Amruthadhare : ಕುಡುಕನ ಬಾಯಿಂದ ಹೊರ ಬಿತ್ತು ಪಂಕಜಾ ರಹಸ್ಯ, ಮುಂದೇನು ಮಾಡ್ತಾಳೆ ಭೂಮಿಕಾ ?

ಅಮೃತ ಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್, ಭೂಮಿಕಾ, ಆನಂದ್ ಮತ್ತು ಅಪರ್ಣಾ ಕನಕದುರ್ಗಕ್ಕೆ ಹೋಗಿದ್ದಾರೆ. ಕನಕ ದುರ್ಗಕ್ಕೆ ಪಂಕಜಾ ರಹಸ್ಯ ಪತ್ತೆ ಹಚ್ಚಲು ಭೂಮಿಕಾ ಬಂದಿದ್ದಾಳೆ. ಆದರೆ, ಗೌತಮ್ ದಿವಾನ್ ತನ್ನ ಪತ್ನಿ ತನ್ನ ಜೊತೆ ಹಾಗೇ ಬಂದಿದ್ದಾಳೆ ಎಂದುಕೊಂಡಿದ್ದಾನೆ. ಇನ್ನೊಂದು ಕಡೆ ಮನೆಯಲ್ಲಿ ಯಾರು ಇರದ ಕಾರಣಕ್ಕೆ ಜೈದೇವ್ ತನ್ನ ಪ್ರಿಯತಮೆ ದಿಯಾಳನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ.

ಅಜ್ಜನ ಮನೆಗೆ ಮಲ್ಲಿಯನ್ನು ಕಳುಹಿಸಿದ್ದರು ಕೂಡ ಜೈದೇವ್ ಮೇಲೀನ ಅನುಮಾನದಿಂದ ಮಲ್ಲಿ ಮರಳಿ ಮನೆಗೆ ಬಂದಿದ್ದಾಳೆ. ದಿಯಾಗೆ ಗೊತ್ತಾಗದಂತೆ ಆಕೆಯನ್ನು ಕೆಡವಿ ಗೂಸಾ ಕೊಟ್ಟಿದ್ದಾಳೆ. ಕನಕದುರ್ಗಕ್ಕೆ ಬಂದಿರುವ ಆನಂದ್ ಮತ್ತು ಭೂಮಿಕಾ ಪಂಕಜಾ ರಹಸ್ಯ ತಿಳಿಯಲು ಆ ಹಳ್ಳಿ ಹೆಂಗಸಿನ ಕುಡುಕ ಗಂಡನನ್ನು ಹುಡುಕಲು ಶುರು ಮಾಡುತ್ತಾರೆ.

amruthadhaare-serial-may-23-episode-written-update

ಗಂಡನಿಗೆ ವಾರ್ನಿಂಗ್ ಕೊಡುವ ಹಳ್ಳಿ ಹೆಂಗಸು

ಇದೇ ಸಮಯದಲ್ಲಿ ಹಳ್ಳಿ ಹೆಂಗಸು ತನ್ನ ಗಂಡನಿಗೆ ತಾಕಿತ್ತು ಮಾಡಿದ್ದಾಳೆ. ಕುಡಿದ ಮತ್ತಿನಲ್ಲಿ ಪಂಕಜಾ ಮತ್ತು ಕಾಂತನ ವಿಚಾರವನ್ನು ಯಾರ ಮುಂದೆ ಕೂಡ ಬಾಯಿ ಬಿಡಬೇಡ ಎಂದು ಹೇಳಿದ್ದಾಳೆ. ಇದಕ್ಕೆ ಕುಡುಕ ಗಂಡ ಯಾಕೆ ಹೇಳಬಾರದು, ಅವಳು ಮಾಡಿರುವ ಅನ್ಯಾಯ ಕಡಿಮೆನಾ ಎಂದು ಪ್ರಶ್ನೆ ಮಾಡುತ್ತಾನೆ. ನಾನು ಕೂಡ ಹೇಳಬಾರದು ಎಂದುಕೊಳ್ಳುತ್ತೇನೆ ಆದರೆ ಏನು ಮಾಡೋದು ಎಣ್ಣೆ ಒಳಗೆ ಹೋದ ಮೇಲೆ ಅವರು ಮಾಡಿರುವ ಅನ್ಯಾಯದ ಕತೆಗಳೆಲ್ಲ ಹೊರ ಬರುತ್ತೆ ಎಂದು ಹೇಳುತ್ತಾನೆ.

ಪತ್ನಿಯ ಮಾತು ಕೇಳಿ ಕುಡುಕ ತಬ್ಬಿಬ್ಬು

ಮುಂದುವರೆದು ಅವರು ಎಲ್ಲಿದ್ದಾರೆ ಎನ್ನುವ ವಿಚಾರ ನನಗೆ ಗೊತ್ತಾಗಿದೆ, ನಾವು ಇರುವ ತನಕ ನಮ್ಮ ಖರ್ಚು ವೆಚ್ಚ ಕೂಡ ಅವರೇ ನೋಡಿಕೊಳ್ತಾರೆ. ನೀನು ಯಾವುದೇ ಕಾರಣಕ್ಕೂ ಅದರ ಬಗ್ಗೆ ಕಲ್ಲು ಹಾಕಬೇಡ ಎಂದು ಗಂಡನಿಗೆ ಹೇಳುತ್ತಾಳೆ. ಮತ್ತೊಮ್ಮೆ ಯಾರಿಗೂ ವಿಷಯ ಹೇಳದಂತೆ ಎಚ್ಚರಿಕೆಯನ್ನು ನೀಡುತ್ತಾಳೆ.

