Amruthadhaare:ಜಮೀನು ವಿಚಾರದಲ್ಲಿ ತಗಾದೆ; ಮನೆಗೆ ಬಂದು ಬೆದರಿಕೆ ಹಾಕಿದ ಕೆಂಚ.. ಮುಂದೇನಾಯ್ತು?
'ಅಮೃತಧಾರೆ' ಧಾರಾವಾಹಿಯಲ್ಲಿ ಪಾರ್ಥನಿಗೆ ಜವಾಬ್ದಾರಿ ಬಂದಿದೆ. ತಾನು ಪ್ರೀತಿ ಮಾಡುತ್ತಾ ಕಾಲಹರಣ ಮಾಡುವುದರ ಬದಲು ಇನ್ನೇನಾದರೂ ಮಾಡಬೇಕು ಎಂದು ತೀರ್ಮಾನಿಸಿದ್ದಾನೆ.
ಈ ಬಗ್ಗೆ ಪಾರ್ಥ, ಅಪೇಕ್ಷಾ ಜೊತೆಗೆ ಚರ್ಚೆ ಮಾಡುತ್ತಾನೆ. ಅಪೇಕ್ಷಾಳಿಗೂ ಪಾರ್ಥನ ಮಾತುಗಳನ್ನು ಕೇಳಿ ಖುಷಿಯಾಗುತ್ತದೆ. ಅವಳೂ ಪಾರ್ಥನ ಮುಂದಿನ ಕೆಲಸಕ್ಕೆ ಸಪೋರ್ಟ್ ಮಾಡುತ್ತಾಳೆ.

ಭೂಮಿಕಾಳಿಗೆ ಗೌತಮ್ ಬಳಿ ಸತ್ಯ ಬಚ್ಚಿಟ್ಟಿದ್ದು ತಪ್ಪು ಎಂಬ ಗಿಲ್ಟ್ ಇನ್ನೂ ಕಾಡುತಿದೆ. ಹೀಗಾಗಿ, ಬೆಳಗ್ಗೆ ಬೆಳಗ್ಗೆಯೇ ಗೌತಮ್ ಗೆ ಬಳಿ ಕ್ಷಮೆ ಕೇಳಿದ್ದಾಳೆ.
ಜಮೀನು ತಕರಾರು ತಂದ ಶಕುಂತಲಾ
ಅದೂ ಕೂಡ, ಕ್ಷಮಿಸಿ ಎಂದು ಹೂವಿನ ದಳಗಳಲ್ಲಿ ಬರೆದಿದ್ದಾಳೆ. ಗೌತಮ್ ನಿನ್ನೆಯ ವಿಚಾರವನ್ನು ಅಲ್ಲಿಗೇ ಬಿಟ್ಟು ಬಿಡಿ ಎಂದು ಹೇಳುತ್ತಾನೆ. ಅಷ್ಟೊತ್ತಿಗೆ ಆನಂದ್ ಫೋನ್ ಮಾಡಿ ಅವನೂ ಕೂಡ ಸತ್ಯ ಮುಚ್ಚಿಟ್ಟಿದ್ದಕ್ಕೆ ಕ್ಷಮೆ ಕೇಳುತ್ತಾನೆ. ಇನ್ನು ಗೌತಮ್ ಆಫೀಸಿಗೆ ಹೊರಡುವ ವೇಳೆಗೆ ಆನಂದ್ ಮನೆಗ ಬರುತ್ತಾನೆ. ಒಂದು ದೊಡ್ಡ ಸಮಸ್ಯೆ ಆಗಿದೆ ಎಂದು ಹೇಳುತ್ತಾನೆ. ಚಿಕ್ಕಮಗಳೂರಿನಲ್ಲಿರುವ ತಮ್ಮ ಕಾಫಿ ಎಸ್ಟೇಟ್‌ನಲ್ಲಿ 60 ಎಕರೆಯನ್ನು ಮ್ಯಾನೇಜರ್ ಕೆಂಚ ತನ್ನ ಹೆಸರಿಗೆ ಮಾಡಿಕೊಳ್ಳಲು ಈ ಹಿಂದೆ ಗೋಲ್ ಮಾಲ್ ಮಾಡಿದ್ದ. ಆ ಸಮಸ್ಯೆ ಅನ್ನು ನಾನೇ ಬಗೆಹರಿಸಿದ್ದೆ. ಆದರೆ, ಈಗ ಮತ್ತೆ ತಕರಾರು ತೆಗೆದಿದ್ದಾನೆ. ನಾವೇನಾದರೂ ಮಾಡಲೇಬೇಕು ಎಂದು ಆನಂದ್ ಹೇಳುತ್ತಾನೆ. ಇದೆಲ್ಲವೂ ಶಕುಂತಲಾ ಪ್ಲಾನ್ ಆಗಿದೆ. ಭೂಮಿಕಾ ಮತ್ತು ಗೌತಮ್‌ನನ್ನು ಮನೆಯಿಂದ ಹೊರಗೆ ಕಳಿಸಲು ಈ ಪ್ಲಾನ್ ಮಾಡಿದ್ದಾಳೆ.
ಮನೆಗೆ ಬಂದು ಬೆದರಿಕೆ ಹಾಕಿದ ಕೆಂಚ
ಆನಂದ್ ಗೌತಮ್‌ಗೆ ಜಮೀನು ವಿಚಾರ ಹೇಳಿದ ದಿನವೇ ಕೆಂಚ ನಾಲ್ಕು ಜನ ಹುಡುಗರ ಜೊತೆಗೆ ಮನೆಗೆ ಬಂದಿದ್ದಾನೆ. ಅಜ್ಜಿ ಕೆಂಚನನ್ನು ವಿಚಾರಿಸುತ್ತಾರೆ. ನೀನು ಮಾಡುತ್ತಿರುವುದು ತಪ್ಪು ಎಂದು ಹೇಳುತ್ತಾಳೆ. ಕೆಂಚ ಅಜ್ಜಿ ಮಾತನ್ನು ಕೇಳದೆಯೇ ಸ್ವಲ್ಪ ಜೋರು ಮಾಡುತ್ತಾನೆ. ಆಗ ಜೈದೇವ ಅಜ್ಜಿ ಪರ ನಿಂತು ಕೆಂಚನ ಮೇಲೆ ಕೂಗಾಡುತ್ತಾನೆ. ಕೆಂಚ ತನ್ನ ಬಳಿ ಇದ್ದ ಚೀಲದಿಂದ ಮಚ್ಚು ತೆಗೆಯುತ್ತಾನೆ. ಅಜ್ಜಿಗೆ ನಡುಕ ಬರುತ್ತದೆ. ಭೂಮಿಕಾ ಮನೆಯಲ್ಲಿ ಗಲಾಟೆಯನ್ನು ಕೇಳಿ ಬರುತ್ತಾಳೆ. ಕೆಂಚನ ಅವತಾರವನ್ನು ನೋಡಿ, ಮನೆಯಲ್ಲೆಲ್ಲಾ ರೌಡಿಸಂ ಮಾಡಬೇಡಿ ಎನ್ನುತ್ತಾಳೆ. ಕೆಂಚ ಭೂಮಿಕಾಳನ್ನು ಕೂಡ ಹೆದರಿಸಿ, 60 ಎಕರೆಯನ್ನು ಮರೆತುಬಿಡಿ ಎಂದು ಹೇಳಿ ಹೋಗುತ್ತಾನೆ.

