್ಮಿಬ್ಬರ ಸಂಬಂಧದ ಬಗ್ಗೆ ಕೇಳಿದ ಮೇಲೆ ಮದುವೆ ಬಗ್ಗೆ ಒಂದು ಒಳ್ಳೆಯ ಫೀಲ್ ಬಂತು. ಅಲ್ಲದೇ, ಗೌತಮ್ ಅವರು ಒಂದು ಸಂಬಂಧಕ್ಕೆ ಎಷ್ಟು ಬೆಲೆ ಕೊಡುತ್ತಾರೆ ಎಂಬುದನ್ನು ಕಂಡು ನನ್ನೊಳಗೆ ಆಸೆ ಹುಟ್ಟಿತು. ಇನ್ನು ನೇಮ್ ಫೇಮ್ ಅವಶ್ಯಕತೆ ಇಲ್ಲ. ಯಾಕೆಂದರೆ ನಾನೂ ಕೂಡ ಬಿಸಿನೆಸ್ ಜಗತ್ತಿನಲ್ಲಿ ಇದ್ದೇನೆ ಎಂದು ಹೇಳುತ್ತಾಳೆ. ಭೂಮಿಕಾಳಿಗೆ ಮಧುರಾಳ ಗುಣಗಳು ಇಷ್ಟವಾಗಿದ್ದು, ಮನೆಗೆ ಆಹ್ವಾನಿಸುತ್ತಾಳೆ.
ಮಹಿಮಾ ಸಲಹೆ ತಳ್ಳಿ ಹಾಕಿದ ಭೂಮಿಕಾ
ಜೊತೆಗೆ ಮನೆಗೆ ಬಂದಾಗ ಗೌತಮ್ ಎದುರು ನನ್ನ ಬೆಸ್ಟ್ ಫ್ರೆಂಡ್ ಆಗಿ ಪರಿಚಯ ಮಾಡಿಸುತ್ತೇನೆ. ನೀವೂ ಹಾಗೆ ನಡೆದುಕೊಳ್ಳಿ ಎಂದು ರಿಕ್ವೆಸ್ಟ್ ಮಾಡಿಕೊಂಡಿದ್ದು, ಮಧುರಾ ಒಪ್ಪಿದ್ದಾಳೆ. ಇನ್ನು ಮನೆಗೆ ಬಂದ ಭೂಮಿಕಾಳಿಗೆ ಮಹಿಮಾ ಸಲಹೆಯೊಂದನ್ನು ಕೊಡುತ್ತಾಳೆ. ಸದಾಶಿವ ಮಾವ ಭಾಗ್ಯ ಅವರ ಕೈಯಿಂದ ಪೂಜೆ ಮಾಡಿಸಿ, ಅವರ ಕೈಯಿಂದ ಒಂದು ಹಣ್ಣನ್ನು ಭೂಮಿಕಾಳಿಗೆ ಕೊಟ್ಟರೆ, ನಿಜಕ್ಕೂ ಭೂಮಿಕಾಳಿಗೆ ಒಳ್ಳೆಯದಾಗುತ್ತೆ ಎಂದು ಹೇಳಿದರು. ಅತ್ತಿಗೆ ನೀವು ಇದನ್ನು ಪ್ರಯತ್ನಿಸಿ ಎಂದು ಕೇಳುತ್ತಾಳೆ. ಆದರೆ, ಭೂಮಿಕಾ ಇದೆಲ್ಲಾ ಆಗೋ ಮಾತಲ್ಲ. ನನ್ನಿಂದ ಅತ್ತೆಗೆ ಸಮಸ್ಯೆ ಆಗುವುದು ಬೇಡ ಎಂದು ನೆಗಲೆಕ್ಟ್ ಮಾಡುತ್ತಾಳೆ.
