Amruthadhare : ದಿಯಾ ಜೊತೆ ಚಕ್ಕಂದ ಆಡುವಾಗ ಸಿಕ್ಕಿ ಬಿದ್ದ ಜೈದೇವ್, ಮುಂದೇನು ಮಾಡ್ತಾಳೆ ಮಲ್ಲಿ ?
ಅಮೃತ ಧಾರೆ ಧಾರಾವಾಹಿಯಲ್ಲಿ ಮಲ್ಲಿಮತ್ತು ಜೈದೇವ್ ನ ಬಿಟ್ಟು ಎಲ್ಲರೂ ಹೊರ ಹೋಗಿದ್ದಾರೆ. ಗೌತಮ್ ದಿವಾನ್, ಭೂಮಿಕಾ, ಆನಂದ್ ಮತ್ತು ಅಪರ್ಣಾ ಕನಕದುರ್ಗಕ್ಕೆ ಪಂಕಜಾ ರಹಸ್ಯ ಪತ್ತೆ ಹಚ್ಚಲು ಹೋಗಿದ್ದರೆ, ಲಕ್ಷ್ಮೀ ಕಾಂತ್ ಜೊತೆ ಶಕುಂತಲಾ ದೇವಿ ಫಾರ್ಮ್ ಹೌಸ್ ಗೆ ಹೋಗಿದ್ದಾರೆ. ಇದರಿಂದ ಸಿಕ್ಕಿದ್ದೇ ಚಾನ್ಸ್ ಎಂದುಕೊಂಡು ದಿಯಾ ಮೇಲೀನ ಮೋಹದಿಂದ ಜೈದೇವ್ ಕೆಲಸಗಾರರಿಗೆ ರಜೆ ನೀಡಿದ್ದಾನೆ.
ಇಷ್ಟೇ ಅಲ್ಲದೇ ಮಲ್ಲಿಯನ್ನು ಅಜ್ಜನ ಮನೆಗೆ ಕಳುಹಿಸಿದ್ದಾನೆ. ಮನೆಯಲ್ಲಿ ಯಾರು ಇರದ ಕಾರಣ ಜೈದೇವ್ ರಾಜಾರೋಷವಾಗಿ ದಿಯಾಳನ್ನು ಮನೆಗೆ ಕರೆತರುತ್ತಾನೆ. ಇಷ್ಟೇ ಅಲ್ಲ ಸೇರು ಒದಿಯುವಂತೆ ಹೇಳಿ ದಿಯಾಳನ್ನು ಬರಮಾಡಿಕೊಳ್ತಾನೆ.

ಮನೆಯೊಳಗೆ ಬಂದಿದ್ದೇ ತಡ ರೊಮ್ಯಾಂಟಿಕ್ ಮೂಡ್ ಗೆ ಜಾರುವ ಇಬ್ಬರು ಮಲ್ಲಿಯ ಬಗ್ಗೆ ಮಾತನಾಡಲು ಶುರು ಮಾಡುತ್ತಾರೆ. ಮಲ್ಲಿಯನ್ನು ದಿಯಾ ನಿಂದಿಸುತ್ತಿರುವಾಗ ಜೈದೇವ್ ಕೂಡ ಮಲ್ಲಿಯನ್ನು ತೆಗಳಲು ಶುರು ಮಾಡುತ್ತಾನೆ.


Click it and Unblock the Notifications