ಮ್ಯಾಟ್ರಿಮೊನಿ ತೆರೆಯಲು ಸಿದ್ಧತೆ
ಇತ್ತ ಜೀವನ್ ತನ್ನ ಬಿಸಿನೆಸ್ ಬಗ್ಗೆ ಮನೆಯವರಿಗೆ ಪಿಪಿಟಿ ತೋರಿಸುತ್ತಾನೆ. ಹುಡುಗ, ಹುಡುಗಿ ಹುಡುಕುವ ಮ್ಯಾಟ್ರಿಮೊನಿ ಬಗ್ಗೆ ಹೇಳುತ್ತಾನೆ. ಮಂದಾಕಿನಿಗೆ ಖುಷಿಯಾಗುತ್ತದೆ. ಕುಟುಂಬಗಳನ್ನು ಒಂದು ಮಾಡುವ ಕೆಲಸ ಇದು, ಮುಂದುವರೆಸು ಎಂದು ಹೇಳುತ್ತಾಳೆ. ಜೀವನ್ ಕೂಡ, ಸಂಸಾರ ಚೆನ್ನಾಗಿದ್ದರೆ ಇಡೀ ಜಗತ್ತೇ ಚೆನ್ನಾಗಿದ್ದಂತೆ. ಹಾಗಾಗಿ ತಮ್ಮ ತಮ್ಮ ಜೋಡಿಗಳನ್ನು ಆರಿಸಿಕೊಳ್ಳಲು ಈ ವೆಬ್ ಸೈಟ್ ತೆರೆಯುತ್ತಿದ್ದೇನೆ ಎಂದು ಹೇಳುತ್ತಾನೆ.
ಅಜ್ಜಿಗೆ ಮಾತು ಕೊಟ್ಟ ಭೂಮಿಕಾ
ಕೆಂಚ ಹೋದ ಬಳಿಕ ಭೂಮಿಕಾ ಶಾಕ್ ನಲ್ಲೇ ಇರುತ್ತಾಳೆ. ಯಾರು ಅಜ್ಜಿ ಅವರೆಲ್ಲಾ, ಯಾಕೆ ಹಾಗೆ ಹೆದರಿಸಿ ಹೋದರು ಎಂದು ಪ್ರಶ್ನೆ ಮಾಡುತ್ತಾಳೆ. ಅಜ್ಜಿ ಚಿಕ್ಕಮಗಳೂರಿನಲ್ಲಿರುವ ತಮ್ಮ ಎಸ್ಟೇಟ್ ಅನ್ನು ನೋಡಿಕೊಳ್ಳುತ್ತಿರುವ ಮ್ಯಾನೇಜರ್. ಈಗ ತನಗೆ ಆಸ್ತಿ ಬೇಕು ಎಂದು ಲಪಟಾಯಿಸಲು ನೋಡುತ್ತಿದ್ದಾನೆ ಎಂದು ಹೇಳುತ್ತಾರೆ. ಬಳಿಕ ಈ ವಿಚಾರವನ್ನು ಗೌತಮ್ ಗೆ ಯಾವುದೇ ಕಾರಣಕ್ಕೂ ಹೇಳಬೇಡ ಎಂದು ಭೂಮಿಕಾ ಬಳಿ ಭಾಷೆ ತೆಗೆದುಕೊಳ್ಳುತ್ತಾರೆ.


Click it and Unblock the Notifications