ಎಣ್ಣೆ ಅಂಗಡಿಯತ್ತ ಆನಂದ್ ಮತ್ತು ಭೂಮಿಕಾ

ಈ ಕಡೆ ಹುಡುಕಾಡುತ್ತಿರುವ ಆನಂದ್ ಮತ್ತು ಭೂಮಿಕಾ ಅಲ್ಲಿಯೇ ಕುಳಿತ ಇಬ್ಬರ ಬಳಿ ಕುಡುಕನ ಕುರಿತು ವಿಚಾರಿಸುತ್ತಾರೆ. ಆಗ ಅಲ್ಲಿ ಮುಂದೆ ಹೋಗ್ತಿದ್ದಾರೆ ನೋಡಿ ಎಂದು ಅವರು ಹೇಳುತ್ತಾರೆ. ಎಣ್ಣೆ ಹೊಡೆದ ನಂತರವಷ್ಟೇ ಅವರು ಎಲ್ಲ ಮಾತನಾಡೋಕೆ ಸಾಧ್ಯ ಇಲ್ಲ ಅಂದರೆ ಮಾತನಾಡಲ್ಲ ಎಂದು ಕೂಡ ಹೇಳ್ತಾರೆ. ಆನಂದ್ ಕುಡುಕನಿಗೆ ಎಣ್ಣೆ ಕುಡಿಸಲು ಮದ್ಯದ ಅಂಗಡಿಗೆ ಹೋಗಿದ್ದು ಭೂಮಿಕಾಗೆ ಮನೆಗೆ ಹೋಗುವಂತೆ ಹೇಳಿದ್ದಾನೆ.

ಎಣ್ಣೆಯ ಅಂಗಡಿಯಲ್ಲಿ ಹೊರ ಬಿತ್ತು ರಹಸ್ಯ

ಕುಡುಕನಿಗೆ ಸರಿಯಾಗಿ ಎಣ್ಣೆ ಕುಡಿಸುವ ಆನಂದ್, ನಿಧಾನಕ್ಕೆ ಪಂಕಜಾ ಕುರಿತು ಪ್ರಶ್ನೆ ಕೇಳಲು ಶುರು ಮಾಡುತ್ತಾನೆ. ಆರಂಭದಲ್ಲಿ ಇಲ್ಯಾರೋ ಪಾರ್ವತಮ್ಮ ಅಂತ ಯಾರೋ ಇದ್ದರಲ್ಲ ಎಂದು ಪ್ರಶ್ನೆಯನ್ನು ಆನಂದ್ ಕೇಳಿದಾಗ ಕುಡುಕ ವ್ಯಕ್ತಿ ಇಲ್ಲವಲ್ಲ ಆ ತರಹದವರು ಎಂದು ಹೇಳುತ್ತಾನೆ. ಆ ನಂತರ ಪಂಕಜಾ ಹೆಸರನ್ನು ಆನಂದ್ ತೆಗೆದುಕೊಂಡಾಗ ಅವರ ಬಗ್ಗೆ ನನಗೆ ಚೆನ್ನಾಗಿ ಗೊತ್ತು, ಕಾಂತ ಅಂತ ಅವಳಿಗೆ ಒಬ್ಬ ಅಣ್ಣ ಇದ್ದ, ಆಕ್ಸಿಡೆಂಟ್ ಮಾಡಿ ಬಿಟ್ಟ, ಜೈಲಿನಲ್ಲಿ ಮುದ್ದೆ ಮುರಿಬೇಕಾಗುತ್ತೆ ಜೈಲಿನಲ್ಲಿ ಅಂತ ಇಬ್ಬರು ಊರು ಬಿಟ್ಹೋದರು ಎಂದು ಹೇಳುತ್ತಾನೆ.

ಸದ್ಯ ಅಮೃತಧಾರೆ ಧಾರಾವಾಹಿ ಈ ಮೂಲಕ ಮತ್ತೊಂದು ತಿರುವು ಪಡೆದಿದ್ದು, ಶಕುಂತಲಾ ಮತ್ತು ಲಕ್ಷ್ಮೀಕಾಂತ್ ನಿಜವಾದ ಹೆಸರು ಪಂಕಜಾ ಮತ್ತು ಕಾಂತ ಎಂದು ಗೊತ್ತಾದ ನಂತರ ಭೂಮಿಕಾ ಮುಂದೇನು ಮಾಡ್ತಾಳೆ ಎನ್ನುವ ಪ್ರಶ್ನೆ ಉದ್ಭವಿಸಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X