ಆತಂಕವನ್ನು ದೂರ ಮಾಡಿಕೊಂಡ ಶಕುಂತಲಾ
ಭೂಮಿಕಾ ಶಕುಂತಲಾ ಬಳಿ ಹೋಗಿ ಮಧುರಾ ಒಪ್ಪಿಗೆ ಆಗಿದ್ದಾಳೆ. ಅವರ ಜಾತಕದ ಜೊತೆಗೆ ಮೆಡಿಕಲ್ ರಿಪೋರ್ಟ್ ಅನ್ನು ಕೂಡ ತರಿಸಿ. ಅಕಸ್ಮಾತ್ ಅವಳಿಗೂ ನನ್ನಂತೆಯೇ ಸಮಸ್ಯೆ ಇರಬಾರದು ಎಂಬ ಮುಂಜಾಗ್ರತೆಯಿಂದ ಮೆಡಿಕಲ್ ರಿಪೋರ್ಟ್ ಇದ್ದರೆ ಒಳ್ಳೆಯದು ಎಂದು ಹೇಳುತ್ತಾಳೆ. ಭೂಮಿಕಾ ಮಧುರಾಳನ್ನು ಒಪ್ಪಿಕೊಂಡ ಮಾತನ್ನು ಕೇಳಿದ ಶಕುಂತಲಾ ತನ್ನಲ್ಲಿದ್ದ ಆತಂಕಗಳನ್ನು ದೂರ ಮಾಡಿಕೊಂಡಿದ್ದಾಳೆ. ಗೌತಮ್‌ನಿಂದ ಭೂಮಿಕಾ ದೂರ ಹೋಗುವುದು ಶಕುಂತಲಾಳಿಗೆ ಕನ್ಫರ್ಮ್ ಆಗಿದೆ.
ಪತ್ನಿ ನಡವಳಿಕೆಯಿಂದ ಆತಂಕ
ಇನ್ನು ಭೂಮಿಕಾ ಗೌತಮ್ ಮನೆಗೆ ಬರುತ್ತಿದ್ದಂತೆಯೇ ನಾಳೆ ರಜೆ ಹಾಕಿ, ನನ್ನ ಫ್ರೆಂಡ್ ನಿಮ್ಮನ್ನು ಮೀಟ್ ಮಾಡಲು ಬರುತ್ತಿದ್ದಾರೆ ಎಂದು ಹೇಳುತ್ತಾಳೆ. ಗೌತಮ್ ರಜೆ ಹಾಕೋದಿಕ್ಕೆ ಆಗೊಲ್ಲ ಎಂದಿದ್ದಕ್ಕೆ ಭೂಮಿಕಾ ಸ್ವಲ್ಪ ಕೂಗಾಡುತ್ತಾಳೆ. ಗೌತಮ್ ಭೂಮಿಕಾಳನ್ನು ಸಮಾಧಾನ ಮಾಡಿ ರಜೆ ಹಾಕಲು ಒಪ್ಪಿಕೊಳ್ಳುತ್ತಾಳೆ. ಇನ್ನು ಇಂದಿನ ಸಂಚಿಕೆಯಲ್ಲಿ ಮಧುರಾ ಮನೆಗೆ ಬಂದಾಗ ಗೌತಮ್ ಮಾತನಾಡಿ, ಒಳ್ಳೆಯ ಹುಡುಗಿ ಎಂಬ ಮಾತನ್ನು ಹೇಳಿದಾಗ ಭೂಮಿಕಾ ರಿಯಾಕ್ಷನ್ ಹೇಗಿರಬಹುದು..? ಮುಂದೆ ಯಾವ ರೀತಿಯಲ್ಲಿ ಭೂಮಿಕಾ ಗೌತಮ್ ಗೆ ಎರಡನೇ ಮದುವೆಗೆ ಒಪ್ಪಿಸುತ್ತಾಳೆ ಎಂಬ ಕುತೂಹಲ ಮೂಡಿದೆ.


Click it and Unblock the Notifications











